For Quick Alerts
  ALLOW NOTIFICATIONS  
  For Daily Alerts

  ಅಪ್ಪು ಅಭಿನಯದ ಚಿತ್ರದ ತೆಲುಗು ಟೀಸರ್ ಬಿಡುಗಡೆ, ಟ್ರೆಂಡಿಂಗ್! ಶೀಘ್ರದಲ್ಲೇ ಚಿತ್ರಮಂದಿರಗಳಲ್ಲಿ ರಿಲೀಸ್

  |

  ಪುನೀತ್ ರಾಜ್ ಕುಮಾರ್ ಕರ್ನಾಟಕ ಮಾತ್ರವಲ್ಲದೆ ತೆಲುಗು ಹಾಗೂ ತಮಿಳು ಚಿತ್ರರಂಗಗಳಲ್ಲಿಯೂ ಸಹ ಅಭಿಮಾನಿಗಳನ್ನು ಹೊಂದಿದ್ದಾರೆ. ಅದರಲ್ಲಿಯೂ ತೆಲುಗಿನಲ್ಲಿ ಪುನೀತ್ ರಾಜ್ ಕುಮಾರ್ ಐಡೆಂಟಿಟಿ ದೊಡ್ಡ ಮಟ್ಟದಲ್ಲಿಯೇ ಇತ್ತು. ಅದ್ಭುತ ಆ್ಯಕ್ಷನ್ ಹಾಗೂ ಡಾನ್ಸ್ ಮಾಡುತ್ತಿದ್ದ ಕಾರಣದಿಂದಾಗಿ ಪುನೀತ್ ರಾಜ್ ಕುಮಾರ್ ತೆಲುಗಿನಲ್ಲಿ ತುಸು ಹೆಚ್ಚೇ ಅಭಿಮಾನಿಗಳನ್ನು ಹೊಂದಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ತೆಲುಗು ನಟರ ಜತೆ ಪುನೀತ್ ರಾಜ್ ಕುಮಾರ್ ಅವರನ್ನು ಹೆಚ್ಚಾಗಿ ಹೋಲಿಕೆ ಮಾಡಿ ನೆಟ್ಟಿಗರು ಚರ್ಚಿಸಿದ ಹಲವಾರು ಉದಾಹರಣೆಗಳು ಸಹ ಇವೆ.

  ಹೀಗೆ ಪರಭಾಷಾ ಚಿತ್ರರಂಗಗಳಲ್ಲಿಯೂ ಗುರುತಿಸಿಕೊಂಡಿದ್ದ ಪುನೀತ್ ರಾಜ್ ಕುಮಾರ್ ಕನ್ನಡ ಹೊರತುಪಡಿಸಿ ಬೇರೆ ಯಾವುದೇ ಭಾಷೆಯ ಚಿತ್ರಗಳಲ್ಲಿಯೂ ಅಭಿನಯಿಸಿರಲಿಲ್ಲ. ಆದರೆ ಪುನೀತ್ ರಾಜ್ ಕುಮಾರ್ ಅಭಿನಯದ ಜಾಕಿ, ಯುವರತ್ನ ಹಾಗೂ ಇತ್ತೀಚೆಗಷ್ಟೇ ಬಿಡುಗಡೆಗೊಂಡ ಜೇಮ್ಸ್ ಚಿತ್ರಗಳು ತೆಲುಗಿಗೆ ಡಬ್ ಆಗಿ ಬಿಡುಗಡೆಯಾಗಿದ್ದವು.

  ಪುನೀತ್ ನಿಧನದ ಬಳಿಕ ಕನ್ನಡದಲ್ಲಿ ಬಿಡುಗಡೆಯಾಗಿರುವ ಪುನೀತ್ ರಾಜ್ ಕುಮಾರ್ ಅಭಿನಯದ ಹಿಟ್ ಚಿತ್ರಗಳನ್ನು ತೆಲುಗಿಗೂ ಡಬ್ ಮಾಡಿ ಬಿಡುಗಡೆ ಮಾಡಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿತ್ತು. ಅದರಂತೆ ಇದೀಗ ಪುನೀತ್ ರಾಜ್ ಕುಮಾರ್ ಅಭಿನಯದ ಚಿತ್ರವೊಂದನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ.

   ಇಲ್ಲಿ ಚಕ್ರವ್ಯೂಹ, ಅಲ್ಲಿ ಸಿವಿಲ್ ಎಂಜಿನಿಯರ್

  ಇಲ್ಲಿ ಚಕ್ರವ್ಯೂಹ, ಅಲ್ಲಿ ಸಿವಿಲ್ ಎಂಜಿನಿಯರ್

  2016ರಲ್ಲಿ ಬಿಡುಗಡೆಗೊಂಡಿದ್ದ ಪುನೀತ್ ರಾಜ್ ಕುಮಾರ್, ಅರುಣ್ ವಿಜಯ್ ಹಾಗೂ ರಚಿತಾ ರಾಮ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದ ಚಕ್ರವ್ಯೂಹ ಚಿತ್ರವನ್ನು ಡಬ್ ಮಾಡಿ ತೆಲುಗಿನಲ್ಲಿ ಸಿವಿಲ್ ಇಂಜಿನಿಯರ್ ಎಂದು ಬಿಡುಗಡೆ ಮಾಡಲು ತಯಾರಿ ನಡೆಸಲಾಗಿದೆ. ಈಗಾಗಲೇ ಚಿತ್ರದ ಡಬ್ಬಿಂಗ್ ಕೆಲಸ ಮುಕ್ತಾಯವಾದಂತೆ ಕಾಣುತ್ತಿದ್ದು, ಚಿತ್ರದ ಟೀಸರ್ ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್‌ನಲ್ಲಿ ಬಿಡುಗಡೆಗೊಂಡಿದೆ.

   ಟ್ರೆಂಡ್ ಆಯ್ತು ಟೀಸರ್, ಚಿತ್ರ ಶೀಘ್ರದಲ್ಲಿಯೇ ಚಿತ್ರಮಂದಿರದಲ್ಲಿ

  ಟ್ರೆಂಡ್ ಆಯ್ತು ಟೀಸರ್, ಚಿತ್ರ ಶೀಘ್ರದಲ್ಲಿಯೇ ಚಿತ್ರಮಂದಿರದಲ್ಲಿ

  ಇನ್ನು ಸಿವಿಲ್ ಇಂಜಿನಿಯರ್ ಚಿತ್ರದ ಟೀಸರ್ ನಿನ್ನೆ ( ಅಕ್ಟೋಬರ್ 5 ) ಬಿಡುಗಡೆಯಾಗಿದ್ದು, ಇಂದು ಯೂಟ್ಯೂಬ್‌ನಲ್ಲಿ ಟ್ರೆಂಡ್ ಆಗುತ್ತಿದೆ. ಒಳ್ಳೆಯ ವೀಕ್ಷಣೆಗಳನ್ನು ಸಹ ಪಡೆದುಕೊಳ್ಳುತ್ತಿರುವ ಟೀಸರ್‌ನಲ್ಲಿ ಕೇವಲ ಸಂಭಾಷಣೆಯನ್ನು ಮಾತ್ರವಲ್ಲದೆ ಹಾಡುಗಳನ್ನು ಕೂಡ ಡಬ್ ಮಾಡಿರುವುದನ್ನು ಕಾಣಬಹುದಾಗಿದೆ. ಟೀಸರ್‌ನ ಅಂತ್ಯದಲ್ಲಿ ಚಿತ್ರ ಆದಷ್ಟು ಬೇಗ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ ಎಂಬುದನ್ನು ತಿಳಿಸಲಾಗಿದ್ದು, ಚಕ್ರವ್ಯೂಹ ದೊಡ್ಡಮಟ್ಟದಲ್ಲಿಯೇ ಸಿವಿಲ್ ಎಂಜಿನಿಯರ್ ಶೀರ್ಷಿಕೆ ಅಡಿಯಲ್ಲಿ ಟಾಲಿವುಡ್ ಪ್ರವೇಶಿಸಲಿದೆ.

   ರಾಜಕುಮಾರ ಚಿತ್ರವನ್ನು ಡಬ್ ಮಾಡಿ ಎಂದ ತೆಲುಗು ಸಿನಿ ಪ್ರೇಕ್ಷಕರು

  ರಾಜಕುಮಾರ ಚಿತ್ರವನ್ನು ಡಬ್ ಮಾಡಿ ಎಂದ ತೆಲುಗು ಸಿನಿ ಪ್ರೇಕ್ಷಕರು

  ಈ ಟೀಸರ್ ಕಾಮೆಂಟ್ ವಿಭಾಗದಲ್ಲಿ ಹೆಚ್ಚಾಗಿ ರಾಜಕುಮಾರ ಚಿತ್ರವನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಿ ಎಂಬ ಕೋರಿಕೆ ಕೇಳಿ ಬಂದಿದೆ. ಅಷ್ಟೇ ಅಲ್ಲದೆ ಪುನೀತ್ ರಾಜ್ ಕುಮಾರ್ ಅವರ ಒಳ್ಳೊಳ್ಳೆ ಚಿತ್ರಗಳಿದ್ದು ಅವುಗಳನ್ನು ತೆಲುಗಿಗೆ ಡಬ್ ಮಾಡಿ ಬಿಡುಗಡೆ ಮಾಡಿ ನಾವು ನೋಡುತ್ತೇವೆ ಎಂಬ ಕಾಮೆಂಟ್ ತೆಲುಗು ಪ್ರೇಕ್ಷಕರ ಕಡೆಯಿಂದ ಬಂದಿದೆ.

  English summary
  Puneeth Rajkumar's Civil engineer telugu movie teaser is trending on YouTube. Read on
  Friday, October 7, 2022, 9:25
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X