'ಪುಷ್ಪ 2' ಸಿನಿಮಾದಲ್ಲಿ ನೀವೂ ನಟಿಸಬಹುದು: ಜೂನ್ 10ಕ್ಕೆ ಆಡಿಷನ್
ನಟ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಸೂಪರ್ ಹಿಟ್ ಆಗಿದೆ. ಅಲ್ಲು ಅರ್ಜುನ್ ಸಿನಿಮಾ ವೃತ್ತಿ ಬದುಕಿನಲ್ಲೇ ದೊಡ್ಡ ಮಟ್ಟದ ದಾಖಲೆ ಬರೆದ ಸಿನಿಮಾ 'ಪುಷ್ಪ'. ಬಾಲಿವುಡ್ ನಲ್ಲಿ ಸೌತ್ ಚಿತ್ರರಂಗದ ಖದರ್ ತೋರಿದ ಚಿತ್ರ ಇದು.
'ಪುಷ್ಪ' ಚಿತ್ರದ ಯಶಸ್ಸು, 'ಪುಷ್ಪ 2' ಮೇಲೆ ಎಲ್ಲಿಲ್ಲದ ನಿರೀಕ್ಷೆಯನ್ನು ಹುಟ್ಟು ಹಾಕಿದೆ. ಸದ್ಯ ಚಿತ್ರದ ಪ್ರೀ ಪ್ರೊಡಕ್ಷನ್ ಕೆಲಸಗಳು ಶುರುವಾಗಿವೆ. ಇನ್ನೂ ಸ್ಕ್ರಿಪ್ಟ್‌ನಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಲಾಗುತ್ತಿದೆ. 'ಪುಷ್ಪ 2' ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದ ಕಾರಣ ಬದಲಾವಣೆಗಳನ್ನು ಮಾಡಲಾಗುತ್ತಿದೆ ಎನ್ನಲಾಗಿದೆ.
ಇನ್ನು 'ಪುಷ್ಪ 2' ಚಿತ್ರಕ್ಕಾಗಿ ಹೆಚ್ಚಿನ ತಯಾರಿ ನಡೆಸಿದ್ದಾರೆ. ಇನ್ನು ಅವರ ಲುಕ್ ಕೂಡ ಬದಲಾಗಲಿದೆ. 'ಪುಷ್ಪ' ಚಿತ್ರದಲ್ಲಿ ನಿಮಗೂ ಅಭಿನಯಿಸುವ ಆಸೆ ಇದ್ದರೆ ಅದು ಸಾಧ್ಯ ಆಗುತ್ತದೆ. ಚಿತ್ರತಂಡ ಆಡಿಷನ್ ನಡೆಸಲು ಮುಂದಾಗಿದೆ. ಇದೇ ಜೂನ್ 10ರಂದು ಪುಷ್ಪ ಚಿತ್ರದ ಆಡಿಷನ್ ನಡೆಯಲಿದೆ ಈ ಬಗ್ಗೆ ಪೋಸ್ಟರ್ ರಿಲೀಸ್ ಮಾಡಲಾಗಿದೆ.

ಜೂನ್ 10ಕ್ಕೆ ಪುಷ್ಪ 2 ಆಡಿಷನ್!
ಜೂನ್ 10ರಂದು 'ಪುಷ್ಪ' ಚಿತ್ರದ ಆಡಿಷನ್ ನಡೆಯಲಿದೆ. ನೀವು ಕೂಡ ಇದರಲ್ಲಿ ಭಾಗಿ ಆಗಬಹುದು. ಪುಷ್ಪ ಚಿತ್ರದಲ್ಲಿ ಹೆಚ್ಚಿನ ಸ್ಟಾರ್ ಕಾಸ್ಟ್ ಇರುವ ಕಾರಣಕ್ಕೆ, ಚಿತ್ರತಂಡ ಈಗ ಆಡಿಷನ್ ಮಾಡಲು ಸಜ್ಜಾಗಿದೆ. ಹೈದ್ರಾಬಾದ್ ನಲ್ಲಿ ಚಿತ್ರದ ಆಡಿಷನ್ ನಡೆಯಲಿದೆ. ಜುಬ್ಲಿ ಹಿಲ್ಸ್‌ನಲ್ಲಿ ಚಿತ್ರದ ಆಫಿಸ್ ಮುಂದೆ ಪೋಸ್ಟ್ ಹಾಕಲಾಗಿದೆ. ಆಫೀಸ್‌ಗೆ ನೇರವಾಗಿ ಎಲ್ಲರೂ ಭೇಟಿ ನೀಡಬಹುದು. ಆಡಿಷನ್‌ನಲ್ಲಿ ನೀವೂ ಭಾಗವಹಿಸ ಬಹುದು. ಹೇಗೆ ಎಂದು ಮುಂದೆ ಓದಿ...

ನಿರ್ದೇಶಕ ಸುಕುಮಾರ್ ಮೇಲೆ ಹೆಚ್ಚಿದ ಜವಾಬ್ದಾರಿ!
'ಪುಷ್ಪ' ಚಿತ್ರದಲ್ಲಿ ನಟ ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಜೋಡಿ ಮ್ಯಾಜಿಕ್ ಮಾಡಿತ್ತು. ಪ್ರೇಕ್ಷಕರು ಈ ಜೋಡಿಯನ್ನು ಮೆಚ್ಚಿ ಜೈಕಾರ ಹಾಕಿದ್ದರು. ಈಗ ಪುಷ್ಪ 2 ಚಿತ್ರದಲ್ಲೂ ಈ ಜೋಡಿ ಕಾಂಬಿನೇಷನ್ ಒಂದಾಗಿ ತೆರೆ ಮೇಲೆ ಕಾಣಿಸಿಕೊಳ್ಳಲಿದೆ. ಆದರೆ ನಿರ್ದೇಶಕ ಸುಕುಮಾರ್ ಮೇಲೆ ಪುಷ್ಪ ಭಾಗ 2 ಜವಾಬ್ದಾರಿ ಹೆಚ್ಚಾಗಿದೆ.

'ಪುಷ್ಪ' 184 ಕೋಟಿ ಗಳಿಕೆ!
'ಪುಷ್ಪ' ಸಿನಿಮಾ ದೊಡ್ಡ ಮಟ್ಟದ ಗಳಿಕೆ ಕಂಡಿದೆ. ಒಟ್ಟಾರೆ 'ಪುಷ್ಪ' ಚಿತ್ರದ ಬಾಕ್ಸಾಫೀಸ್ ಗಳಿಕೆ 184 ಕೋಟಿ ಆಗಿದೆ. ಇದರಲ್ಲಿ ಹೆಚ್ಚು ಗಳಿಕೆ ನಾರ್ತ್ ನಿಂದಲೇ ಆಗಿದೆ. ಬಾಕ್ಸಾಫೀಸ್‌ನಲ್ಲಿ ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಹಾಗಾಗಿ ಈಗ ಪುಷ್ಪ ಭಾಗ 2 ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಲು ತಯಾರಿ ನಡೆದಿದೆ.

ಪುಷ್ಪ 2 ಚಿತ್ರ ಪ್ಯಾನ್ ಇಂಡಿಯಾ ಚಿತ್ರ!
ಇನ್ನು 'ಪುಷ್ಪ 2' ಸಿನಿಮಾ ಕನ್ನಡದಲ್ಲೂ ಕೂಡ ತೆರೆಗೆ ಬರಲಿದೆ. 'ಪುಷ್ಪ' ಮೊದಲ ಭಾಗ ಪ್ಯಾನ್ ಇಂಡಿಯಾ ಸಿನಿಮಾ ಆಗಲಿದೆ ಎಂದು ಹೇಳಲಾಗಿತ್ತು. ಆದರೆ ತೆಲುಗು, ತಮಿಳು, ಹಿಂದಿಯಲ್ಲಿ ಮಾತ್ರ ಚಿತ್ರ ರಿಲೀಸ್ ಆಗಿತ್ತು. ಈಗ 'ಪುಷ್ಪ 2' ಚಿತ್ರ ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ತೆರೆಗೆ ಬರಲಿದೆ.


Click it and Unblock the Notifications











