twitter
    For Quick Alerts
    ALLOW NOTIFICATIONS  
    For Daily Alerts

    'RRR' ಸಿನಿಮಾ ಪ್ರಚಾರಕ್ಕೆ ಖರ್ಚು ಮಾಡಿದ ಹಣದಲ್ಲಿ ಹೊಸ ಸಿನಿಮಾ ಮಾಡಬಹುದಿತ್ತು!

    |

    ಭಾರತದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಒಂದು 'ಆರ್‌ಆರ್‌ಆರ್‌'. ಸಿನಿಮಾವು ಜನವರಿ 07 ರಂದು ಬಿಡುಗಡೆ ಆಗಲಿದ್ದು, ಚಿತ್ರತಂಡವು ಕಳೆದ ಹಲವು ದಿನಗಳಿಂದ ಬಿಡುವಿಲ್ಲದ ಪ್ರಚಾರದಲ್ಲಿ ತೊಡಗಿಕೊಂಡಿದೆ.

    ಭಾರತದ ಬಹುತೇಕ ಪ್ರಮುಖ ನಗರಗಳಿಗೆ ತೆರಳಿರುವ 'ಆರ್‌ಆರ್‌ಆರ್‌' ಚಿತ್ರತಂಡ ಬಹು ಜೋರಾಗಿ ಪ್ರಚಾರ ಮಾಡುತ್ತಿದೆ. ಬಿಗ್‌ಬಾಸ್, ಕಪಿಲ್ ಶರ್ಮಾ ಶೋ, ಕಬಡ್ಡಿ ಲೀಗ್ ಇನ್ನೂ ಹಲವು ರಿಯಾಲಿಟಿ ಶೋಗಳಿಗೆ ಹೋಗಿ ಸಿನಿಮಾ ಪ್ರಚಾರ ಮಾಡಿದೆ. ಹಲವು ಯೂಟ್ಯೂಬ್ ಚಾನೆಲ್‌ಗಳಿಗೆ ಸಂದರ್ಶನ ನೀಡಲಾಗಿದೆ. ಬೆಂಗಳೂರು, ಚೆನ್ನೈ, ತಿರುವನಂತಪುರಂ, ಮುಂಬೈ, ಹೈದರಾಬಾದ್ ಇನ್ನೂ ಹಲವರು ನಗರಗಳಲ್ಲಿ ದೊಡ್ಡ-ದೊಡ್ಡ ಇವೆಂಟ್ ಅನ್ನು ಆಯೋಜಿಸಿ ಪ್ರಚಾರ ಮಾಡಿದೆ.

    ಮುಂಬೈನಲ್ಲಿ ಒಂದು ಅದ್ಧೂರಿ ಪ್ರಚಾರ ಕಾರ್ಯಕ್ರಮ ನಡೆಸಿರುವ 'ಆರ್‌ಆರ್‌ಆರ್‌' ಇದೀಗ ಹೈದರಾಬಾದ್‌ನಲ್ಲಿಯೂ ದೊಡ್ಡ ಪ್ರೀ ರಿಲೀಸ್ ಕಾರ್ಯಕ್ರಮ ನಡೆಸಲು ಸಜ್ಜಾಗಿದೆ. ಸಿನಿಮಾದ ನಿರ್ಮಾಪಕರು 'ಆರ್‌ಆರ್‌ಆರ್‌' ಸಿನಿಮಾದ ಪ್ರಚಾರಕ್ಕೆಂದೇ ಈ ವರೆಗೆ ದೊಡ್ಡ ಮೊತ್ತದ ಹಣವನ್ನೇ ಖರ್ಚು ಮಾಡಿದ್ದಾರೆ.

    ಪ್ರಚಾರಕ್ಕೆ ದೊಡ್ಡ ಮೊತ್ತ ಖರ್ಚು ಮಾಡಿದ್ದಾರೆ

    ಪ್ರಚಾರಕ್ಕೆ ದೊಡ್ಡ ಮೊತ್ತ ಖರ್ಚು ಮಾಡಿದ್ದಾರೆ

    ಮೂಲಗಳ ಪ್ರಕಾರ 'ಆರ್‌ಆರ್‌ಆರ್‌' ಸಿನಿಮಾದ ಪ್ರಚಾರಕ್ಕಷ್ಟೆ ಸುಮಾರು 20 ಕೋಟಿ ರುಪಾಯಿ ಖರ್ಚು ಮಾಡಿದ್ದಾರೆ. ಹೈದರಾಬಾದ್‌ನ ಪ್ರೀ ರಿಲೀಸ್ ಕಾರ್ಯಕ್ರಮದ ಖರ್ಚು ಇನ್ನೂ ಮೂರು-ನಾಲ್ಕು ಕೋಟಿ ಆಗಲಿದೆ. ಅಲ್ಲಿಗೆ ಸರಿ ಸುಮಾರು 25 ಕೋಟಿ ಹಣ ಕೇವಲ ಪ್ರಚಾರಕ್ಕೆ ಖರ್ಚಾದಂತಾಗುತ್ತದೆ. ಸಿನಿಮಾದ ನಾಯಕ ನಟ, ನಟಿ ಪ್ರಚಾರ ಆರಂಭಿಸುವ ಮುನ್ನವೇ ಸಿನಿಮಾದ ಪ್ರಚಾರಕ್ಕೆಂದೇ ವಿಶೇಷ ಹಾಡುಗಳನ್ನು ಮಾಡಿ, ಅದನ್ನು ಅದ್ಧೂರಿ ಸೆಟ್‌ಗಳಲ್ಲಿ ಚಿತ್ರೀಕರಣ ಮಾಡಿ ಬಿಡುಗಡೆ ಮಾಡಲಾಗಿತ್ತು. ಸಿನಿಮಾದ ಪ್ರಚಾರಕ್ಕಾಗಿ ಬಿಡುಗಡೆ ಮಾಡಲಾದ ದೋಸ್ತಿ ಹಾಡಿನ ಸೆಟ್‌ ಹಾಗೂ ಚಿತ್ರೀಕರಣಕ್ಕೆ ಸುಮಾರು ಎರಡು ಕೋಟಿ ಖರ್ಚು ಮಾಡಲಾಗಿತ್ತು ಎನ್ನಲಾಗಿತ್ತು.

    ಬೇರೆ-ಬೇರೆ ರೀತಿಯ ಪ್ರಚಾರ

    ಬೇರೆ-ಬೇರೆ ರೀತಿಯ ಪ್ರಚಾರ

    ಅದಾದ ಬಳಿಕ ಮೊದಲಿಗೆ ರಾಜಮೌಳಿ ಒಬ್ಬರೇ ಬೆಂಗಳೂರು ಸೇರಿದಂತೆ ವಿವಿಧ ನಗರಗಳಿಗೆ ತೆರಳಿ 'ಆರ್‌ಆರ್‌ಆರ್‌' ಸೋಲ್ ಹೆಸರಿನ ಕಿರು ವಿಡಿಯೋ ತುಣಕನ್ನು ಬಿಡುಗಡೆ ಮಾಡಿದರು. ರಾಮ್ ಚರಣ್-ಜೂ ಎನ್‌ಟಿಆರ್ ನೇರವಾಗಿ ಪ್ರಚಾರಕ್ಕೆ ಇಳಿಯುವ ಮುನ್ನವೇ ಇದೆಲ್ಲವೂ ಆಗಿತ್ತು. ಇನ್ನು ಸಿನಿಮಾದ ಚಿತ್ರೀಕರಣಕ್ಕೆ 400 ಕೋಟಿ ಖರ್ಚು ಮಾಡಲಾಗಿದೆ. ಭಾರತದ ದೊಡ್ಡ ಬಜೆಟ್‌ನ ಸಿನಿಮಾಗಳಲ್ಲಿ ಒಂದು 'ಆರ್‌ಆರ್‌ಆರ್‌'. ಅದರ ಮೇಲೆ ಪ್ರಚಾರಕ್ಕೂ ದೊಡ್ಡ ಮೊತ್ತದ ಹಣ ಖರ್ಚು ಮಾಡಲಾಗಿದೆ.

    ಹಲವು ನಗರಗಳನ್ನು ತಿರುಗಿರುವ ಚಿತ್ರತಂಡ

    ಹಲವು ನಗರಗಳನ್ನು ತಿರುಗಿರುವ ಚಿತ್ರತಂಡ

    ರಾಮ್ ಚರಣ್-ಜೂ ಎನ್‌ಟಿಆರ್ ಪ್ರಚಾರಕ್ಕೆ ಇಳಿದ ಬಳಿಕ ಚಿತ್ರತಂಡದ ಪ್ರವಾಸ ಜೋರಾಯಿತು. ಬೆಂಗಳೂರು, ಚೆನ್ನೈ, ತಿರುವನಂತಪುರಂ, ಪುಣೆ, ಮುಂಬೈ, ನೆಲ್ಲೂರು ಇನ್ನೂ ಅನೇಕ ನಗರಗಳಿಗೆ ತೆರಳಿ ಅದ್ಧೂರಿ ಕಾರ್ಯಕ್ರಮ ಮಾಡಿದರು. ಸುದ್ದಿಗೋಷ್ಠಿಗಳನ್ನು ಮಾಡಿದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದರು. ಯೂಟ್ಯೂಬ್‌ ಚಾನೆಲ್‌ಗಳಿಗೆ ಸಂದರ್ಶನ ನೀಡಿದರು. ಮೂಲಗಳ ಪ್ರಕಾರ ಸಿನಿಮಾದ ಚಿತ್ರಕತೆ ಮಾದರಿಯಲ್ಲಿಯೇ ರಾಜಮೌಳಿ ಅವರು ಸಿನಿಮಾದ ಪ್ರಚಾರದ ಬಗ್ಗೆಯೂ ಕೆಲ ತಿಂಗಳ ಮುಂದೆಯೇ ಯೋಜನೆ ಹಾಕಿ ಪ್ರಚಾರ ಇದೇ ರೀತಿ ಇರಬೇಕೆಂದು, ಪ್ರಚಾರದ ಸಮಯದಲ್ಲಿ ಇಂಥವೇ ವಿಷಯದ ಬಗ್ಗೆ ಮಾತನಾಡಬೇಕೆಂದು ನಟ-ನಟಿಯರಿಗೆ ಸೂಚನೆ ಸಹ ನೀಡಿದ್ದರಂತೆ.

    ಜನವರಿ 07ಕ್ಕೆ ಸಿನಿಮಾ ಬಿಡುಗಡೆ

    ಜನವರಿ 07ಕ್ಕೆ ಸಿನಿಮಾ ಬಿಡುಗಡೆ

    'ಆರ್‌ಆರ್‌ಆರ್‌' ಸಿನಿಮಾವು ತೆಲುಗು ರಾಜ್ಯಗಳ ಐತಿಹಾಸಿಕ ಹೋರಾಟಗಾರರಾದ ಕೋಮರಂ ಭೀಮ್ ಹಾಗೂ ಅಲ್ಲೂರಿ ಸೀತಾರಾಮ ರಾಜು ಜೀವನ, ಹೋರಾಟದ ಕತೆಯನ್ನು ಆಧರಿಸಿದೆ. ಸಿನಿಮಾದಲ್ಲಿ ಕೋಮರಂ ಭೀಮ್ ಆಗಿ ಜೂ ಎನ್‌ಟಿಆರ್, ಅಲ್ಲೂರಿ ಸೀತಾರಾಮ ರಾಜು ಆಗಿ ರಾಮ್ ಚರಣ್ ತೇಜ ನಟಿಸಿದ್ದಾರೆ. ಸಿನಿಮಾದಲ್ಲಿ ಬಾಲಿವುಡ್ ಬೆಡಗಿ ಆಲಿಯಾ ಭಟ್, ಶ್ರೆಯಾ ಶಿರಿನ್, ನಟ ಅಜಯ್ ದೇವಗನ್ ಸಹ ಇದ್ದಾರೆ. ಸಿನಿಮಾವನ್ನು ರಾಜಮೌಳಿ ನಿರ್ದೇಶನ ಮಾಡಿದ್ದು, ಡಿವಿವಿ ದಯಾನಂದ ನಿರ್ಮಾಣ ಮಾಡಿದ್ದಾರೆ. ಸಿನಿಮಾವು ಜನವರಿ 07 ರಂದು ತೆರೆಗೆ ಬರಲಿದೆ.

    English summary
    Producer DVV Dayanand spent whooping amount for RRR movie promotion. Movie is releasing on January 07.
    Friday, December 31, 2021, 9:40
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X