twitter
    For Quick Alerts
    ALLOW NOTIFICATIONS  
    For Daily Alerts

    ಸ್ಟಾರ್ ನಟರ ವಿರುದ್ಧ ತೆಲುಗು ನಿರ್ಮಾಪಕ ಅಸಮಾಧಾನ: ಸಂಭಾವನೆ ಕಡಿತಕ್ಕೆ ಒತ್ತಾಯ

    |

    ಸಿನಿಮಾಗಳ ಬಜೆಟ್‌ಗಳು ವರ್ಷದಿಂದ ವರ್ಷಕ್ಕೆ ಏರುತ್ತಲೇ ಸಾಗಿವೆ. ಸಿನಿಮಾಗಳ ಬಜೆಟ್ ಹೆಚ್ಚಾಗುತ್ತಿವೆಯಾದರೂ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್ ಆಗುತ್ತಿರುವ ಸಿನಿಮಾಗಳ ಸಂಖ್ಯೆ ಕಡಿಮೆಯೇ ಇದೆ.

    ಸಿನಿಮಾಗಳ ಬಜೆಟ್‌ ಹೆಚ್ಚಾಗುತ್ತಿರುವುದು ನಿರ್ಮಾಪಕರಿಗೆ ತೀವ್ರ ಹಿನ್ನಡೆ ಉಂಟು ಮಾಡುತ್ತಿದೆ. ಅದರಲ್ಲೂ ಆಂಧ್ರ ಪ್ರದೇಶದಲ್ಲಿ ಚಿತ್ರಮಂದಿರಗಳ ಮೇಲೆ, ಟಿಕೆಟ್ ದರಗಳ ಕುರಿತಂತೆ ಸರ್ಕಾರ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ ಬೆನ್ನಲ್ಲೆ ಚಿತ್ರನಿರ್ಮಾಪಕರಿಗೆ ಬರುತ್ತಿವ ಆದಾಯದಲ್ಲಿ ತೀವ್ರ ಇಳಿಕೆಯಾಗಿದೆ.

    ಹೊಸ ಫಾರ್ಮ್‌ಹೌಸ್ ಖರೀದಿಸಿದ ಜೂ ಎನ್‌ಟಿಆರ್: ಹೆಸರೇನು ಗೊತ್ತೆ?ಹೊಸ ಫಾರ್ಮ್‌ಹೌಸ್ ಖರೀದಿಸಿದ ಜೂ ಎನ್‌ಟಿಆರ್: ಹೆಸರೇನು ಗೊತ್ತೆ?

    ಇದರಿಂದ ತೆಲುಗು ನಿರ್ಮಾಪಕರು ಆತಂಕ್ಕೆ ಒಳಗಾಗಿದ್ದು, ಕೆಲವು ಹಿರಿಯ-ಕಿರಿಯ ನಿರ್ಮಾಪಕರು ಈ ಬಗ್ಗೆ ಸಭೆ ನಡೆಸಿದ್ದು, ಸಿನಿಮಾಗಳ ಬಜೆಟ್ ಹೆಚ್ಚಾಗಲು ಸ್ಟಾರ್ ನಟರ ದುಬಾರಿ ಸಂಭಾವನೆ ಕಾರಣವಾದ್ದರಿಂದ ನಟರ ಮೇಲೆ ಸಂಭಾವನೆ ಕಡಿತಕ್ಕೆ ಒತ್ತಡ ಹೇರುತ್ತಿದ್ದಾರೆ.

    ಹೊಸ ಸಿನಿಮಾಕ್ಕೆ 'ಕೆಜಿಎಫ್' ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ!ಹೊಸ ಸಿನಿಮಾಕ್ಕೆ 'ಕೆಜಿಎಫ್' ಗಿಂತಲೂ ದುಪ್ಪಟ್ಟು ಸಂಭಾವನೆ ಪಡೆದ ಶ್ರೀನಿಧಿ ಶೆಟ್ಟಿ!

    ದುಬಾರಿ ಸಂಭಾವನೆ ಪಡೆವ ನಟರು

    ದುಬಾರಿ ಸಂಭಾವನೆ ಪಡೆವ ನಟರು

    ತೆಲುಗು ಸಿನಿಮಾ ನಟರು ಭಾರಿ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಜೊತೆಗೆ ದುಬಾರಿ ಸಂಭಾವನೆ ಪಡೆಯುವಲ್ಲಿ ಸಹ ಖ್ಯಾತರು. ಪವನ್ ಕಲ್ಯಾಣ್, ಪ್ರಭಾಸ್, ಮಹೇಶ್ ಬಾಬು, ಜೂ ಎನ್‌ಟಿಆರ್, ಚಿರಂಜೀವಿ, ರಾಮ್ ಚರಣ್, ಅಲ್ಲು ಅರ್ಜುನ್ ಇನ್ನಿತರೆ ನಟರ ಸಂಭಾವನೆ 50 ಕೋಟಿಗೂ ಹೆಚ್ಚಿದೆ. ಪವನ್ ಕಲ್ಯಾಣ್, ಪ್ರಭಾಸ್ ಅವರುಗಳಂತೂ ನೂರು ಕೋಟಿ ಸಂಭಾವನೆ ಪಡೆಯುವ ನಟರು.

    ಸಿನಿಮಾದ ಬಜೆಟ್‌ನ ಹೆಚ್ಚಳಕ್ಕೆ ದುಬಾರಿ ಸಂಭಾವನೆ ಕಾರಣ

    ಸಿನಿಮಾದ ಬಜೆಟ್‌ನ ಹೆಚ್ಚಳಕ್ಕೆ ದುಬಾರಿ ಸಂಭಾವನೆ ಕಾರಣ

    ಸಿನಿಮಾದ ಒಟ್ಟು ಬಜೆಟ್‌ನ ಶೇಕಡ 40%-50% ರಷ್ಟು ನಾಯಕ ನಟರ ಸಂಭಾವನೆಯೇ ಇರುತ್ತದೆ. ಸಂಭಾವನೆಯ ಕಾರಣದಿಂದಲೇ ಸಿನಿಮಾದ ಬಜೆಟ್‌ಗಳು ಭಾರಿ ಏರಿಕೆಯಾಗಿದೆ. ಇದು ನಿರ್ಮಾಪಕರಿಗೆ ಭಾರಿ ಹೊರೆಯಾಗಿದೆ. ಇದಲ್ಲದೆ, ಸರ್ಕಾರಗಳ ಕಟ್ಟುನಿಟ್ಟಿನ ನಿಯಮಗಳು, ಟಿಕೆಟ್ ದರದಲ್ಲಿ ಇಳಿಕೆಯ ಕಾರಣದಿಂದ ಚಿತ್ರಮಂದಿರಗಳಿಂದ ದೊಡ್ಡ ಮಟ್ಟದ ಲಾಭ ಬರುತ್ತಿಲ್ಲ. ಒಟ್ಟಾರೆ ಕಲೆಕ್ಷನ್‌ ಮೇಲೆ ಮನೊರಂಜನಾ ತೆರಿಗೆ ತೆಗೆದರೆ ನಿರ್ಮಾಪಕನಿಗೆ ಉಳಿಯುವುದು ಸುಮಾರು 20%-30% ಅಷ್ಟೆ, ಅದೂ ಸಿನಿಮಾ ಹಿಟ್ ಆದರೆ. ಇಲ್ಲವಾದರೆ ಅದೂ ಇಲ್ಲ.

    ಇದು ಒಕ್ಕೂರಲ ಬೇಡಿಕೆಯಲ್ಲ

    ಇದು ಒಕ್ಕೂರಲ ಬೇಡಿಕೆಯಲ್ಲ

    ಇದೇ ಕಾರಣಕ್ಕೆ ತೆಲುಗು ಚಿತ್ರರಂಗದ ಕೆಲ ನಿರ್ಮಾಪಕರು ಸ್ಟಾರ್ ನಟರ ಬಳಿ ಮನವಿ ಮಾಡುತ್ತಿದ್ದು, ಸಂಭಾವನೆಯನ್ನು ಕಡಿತಗೊಳಿಸಿಕೊಳ್ಳುವಂತೆ ಕೇಳಿ ಕೊಂಡಿದ್ದಾರೆ. ಅಥವಾ ಸಂಭಾವನೆ ಬದಲಿಗೆ ನಿರ್ಮಾಣ ಪಾಲುದಾರಿಕೆಯಲ್ಲಿ ಸಿನಿಮಾ ಮಾಡುವ ಯೋಜನೆಯನ್ನು ಇಟ್ಟಿದ್ದಾರೆ. ಆದರೆ ಇದು ನಿರ್ಮಾಪಕರ ಒಕ್ಕೂರಲ ಬೇಡಿಕೆಯಲ್ಲ. ಹಾಗಾಗಿ ಇದನ್ನು ತೆಲುಗಿನ ಸ್ಟಾರ್ ನಟರು ಒಪ್ಪುತ್ತಾರೆ ಎಂಬ ಬಗ್ಗೆ ಗ್ಯಾರೆಂಟಿ ಇಲ್ಲ.

    ಅತ್ಯಂತ ಕಡಿಮೆ ಟಿಕೆಟ್ ದರ

    ಅತ್ಯಂತ ಕಡಿಮೆ ಟಿಕೆಟ್ ದರ

    ಆಂಧ್ರ ಪ್ರದೇಶ-ತೆಲಂಗಾಣ ರಾಜ್ಯಗಳಲ್ಲಿ ಚಿತ್ರಮಂದಿರ ಟಿಕೆಟ್ ದರ ಬಹಳ ಕಡಿಮೆ ಇದೆ. ಆಂಧ್ರದಲ್ಲಿಯಂತೂ ದೇಶದಲ್ಲಿಯೇ ಅತ್ಯಂತ ಕಡಿಮೆ ಟಿಕೆಟ್ ದರ ಇದೆ. ಅಲ್ಲದೆ ಈ ಮುಂಚೆ ಇದ್ದ ಫ್ಯಾನ್ಸ್ ಶೋ, ಬೆನಿಫಿಟ್ ಶೋಗಳನ್ನು ಸಹ ಇದೀಗ ರದ್ದು ಮಾಡಲಾಗಿದೆ. ಇದರಿಂದ ನಿರ್ಮಾಪಕರು ಭಾರಿ ಪ್ರಮಾಣದ ನಷ್ಟ ಅನುಭವಿಸುತ್ತಿದ್ದಾರೆ. ಕೆಲವು ದಿನಗಳ ಹಿಂದಷ್ಟೆ ಬಿಡುಗಡೆ ಆಗಿದ್ದ 'ಆಚಾರ್ಯ' ಸಿನಿಮಾ ಫ್ಲಾಪ್ ಆಗಿ ವಿತರಕರು ಕೋಟಿಗಟ್ಟಲೆ ನಷ್ಟ ಅನುಭವಿಸಿದ್ದರು. ಇಂಥಹಾ ಹಲವು ಉದಾಹರಣೆಗಳು ತೆಲುಗು ಚಿತ್ರರಂಗದಲ್ಲಿದೆ.

    English summary
    Telugu movie producers unhappy with their star actors for taking big amount of money as remunerations.
    Sunday, July 17, 2022, 16:18
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X