For Quick Alerts
  ALLOW NOTIFICATIONS  
  For Daily Alerts

  ಅನುಷ್ಕಾ ಮೊದಲ ಆಡಿಷನ್ ಕಥೆ ಬಿಚ್ಚಿಟ್ಟ ಪೂರಿ ಜಗನ್ನಾಥ್: ಏನೂ ಗೊತ್ತಿಲ್ಲದ ಸ್ವೀಟಿಗೆ ಚಾನ್ಸ್ ಕೊಟ್ಟಿದ್ದೇಕೆ?

  |

  ಅನುಷ್ಕಾ ಶೆಟ್ಟಿ ಮೂಲತಃ ಕರ್ನಾಟಕದ ಮಂಗಳೂರಿನವರು. ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಬಿಸಿಎ (Bachelor of Computer Applications) ಪದವಿ ಪಡೆದುಕೊಂಡಿದ್ದಾರೆ. ಯೋಗ ಟೀಚರ್ ಆಗಿ ಕೆಲಸ ಮಾಡ್ತಿದ್ದ ಅನುಷ್ಕಾಗೆ ಸಿಕ್ಕ ಅದೃಷ್ಟದ ಅವಕಾಶದಿಂದ ಇಂದು ಸೌತ್ ಇಂಡಸ್ಟ್ರಿ ಪಾಲಿಗೆ ಸ್ವೀಟಿಯಾಗಿದ್ದಾರೆ.

  ಸಿನಿಮಾ ಮೇಲೆ ಆಸಕ್ತಿ ಇರಲಿಲ್ಲ, ಯಾವುದೇ ತರಬೇತಿ ಪಡೆದುಕೊಂಡಿರಲಿಲ್ಲ. ಆಡಿಷನ್‌ಗೂ ಉದ್ದೇಶಪೂರ್ವದಿಂದ ಹೋಗಿಲ್ಲ. ಅಚಾನಕ್ ಆಗಿ ಸಿಕ್ಕ ಅದೃಷ್ಟವನ್ನು ಅನುಷ್ಕಾ ಹೇಗೆ ಬಾಚಿಕೊಂಡರು ಎನ್ನುವುದನ್ನು ನಿರ್ದೇಶಕ ಪೂರಿ ಜಗನ್ನಾಥ್ ವೇದಿಕೆಯೊಂದರಲ್ಲಿ ಹೇಳಿಕೊಂಡಿದ್ದರು. ಅನುಷ್ಕಾ ಶೆಟ್ಟಿಗೆ ಮೊದಲ ಅವಕಾಶ ಕೊಟ್ಟಿದ್ದು ಪೂರಿ ಜಗನ್ನಾಥ್. 2005ರಲ್ಲಿ ತೆರೆಗೆ ಬಂದ ಸೂಪರ್ ಚಿತ್ರದಲ್ಲಿ ಮೊಟ್ಟ ಮೊದಲ ಅನುಷ್ಕಾ ನಾಯಕಿಯಾಗಿ ನಟಿಸಿದರು. ಅಷ್ಟಕ್ಕೂ, ಅನುಷ್ಕಾಗೆ ಈ ಅವಕಾಶ ಸಿಕ್ಕಿದ್ದು ಹೇಗೆ? ಮುಂದೆ ಓದಿ...

  'ಸೂಪರ್' ಚಿತ್ರಕ್ಕೆ ನಾಯಕಿಗಾಗಿ ಹುಡುಕಾಟ

  'ಸೂಪರ್' ಚಿತ್ರಕ್ಕೆ ನಾಯಕಿಗಾಗಿ ಹುಡುಕಾಟ

  ಪೂರಿ ಜಗನ್ನಾಥ್ ನಿರ್ದೇಶನದಲ್ಲಿ ತಯಾರಾಗುತ್ತಿದ್ದ ಸೂಪರ್ ಚಿತ್ರದಲ್ಲಿ ನಾಗಾರ್ಜುನ ನಾಯಕರಾಗಿದ್ದರು. ನಾಗಾರ್ಜುನಗೆ ನಾಯಕಿ ಯಾರಿರಬೇಕು ಎಂದು ಪೂರಿ ಹುಡುಕುತ್ತಿದ್ದರು. ನಾಯಕಿಯ ಹುಡುಕುವುದಕ್ಕಾಗಿಯೇ ಬಾಂಬೆಗೆ ಹೋಗಿದ್ದ ಪೂರಿಗೆ ಪರಿಚಯಸ್ಥರ ಮೂಲಕ ಅನುಷ್ಕಾ ಭೇಟಿ ಆಯಿತು. ಹೋಟೆಲ್‌ವೊಂದರಲ್ಲಿ ಅನುಷ್ಕಾ ಅವರನ್ನು ಮೊದಲ ಸಲ ಪೂರಿ ಭೇಟಿ ಮಾಡಿದರು.

  ಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅನುಷ್ಕಾ, 'ಇದು ಪ್ರಭಾಸ್ ಕುರ್ತಾ' ಎಂದ ನೆಟ್ಟಿಗರುಏರ್‌ಪೋರ್ಟ್‌ನಲ್ಲಿ ಕಾಣಿಸಿಕೊಂಡ ಅನುಷ್ಕಾ, 'ಇದು ಪ್ರಭಾಸ್ ಕುರ್ತಾ' ಎಂದ ನೆಟ್ಟಿಗರು

  ನಿನ್ನ ಹೆಸರೇನು.....?

  ನಿನ್ನ ಹೆಸರೇನು.....?

  ಅನುಷ್ಕಾ ಶೆಟ್ಟಿಯನ್ನು ನೋಡಿದ ಮೊದಲ ನೋಟದಲ್ಲೇ ಪೂರಿ ಜಗನ್ನಾಥ್ ಫಿದಾ ಆದರಂತೆ. ಒಳ್ಳೆಯ ಹೈಟು, ನೋಡಲು ಸುಂದರ, ತುಂಬಾ ಚೆನ್ನಾಗಿದ್ದಾಳೆ ಹುಡುಗಿ ಎಂದು ಮನಸ್ಸಿನಲ್ಲಿ ಅಂದುಕೊಂಡರಂತೆ. ಆಗ ಅನುಷ್ಕಾ ಹೆಸರು ಸ್ವೀಟಿ ಶೆಟ್ಟಿ. ಮನೆಯಲ್ಲಿ ಸ್ವೀಟಿ ಶೆಟ್ಟಿ ಎಂದೇ ಹೆಸರಿಟ್ಟಿದ್ದರು. ಯೋಗ ಟೀಚರ್ ಆಗಿ ಕೆಲಸ ಮಾಡ್ತಿದ್ದರು. ಆಕ್ಟಿಂಗ್ ಬರುತ್ತಾ ಎಂದು ಕೇಳಿದ್ದಕ್ಕೆ ''ಗೊತ್ತಿಲ್ಲ'' ಅಂದ್ರಂತೆ. ''ಯಾವತ್ತು ಟ್ರೈ ಮಾಡಿಲ್ಲ, ಬರುತ್ತೋ ಇಲ್ವೋ ಗೊತ್ತಿಲ್ಲ'' ಅಂದಿದ್ದರಂತೆ. ಡ್ಯಾನ್ಸ್ ಬರುತ್ತಾ ಎಂದಿದ್ದಕ್ಕೆ ''ಅದು ಗೊತ್ತಿಲ್ಲ'' ಅಂದರಂತೆ. ಫೋಟೋ ಇದ್ದರೆ ಕೊಡು ಎಂದಿದ್ದಕ್ಕೆ ಸ್ಟ್ಯಾಂಪ್ ಸೈಜ್ ಫೋಟೋ ಕೊಟ್ಟರಂತೆ. ಫೊಟೋಶೂಟ್ ಯಾವುದು ಮಾಡಿಸಿಲ್ಲ ಅಂತ ಕೇಳಿದ್ದಕ್ಕೆ, ''ಅಯ್ಯೋ ನಾನು ಅದೆಲ್ಲ ಮಾಡಿಸಿಲ್ಲ'' ಎಂದು ಹೇಳಿದರಂತೆ.

  ಹೈದರಾಬಾದ್‌ಗೆ ಕರೆದುಕೊಂಡ ಬಂದ ಪೂರಿ

  ಹೈದರಾಬಾದ್‌ಗೆ ಕರೆದುಕೊಂಡ ಬಂದ ಪೂರಿ

  ಹುಡುಗಿ ನೋಡಲು ತುಂಬಾ ಚೆನ್ನಾಗಿದ್ದಳು. ಆದರೆ, ಏನೂ ಗೊತ್ತಿಲ್ಲ ಅಂತಿದ್ದಾಳೆ ಎಂದು ಆಲೋಚಿಸಿದ ಪೂರಿ, ''ಸರಿ ನನ್ನ ಜೊತೆ ಆರು ತಿಂಗಳು ಹೈದರಾಬಾದ್‌ಗೆ ಬಂದುಬಿಡು, ಏನೋ ಒಂದು ಟ್ರೈ ಮಾಡೋಣ, ಆಗಿಲ್ಲ ಅಂದ್ರೆ ನಿನ್ನ ಯೋಗ ಕೆಲಸ ಇದ್ದೇ ಇರುತ್ತೆ'' ಎಂದು ಅನುಷ್ಕಾ ಶೆಟ್ಟಿಯನ್ನು ಹೈದರಾಬಾದ್‌ ಪ್ಲೈಟ್ ಹತ್ತಿಸಿದರಂತೆ.

  'ಡಾರ್ಲಿಂಗ್' ಪ್ರಭಾಸ್ ಗೆ ವಿಶ್ ಮಾಡಿ ನಿಕ್ ನೇಮ್ ರಿವೀಲ್ ಮಾಡಿದ ಅನುಷ್ಕಾ ಶೆಟ್ಟಿ'ಡಾರ್ಲಿಂಗ್' ಪ್ರಭಾಸ್ ಗೆ ವಿಶ್ ಮಾಡಿ ನಿಕ್ ನೇಮ್ ರಿವೀಲ್ ಮಾಡಿದ ಅನುಷ್ಕಾ ಶೆಟ್ಟಿ

  ಮೊದಲ ನೋಟದಲ್ಲೇ ನಾಗಾರ್ಜುನ ಫಿಕ್ಸ್

  ಮೊದಲ ನೋಟದಲ್ಲೇ ನಾಗಾರ್ಜುನ ಫಿಕ್ಸ್

  ಅನುಷ್ಕಾ ಶೆಟ್ಟಿಯನ್ನು ಪೂರಿ ಜಗನ್ನಾಥ್ ಅನ್ನಪೂರ್ಣ ಸ್ಟುಡಿಯೋಗೆ ಕರೆದುಕೊಂಡು ಹೋದಾಗ ನಾಗಾರ್ಜುನ ಮೊದಲ ನೋಟದಲ್ಲೇ ಇಷ್ಟಪಟ್ಟರು. ''ನಾನು ಆಡಿಷನ್‌ಗೆ ಕರೆದುಕೊಂಡು ಬಂದಿದ್ದೀನಿ ಅಂದರೂ, ಪರವಾಗಿಲ್ಲ ಹೀರೋಯಿನ್ ಇರಲಿ'' ಎಂದುಬಿಟ್ಟರಂತೆ. ಆಮೇಲೆ ವಿನೋದ್ ಬಾಲ ಅವರ ಬಳಿ ಆಕ್ಟಿಂಗ್ ತರಬೇತಿ ಕೊಡಿಸಲಾಯಿತು. ಡ್ಯಾನ್ಸ್, ಜಿಮ್ ಎಲ್ಲವೂ ಅಭ್ಯಾಸ ಆದ್ಮೇಲೆ ಸೂಪರ್ ಸಿನಿಮಾ ಶೂಟಿಂಗ್‌ನಲ್ಲಿ ಪಾಲ್ಗೊಂಡರು ಎಂದು ಪೂರಿ ಜಗನ್ನಾಥ್ ಬಹಿರಂಗಪಡಿಸಿದ್ದಾರೆ.

  ಸ್ವೀಟಿ ಹೆಸರು ಬದಲಿಸಬೇಕು

  ಸ್ವೀಟಿ ಹೆಸರು ಬದಲಿಸಬೇಕು

  ನಾಗಾರ್ಜುನ ಅವರು ಹೆಸರು ಕೇಳಿದಾಗ ಸ್ವೀಟಿ ಅಂದರು. ನಿಜವಾದ ಹೆಸರು ಹೇಳು ಅಂದಿದ್ದಕ್ಕೆ ಪಾಸ್‌ಪೋರ್ಟ್ ತೋರಿಸಿದರು. ಅದರಲ್ಲೂ ಸ್ವೀಟಿ ಶೆಟ್ಟಿ ಎಂದೇ ಇತ್ತು. ಸರಿ, ಸಿನಿಮಾಗೆ ಬೇರೆ ಹೆಸರು ಬೇಕು ಅಂತ ಯೋಚನೆ ಮಾಡಿ ಆಯ್ಕೆ ಮಾಡಿದ ಹೆಸರು ಅನುಷ್ಕಾ. ಅಲ್ಲಿಂದ ಅನುಷ್ಕಾ ಶೆಟ್ಟಿ ಎಂದೇ ಖ್ಯಾತಿ ಗಳಿಸಿಕೊಂಡರು ಎಂದು ಪೂರಿ ತಿಳಿಸಿದರು.

  ಶಿರಡಿ ಸಾಯಿಬಾಬಾ ಮತ್ತು ಕೊಲ್ಲಾಪುರ ಮಹಾಲಕ್ಷ್ಮೀ ದರ್ಶನ ಪಡೆದ ಪುನೀತ್ | Filmibeat Kannada
  English summary
  Telugu Director Puri jagannath reveals about Anushka shetty's first Audition. she debut with 'super' film in 2005.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X