For Quick Alerts
  ALLOW NOTIFICATIONS  
  For Daily Alerts

  ಕನ್ನಡತಿ ಅನುಷ್ಕಾ ಶೆಟ್ಟಿ ಬಗ್ಗೆ ಪುರಿ ಜಗನ್ನಾಥ್ ಹೇಳಿದ ಸತ್ಯ

  |

  ಕನ್ನಡತಿ ಅನುಷ್ಕಾ ಶೆಟ್ಟಿ, ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ ಖ್ಯಾತಿಯ ಉತ್ತುಂಗಕ್ಕೇರಿದವರು. ಅನುಷ್ಕಾ ಶೆಟ್ಟಿ ಅವರು ಚಿತ್ರರಂಗ ಪ್ರವೇಶಿಸಿ 15 ವರ್ಷವಾದ ಸಂಭ್ರಮದಲ್ಲಿ ದೊಡ್ಡ ಕಾರ್ಯಕ್ರಮವೊಂದು ಆಯೋಜಿತವಾಗಿತ್ತು.

  ಅನುಷ್ಕಾ ಶೆಟ್ಟಿ ಅವರ ಹೊಸ ನಿಶ್ಯಬ್ದಂ ಸಿನಿಮಾ ಪ್ರಮೋಷನ್ ಮತ್ತು ಅನುಷ್ಕಾ ಶೆಟ್ಟಿ ಚಿತ್ರರಂಗದಲ್ಲಿ 15 ವರ್ಷ ಪೂರೈಸಿದ್ದಕ್ಕೆ ಜೊತೆಯಾಗಿ ಭಾರಿ ಕಾರ್ಯಕ್ರಮವೊಂದು ನಡೆದಿದ್ದು, ಕಾರ್ಯಕ್ರಮದಲ್ಲಿ ಖ್ಯಾತ ನಿರ್ದೇಶಕ ಪುರಿ ಜಗನ್ನಾಥ್ ಅನುಷ್ಕಾ ಶೆಟ್ಟಿ ಕುರಿತು ಹಲವು ಸತ್ಯಗಳನ್ನು ಹೊರಗೆಡವಿದರು.

  ಅನುಷ್ಕಾ ಶೆಟ್ಟಿ ಗೆ ಮೊತ್ತ ಮೊದಲ ಸಿನಿಮಾ ಅವಕಾಶ ನೀಡಿದ್ದು ಪುರಿ ಜಗನ್ನಾಥ್. ನಾಗಾರ್ಜುನ ನಟನೆಯ ಸೂಪರ್ ಸಿನಿಮಾದಲ್ಲಿ ಅವರು ನಾಯಕಿಯಾಗಿ ಅಭಿನಯಿಸಿದ್ದರು. ಅನುಷ್ಕಾ ಅವರನ್ನು ಮೊದಲ ಭಾರಿಗೆ ಭೇಟಿ ಮಾಡಿದ್ದಾಗ ನಡೆದ ಘಟನೆಯನ್ನು ಪುರಿ ಜಗನ್ನಾಥ್ ನೆನಪು ಮಾಡಿಕೊಂಡರು.

  ಪುರಿ ಜಗನ್ನಾಥ್‌ ಗೆ ಪಾಸ್‌ಪೋರ್ಟ್ ಫೊಟೊ ಕೊಟ್ಟಿದ್ದರು ಅನುಷ್ಕಾ

  ಪುರಿ ಜಗನ್ನಾಥ್‌ ಗೆ ಪಾಸ್‌ಪೋರ್ಟ್ ಫೊಟೊ ಕೊಟ್ಟಿದ್ದರು ಅನುಷ್ಕಾ

  ಸೂಪರ್ ಸಿನಿಮಾಕ್ಕೆ ನಾಯಕಿ ಹುಡುಕಾಟದಲ್ಲಿದ್ದಾಗ ಮುಂಬೈನಲ್ಲಿ ಮೊದಲಿಗೆ ಅನುಷ್ಕಾ ಶೆಟ್ಟಿ ಅವರನ್ನು ಭೇಟಿ ಮಾಡಿದ್ದರಂತೆ ಪುರಿ ಜಗನ್ನಾಥ್, ಹೊಟೆಲ್ ನಲ್ಲಿ ಭೇಟಿಯಾಗಿ ನಿಮ್ಮ ಫೊಟೊಗಳನ್ನು ಕೊಡಿ ನೀಡ್ತೀನಿ ಎಂದರೆ, ಪಾಸ್‌ ಪೋರ್ಟ್ ಚಿತ್ರ ಕೊಟ್ಟಿದ್ದರಂತೆ ಅನುಷ್ಕಾ ಶೆಟ್ಟಿ. ಮೊದಲ ಸಿನಿಮಾಕ್ಕೆ ಅವಕಾಶ ಸಿಗುವ ವರೆಗೂ ಫೊಟೊಶೂಟ್ ಸಹ ಮಾಡಿಸಿರಲಿಲ್ಲವಂತೆ.

  ನಟನೆ ಬರುತ್ತಾ ಎಂದರೆ ಏನು ಹೇಳಿದರು ಅನುಷ್ಕಾ?

  ನಟನೆ ಬರುತ್ತಾ ಎಂದರೆ ಏನು ಹೇಳಿದರು ಅನುಷ್ಕಾ?

  ನಂತರ ನಟನೆ ಬರುತ್ತಾ ಎಂದು ಕೇಳಿದರೆ, 'ಬರೊಲ್ಲ, ಆದರೆ ಪ್ರಯತ್ನ ಮಾಡ್ತೀನಿ'' ಎಂದರಂತೆ. ಹೋಗಲಿ ಡಾನ್ಸ್ ಆದರೂ ಬರುತ್ತಾ ಎಂದಾಗ, 'ಡಾನ್ಸ್ ಯಾವತ್ತೂ ಮಾಡಿಲ್ಲ, ಆದ್ರೆ ಹೇಳಿಕೊಟ್ರೆ ಮಾಡ್ತೀನಿ' ಎಂದಿದ್ದರಂತೆ ಅನುಷ್ಕಾ. ಯೋಗ ಶಿಕ್ಷಕಿ ಆಗಿದ್ದ ಅನುಷ್ಕಾ ಯಾವ ತಯಾರಿಯೂ ಇಲ್ಲದೆ ಸಿನಿಮಾಕ್ಕೆ ಬಂದಿದ್ದರು.

  ನಾಗಾರ್ಜುನ್ ಮೆಚ್ಚಿಕೊಂಡಿದ್ದ ಅನುಷ್ಕಾ

  ನಾಗಾರ್ಜುನ್ ಮೆಚ್ಚಿಕೊಂಡಿದ್ದ ಅನುಷ್ಕಾ

  ಉದ್ದಕ್ಕೆ ಬಹು ಲಕ್ಷಣವಾಗಿ ಇದ್ದ ಅನುಷ್ಕಾ ಗೆ ಸ್ಕ್ರೀನ್ ಟೆಸ್ಟ್ ಮಾಡಬೇಕು ಎಂದು ಪುರಿ ಜಗನ್ನಾಥ್ ನಿರ್ಧರಿಸಿ ಅವರೊಂದಿಗೆ ಹೈದರಾಬಾದ್‌ ಗೆ ಕರೆತಂದು ನಾಗರ್ಜುನ್ ಅವರಿಗೆ ತೋರಿಸಿದರಂತೆ. ಅವರನ್ನು ನೋಡಿದ ಕೂಡಲೇ ಮರುಮಾತಾಡದೆ ಇವರೇ ಸಿನಿಮಾದ ನಾಯಕಿಯಾಗಲಿ ಎಂದರಂತೆ ನಾಗಾರ್ಜುನ.

  ಫೊಟೊಶೂಟ್ ಮಾಡಿಸಿದ ಪುರಿ ಜಗನ್ನಾಥ್‌

  ಫೊಟೊಶೂಟ್ ಮಾಡಿಸಿದ ಪುರಿ ಜಗನ್ನಾಥ್‌

  ಆದರೆ ಇದಕ್ಕೆ ಒಪ್ಪದ ಪುರಿ ಜಗನ್ನಾಥ್, ಇಲ್ಲ ಒಂದು ಫೊಟೊಶೂಟ್ ಆದರೂ ಮಾಡಿಸೋಣ ಎಂದು ಹೇಳಿ ಮೇಕಪ್ ಮಾಡಿಸಿ ಫೊಟೊಶೂಟ್ ಮಾಡಿಸಿ ನಂತರ ಆಯ್ಕೆ ಮಾಡಿದರಂತೆ. ಮೊದಲ ಚಿತ್ರ ಸೂಪರ್ ನಲ್ಲಿ ಅನುಷ್ಕಾ ಶೆಟ್ಟಿ ಎಲ್ಲರ ಗಮನ ಸೆಳೆದರು. ಆ ನಂತರ ನಡೆದಿದ್ದು ಇತಿಹಾಸ, ಸತತ 15 ವರ್ಷ ಅವರು ತೆಲುಗು ಸಿನಿರಂಗದ ಸ್ಟಾರ್ ಆಗಿ ಮೆರೆದರು.

  English summary
  Director Puri Jagannadh talked about actress Anushka Shetty. He said Anushka Shetty did not had pictures of her.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X