KGF-2 vs Pushpa-2; ಮೊದಲ ದಿನ ಬಾಕ್ಸಾಫೀಸ್ ಗಳಿಕೆಯಲ್ಲಿ ಗೆದ್ದವರು ಯಾರು?

ಬಾಕ್ಸಾಫೀಸ್‌ನಲ್ಲೀಗ ಪುಷ್ಪರಾಜ್ ಹವಾ ಜೋರಾಗಿದೆ. ಸುಕ್ಕು- ಅಲ್ಲು ಅರ್ಜುನ್ ಜೋಡಿಯ ಮೋಡಿಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ. ಮಿಶ್ರ ಪ್ರತಿಕ್ರಿಯೆ ನಡುವೆಯೂ ಮೊದಲ ದಿನ 'ಪುಷ್ಪ'-2 ಭರ್ಜರಿ ಕಲೆಕ್ಷನ್ ಮಾಡಿದೆ. ಹಲವು ದಾಖಲೆಗಳನ್ನು ಮುರಿದು ಮುನ್ನುಗ್ಗುತ್ತಿದೆ. ಈ ಹಾದಿಯಲ್ಲಿ 'KGF'-2 ಚಿತ್ರವನ್ನು ಹಿಂದಿಕ್ಕಿದೆ.

ಯಶ್ ನಟನೆಯ 'KGF'-2 ಸಿನಿಮಾ ಎರಡೂ ವರ್ಷದ ಹಿಂದೆ ತೆರೆಗೆ ಬಂದಿತ್ತು. ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಕೂಡ ರಾಕಿಭಾಯ್ ಅಬ್ಬರಿಸಿ ಬೊಬ್ಬಿರಿದಿದ್ದ. ಕೋಟಿ ಕೋಟಿ ಕೊಳ್ಳೆ ಹೊಡೆದು ಕಾಲರ್ ಎಗರಿಸಿದ್ದ. ಇದೀಗ ಪುಷ್ಪರಾಜ್ ಆರ್ಭಟ ನಡೀತಿದೆ. ಮೊದಲ ದಿನವೇ ಸಿನಿಮಾ ಭಾರತದಲ್ಲಿ 175 ಕೋಟಿ ರೂ. ಕೊಳ್ಳೆ ಹೊಡೆದಿರುವ ಅಂದಾಜಿದೆ.

Pushpa 2 box office collection Day 1 Allu Arjun s film overtakes Yash s KGF -2

ಮೊದಲಿನಿಂದ 'ಕೆಜಿಎಫ್ -2' ವರ್ಸಸ್ 'ಪುಷ್ಪ-2' ಎನ್ನುವ ಚರ್ಚೆ ನಡೆಯುತ್ತಲೇ ಇದೆ. ಅದಕ್ಕೆ ನಾನಾ ಕಾರಣಗಳಿವೆ. ಇನ್ನು ಬುಧವಾರವೇ 'ಪುಷ್ಪ-2' ಸಿನಿಮಾ ಪೇಯ್ಡ್ ಪ್ರೀಮಿಯರ್‌ ಶೋಗಳು ಶುರುವಾಗಿ 10 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಅಂದಾಜಿತ್ತು. ಇನ್ನು ಗುರುವಾರ(ಡಿಸೆಂಬರ್ 5) ರಂದು 165 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿರುವುದಾಗಿ sacnilk.com ವರದಿ ಮಾಡಿದೆ.

ಕೆಜಿಎಫ್ ಸರಣಿಗೆಗೂ ಪುಷ್ಪ ಸರಣಿಗೂ ಸಾಕಷ್ಟು ಸಾಮ್ಯತೆ ಇದೆ. ಕೆಲ ಸನ್ನಿವೇಶಗಳನ್ನು ಕಾಪಿ ಮಾಡಿದ್ದಾರೆ ಎಂದು ಎಂದು ಅಭಿಮಾನಿಗಳು ಕಾಮೆಂಟ್ ಮಾಡುತ್ತಾ ಬರ್ತಿದ್ದಾರೆ. ಇನ್ನು ಸುಕುಮಾರ್ ಶಿಷ್ಯ ಬುಚ್ಚಿಬಾಬು "ಒಂದು 'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್' ಚಿತ್ರಗಳಿಗೆ ಸಮ" ಎಂದಿದ್ದು ಭಾರೀ ಚರ್ಚೆ ಹುಟ್ಟಾಕ್ಕಿತ್ತು. ಹಾಗಾಗಿ ಸಹಜವಾಗಿಯೇ ಸಹಜವಾಗಿಯೇ ಪೈಪೋಟಿ ಬಗ್ಗೆ ಮಾತು ಶುರುವಾಯಿತು.

ಸದ್ಯ ಬಿಡುಗಡೆ ಆಗಿರುವ 'ಪುಷ್ಪ-2' ಚಿತ್ರಕ್ಕಿಂತ 'ಕೆಜಿಎಫ್‌'-2 ಅದ್ಭುತ ಸಿನಿಮಾ. 'ಕೆಜಿಎಫ್‌'-2 ಚಿತ್ರವನ್ನ ಸ್ವತಃ ತೆಲುಗು ಪ್ರೇಕ್ಷಕರೇ ಹಾಡಿ ಕೊಂಡಾಡಿದ್ದರು. ಆದರೆ 'ಪುಷ್ಪ-2' ಬಗ್ಗೆ ಅಲ್ಲೇ ಬಹಳ ನೆಗೆಟಿವ್ ಕಾಮೆಂಟ್ಸ್ ಬರ್ತಿದೆ. ಅದನ್ನೆಲ್ಲಾ ಪಕ್ಕಕ್ಕಿಟ್ಟರೆ ಯಾವ ಸಿನಿಮಾ ಮೊದಲ ದಿನ ಅತಿ ಹೆಚ್ಚು ಕಲೆಕ್ಷನ್ ಮಾಡಿದೆ ಎನ್ನುವ ಚರ್ಚೆ ಈಗ ಮುನ್ನಲೆಗೆ ಬಂದಿದೆ.

'ಪುಷ್ಪ-2' ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿತ್ತು. ಇನ್ನು 'KGF'-2 ಚಿತ್ರ ಬಂದಿದ್ದ 2022ರಲ್ಲಿ. ಆಗಿನ ಲೆಕ್ಕಕ್ಕೂ ಈಗಿನ ಲೆಕ್ಕಕ್ಕೂ ವ್ಯತ್ಯಾಸ ಇದೆ. 'ಪುಷ್ಪ-2' ಚಿತ್ರ ಮೊದಲ ದಿನ ಅಂದಾಜು 165 ಕೋಟಿ ರೂ. ಗಳಿಕೆ ಕಂಡಿದೆ. 'KGF'-2 ಸಿನಿಮಾ 116 ಕೋಟಿ ರೂ. ನೆಟ್ ಕಲೆಕ್ಷನ್ ಮಾಡಿತ್ತು.

ಇನ್ನು sacnilk.com ವರದಿ ಪ್ರಕಾರ ಎರಡೂ ಚಿತ್ರಗಳ ಮೊದಲ ದಿನದ ಕಲೆಕ್ಷನ್ ತಾಳೆ ಹಾಕಿ ನೋಡೋಣ. ತೆರೆಕಂಡ ದಿನ 'KGF'-2 ಸಿನಿಮಾ ಕನ್ನಡ ವರ್ಷನ್ 22.85 ಕೋಟಿ ರೂ. ಹಿಂದಿ 53 ಕೋಟಿ ರೂ. ಮಲಯಾಳಂ 4.9 ಕೋಟಿ ರೂ. ತಮಿಳುನಾಡು 7.9 ಕೋಟಿ ರೂ. ತೆಲುಗು 26.4 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಸದ್ಯದ ಅಪ್‌ಡೇಟ್ ಪ್ರಕಾರ 'ಪುಷ್ಪ-2' 5 ಭಾಷೆಗಳ ಕಲೆಕ್ಷನ್ ಲೆಕ್ಕಾಚಾರ ಹೀಗಿದೆ. ಹಿಂದಿ ವರ್ಷನ್ 67 ಕೋಟಿ ರೂ. ತೆಲುಗು 85 ಕೋಟಿ ರೂ. ತಮಿಳು 7 ಕೋಟಿ ರೂ. ಕರ್ನಾಟಕ 1 ಕೋಟಿ ರೂ. ಹಾಗೂ ಮಲಯಾಳಂ 5 ಕೋಟಿ ರೂ. ಗಳಿಕೆ ಕಂಡಿದೆ. ಮುಖ್ಯವಾಗಿ 'ಪುಷ್ಪ-2' ಹಿಂದಿ ವರ್ಷನ್ ಕಲೆಕ್ಷನ್ ಹುಬ್ಬೇರಿಸುವಂತಿದೆ. 'ಜವಾನ್' ದಾಖಲೆಯನ್ನು ಹಿಂದಿಕ್ಕಿರುವ ಅಂದಾಜಿದೆ.

ವಿಶ್ವದಾದ್ಯಂತ ಮೊದಲ ದಿನ 'ಪುಷ್ಪ'-2 ಸಿನಿಮಾ 250 ಕೋಟಿ ರೂ ಗ್ರಾಸ್ ಕಲೆಕ್ಷನ್ ಮಾಡಿದೆ ಎಂದು ಹೇಳಲಾಗುತ್ತಿದೆ. ಆದರೆ ಅಧಿಕೃತ ಮಾಹಿತಿ ಇನ್ನಷ್ಟೇ ಬರಬೇಕಿದೆ.

More from Filmibeat

English summary
Did Allu Arjun Starrer Pushpa-2 beat KGF-2 Day 1 collection record?;
Read more about: kgf pushpa box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X