"ನಟರ ಖಾಸಗಿ ಅಂಗಕ್ಕೂ ಕೈ ಹಾಕ್ತಾರೆ, ಅದು ಕೂಡ ಹುಡುಗ್ರು": ಪೂರಿ ಜಗನ್ನಾಥ್
ತೆಲುಗು ನಿರ್ದೇಶಕ ಪೂರಿ ಜಗನ್ನಾಥ್ ಕನ್ನಡದಲ್ಲೂ ಸಿನಿಮಾಗಳನ್ನು ನಿರ್ದೇಶನ ಮಾಡಿದ್ದಾರೆ. ತೆಲುಗಿನಲ್ಲಿ ಬ್ಲಾಕ್‌ಬಸ್ಟರ್ ಹಿಟ್ ಸಿನಿಮಾಗಳನ್ನು ಕೊಟ್ಟ ಪೂರಿ ಈಗ ಸೋಲಿನ ಸುಳಿಗೆ ಸಿಲುಕಿದ್ದಾರೆ. 'ಲೈಗರ್' ಸಿನಿಮಾ ಹೀನಾಯವಾಗಿ ಸೋತು ನಿರ್ದೇಶಕನಾಗಿ ಮಾತ್ರವಲ್ಲದೇ ನಿರ್ಮಾಪಕನಾಗಿಯೂ ಹಿನ್ನಡೆ ಅನುಭವಿಸಿದ್ದರು.
'ಡಬಲ್ ಇಸ್ಮಾರ್ಟ್' ಸಿನಿಮಾ ಮೂಲಕ ಪೂರಿ ಜಗನ್ನಾಥ್ ಮತ್ತೆ ಫೀನಿಕ್ಸ್ ರೀತಿ ಎದ್ದು ಬರುವ ಪ್ರಯತ್ನದಲ್ಲಿದ್ದಾರೆ. ಒಂದ್ಕಾಲದಲ್ಲಿ ಸ್ಟಾರ್ ನಿರ್ದೇಶಕರಾಗಿದ್ದ ಪೂರಿ ಬಾಲಿವುಡ್‌ನಲ್ಲೂ ಸಿನಿಮಾ ಬಂದಿದ್ದರು. ಆದರೆ ಕೆಲ ವರ್ಷಗಳಿಂದ ಯಾವುದೇ ಸಿನಿಮಾ ಕೈ ಹಿಡಿಯುತ್ತಿಲ್ಲ. 5 ವರ್ಷಗಳ ಹಿಂದೆ ಬಂದ 'ಇಸ್ಮಾರ್ಟ್ ಶಂಕರ್' ಸಿನಿಮಾ ಒಂದು ರೇಂಜಿಗೆ ಸಕ್ಸಸ್ ಕಂಡಿತ್ತು. ಆದರೆ ಒಂದೂವರ್ ವರ್ಷದ ಹಿಂದೆ ಬಂದ 'ಲೈಗರ್' ಭಾರೀ ಪೆಟ್ಟು ಕೊಟ್ಟಿತ್ತು.

ಬಾಕ್ಸಿಂಗ್ ಲೋಕದ ದಂತಕತೆ ಮೈಕ್ ಟೈಸನ್ ನಟಿಸಿದರೂ 'ಲೈಗರ್' ಆರ್ಭಟ ನಡೆಯಲಿಲ್ಲ. ಈ ಸಿನಿಮಾ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದುಕೊಂಡಿದ್ದ ವಿಜಯ್ ದೇವರಕೊಂಡ ಆಸೆ ಕೂಡ ಈಡೇರಲಿಲ್ಲ. 'ಲೈಗರ್' ಪೂರಿ ಜಗನ್ನಾಥ್‌ಗೆ ಅಂತಿಂಥ ಪೆಟ್ಟು ಕೊಡಲಿಲ್ಲ. ಸಿನಿಮಾ ವಿತರಕರು ತಿರುಗಿಬಿದ್ದು ಕೇಸ್, ಪೊಲೀಸ್ ಸ್ಟೇಷನ್ ಅಂತ ಭಾರೀ ರಾದ್ಧಾಂತವಾಯಿತು. ನಿರ್ಮಾಪಕನಾಗಿಯೂ ಭಾರೀ ನಷ್ಟ ಅನುಭವಭವಿಸಿದರು.
ನಿರ್ದೇಶಕ ಪೂರಿ ಜಗನ್ನಾಥ್ ತಮ್ಮ ನೇರಾನೇರ ಮಾತುಗಳಿಂದ ಗಮನ ಸೆಳೆಯುತ್ತಾರೆ. ಅವರ ಸಿನಿಮಾ ಪಾತ್ರಗಳು, ಸಂಭಾಷಣೆ ಕೂಡ ಅದೇ ರೀತಿ ಇರುತ್ತದೆ. ಸ್ಟಾರ್ ನಟ-ನಟಿಯರು ಸಾರ್ವಜನಿಕವಾಗಿ ಕಾಣಿಸಿಕೊಂಡಾಗ ಕೆಲವರು ಅತಿರೇಕವಾಗಿ ವರ್ತಿಸುತ್ತಾರೆ. ಅದರಲ್ಲೂ ನಟಿಯರ ಜೊತೆ ಕೆಲ ಅಭಿಮಾನಿಗಳು ಕೆಟ್ಟದಾಗಿ ನಡೆದುಕೊಳ್ಳಲು ಘಟನೆಗಳು ನಡೆಯುತ್ತಲೇ ಇದೆ. ಇತ್ತೀಚೆಗೆ ಶಾಪಿಂಗ್ ಮಾಲ್ ಉದ್ಘಾಟನೆಗೆ ಹೋಗಿದ್ದ ನಟಿ ಕಾಜಲ್ ಅಗರ್‌ವಾಲ್ ಸೊಂಟಕ್ಕೆ ಅಭಿಮಾನಿಯೊಬ್ಬ ಕೈ ಹಾಕಿದ್ದ ವಿಡಿಯೋ ವೈರಲ್ ಆಗಿತ್ತು.

ನಟಿಯರ ಜೊತೆ ಕೆಲ ಅಭಿಮಾನಿಗಳು ಈ ರೀತಿ ಅಸಭ್ಯವಾಗಿ ನಡೆದುಕೊಳ್ಳುವುದ ಇದೇ ಮೊದಲೇನಲ್ಲ. ಈ ಹಿಂದೆ ಕೂಡ ಸಾಕಷ್ಟು ಬಾರಿ ಈ ರೀತಿ ನಡೆದಿದೆ. ನಟ-ನಟಿಯರಿಗೆ ಎದುರಾಗುವ ಇಂತಹ ಕಹಿ ಘಟನೆಗಳ ಬಗ್ಗೆ ನಿರ್ದೇಶಕ ಪೂರಿ ಜಗನ್ನಾಥ್ ಈ ಹಿಂದೆ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. ಇದು ಇಂದು ನಿನ್ನೆಯದಲ್ಲ. ಬಹಳ ಹಿಂದಿನಿಂದಲೂ ಸಾರ್ವಜನಿಕ ಸ್ಥಳಗಳಲ್ಲಿ ನಟ-ನಟಿಯರಿಗೆ ಇಂತಹ ಕಸಿವಿಸಿ ಎದುರಾಗುತ್ತಲೇ ಇದೆ ಎಂದಿದ್ದಾರೆ.
"ಕೆಲವರು ನಟಿಯರನ್ನು ಕಂಡರೆ ಅವರ ಜೊತೆ ಅನುಚಿತವಾಗಿ ವರ್ತಿಸುತ್ತಾರೆ. ಅವರು ಸ್ಪರ್ಶಿಸಲು ಬಯಸುತ್ತಾರೆ. ಹಾಗಾಗಿಯೇ ನಟಿಯರು ಸಾರ್ವಜನಿಕ ಸ್ಥಳಗಳಿಗೆ ಬರಲು ಹೆದರುತ್ತಾರೆ. ನಟಿಯರನ್ನು ಹಿಡಿದು ಎಳೆದು ಬಿಡುತ್ತಾರೆ. ನೂಕುವುದು, ತಳ್ಳುವುದು ಮಾಡುತ್ತಾರೆ. ಕೆಲವೊಮ್ಮೆ ಬಟ್ಟೆ ಹರಿದು ಬಿಡುತ್ತಾರೆ" ಎಂದು ಪೂರಿ ಜಗನ್ನಾಥ್ ಹೇಳಿದ್ದಾರೆ.
ಮಾತು ಮುಂದುವರೆಸಿರುವ ಪೂರಿ ಜಗನ್ನಾಥ್ "ನಿಮಗೆ ಗೊತ್ತಿಲ್ಲದ ಒಂದು ಶಾಕಿಂಗ್ ವಿಷಯ ಹೇಳ್ತೀನಿ. ಹೀರೋಗಳ ಖಾಸಗಿ ಅಂಗಕ್ಕೂ ಕೆಲವರು ಕೈ ಹಾಕುತ್ತಾರೆ. ಅದು ಕೂಡ ಹುಡುಗರು. ಹಾಗಾಗಿಯೇ ನಟರು ಅಭಿಮಾನಿಗಳು ಬರ್ತಾರೆ ಎಂದರೆ ಹೆದರುತ್ತಾರೆ. ಮೊಬೈಲ್, ವಾಚ್, ಇತರೆ ಆಕ್ಸಸರೀಸ್ ಏನಾದರೂ ಇದ್ದರೆ ಕಸಿದುಕೊಳ್ಳಲು ಯತ್ನಿಸುತ್ತಾರೆ. ಅವರ ವರ್ತನೆ ಅಷ್ಟು ಕೆಟ್ಟದಾಗಿರುತ್ತದೆ" ಎಂದು ನಿರ್ದೇಶಕ ಪೂರಿ ಜಗನ್ನಾಥ್ ಹೇಳಿದ್ದು ಈಗ ವೈರಲ್ ಆಗುತ್ತಿದೆ.


Click it and Unblock the Notifications











