'ಪುಷ್ಪರಾಜ್‌'ಗೆ ಕ್ಯಾರೇ ಎನ್ನದ ಕೇರಳಿಗರು, ದೇವರನಾಡಲ್ಲಿ ಪುಷ್ಪ 2 ಗಳಿಸಿದ್ದೆಷ್ಟು ಗೊತ್ತಾ ?

ಬೆಳ್ಳಿತೆರೆಯಲ್ಲಿ ಪುಷ್ಪ ಧಗಧಗಿಸುತ್ತಿದೆ. ಅಲ್ಲು ಅರ್ಜುನ್ ಅಬ್ಬರಕ್ಕೆ ದಾಖಲೆಗಳೆಲ್ಲ ಮುರಿಯುತ್ತಿವೆ. ಬಾಕ್ಸಾಫೀಸ್‌ನಲ್ಲಿ ಹಣದ ಮಳೆ ಕೂಡ ಬೀಳುತ್ತಿದೆ. ಲೆಕ್ಕಾಚಾರದ ಪ್ರಕಾರ ಪುಷ್ಪ 2 ಬಿಡುಗಡೆಯಾದ ಹನ್ನೊಂದು ದಿನದಲ್ಲಿಯೇ ₹1322 ಕೋಟಿಯನ್ನು ಗಳಿಸಿದೆ.

ಇನ್ನು ಪುಷ್ಪ 2 ಚಿತ್ರಕ್ಕೆ ದಕ್ಷಿಣ ಭಾರತಕ್ಕಿಂತ ಉತ್ತರ ಭಾರತದಲ್ಲಿ ಎಲ್ಲಿಲ್ಲದ ಬೇಡಿಕೆ ಇದೆ. ಚಿತ್ರ ಬಿಡುಗಡೆಯಾಗಿ ಹನ್ನೊಂದು ದಿನ ಕಳೆದರೂ ಮುಂಬೈ-ಉತ್ತರ ಪ್ರದೇಶ-ದೆಹಲಿಯಲ್ಲಿ ಪುಷ್ಪ ಹವಾ ಕಡಿಮೆಯಾಗಿಲ್ಲ. ಇದಕ್ಕೆ ಕೈಗನ್ನಡಿ ಎಂಬಂತೆ ಕೇವಲ ಹಿಂದಿ ಮಾರುಕಟ್ಟೆಯಲ್ಲಿ ಪುಷ್ಪ-02 ₹561.50 ಕೋಟಿಯನ್ನು ಕೊಳ್ಳೆ ಹೊಡೆದಿದೆ. ಆದರೆ ಹೀಗೆ ಬಾಕ್ಸಾಫೀಸ್‌ನಲ್ಲಿ ರಣಬೇಟೆಯನ್ನಾಡುತ್ತಾ ಮುನ್ನುಗ್ಗುತ್ತಿರುವ ಪುಷ್ಪರಾಜ್‌ನನ್ನು ಕೇರಳಿಗರು ಮಾತ್ರ ಕ್ಯಾರೇ ಎನ್ನುತ್ತಿಲ್ಲ ಎನ್ನುವುದೇ ಅಚ್ಚರಿ ಮತ್ತು ವಿಶೇಷ.

Pushpa 2 Allu Arjun s Global Blockbuster But Fails to Make an Impact in This State

ಹೌದು, ಎಲ್ಲೆಡೆ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಪುಷ್ಪರಾಜ್ ಕೇರಳದ ಹೃದಯ ಗೆಲ್ಲುವಲ್ಲಿ ಸಂಪೂರ್ಣ ವಿಫಲವಾಗಿದ್ದಾನೆ. ನಿಜಾ.. ಮೊದಲ ದಿನ ದೇಶದೆಲ್ಲೆಡೆ ಹಬ್ಬಿದಂತೆ ಪುಷ್ಪ ಜ್ವರ ಕೇರಳಕ್ಕೂ ಹಬ್ಬಿತ್ತು. Sacnilk ವೆಬ್ ಸೈಟ್ ಪ್ರಕಾರ ಮೊದಲ ದಿನ ₹4.95 ಕೋಟಿಯನ್ನು ಕೂಡ ಪುಷ್ಪ 2 ಚಿತ್ರ ಗಳಿಸಿತ್ತು, ಆದರೆ.. ಎರಡನೇ ದಿನವೇ ಕೇರಳದಲ್ಲಿ ಪುಷ್ಪ ಠುಸ್ ಪಟಾಕಿ ಆಗಿ ಹೋಯಿತು. ಎರಡನೇ ದಿನ ₹1.85 ಮೂರನೇ ದಿನ ₹1.90 ಕೋಟಿಯನ್ನು ಗಳಿಸಿತು. ಮೊದಲನೇ ವಾರ ಕೇರಳದಲ್ಲಿ 10 ಕೋಟಿಯ ಗಡಿಯನ್ನು ಕೂಡ ದಾಟುವಲ್ಲಿ ವಿಫಲವಾಯ್ತು.

ಇನ್ನು ನಿನ್ನೆ ಕೂಡ ದೇಶದ ನಾನಾ ಭಾಗದಲ್ಲಿ ಕೋಟ್ಯಂತರ ಹಣ ಗಳಿಸಿರುವ ಪುಷ್ಪ -02 ಕೇರಳದಲ್ಲಿ ಗಳಿಸಿದ್ದು ಕೇವಲ ₹15 ಲಕ್ಷ ಮಾತ್ರ. ಹೀಗಾಗಿ ಭಾರತದೆಲ್ಲೆಡೆ ಬ್ಲಾಕ್ ಬಸ್ಟರ್ ಚಿತ್ರವೆಂದು ಕರೆಸಿಕೊಳ್ಳುತ್ತಿರುವ ಪುಷ್ಪ 2 ಚಿತ್ರವನ್ನು ಕೇರಳದ ಚಿತ್ರ ಪಂಡಿತರು ಈಗ ಫ್ಲಾಪ್ ಚಿತ್ರ ಎಂದು ಕರೆಯುತ್ತಿದ್ದಾರೆ.

ಯಾಕೆಂದರೆ ಇವರ ಲೆಕ್ಕಾಚಾರದ ಪ್ರಕಾರ ಕೇರಳದಲ್ಲಿ ಕೂಡ ಪುಷ್ಪ ಗೆಲುವಿನ ಧ್ವಜ ಹಾರಿಸಬೇಕು ಅಂದರೆ ಕನಿಷ್ಠ ಎಂದರೂ ಕೇರಳದಲ್ಲಿ ₹60 ಕೋಟಿಯನ್ನು ಗಳಿಸಬೇಕು. ಆದರೆ ಪುಷ್ಪ 2 ಇಲ್ಲಿಯವರೆಗೆ ₹15 ಕೋಟಿಯ ಗಡಿಯನ್ನು ಕೂಡ ದಾಟಿಲ್ಲ. ಹೀಗಾಗಿಯೇ ಪುಷ್ಪ 2 ಕೇರಳದಲ್ಲಿ ₹60 ಕೋಟಿ ಕೊಳ್ಳೆ ಹೊಡೆಯುವುದು ಅಸಾಧ್ಯ ಎನ್ನುವ ಮಾತು ಸದ್ಯ ಕೇಳಿ ಬರುತ್ತಿದೆ. ಪುಷ್ಪ-02ಗೆ ಕೇರಳಿಗರು ಕ್ಯಾರೇ ಎನ್ನದಿರಲು ಕಾರಣವೇನು ಎಂಬ ವಿಚಾರದ ಕುರಿತು ಚರ್ಚೆ ಕೂಡ ಸೋಶಿಯಲ್ ಮೀಡಿಯಾದಲ್ಲಿ ನಡೆಯುತ್ತಿದೆ.

ಇನ್ನೂ ಪುಷ್ಪ 2 ಚಿತ್ರದಲ್ಲಿ ಫಹಾದ್ ಫಾಸಿಲ್ ಇದ್ದಾರೆ. ಅಲ್ಲು ಅರ್ಜುನ್ ಎದುರು ಅಬ್ಬರಿಸಿದ್ದಾರೆ. ಫಹಾದ್ ಬೇರೆ ಯಾರು ಅಲ್ಲ ಬದಲಿಗೆ ಮಲಯಾಳಂನವರೇ. ಆದರೂ ಕೂಡ ಈ ಚಿತ್ರವನ್ನು ನೋಡುವ ಮನಸನ್ನು ಕೇರಳದ ಜನ ಮಾಡುತ್ತಿಲ್ಲ. ಪುಷ್ಪ 2 ತಂಡಕ್ಕೂ ಸೇರಿ ಬಾಕ್ಸಾಫೀಸ್‌ ಪಂಡಿತರ ಬಳಿ ಕೂಡ ಕೇರಳದಲ್ಲಿ ಪುಷ್ಪ 2 ಸೋತಿದ್ದೇಕೆ ಎನ್ನುವ ಪ್ರಶ್ನೆಗೆ ಉತ್ತರ ಇಲ್ಲ.

ಇನ್ನುಳಿದಂತೆ ಕೇರಳ ಹೊರತು ಪಡಿಸಿದರೆ ಭಾರತದೆಲ್ಲೆಡೆ ಪುಷ್ಪ 2 ಗಳಿಕೆ ದಿನದಿಂದ ದಿನಕ್ಕೆ ಏರುತ್ತಿದೆ. ಅಲ್ಲು ಅರ್ಜುನ್ ಬಂಧನ ಮತ್ತು ಬಿಡುಗಡೆಯ ಡ್ರಾಮಾ ನಂತರ ಚಿತ್ರದ ಕ್ರೇಜ್ ಇನ್ನೂ ಹೆಚ್ಚಾಗಿದೆ. ಇನ್ನು ಪುಷ್ಪ 2 ಬಿಡುಗಡೆಯಾದ ಕೆಲವೇ ನಿಮಿಷಗಳಲ್ಲಿ ಇಡೀ ಚಿತ್ರ ಆನ್‌ ಲೈನ್‌ನಲ್ಲಿ ಸೋರಿಕೆಯಾಗಿತ್ತು. ಚಿತ್ರದ ಪೈರಸಿಯಾಗಿತ್ತು. ಆದರೂ ಕೂಡ ಪುಷ್ಪ 2 ಗಳಿಕೆ ಕಡಿಮೆಯಾಗಿಲ್ಲ. ಕೇರಳ ಹೊರತು ಪಡಿಸಿದರೆ ಪುಷ್ಪ 2 ಎಲ್ಲಿಯೂ ತಗ್ಗಿಲ್ಲ.

More from Filmibeat

Read more about: allu arjun pushpa box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X