For Quick Alerts
  ALLOW NOTIFICATIONS  
  For Daily Alerts

  'ಕಬ್ಜ' ಸಿನಿಮಾಕ್ಕೆ ಬಲ ತುಂಬಲು ಬಂದ 'RRR' ನಿರ್ಮಾಪಕ

  |

  ಉಪೇಂದ್ರ ನಟನೆಯ 'ಕಬ್ಜ' ಸಿನಿಮಾ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಸಿನಿಮಾದ ಬಗ್ಗೆ ಸಿನಿಪ್ರಿಯರ ನಿರೀಕ್ಷೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.

  ಸಿನಿಮಾದ ಟ್ರೈಲರ್ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ ಎಂದು ನಿರ್ದೇಶಕ ಚಂದ್ರು ಈಗಾಗಲೇ ಘೋಷಿಸಿದ್ದಾರೆ. ಇದರ ಬೆನ್ನಲ್ಲೆ ಇದೀಗ ಮತ್ತೊಂದು ಖುಷಿ ಸುದ್ದಿಯನ್ನು ಸಿನಿಮಾ ತಂಡ ಹಂಚಿಕೊಂಡಿದೆ.

  ಉಪೇಂದ್ರ ನಟನೆಯ ಈ ಪ್ಯಾನ್ ಇಂಡಿಯಾ ಸಿನಿಮಾಕ್ಕೆ ತೆಲುಗಿನ ಖ್ಯಾತ ನಿರ್ಮಾಪಕರೊಬ್ಬರ ಬೆಂಬಲ ದೊರೆತಿದೆ. ಆ ಮೂಲಕ ಆಂಧ್ರ-ತೆಲಂಗಾಣ ರಾಜ್ಯಗಳಲ್ಲಿ ಭರ್ಜರಿಯಾಗಿ ಸಿನಿಮಾ ತೆರೆಗೆ ಬರುವ ನಿರೀಕ್ಷೆ ಹುಟ್ಟಿಸಿದೆ.

  'RRR' ಸಿನಿಮಾ ನಿರ್ಮಾಣ ಮಾಡಿದ್ದ ಡಿವಿವಿ ದಾನಯ್ಯ ಅವರು 'ಕಬ್ಜ' ಸಿನಿಮಾದ ತೆಲುಗು ಆವೃತ್ತಿಯನ್ನು ಆಂಧ್ರ ಪ್ರದೇಶ ಹಾಗೂ ತೆಲುಗು ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದಾರೆ. ದೊಡ್ಡ ಬಜೆಟ್ ಸಿನಿಮಾಗಳನ್ನು ನಿರ್ಮಿಸಿ, ವಿತರಣೆ ಮಾಡಿ ಅನುಭವವಿರುವ ದಾನಯ್ಯ ಅವರು ತಮ್ಮ ಬ್ಯಾನರ್ ಅಡಿಯಲ್ಲಿ 'ಕಬ್ಜ'ವನ್ನು ವಿತರಣೆ ಮಾಡುತ್ತಿರುವುದು ಚಿತ್ರಕ್ಕೆ ಧನಾತ್ಮಕ ಅಂಶವಾಗಿ ಪರಿಗಣಿಸುವುದು ಪಕ್ಕಾ ಎಂಬುದು ಸಿನಿ ಪಂಡಿತರ ಲೆಕ್ಕಾಚಾರ.

  ಉಪೇಂದ್ರ ತೆಲುಗು ಸಿನಿಪ್ರಿಯರಿಗೂ ಚೆನ್ನಾಗಿಯೇ ಪರಿಚಿತ ನಟ. ತೆಲುಗಿನ ಹಲವು ಸಿನಿಮಾಗಳಲ್ಲಿ ಉಪೇಂದ್ರ ನಟಿಸಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ 'ಸನ್ ಆಫ್ ಸತ್ಯಮೂರ್ತಿ', ವರುಣ್ ತೇಜ್ ಜೊತೆಗೆ ಇತ್ತೀಚೆಗೆ 'ಗನಿ' ಸಿನಿಮಾದಲ್ಲಿಯೂ ಉಪೇಂದ್ರ ನಟಿಸಿದ್ದರು. ಹಾಗಾಗಿ 'ಕಬ್ಜ' ಸಿನಿಮಾದ ತೆಲುಗು ಆವೃತ್ತಿಗೆ ತೆಲುಗು ರಾಜ್ಯಗಳಲ್ಲಿ ಡಿಮ್ಯಾಂಡ್ ಇದೆ.

  'ಕಬ್ಜ' ಸಿನಿಮಾ ಗ್ಯಾಂಗ್‌ಸ್ಟರ್ ಸಿನಿಮಾ ಆಗಿದ್ದು, 1980 ರಲ್ಲಿ ಸ್ಥಿತವಾದ ಕತೆಯನ್ನು ಚಂದ್ರು ಪಂಚ ಭಾಷೆಗಳಲ್ಲಿ ಕಟ್ಟಿಕೊಡುತ್ತಿದ್ದಾರೆ. ಸಿನಿಮಾದ ಪ್ರಮುಖ ಪಾತ್ರದಲ್ಲಿ ಸದೀಪ್ ಸಹ ನಟಿಸಿದ್ದಾರೆ. ಆದರೆ ಅವರದ್ದು ಅತಿಥಿ ಪಾತ್ರವಷ್ಟೆ. ಆರ್ ಚಂದ್ರು ಈ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಈ ಸಿನಿಮಾ ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ ಎನ್ನಲಾಗುತ್ತಿದೆ.

  English summary
  Movie producer DVV Danayya to distribute Upendra's Kabza movie in Andhra Pradesha and Telangana.
  Wednesday, September 14, 2022, 14:57
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X