For Quick Alerts
  ALLOW NOTIFICATIONS  
  For Daily Alerts

  ಚಿರಂಜೀವಿಯ ಹೊಗಳಿ, 'ನಾನೂ ನಿಮ್ಮೊಂದಿಗಿದ್ದೇನೆ' ಎಂದ ನಿರ್ದೇಶಕ ಪುರಿ ಜಗನ್ನಾಥ್

  |

  ಮೆಗಾಸ್ಟಾರ್ ಚಿರಂಜೀವಿ ಅವರಿಗೆ ಕೋಟ್ಯಂತರ ಅಭಿಮಾನಿಗಳು. ಅವರ ನಟನೆ, ನೃತ್ಯಕ್ಕೆ ಮಾರುಹೋಗದವರು ಕಡಿಮೆ. ಅದರಲ್ಲಿಯೂ ಅವರ ಸಾಮಾಜಿಕ ಕಾರ್ಯಗಳು ಸಹ ಅಭಿಮಾನಿಗಳ ಸಂಖ್ಯೆಯನ್ನು ಹೆಚ್ಚಿಸಿವೆ.

  KGF 2 ನಂತರ ಯಶ್ ಮಾಡುವ ಸಿನಿಮಾ ಯಾವುದು ಗೊತ್ತಾ..? | YASH | KGF2 | MAHESH BABU | POORIJAGANATH

  ರಾಜಕೀಯದಲ್ಲಿ ಊಹಿಸಿದಷ್ಟು ಜನಬೆಂಬಲ ಚಿರಂಜೀವಿ ಅವರಿಗೆ ಸಿಗಲಿಲ್ಲವಾದರೂ ಸಿನಿಮಾ ವಿಷಯಕ್ಕೆ ಬಂದರೆ ಆಂಧ್ರ-ತೆಲಂಗಾಣದಲ್ಲಿ ಈಗಲೂ ಅವರೇ ಅತಿ ಹೆಚ್ಚು ಅಭಿಮಾನಿಗಳನ್ನು ಹೊಂದಿದ ನಟ.

  ಚಿತ್ರರಂಗದ ಭವಿಷ್ಯ: ಚಿರಂಜೀವಿ ಮನೆಯಲ್ಲಿ ಮಹತ್ವದ ಸಭೆಚಿತ್ರರಂಗದ ಭವಿಷ್ಯ: ಚಿರಂಜೀವಿ ಮನೆಯಲ್ಲಿ ಮಹತ್ವದ ಸಭೆ

  ಸಿನಿ ಪ್ರೇಕ್ಷಕರು ಮಾತ್ರವಲ್ಲ, ನಟ-ನಟಿ, ನಿರ್ದೇಶಕರೂ ಸಹ ಚಿರಂಜೀವಿ ಅವರ ಅಭಿಮಾನಿಗಳು. ಅದರಲ್ಲಿ ಪುರಿ ಜಗನ್ನಾಥ್ ಸಹ ಒಬ್ಬರು. ಅವಕಾಶ ಸಿಕ್ಕಾಗೆಲ್ಲಾ ಅಮಿತಾಬ್ ಬಚ್ಚನ್ ಮತ್ತು ಚಿರಂಜೀವಿ ಅವರನ್ನು ಹೊಗಳುವ ಪುರಿ ಜಗನ್ನಾಥ್. ಈಗ ಟ್ವಿಟ್ಟರ್‌ನಲ್ಲಿ ಮೆಗಾಸ್ಟಾರ್ ಅನ್ನು ಮನಸಾರೆ ಕೊಂಡಾಡಿದ್ದಾರೆ.

  ಚಿರಂಜೀವಿ ಮನೆಯಲ್ಲಿ ನಡೆಯಿತು ಬಹುಮುಖ್ಯ ಸಭೆ

  ಚಿರಂಜೀವಿ ಮನೆಯಲ್ಲಿ ನಡೆಯಿತು ಬಹುಮುಖ್ಯ ಸಭೆ

  ನಿನ್ನೆಯಷ್ಟೆ ಚಿರಂಜೀವಿ ಅವರ ಮನೆಯಲ್ಲಿ ಒಂದು ಬಹುಮುಖ್ಯವಾದ ಸಭೆ ನಡೆದಿತ್ತು. ಕೊರೊನಾ ಕಾರಣದಿಂದಾಗಿ ತೆಲುಗು ಚಿತ್ರರಂಗ ಭಾರಿ ನಷ್ಟ ಅನುಭವಿಸಿದ್ದು, ಚಿತ್ರರಂಗದ ಮುಂದಿನ ಭವಿಷ್ಯದ ಬಗ್ಗೆ ಈ ಸಭೆ ನಡೆದಿಯಿತು. ತೆಲಂಗಾಣ ಸಿನಿಮಾಟೋಗ್ರಫಿ ಸಚಿವರೂ ಸಹ ಸಭೆಯಲ್ಲಿ ಭಾಗವಹಿಸಿದ್ದರು.

  ತೆಲುಗು ಸಿನಿ ಉದ್ಯಮದ ಬಗ್ಗೆ ಚರ್ಚೆ

  ತೆಲುಗು ಸಿನಿ ಉದ್ಯಮದ ಬಗ್ಗೆ ಚರ್ಚೆ

  ತೆಲುಗು ಸಿನಿಮಾ ಉದ್ಯಮದ ಭವಿಷ್ಯದ ಕುರಿತು ಚರ್ಚೆ ನಡೆಸಿ, ಚಿರಂಜೀವಿ ಸೇರಿದಂತೆ ಇತರ ಪ್ರಮುಖರು ಸರ್ಕಾರಕ್ಕೆ ಅಗತ್ಯ ಸಲಹೆಗಳನ್ನು ಈ ಸಂದರ್ಭದಲ್ಲಿ ನೀಡಿದ್ದಾರೆ. ಈ ಕಾರ್ಯವನ್ನು ಪುರಿ ಜಗನ್ನಾಥ್ ಟ್ವೀಟ್‌ನಲ್ಲಿ ಹೊಗಳಿದ್ದಾರೆ. ಚಿರಂಜೀವಿ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.

  ಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರಮಹಾತ್ಮ ಗಾಂಧಿಯ ಕೊಂದ ಗೋಡ್ಸೆ ಗೆ ಜೈ ಎಂದ ಮೆಗಾಸ್ಟಾರ್ ಸಹೋದರ

  ನಿಮ್ಮ ಜೊತೆ ನಿಲ್ಲುತ್ತೇನೆ: ಪುರಿ

  ನಿಮ್ಮ ಜೊತೆ ನಿಲ್ಲುತ್ತೇನೆ: ಪುರಿ

  ತೆಲುಗು ಚಿತ್ರಕಾರ್ಮಿಕರು, ಚಿತ್ರೋದ್ಯಮದ ಉಳಿವಿಗೆ ನೀವು ಜವಾಬ್ದಾರಿಹೊತ್ತು ಮುಂದೆ ಸಾಗುತ್ತಿರುವುದು ಅಭಿನಂದನಾರ್ಹ. ನಾನೀಗ ಮುಂಬೈ ನಲ್ಲಿದ್ದು, ಶೀಘ್ರದಲ್ಲಿಯೇ ವಾಪಸ್‌ ಆಗಿ ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಪುರಿ ಜಗನ್ನಾಥ್ ಹೇಳಿದ್ದಾರೆ.

  ಸಲ್ಮಾನ್ ಖಾನ್‌ಗಾಗಿ ಹಿಂದಿ ಸಿನಿಮಾ?

  ಸಲ್ಮಾನ್ ಖಾನ್‌ಗಾಗಿ ಹಿಂದಿ ಸಿನಿಮಾ?

  ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್, ಮುಂಬೈನಲ್ಲಿದ್ದು, ವಿಜಯ್ ದೇವರಕೊಂಡ ಜೊತೆಗೆ ಫೈಟರ್ ಸಿನಿಮಾ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಲ್ಮಾನ್ ಖಾನ್‌ ಗಾಗಿ ಸಿನಿಮಾ ನಿರ್ದೇಶನ ಮಾಡುವ ಬಗ್ಗೆಯೂ ಮಾತುಕತೆ ನಡೆಸುತ್ತಿದ್ದಾರೆ.

  ಕಾಂಡೋಮ್‌ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆಕಾಂಡೋಮ್‌ನಿಂದ ಮಾಡಿದ ಬಟ್ಟೆ ಧರಿಸಿದ ಮೆಗಾಸ್ಟಾರ್ ಚಿರಂಜೀವಿ ಸೊಸೆ

  English summary
  Director Puri Jagannadh praised Megastar Chiranjeevi for standing for Telugu movie industry.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X