ಬರ್ತ್‌ಡೇ ಪಾರ್ಟಿಯಲ್ಲಿ ಕಿತ್ತಾಟ; ನಟಿ ಮೇಲೆ ಹಲ್ಲೆ ಮಾಡಿದ ಪಬ್ ಸಿಬ್ಬಂದಿ? ವಿಡಿಯೋ ವೈರಲ್

By ಫಿಲ್ಮಿಬೀಟ್ ಡೆಸ್ಕ್

ಸಿನಿಮಾ ಮಂದಿಗೂ ಪಬ್‌ಗಳಿಗೂ ಬಿಡಲಾರದ ನಂಟು. ಪಾರ್ಟಿ ಮೂಡ್‌, ಬರ್ತ್‌ಡೇ ಸೆಲೆಬ್ರೆಷನ್‌ ಹೀಗೆ ಏನೇ ಸಂಭ್ರಮವಿದ್ದರೂ ಹೆಚ್ಚಾಗಿ ಪಬ್‌ಗಳಿಗೆ ಭೇಟಿ ಕೊಡುತ್ತಾರೆ. ಅದರಲ್ಲೂ ಸ್ನೇಹಿತರೊಂದಿಗೆ ವೀಕೆಂಡ್‌ನಲ್ಲಿ ಹೋಗಿ ಮಸ್ತಿ ಮಾಡಿ ಬರೋದು ಕಾಮನ್. ಕೆಲವೊಮ್ಮೆ ಸಂಭ್ರಮದಲ್ಲಿ ಇರುವಾಗಲೇ ಗಲಾಟೆ ಮಾಡಿಕೊಂಡು ವಿವಾದಕ್ಕೆ ಗುರಿಯಾಗಿದ್ದು ಕೂಡ ಇದೆ.

ಟಾಲಿವುಡ್‌ನ ನಟಿಯೊಬ್ಬರು ವೀಕೆಂಡ್‌ನಲ್ಲಿ ಹುಟ್ಟುಹಬ್ಬಕ್ಕೆ ಆಚರಿಸುವುದಕ್ಕೆ ಹೋಗಿ ಪಬ್ ಸಿಬ್ಬಂದಿಯೊಂದಿಗೆ ಗಲಾಟೆ ಮಾಡಿಕೊಂಡಿದ್ದಾರೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಆಂದ್ಹಾಗೆ ಈ ತೆಲುಗು ನಟಿಯ ಹೆಸರು ಕಲ್ಪಿಕಾ ಗಣೇಶ್. ತೆಲುಗು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಈ ನಟಿ ಸಿಬ್ಬಂದಿಯೊಂದಿಗೆ ಜಗಳ ಆಡುತ್ತಿರುವ ವಿಡಿಯೋ ವೈರಲ್ ಆಗಿದೆ.

Pub staff and Tollywood actress Kalpika Ganesh clash in Hyderabad watch video

ಹೈದರಾಬಾದ್‌ನ ಪಬ್ ಒಂದಕ್ಕೆ ತೆಲುಗು ನಟಿ ತನ್ನ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವುದಕ್ಕೆ ಹೋಗಿದ್ದರು. ಈ ವೇಳೆ ಪಬ್‌ನ ಸಿಬ್ಬಂದಿಯೊಂದಿಗೆ ಕೇಕ್ ವಿಚಾರಕ್ಕೆ ಗಲಾಟೆ ಶುರುವಾಗಿತ್ತು ಎಂದು ಹೇಳಲಾಗಿದೆ. ಬಳಿಕ ಇಬ್ಬರ ನಡುವೆ ವಾಗ್ವಾದ ನಡೆದು ಅದು ದೊಡ್ಡ ಮಟ್ಟಕ್ಕೆ ಹೋಗಿದೆ. ಇವರಿಬ್ಬರು ಕಿತ್ತಾಡಿಕೊಳ್ಳುತ್ತಿರುವ ದೃಶ್ಯಗಳು ಅವರೇ ತಮ್ಮ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ವಿಡಿಯೋದಲ್ಲಿ ಸೆರೆಯಾಗಿದೆ.

ನಟಿ ಕಲ್ಪಿಕಾ ಗಣೇಶ್ ತೆಲುಗಿನ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಸೀತಮ್ಮ ವಾಕಿಟ್ಲೋ ಸಿರಿಮಲ್ಲೆ ಚೆಟ್ಟು', 'ಆರೆಂಜ್', 'ಸೀತಮ್ಮ' ಇಂತಹ ಸಿನಿಮಾಗಳಲ್ಲಿ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಸೂಪರ್ ಹಿಟ್ ಸಿನಿಮಾಗಳಲ್ಲಿ ಹೆಚ್ಚಾಗಿ ನಾಯಕನ ಸ್ನೇಹಿತೆಯಾಗಿ, ಅಕ್ಕನಾಗಿ, ತಂಗಿಯಾಗಿ ಇಲ್ಲವೇ ಅತ್ತಿಗೆಯಾಗಿ ಕಾಣಿಸಿಕೊಂಡಿದ್ದೇ ಹೆಚ್ಚು. ಪೋಷಕ ಪಾತ್ರಗಳಲ್ಲಿ ನಟಿಸಿದ್ದರೂ, ಇವರ ನಟನೆಯನ್ನು ಪ್ರೇಕ್ಷಕರು ಮೆಚ್ಚಿಕೊಂಡಿದ್ದರು.

ತೆಲುಗು ಚಿತ್ರರಂಗದಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸುತ್ತಿದ್ದ ಕಲ್ಪಿಕಾ ಗಣೇಶ್ ಇತ್ತೀಚೆಗೆ ವಿವಾದಗಳಿಗೂ ಸಿಲುಕಿದ್ದರು. ತೆಲುಗು ಜನಪ್ರಿಯ ಹಾಸ್ಯ ನಟನ ವಿರುದ್ಧ ಆರೋಪಗಳನ್ನು ಮಾಡಿ ಸುದ್ದಿಯಲ್ಲಿ ಇದ್ದರು. ಈ ವಿವಾದದ ಬಳಿಕ ಟಾಲಿವುಡ್ ನಟಿ ಸಿನಿಮಾರಂಗದಿಂದ ಸ್ವಲ್ಪ ದೂರ ಉಳಿದಿದ್ದರು. ಈಗ ಮತ್ತೆ ಪಬ್ ಸಿಬ್ಬಂದಿಯ ಜೊತೆ ಕಿತ್ತಾಡಿಕೊಂಡು ಸುದ್ದಿಯಾಗಿದ್ದಾರೆ. ಅಸಲಿಗೆ ಆ ಘಟನೆ ಏನು ಅಂತ ನೋಡುವುದಾರೇ.

ನಟಿ ಕಲ್ಪಿಕಾ ಗಣೇಶ್ ತನ್ನ ಹುಟ್ಟುಹಬ್ಬವನ್ನು ಆಚರಿಸುವುದಕ್ಕೆ ಹೈದರಾಬಾದ್‌ನ ಗಚ್ಚಿಬೌಲಿಯ ಸಮೀಪವಿರುವ ಪಬ್‌ಗೆ ಹೋಗಿದ್ದರು. ಆದರೆ, ಬರ್ತ್‌ಡೇ ಕೇಕ್ ವಿಚಾರದಲ್ಲಿ ಪಬ್ ಸಿಬ್ಬಂದಿ ಹಾಗೂ ನಟಿಯ ನಡುವೆ ಕಿತ್ತಾಟ ಶುರುವಾಗಿದೆ. ಮಾತಿಗೆ ಮಾತು ಬೆಳೆದು ಅದು ದೊಡ್ಡ ಮಟ್ಟಕ್ಕೆ ಹೋಗಿದೆ. ಈ ವೇಳೆ ನಟಿ ತನ್ನ ಬರ್ತ್‌ಡೇ ಪಾರ್ಟಿಯಲ್ಲಿ ಮದ್ಯಪಾನ ಮಾಡಿದ್ದು, ಸಿಬ್ಬಂದಿ ಈಕೆಯ ಮೇಲೆ ಹಲ್ಲೆ ಮಾಡಿರುವುದಾಗಿ ವರದಿಯಾಗಿದೆ.

ಪಬ್‌ನಲ್ಲಿ ಗಲಾಟೆ ಶುರುವಾಗುತ್ತಿದ್ದಂತೆ ತಕ್ಷಣಕ್ಕೆ ಮಾಲೀಕರು ಮಧ್ಯೆ ಪ್ರವೇಶಿಸಿ ಪರಿಸ್ಥಿತಿಯನ್ನು ಶಾಂತಗೊಳಿಸಿದ್ದರು ಎನ್ನಲಾಗಿದೆ. ಪಬ್ ಸಿಬ್ಬಂದಿ ಮಾಡಿದ ಹಲ್ಲೆಯನ್ನು ಖಂಡಿಸಿ, ನಟಿ ಪೊಲೀಸರಿಗೆ ದೂರನ್ನು ನೀಡಿದ್ದಾರೆಂದೂ ಹೇಳಲಾಗಿದೆ. ಸದ್ಯ ಈ ಗಲಾಟೆಯ ವಿಡಿಯೋವನ್ನು ಖುದ್ದಾಗಿ ನಟಯೇ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಅಲ್ಲದೆ ಪಬ್ ಸಿಬ್ಬಂದಿಯ ಬಗ್ಗೆ ಕಿಡಿಕಾರಿದ್ದಾರೆ. ಅಷ್ಟೇ ಅಲ್ಲದೆ ಆ ಪಬ್‌ ಬಗ್ಗೆ ಕಟು ಟೀಕೆಗಳನ್ನು ಮಾಡಿದ್ದಾರೆ.

More from Filmibeat

English summary
Pub staff and Tollywood actress Kalpika Ganesh clash in Hyderabad watch video.
Read more about: tollywood actress video
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X