Pushpa 2 box office collection day 1; ಬಾಕ್ಸಾಫೀಸ್‌ನಲ್ಲಿ 'ಪುಷ್ಪ'ರಾಜ್ ಸುನಾಮಿ, ಮೊದಲ ದಿನ ಗಳಿಸಿದ್ದೆಷ್ಟು?

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಧೂಳೆಬ್ಬಿಸಿದೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಸಿನಿಮಾ ಭರ್ಜರಿ ಗಳಿಕೆ ಕಂಡಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಓಪನಿಂಗ್ ಪಡೆದುಕೊಂಡು ಮುನ್ನುಗ್ಗುತ್ತಿದೆ. ರಾಜಮೌಳಿ ನಿರ್ದೇಶನದ 'RRR' ಚಿತ್ರದ ಮೊದಲ ದಿನದ ಬಾಕ್ಸಾಫೀಸ್ ಗಳಿಕೆ ಹಿಂದಿಕ್ಕಿ ಸದ್ದು ಮಾಡ್ತಿದೆ.

ಬುಧವಾರ ರಾತ್ರಿಯಿಂದಲೇ 'ಪುಷ್ಪ'-2 ಪ್ರೀಮಿಯರ್ ಶೋಗಳು ಶುರುವಾಗಿತ್ತು. ಅಡ್ವಾನ್ಸ್ ಬುಕ್ಕಿಂಗ್ ಕೂಡ ಜೋರಾಗಿತ್ತು. ಟಿಕೆಟ್ ದರ ಹೆಚ್ಚಿಸಿ ಬಾಕ್ಸಾಫೀಸ್ ಕೊಳ್ಳೆ ಹೊಡೆದಿದ್ದರು. ಇನ್ನು ಗುರುವಾರವೂ ಎಲ್ಲೆಡೆ ಚಿತ್ರಕ್ಕೆ ಅದ್ಭುತ ಪ್ರತಿಕ್ರಿಯೆ ಸಿಕ್ಕಿತ್ತು. ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಿದ್ದಕ್ಕೆ ಕರ್ನಾಟಕದಲ್ಲಿ ಕೊಂಚ ಹಿನ್ನಡೆಯಾಗಿತ್ತು.

Pushpa 2 box office collection day 1 Allu Arjun s action thriller mints over Rs 175 crores

ವಿಶ್ವದಾದ್ಯಂತ 6 ಭಾಷೆಗಳಲ್ಲಿ 'ಪುಷ್ಪ'-2 ಸಿನಿಮಾ ತೆರೆಗೆ ಬಂದಿತ್ತು. Sacnilk.com ವರದಿ ಪ್ರಕಾರ ಚಿತ್ರ ಮೊದಲ ದಿನ ಭಾರತದಲ್ಲಿ 175 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿದೆ. 3 ವರ್ಷಗಳ ಹಿಂದೆ ತೆರೆಕಂಡಿದ್ದ 'ಪುಷ್ಪ' ಸಿನಿಮಾ 300 ಕೋಟಿ. ರೂಗೂ ಅಧಿಕ ಕಲೆಕ್ಷನ್ ಮಾಡಿತ್ತು. ಹಾಗಾಗಿ ಸೀಕ್ವೆಲ್ ಮೇಲೆ ಭಾರೀ ನಿರೀಕ್ಷೆ ಇತ್ತು. ಅದಕ್ಕೆ ತಕ್ಕಂತೆ ಸುಕುಮಾರ್ ಸಿನಿಮಾ ತೆರೆಗೆ ತಂದಿದ್ದಾರೆ.

ಪ್ರೇಕ್ಷಕರ ನಿರೀಕ್ಷೆ ತಲುಪುವಲ್ಲಿ 'ಪುಷ್ಪ'-2 ಸಿನಿಮಾ ವಿಫಲವಾಗಿದೆ. ಸರಿಯಾದ ಕಥೆ ಇಲ್ಲದೇ ಬರೀ ಎಲಿವೇಷನ್ ಸನ್ನಿವೇಶಗಳನ್ನು ಜೋಡಿಸಿ ಸಿನಿಮಾ ಕಟ್ಟಿಕೊಟ್ಟಿದ್ದಾರೆ. ಸಾಂಗ್ಸ್ ಕೂಡ ದೊಡ್ಡದಾಗಿ ಸದ್ದು ಮಾಡಲಿಲ್ಲ. ಹಾಗಾಗಿ ಸಹಜವಾಗಿಯೇ ಸಿನಿಮಾ ನಿರಾಸೆ ಮೂಡಿಸಿದೆ. ಮುಂದಿನ ದಿನಗಳಲ್ಲಿ ಚಿತ್ರದ ಭವಿಷ್ಯ ಏನಾಗುತ್ತದೆ ಎಂದು ಕಾದು ನೋಡಬೇಕಿದೆ.

ಒಟ್ಟಾರೆ 'ಪುಷ್ಪ'-2 ಚಿತ್ರಕ್ಕೆ ಅದ್ಭುತ ಓಪನಿಂಗ್ ಸಿಕ್ಕಿದೆ. ಬುಧವಾರದ ರಾತ್ರಿ ಪ್ರೀಮಿಯರ್ ಶೋಗಳಿಂದ ಬರೋಬ್ಬರಿ 10 ಕೋಟಿ ರೂ. ಕಲೆಕ್ಷನ್ ಆಗಿತ್ತು. ಗುರುವಾರ 165 ಕೋಟಿ ರೂ. ಅದಕ್ಕೆ ಸೇರಿಕೊಂಡಿದೆ. ಒಟ್ಟಾರೆ ಅಂದಾಜು 175 ರೂ. ಕಲೆಕ್ಷನ್ ಮಾಡಿದಂತಾಗಿದೆ. ತೆಲುಗು ವರ್ಷನ್ 85 ಕೋಟಿ, ಹಿಂದಿ ವರ್ಷನ್ 67 ಕೋಟಿ ರೂ. ಕೊಳ್ಳೆ ಹೊಡೆದು ದಾಖಲೆ ಬರೆದಿದೆ.

ತಮಿಳು 7 ಕೋಟಿ ರೂ. ಕನ್ನಡ 1 ಕೋಟಿ ರೂ. ಹಾಗೂ ಮಲಯಾಳಂ 5 ಕೋಟಿ ರೂ. ಸೇರಿ ಒಟ್ಟು ಗಳಿಕೆ 160 ಕೋಟಿ ರೂ. ಗಡಿ ದಾಟಿದೆ. ವಿದೇಶಗಳಲ್ಲಿ ಕೂಡ ದೊಡ್ಡಮಟ್ಟದಲ್ಲಿ 'ಪುಷ್ಪ'-2 ತೆರೆಗಪ್ಪಳಿಸಿದೆ. ವಿಶ್ವದಾದ್ಯಂತ 11 ಸಾವಿರಕ್ಕೂ ಹೆಚ್ಚು ಸ್ಕ್ರೀನ್‌ಗಳಲ್ಲಿ 'ಪುಷ್ಪ'ರಾಜ್ ದರ್ಬಾರ್ ನಡೀತಿದೆ. ಸಿನಿಮಾ ಬಾಕ್ಸಾಫೀಸ್ ಕಲೆಕ್ಷನ್ ಬಗ್ಗೆ ಶೀಘ್ರದಲ್ಲೇ ಚಿತ್ರತಂಡ ಮಾಹಿತಿ ನೀಡುವ ಸಾಧ್ಯತೆಯಿದೆ.

'ಪುಷ್ಪ'-2 ಚಿತ್ರ ಕನ್ನಡಕ್ಕೂ ಡಬ್ ಆಗಿ ರಿಲೀಸ್ ಆಗಿದೆ. ಡಬ್ಬಿಂಗ್ ಗುಣಮಟ್ಟ ಬಹಳ ಚೆನ್ನಾಗಿದೆ. ವರದರಾಜ್ ಮತ್ತವರ ತಂಡದ ಶ್ರಮವನ್ನು ಮೆಚ್ಚಲೇಬೇಕು. ಬೆಂಗಳೂರಿನಲ್ಲಿ ಮೊದಲ ದಿನ 1000ಕ್ಕೂ ಅಧಿಕ ಶೋಗಳಲ್ಲಿ ಸಿನಿಮಾ ಪ್ರೇಕ್ಷಕರನ್ನು ರಂಜಿಸಿದೆ. ಬೆಳಗ್ಗೆ 4 ಗಂಟೆಯ ಶೋಗಳು ರದ್ದಾಗಿತ್ತು. ಹಾಗಾಗಿ ಬೆಳಗ್ಗೆ 7 ಗಂಟೆಯಿಂದ ಪ್ರದರ್ಶನ ಆರಂಭವಾಯಿತು. ಅದನ್ನೂ ಮುನ್ನ ಹಿಂದಿನ ದಿನ ರಾತ್ರಿ 9.30ಕ್ಕೆ ಪ್ರೀಮಿಯರ್ ಶೋಗಳು ನಡೆದಿತ್ತು.

ಬೆಂಗಳೂರಿನಲ್ಲಿ ಕೂಡ ಟಿಕೆಟ್ ದರ 10 ಪಟ್ಟು ಹೆಚ್ಚಾಗಿತ್ತು. ಸಿಂಗಲ್ ಸ್ಕ್ರೀನ್ ಥಿಯೇಟರ್‌ಗಳಲ್ಲಿ ಟಿಕೆಟ್ ದರ 1000 ರೂ. 1500 ರೂ.ವರೆಗೆ ಏರಿಕೆ ಆಗಿತ್ತು. ಇದು ಕೂಡ ಅಡ್ವಾನ್ಸ್ ಬುಕ್ಕಿಂಗ್‌ಗೆ ಹಿನ್ನೆಡೆ ಉಂಟು ಮಾಡಿತ್ತು. ಆದರೂ ಕೆಲವರು 'ಪುಷ್ಪ-2' ಸಿನಿಮಾ ನೋಡಲು ಮುಗಿಬಿದ್ದರು. ಹಾಗಾಗಿ ಸಹಜವಾಗಿಯೇ ಸಿನಿಮಾ ಗಳಿಕೆ ಹೆಚ್ಚಾಯಿತು. ಆದರೆ 2ನೇ ದಿನ ಬುಕ್ಕಿಂಗ್‌ಗೆ ಅಷ್ಟಾಗಿ ರೆಸ್ಪಾನ್ಸ್ ಸಿಕ್ತಿಲ್ಲ.

More from Filmibeat

English summary
Allu Arjun and Rashmika mandanna starrer Pushpa 2 box office collection day 1
Read more about: allu arjun pushpa box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X