For Quick Alerts
  ALLOW NOTIFICATIONS  
  For Daily Alerts

  ಕೊರೊನಾ ವೈರಸ್‌ಗೆ ತೆಲುಗಿನ ಪ್ರಮುಖ ಸಿನಿಮಾ ನಿರ್ಮಾಪಕ ಬಲಿ

  |

  ಕೊರೊನಾ ವೈರಸ್‌ ಗೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಲೇ ಇದೆ. ಆಂಧ್ರ ಪ್ರದೇಶದಲ್ಲಿ ಸಹ ಕೊರೊನಾ ಹೆಚ್ಚಾಗಿದ್ದು, ತೆಲುಗಿನ ಖ್ಯಾತ ನಿರ್ಮಾಪಕರು ಕೊರೊನಾ ಕ್ಕೆ ಬಲಿಯಾಗಿದ್ದಾರೆ.

  Dhruva Sarja admitted to Hospital?ಧ್ರುವ ಸರ್ಜಾ ಆಸ್ಪತ್ರೆಗೆ ದಾಖಲು? ಸುದ್ದಿ ನಿಜವೇ? | Filmibeat Kannada

  ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಪೋಕೂರಿ ರಾಮಾ ರಾವ್ ಅವರು ನಿಧನ ಹೊಂದಿದ್ದು, ಕೊರೊನಾ ವೈರಸ್ ಸೋಂಕಿತರಾಗಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಅಲ್ಲಿಯೇ ಅವರು ನಿಧನಹೊಂದಿದ್ದಾರೆ.

  ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್ಕಿರುತೆರೆ ನಟಿ ನವ್ಯಾ ಸ್ವಾಮಿಗೆ ಕೊರೊನಾ ವೈರಸ್ ಪಾಸಿಟಿವ್

  65 ವರ್ಷದ ಪೋಕೂರಿ ರಾಮಾ ರಾವ್ ಅವರು ಹತ್ತು ತಿಂಗಳ ಹಿಂದೆ ಹೃದಯ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಅವರಿಗೆ ಕಳೆದ ವಾರ ಕೊರೊನಾ ಇರುವುದು ಪತ್ತೆಯಾಗಿತ್ತು, ಅವರನ್ನು ಖಾಸಗಿ ಆಸ್ಪತ್ರೆಗೆ ಅಡ್ಮಿಟ್ ಮಾಡಲಾಗಿತ್ತು.

  ಅವರನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ಒದಗಿಸಲಾಗಿತ್ತು, ಆದರೆ ಉಸಿರಾಟದ ಸಮಸ್ಯೆಯಿಂದಾಗಿ ರಾಮಾ ರಾವ್ ಅವರು ಶುಕ್ರವಾರ ರಾತ್ರಿ ನಿಧನಹೊಂದಿದ್ದಾರೆ.

  ರಣಂ, ಯಜ್ಞಂ, ಅಮ್ಮಾಯಿ ಕೋಸಂ, ಮಾ ಆಯನ ಬಂಗಾರಂ, ಪ್ರಜಾಸ್ವಾಯಂ ಇನ್ನೂ ಹಲವು ಸಿನಿಮಾಗಳನ್ನು ಅವರು ನಿರ್ಮಿಸಿದ್ದರು.

  English summary
  Telugu famous producer Pokuri Rama Rao dies due to coronavirus on Friday evening.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X