51ನೇ ವಯಸ್ಸಲ್ಲಿ ತಂದೆಯಾದ ಕೋಟಿ ನಿರ್ಮಾಪಕ ದಿಲ್ ರಾಜು
ದಿಲ್ ರಾಜು, ದಕ್ಷಿಣ ಭಾರತ ಚಿತ್ರರಂಗದಲ್ಲಿ ಬಹು ಪ್ರಚಲಿತ ವ್ಯಕ್ತಿ. ಭಾರಿ ಅದ್ಧೂರಿ ಸಿನಿಮಾ ನಿರ್ಮಾಣ ಮಾಡುವ ದಿಲ್ ರಾಜು ತೆಲುಗು, ತಮಿಳು ಸ್ಟಾರ್ ನಟರ ಮೇಲೆ ಬಂಡವಾಳ ಹೂಡಿದ್ದಾರೆ.
51 ವರ್ಷ ವಯಸ್ಸಿನ ದಿಲ್ ರಾಜು ಈಗ ಸುದ್ದಿಯಲ್ಲಿರುವುದು ಸಿನಿಮಾ ಕಾರಣಕ್ಕೆ ಅಲ್ಲ ಬದಲಿಗೆ, ಅವರು ತಂದೆಯಾಗಿದ್ದಾರೆ.
ಹೌದು, ಈಗಾಗಲೇ ಮದುವೆಯಾಗಿರುವ ಪುತ್ರಿಯನ್ನು ಹೊಂದಿರುವ ನಿರ್ಮಾಪಕ ದಿಲ್ ರಾಜು, ಈಗ ಮತ್ತೊಮ್ಮೆ ಪುಟ್ಟ ಮಗುವಿನ ತಂದೆಯಾಗಿದ್ದಾರೆ. ಇಂದು (ಜೂನ್ 29) ಅವರ ಪತ್ನಿ ವ್ಯಾಗ ರೆಡ್ಡಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ದಿಲ್ ರಾಜು ಬಹು ವರ್ಷದ ಹಿಂದೆ ಅನಿತಾ ರೆಡ್ಡಿ ಎಂಬುವರೊಟ್ಟಿಗೆ ವಿವಾಹವಾಗಿದ್ದರು ಅವರಿಗೆ ಹನ್ಸಿತಾ ರೆಡ್ಡಿ ಹೆಸರಲಿನ ಮಗಳಿದ್ದು, ಮಗಳಿಗೆ ಈಗಾಗಲೇ ಮದುವೆಯಾಗಿ ಇಬ್ಬರು ಮುದ್ದಾದ ಮಕ್ಕಳಿದ್ದಾರೆ. ಆದರೆ ದಿಲ್ ರಾಜುರ ಮೊದಲ ಪತ್ನಿ ಅನಿತಾ 2017 ರಲ್ಲಿ ಹೃದಯಾಘಾತದಿಂದ ನಿಧನ ಹೊಂದಿದರು. ಆಗಿನಿಂದಲೂ ದಿಲ್ ರಾಜು ಒಬ್ಬರೇ ಜೀವನ ಸಾಗಿಸುತ್ತಿದ್ದರು.
ಅಪ್ಪನ ಮೇಲಿನ ಪ್ರೀತಿಯಿಂದ ಮಗಳು ಹನ್ಸಿತಾ ರೆಡ್ಡಿಯೇ ಮುಂದೆ ನಿಂತು ದಿಲ್ ರಾಜು ಹಾಗೂ ವ್ಯಾಗ ರೆಡ್ಡಿ ವಿವಾಹ ನೆರವೇರಿಸಿದರು. ಈ ವಿವಾಹ ಕೋವಿಡ್ ಸಮಯದಲ್ಲಿ ನಡೆಯಿತು. ಆಗಲೂ ಈ ವಿವಾಹ ಮಾಧ್ಯಮಗಳಲ್ಲಿ ಭಾರಿ ಸುದ್ದಿಯಾಗಿತ್ತು.

ಇದೀಗ ವ್ಯಾಗಾ ರೆಡ್ಡಿ ಮಗುವಿಗೆ ಜನ್ಮ ನೀಡಿದ್ದು, ದಿಲ್ ರಾಜುವಿನ ಮೊಮ್ಮಕ್ಕಳಿಗಿಂತಲೂ ಮಗ ಐದಾರು ವರ್ಷ ಚಿಕ್ಕವನಾಗಿದ್ದಾನೆ!
ದಿಲ್ ರಾಜು ತೆಲುಗಿನ ಸ್ಟಾರ್ ನಿರ್ಮಾಪಕ ಹಾಗೂ ವಿತರಕ ಆಗಿದ್ದು, ತೆಲಂಗಾಣ ಹಾಗೂ ಆಂಧ್ರಗಳಲ್ಲಿ 'ಕೆಜಿಎಫ್' ಸಿನಿಮಾವನ್ನು ಇವರೇ ವಿತರಣೆ ಮಾಡಿದ್ದರು. ಅದ್ಧೂರಿತನದಿಂದಲೇ ಹೆಸರು ಮಾಡಿರುವ ಅಲ್ಲು ಅರ್ಜುನ್ ನಟಿಸಿರುವ 'ಆರ್ಯ' ಸಿನಿಮಾದ ಮೂಲಕ ನಿರ್ಮಾಣ ಆರಂಭಿಸಿ ಈವರೆಗೆ ತೆಲುಗಿನಲ್ಲಿ ಹಲವು ಸೂಪರ್-ಡೂಪರ್ ಹಿಟ್ ಸಿನಿಮಾಗಳನ್ನು ನೀಡಿದ್ದಾರೆ.
ಇದೀಗ ತಮಿಳಿನ ನಟ ವಿಜಯ್‌ಗಾಗಿ ಸಿನಿಮಾ ನಿರ್ಮಾಣ ಮಾಡುತ್ತಿರುವ ದಿಲ್ ರಾಜು ಮುಂದೆ ನಟ ಯಶ್ ಗಾಗಿಯೂ ಸಿನಿಮಾ ಮಾಡಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿವೆ.


Click it and Unblock the Notifications











