'ಲೈಗರ್' ಸೋಲಿನ ಬಳಿಕ ಮತ್ತೆ ತೊಡೆ ತಟ್ಟಿದ ಪೂರಿ ಜಗನ್ನಾಥ್: ಆಡಿಕೊಂಡವರ ಬಾಯಿ ಮುಚ್ಚಿಸಲು ಪಣ

ಚಿತ್ರರಂಗದಲ್ಲಿ ಹಾವು ಏಣಿ ಆಟ ಇದ್ದಿದ್ದೆ. ಇಲ್ಲಿ ಯಾರು ಯಾವಾಗ ಎದ್ದು ನಿಲ್ತಾರೆ. ಯಾರು ಯಾವಾಗ ಸೋಲ್ತಾರೆ ಅನ್ನೋದನ್ನು ಹೇಳೊಕ್ಕಾಗಲ್ಲ. ಗೆದ್ದವರಿಗೆ ಮಾತ್ರ ಇಲ್ಲಿ ಬೆಲೆ. ಪೂರಿ ಜಗನ್ನಾಥ್ ಒಂದ್ಕಾಲದಲ್ಲಿ ದಕ್ಷಿಣ ಭಾರತ ಚಿತ್ರರಂಗದ ಖ್ಯಾತ ನಿರ್ದೇಶಕ ಎನಿಸಿಕೊಂಡಿದ್ದರು. ಆದರೆ 'ಲೈಗರ್' ಸಿನಿಮಾ ಸೋಲು ಸ್ಟಾರ್ ನಿರ್ದೇಶಕನನ್ನು ಅಕ್ಷರಶಃ ಪಾತಾಳಕ್ಕೆ ಕುಸಿಯುವಂತೆ ಮಾಡಿಬಿಡ್ತು.

ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಕಳೆದ ವರ್ಷ ಪ್ಯಾನ್ ಇಂಡಿಯಾ ಮಟ್ಟದಲ್ಲಿ ರಿಲೀಸ್ ಆಗಿತ್ತು. ಆದರೆ ಬಾಕ್ಸಾಫೀಸ್‌ನಲ್ಲಿ ಹೀನಾಯವಾಗಿ ಸೋತಿತ್ತು. ಪ್ರಮೋಷನ್ ವೇಳೆ ಚಿತ್ರಕ್ಕೆ ಒಳ್ಳೆ ಹೈಪ್ ಇರುವಂತೆ ಕಂಡುಬಂದಿತ್ತು. ಆದರೆ ಮೊದಲ ಶೋನಿಂದಲೇ ನೆಗೆಟಿವ್ ಟಾಕ್ ಕ್ರಿಯೇಟ್ ಆಗಿ ಸಿನಿಮಾ ಮೇಲೇಳಲೇ ಇಲ್ಲ. ಖ್ಯಾತ ಬಾಕ್ಸರ್ ಮೈಕ್ ಟೈಸನ್ ಚಿತ್ರದಲ್ಲಿ ನಟಿಸಿದರೂ ಪ್ರಯೋಜನವಾಗಲಿಲ್ಲ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎನ್ನುವ ವಿಜಯ್ ಕನಸು ನುಚ್ಚು ನೂರಾಗಿತ್ತು. ನಿರ್ದೇಶನದ ಜೊತೆಗೆ ನಿರ್ಮಾಣದಲ್ಲೂ ಕೈ ಜೋಡಿಸಿದ್ದ ಪೂರಿ ಹಾಗೂ ಚಾರ್ಮಿ ಭಾರೀ ನಷ್ಟ ಅನುಭವಿಸಿದರು.

Puri Jagannadh and Ram pothinenis Double ismart movie launched

ವಿತರಕರಿಗೆ ನಷ್ಟ ಭರಸುವುದಾಗಿ ಪೂರಿ ಜಗನ್ನಾಥ್ ಮತ್ತು ಚಾರ್ಮಿ ಕೌರ್ ಭರವಸೆ ನೀಡಿದ್ದರು. ಆದರೆ ಮಾತು ತಪ್ಪಿದ್ದಾರೆ ಎಂದು ವಿತರಕರು ಧರಣಿಗೂ ಮುಂದಾಗಿದ್ದರು. ವಿತರಕರು ಬೆದರಿಕೆ ಒಡ್ಡುತ್ತಿರುವುದಾಗಿ ಪುರಿ ಜಗನ್ನಾಥ್ ದೂರು ನೀಡಿದ್ದರು. ಕಳೆದು ಕೊಂಡಿದ್ದನ್ನು ಕಳೆದುಕೊಂಡ ಜಾಗದಲ್ಲೇ ಹುಡುಕಬೇಕು ಎಂದು ಸ್ಟಾರ್ ನಿರ್ದೇಶಕ ನಿರ್ಧರಿಸಿದ್ದಾರೆ. ಇದೀಗ ಹೊಸ ಸಿನಿಮಾ ಆರಂಭಿಸಿದ್ದಾರೆ. ತಮ್ಮದೇ ಚಿತ್ರದ ಹೊಸ ವರ್ಷನ್ ಕಟ್ಟಿಕೊಡೋಕೆ ಹೊರಟಿದ್ದಾರೆ. ನಿರ್ದೇಶನದ ಜೊತೆಗೆ 'ಡಬಲ್ ಇಸ್ಮಾರ್ಟ್' ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.

4 ವರ್ಷಗಳ ಹಿಂದೆ ಪೂರಿ ಜಗನ್ನಾಥ್ ಹಾಗೂ ರಾಮ್ ಪೋತಿನೇನಿ ಕಾಂಬಿನೇಷನ್‌ನಲ್ಲಿ ಬಂದಿದ್ದ 'ಇಸ್ಮಾರ್ಟ್ ಶಂಕರ್' ಸಿನಿಮಾ ಸೂಪರ್ ಹಿಟ್ ಆಗಿತ್ತು. ಚಿತ್ರದಲ್ಲಿ ಕನ್ನಡ ನಟಿ ನಭಾ ನಟೇಶ್ ಕೂಡ ನಟಿಸಿದ್ದರು. ಇದೀಗ ಅದೇ ಕಾಂಬಿನೇಷನ್‌ನಲ್ಲಿ 'ಡಬಲ್ ಇಸ್ಮಾರ್ಟ್' ಸಿನಿಮಾ ಸೆಟ್ಟೇರಿದೆ. ರಾಮ್ ಹುಟ್ಟುಹಬ್ಬದ ಪ್ರಯುಕ್ತ ಟೈಟಲ್ ಹಾಗೂ ರಿಲೀಸ್ ಡೇಟ್ ಅನೌನ್ಸ್ ಮಾಡಲಾಗಿತ್ತು. ಇಂದು(ಜುಲೈ 10) ಹೈದ್ರಾಬಾದ್‌ನಲ್ಲಿ ಸಿನಿಮಾ ಮುಹೂರ್ತ ಸಮಾರಂಭ ನೆರವೇರಿದೆ. ಚಾರ್ಮಿ 'ಡಬಲ್ ಇಸ್ಮಾರ್ಟ್' ಚಿತ್ರಕ್ಕೆ ಕ್ಲಾಪ್ ಮಾಡಿದರೆ, ನಿರ್ದೇಶಕ ಪೂರಿ ಜಗನ್ನಾಥ್ ಮೊದಲ ಶಾಟ್‌ಗೆ ಆಕ್ಷನ್ ಕಟ್ ಹೇಳಿದರು.

ಡಬಲ್ ಮಾಸ್ ಹಾಗೂ ಡಬಲ್ ಮನರಂಜನೆ ನೀಡಲು ಸಜ್ಜಾಗಿರುವ ಪುರಿ ಜಗನ್ನಾಥ್ 'ಡಬಲ್ ಇಸ್ಮಾರ್ಟ್' ಶೂಟಿಂಗ್ ಬುಧವಾರದಿಂದ ಆರಂಭಿಸುತ್ತಿದ್ದಾರೆ. ಮುಂದಿನ ವರ್ಷ ಅಂದ್ರೆ 2024‌ ಮಾರ್ಚ್ 8ರಂದು ಶಿವರಾತ್ರಿ ಹಬ್ಬದ ಸಂಭ್ರಮದಲ್ಲಿ ಈ ಸಿನಿಮಾ ರಿಲೀಸ್ ಆಗಲಿದೆ. ಪುರಿ ಜಗನ್ನಾಥ್ ಕಥೆ ಬರೆದು ನಿರ್ದೇಶಿಸುತ್ತಿರುವ 'ಡಬಲ್ ಇಸ್ಮಾರ್ಟ್' ಚಿತ್ರವನ್ನು ತಮ್ಮದೇ ಪೂರಿ ಕನೆಕ್ಟ್ಸ್ ಬ್ಯಾನರ್‌ ಅಡಿ ಚಾರ್ಮಿ ಕೌರ್ ಹಾಗೂ ಪೂರಿ ಜಗನ್ನಾಥ್ ನಿರ್ಮಿಸುತ್ತಿದ್ದಾರೆ. 'ಲೈಗರ್' ಸಿನಿಮಾದಲ್ಲಿ ಖಳನಾಯಕ ಘರ್ಜಿಸಿದ್ದ ವಿಷು ರೆಡ್ಡಿ ಪುರಿ ಕನೆಕ್ಟ್ ಸಿಇಒ ಆಗಿ ಕೆಲಸ ಮಾಡುತ್ತಿದ್ದಾರೆ. ಭಾರೀ ಬಜೆಟ್‌ನಲ್ಲಿ ಸಿನಿಮಾ ಮೂಡಿ ಬರಲಿದೆ.

Puri Jagannadh and Ram pothinenis Double ismart movie launched

ಪೂರಿ ಜಗನ್ನಾಥ್ ಮೊದಲ ದೃಶ್ಯಕ್ಕೆ ಆಕ್ಷನ್ ಕಟ್ ಹೇಳ್ತಿದ್ದಂತೆ ನಟ ರಾಮ್ ಗನ್ ಹಿಡಿದು ಖಡಕ್ ಡೈಲಾಗ್ ಹೇಳಿದ್ದಾರೆ. ‌'ಇಸ್ಮಾರ್ಟ್ ಶಂಕರ್' ಬಾಕ್ಸಾಫೀಸ್‌ನಲ್ಲಿ ಸದ್ದು ಮಾಡಿದ್ರು ಸಿನಿಮಾ ಬಗ್ಗೆ ಮಿಶ್ರಪ್ರತಿಕ್ರಿಯೆ ಸಿಕ್ಕಿತ್ತು. ಸಿಲ್ಲಿ ಕಥೆಯನ್ನು ಸಿನಿಮಾ ಮಾಡಿ ಪುರಿ ಹೇಗೋ ಸಕ್ಸಸ್ ಕಂಡಿದ್ದರು. ಆದರೆ ಈ ಬಾರಿ ಟಾಸ್ಕ್‌ ಬಹಳ ಟಫ್ ಇದೆ. ಮೊದ್ಲೆ 'ಲೈಗರ್' ಸೋಲಿನಿಂದ ಪೂರಿ ಸಿನಿಮಾ ಕ್ರೇಜ್ ಕಮ್ಮಿ ಆಗಿದೆ. ‌'ಇಸ್ಮಾರ್ಟ್ ಶಂಕರ್' ನೆಗೆಟಿವ್ ಅಂಶಗಳನ್ನು ಮೀರಿ ಈ ಬಾರಿ ನಿರ್ದೇಶಕರು ಪ್ರೂವ್ ಮಾಡಿಕೊಳ್ಳಬೇಕಿದೆ.

ಶಿವರಾತ್ರಿ ಹಬ್ಬಕ್ಕೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ 5 ಭಾಷೆಗಳಲ್ಲಿ 'ಡಬಲ್ ಇಸ್ಮಾರ್ಟ್' ಸಿನಿಮಾ ಬರಲಿದೆ. ಉಳಿದ ತಾರಾಬಳಗ ಹಾಗೂ ತಾಂತ್ರಿಕ ವರ್ಗದ ಮಾಹಿತಿಯನ್ನು ಶೀಘ್ರದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ತಿಳಿಸಿದೆ. ಪುರಿ ಜಗನ್ನಾಥ್ ಮತ್ತೆ ಫಿನಿಕ್ಸ್ ರೀತಿ ಎದ್ದು ಬರುವ ಲೆಕ್ಕಾಚಾರದಲ್ಲಿದ್ದಾರೆ. ತಮ್ಮಡು, ಬದ್ರಿ, ಪೋಕಿರಿ, ಅಪ್ಪು, ಬ್ಯುಸಿನೆಸ್‌ಮನ್ ರೀತಿಯ ಸೆನ್ಸೇಷನಲ್ ಸಿನಿಮಾ ಕೊಟ್ಟು ನಿರ್ದೇಶಕ ಮತ್ತೆ ಗೆದ್ದು ಬರಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

More from Filmibeat

English summary
Puri Jagannadh and Ram pothineni's Double ismart movie launched. Mass Action Entertainer at the cinemas on March 8th, 2024. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X