For Quick Alerts
  ALLOW NOTIFICATIONS  
  For Daily Alerts

  ಪವನ್ ಕಲ್ಯಾಣ್ ಗೆ ಕೋಟ್ಯಂತರ ರುಪಾಯಿ ಆಫರ್ ಕೊಟ್ಟಿರುವ ನಿರ್ಮಾಪಕರು

  |

  ಪವರ್ ಸ್ಟಾರ್ ಪವನ್ ಕಲ್ಯಾಣ್ ಹೆಸರೊಂದೇ ಸಾಕು ಆಂಧ್ರದಲ್ಲಿ ಅಭಿಮಾನಿಗಳು ಹುಚ್ಚೆದ್ದು ಕುಣಿಯಲು. ಇಂಥಹಾ ಪವನ್ ಕಲ್ಯಾಣ್, ರಾಜಕೀಯಕ್ಕೆ ಕಾಲಿಟ್ಟು, ಸಿನಿಮಾದಿಂದ ದೂರವಾಗಿದ್ದರು. ಈಗ ಮತ್ತೆ 'ವಕೀಲ್ ಸಾಬ್' ಸಿನಿಮಾ ಮೂಲಕ ಬೆಳ್ಳಿ ತೆರೆಯ ಮೇಲೆ ಮಿಂಚಲು ರೆಡಿಯಾಗಿದ್ದಾರೆ.

  ಕೊಟ್ಟ ಮಾತು ಉಳಿಸಿಕೊಂಡ ನವರಸನಾಯಕ | Jaggesh donates 1 Lakh for Nirbhaya hangman

  ಪವನ್ ಕಲ್ಯಾಣ್ ಅವರು ಮತ್ತೆ ಬಣ್ಣ ಹಚ್ಚಿದ್ದೇ ತಡ ನಿರ್ಮಾಪಕರುಗಳು ಪವನ್ ಮನೆ ಮುಂದೆ ಕ್ಯೂ ನಿಂತಿದ್ದಾರೆ. ಪವನ್ ಅವರೊಂದಿಗೆ ಸಿನಿಮಾ ಮಾಡಲು ನಿರ್ಮಾಪಕರುಗಳಲ್ಲಿ ಪೈಪೋಟಿ ಏರ್ಪಟ್ಟಿದೆ. ಒಬ್ಬರಿಗಿಂಗತೂ ಒಬ್ಬರು ಹೆಚ್ಚು ಕೋಟಿಗಳ ಆಫರ್ ಅನ್ನು ಪವನ್ ಕಲ್ಯಾಣ್ ಮುಂದಿಡುತ್ತಿದ್ದಾರೆ.

  ಪವನ್ ಕಲ್ಯಾಣ್ ಇನ್ನು ಮುಂದೆ ವರ್ಷಕ್ಕೆ ಎರಡು ಸಿನಿಮಾ ಮಾಡುವ ಇಚ್ಛೆ ವ್ಯಕ್ತಪಡಿಸಿದ್ದಾರೆ ಎಂಬ ಸುದ್ದಿ ಟಾಲಿವುಡ್‌ ನಲ್ಲಿ ಹರಿದಾಡುತ್ತಿದ್ದು, ಪಕ್ಕಾ ಪೈಸಾ ವಸೂಲ್ ನಟ ಪವನ್ ಅವರೊಂದಿಗೆ ಸಿನಿಮಾ ಮಾಡಿ ಕೋಟಿಗಳನ್ನು ಬಾಚಿಕೊಳ್ಳುವ ಉಮೇದಿನಲ್ಲಿ ನಿರ್ಮಾಪಕರು ಪೈಪೋಟಿಗಿಳಿದಿದ್ದಾರೆ.

  ಹಲವು ನಿರ್ಮಾಪಕರು ಭೇಟಿ ಮಾಡಿದ್ದಾರೆ

  ಹಲವು ನಿರ್ಮಾಪಕರು ಭೇಟಿ ಮಾಡಿದ್ದಾರೆ

  ಇತ್ತೀಚೆಗೆ ಹಲವಾರು ನಿರ್ಮಾಪಕರು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿದ್ದಾರೆ. ಅದರಲ್ಲಿಯೂ ವಕೀಲ್ ಸಾಬ್ ಸಿನಿಮಾ ಪ್ರಾರಂಭವಾದ ನಂತರವಂತೂ ಕೆಲವು ನಿರ್ಮಾಪಕರು ಪವನ್ ಕಲ್ಯಾಣ್ ಅವರ ಬೆನ್ನು ಬಿದ್ದಿದ್ದಾರೆ ಎನ್ನಲಾಗಿದೆ. ಅಲ್ಲದೆ ಭಾರಿ ಮೊತ್ತದ ಸಂಭಾವನೆ ನೀಡಲು ಸಹ ಮುಂದೆ ಬಂದಿದ್ದಾರಂತೆ.

  ಭಾರಿ ಮೊತ್ತದ ಆಫರ್ ಕೊಟ್ಟಿರುವ ನಿರ್ಮಾಪಕ

  ಭಾರಿ ಮೊತ್ತದ ಆಫರ್ ಕೊಟ್ಟಿರುವ ನಿರ್ಮಾಪಕ

  ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಎನ್‌ಆರ್‌ಐ ನಿರ್ಮಾಪಕ ರಾಮ್ ತಲ್ಲುರಿ ಅವರು ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದು, ಸಿನಿಮಾ ಒಂದಕ್ಕೆ 40 ಕೋಟಿ ಸಂಭಾವನೆ ನೀಡುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದರೆ ಪವನ್ ಕಲ್ಯಾಣ್ ಇನ್ನೂ ನಿರ್ಧಾರ ತಿಳಿಸಿಲ್ಲವೆಂದೇ ಹೇಳಲಾಗುತ್ತಿದೆ.

  ಎರಡು ವರ್ಷಗಳ ನಂತರ ಬಣ್ಣ ಹಚ್ಚಿದ ಪವರ್ ಸ್ಟಾರ್

  ಎರಡು ವರ್ಷಗಳ ನಂತರ ಬಣ್ಣ ಹಚ್ಚಿದ ಪವರ್ ಸ್ಟಾರ್

  ಪವರ್ ಸ್ಟಾರ್ ಪವನ್ ಕಲ್ಯಾಣ್ ಎರಡು ವರ್ಷಗಳ ನಂತರ ಮತ್ತೆ ಬಣ್ಣ ಹಚ್ಚಿದ್ದಾರೆ. ಅವರ ಕೊನೆಯ ಚಿತ್ರ ಅಜ್ಞಾತವಾಸಿ ಹೀನಾಯವಾಗಿ ನೆಲಕಚ್ಚಿತು. ಪವನ್ ಅಭಿಮಾನಿಗಳಿಗೆ ಈ ಸಿನಿಮಾ ತೀವ್ರ ಬೇಸರ ತರಿಸಿತ್ತು, ಆ ಸಿನಿಮಾ ಬಳಿಕ ಇನ್ಯಾವುದೇ ಸಿನಿಮಾದಲ್ಲಿ ಪವನ್ ಕೆಲಸ ಮಾಡಿರಲಿಲ್ಲ, ಹಾಗಾಗಿ ಈಗ ವಕೀಲ್ ಸಾಬ್ ಸಿನಿಮಾ ಕುರಿತು ಕ್ರೇಜ್ ಹೆಚ್ಚಿದೆ.

  ಪಿಂಕ್ ಸಿನಿಮಾದ ರೀಮೇಕ್ ವಕೀಲ್ ಸಾಬ್

  ಪಿಂಕ್ ಸಿನಿಮಾದ ರೀಮೇಕ್ ವಕೀಲ್ ಸಾಬ್

  ವಕೀಲ್ ಸಾಬ್ ಸಿನಿಮಾ ಹಿಂದಿಯ ಪಿಂಕ್ ಸಿನಿಮಾದ ರೀಮೇಕ್ ಆಗಿದೆ. ಆದರೆ ಅಲ್ಲಿ ಅಮಿತಾಬ್ ಬಚ್ಚನ್ ನಿರ್ವಹಿಸಿದ್ದ ಪಾತ್ರದ ಒಟ್ಟಾರೆ ಗುಣವನ್ನು ಬದಲಾಯಿಸಿ, ಪಾತ್ರಕ್ಕೆ ರಫ್, ಹಾಸ್ಯ, ಕುಡುಕನ ಶೇಡ್‌ ನೀಡಲಾಗಿದೆ. ಕೊರೊನಾ ಭೀತಿ ನಿವಾರಣೆ ಬಳಿಕ ಸಿನಿಮಾ ಬಿಡುಗಡೆ ದಿನಾಂಕ ಘೋಷಣೆ ಆಗಲಿದೆ.

  English summary
  Producers offering crores of money to Pawan Kalyan to signed in him. He is now acting in Vakeel Saab movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X