ರಾಕಿಭಾಯ್‌ಗಿಂತ ಒಂದಡಿ ಮುಂದಿಟ್ಟ 'ಪುಷ್ಪ'ರಾಜ್; ಆದ್ರೂ ಯಾಕೋ ನಂಬಿಕೆ ಬರ್ತಿಲ್ಲ!
ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಸಖತ್ ಸದ್ದು ಮಾಡ್ತಿದೆ. ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಮಾಡೋಕೆ ಚಿತ್ರತಂಡ ಸಿದ್ಧತೆ ನಡೆಸಿದೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರೀ ರಿಲೀಸ್ ಬ್ಯುಸಿನೆಸ್ ಕೂಡ ಜೋರಾಗಿದೆ.
2 ವರ್ಷಗಳ ಹಿಂದೆ ಬಂದಿದ್ದ 'ಪುಷ್ಪ' ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸದ್ಯ ಸೀಕ್ವೆಲ್ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೇಡೇ ವಿಶೇಷವಾಗಿ ಚಿತ್ರದ ಫಸ್ಟ್ ಸಾಂಗ್ ರಿಲೀಸ್ ಆಗುತ್ತಿದೆ. ವಿಜಯ ಪ್ರಕಾಶ್ ಕಂಠದಲ್ಲಿ ಕನ್ನಡ ವರ್ಷನ್ ಸಾಂಗ್ ಮೂಡಿ ಬಂದಿದೆ. ಬಹುಕೋಟಿ ವೆಚ್ಚದಲ್ಲಿ ಸಿನಿಮಾ ನಿರ್ಮಾಣ ಆಗುತ್ತಿದೆ.

'ಪುಷ್ಪ' ಸರಣಿಯನ್ನು ಕನ್ನಡದ 'KGF' ಸರಣಿಗೆ ಹೋಲಿಕೆ ಮಾಡಲಾಗುತ್ತಿದೆ. 'ಪುಷ್ಪ' ದಿ ರೈಸ್ ಸಿನಿಮಾ ಬಿಡುಗಡೆ ಆದಾಗಲೇ ಕೆಲವರು ಸಿನಿಮಾ ಟೆಂಪ್ಲೆಟ್ ಅನ್ನು 'KGF' ಚಿತ್ರಕ್ಕೆ ಹೋಲಿಸಿದ್ದರು. ಅದಕ್ಕೂ ಮುನ್ನ ನಿರ್ದೇಶಕ ಸುಕುಮಾರ್ ಶಿಷ್ಯ ಬುಚ್ಚಿಬಾಬು ಎರಡೂ ಸಿನಿಮಾಗಳನ್ನು ಹೋಲಿಸಿ ಒಂದು ಹೇಳಿಕೆ ಕೊಟ್ಟಿದ್ದರು. 'ಪುಷ್ಪ' ಸಿನಿಮಾ 10 'KGF' ಸಿನಿಮಾಗಳಿಗೆ ಸಮ ಎಂದುಬಿಟ್ಟಿದ್ದರು. ಇದೇ ಕಾರಣಕ್ಕೆ ಕೆಲವರು ಟ್ರೋಲ್ ಮಾಡಿದ್ದರು.
'KGF' ರೀತಿಯಲ್ಲೇ 'ಪುಷ್ಪ' ಸಿನಿಮಾ 2 ಭಾಗಗಳಾಗಿ ಬರುತ್ತದೆ ಎಂದಾಗ ಹೋಲಿಕೆ ಮತ್ತಷ್ಟು ಹೆಚ್ಚಾಯಿತು. ಸದ್ಯ 'ಪುಷ್ಪ' ಸೀಕ್ವೆಲ್ 'KGF' ಸೀಕ್ವೆಲ್ ದಾಖಲೆ ಮುರಿಯುತ್ತದೆ ಎನ್ನುವ ಚರ್ಚೆ ಶುರುವಾಗಿದೆ. 'KGF' ರೀತಿಯಲ್ಲೇ ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ 'ಪುಷ್ಪ' 2ನೇ ಭಾಗ ಕೂಡ ನಿರ್ಮಾಣವಾಗುತ್ತಿದೆ. ಇನ್ನು ಚಿತ್ರದ ಸ್ಯಾಟಲೈಟ್, ಡಿಜಿಟಲ್ ರೈಟ್ಸ್‌ಗೆ ಭಾರೀ ಡಿಮ್ಯಾಂಡ್ ಶುರುವಾಗಿದೆ ಎನ್ನಲಾಗ್ತಿದೆ. ಭರ್ಜರಿ ಡೀಲ್ ನಡೆದಿರುವುದಾಗಿಯೂ ಚರ್ಚೆ ನಡೀತಿದೆ.
ಸಾಮಾನ್ಯವಾಗಿ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಏಕಕಾಲಕ್ಕೆ 5 ಭಾಷೆಗಳಲ್ಲಿ ತೆರೆಗೆ ತರಲಾಗುತ್ತಿದೆ. ಬಳಿಕ ಡಿಮ್ಯಾಂಡ್‌ಗೆ ತಕ್ಕಂತೆ ಮತ್ತಷ್ಟು ಭಾಷೆಗಳಿಗೆ ಡಬ್ ಮಾಡಲಾಗುತ್ತಿದೆ. ಆದರೆ 'ಪುಷ್ಪ'-2 ಬೆಂಗಾಲಿ ಸೇರಿ 6 ಭಾಷೆಗಳಿಗೆ ಡಬ್ ಮಾಡಿ ರಿಲೀಸ್ ಮಾಡುತ್ತಿದ್ದಾರೆ. ಆ ಲೆಕ್ಕದಲ್ಲಿ 'KGF'-2 ಚಿತ್ರಕ್ಕಿಂತ 'ಪುಷ್ಪ'-2 ಒಂದು ಹೆಜ್ಜೆ ಮುಂದೆ ಹೋಗಿದೆ ಎನ್ನಲಾಗ್ತಿದೆ. 6 ಭಾಷೆಗಳಲ್ಲಿ ಚಿತ್ರದ ಟೈಟಲ್ ಸಾಂಗ್ ರಿಲೀಸ್ ಆಗುತ್ತಿದೆ.

'ಪುಷ್ಪ' ಚಿತ್ರಕ್ಕೆ ಪಶ್ಚಿಮ ಬಂಗಾಳದಲ್ಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿತ್ತು. ಹಾಗಾಗಿ ಬೇಡಿಕೆಗೆ ತಕ್ಕಂತೆ ಈ ಬಾರಿ ಏಕಕಾಲಕ್ಕೆ ಬೆಂಗಾಲಿ ಭಾಷೆಗೂ ಸಿನಿಮಾ ಡಬ್ ಮಾಡುವ ಪ್ರಯತ್ನ ನಡೀತಿದೆ. 'KGF'-2 ಚಿತ್ರಕ್ಕಿಂತ 'ಪುಷ್ಪ'-2 ಪ್ರೀ ರಿಲೀಸ್ ಬ್ಯುಸಿನೆಸ್ ಚೆನ್ನಾಗಿದೆ. ಮೊದಲ ದಿನವೇ ಉತ್ತರ ಭಾರತದಲ್ಲೂ ಸಿನಿಮಾ ಭರ್ಜರಿ ಓಪನಿಂಗ್ ಪಡೆದುಕೊಳ್ಳುತ್ತದೆ ಎನ್ನಲಾಗ್ತಿದೆ. ಆದರೆ ಚಿತ್ರದ ಸ್ಯಾಂಪಲ್ಸ್ ನೋಡಿದರೆ ನಿರಾಸೆ ಮೂಡಿಸುವಂತಿದೆ. ಭಾರೀ ನಿರೀಕ್ಷೆ ಹುಟ್ಟಾಕಿದ್ದ ಟೀಸರ್ ಕೂಡ ಪ್ರೇಕ್ಷಕರ ಮನಗೆಲ್ಲಲಿಲ್ಲ.
ಎಲ್ಲಾ ಸಿನಿಮಾಗಳು 'KGF'-2 ಆಗಲ್ಲ ಎಂದು ಖುದ್ದು ತೆಲುಗು ಪ್ರೇಕ್ಷಕರೇ ಹೇಳುತ್ತಿದ್ದಾರೆ. ದೇವಿಶ್ರೀ ಪ್ರಸಾದ್ ಚಿತ್ರಕ್ಕೆ ಮ್ಯೂಸಿಕ್ ಕಂಪೋಸ್ ಮಾಡುತ್ತಿದ್ದಾರೆ. ಪ್ರೀಕ್ವೆಲ್‌ನಲ್ಲಿದ್ದ ಬಹುತೇಕ ತಂಡ ಸೀಕ್ವೆಲ್‌ನಲ್ಲಿ ಕೂಡ ಇರಲಿದೆ. ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ಮೋಡಿ ಮಾಡಲಿದ್ದಾರೆ. ಈ ಬಾರಿ ಪುಷ್ಪರಾಜ್ ವರ್ಸಸ್ ಭನ್ವರ್ ಸಿಂಗ್ ಶೇಖಾವತ್ ಫೈಟ್ ಭಾರೀ ನಿರೀಕ್ಷೆ ಮೂಡಿಸಿದೆ. ಮೈತ್ರಿ ಮೂವಿಮೇಕರ್ಸ್ ಸಂಸ್ಥೆ ಅದ್ಧೂರಿಯಾಗಿ ಸಿನಿಮಾ ತೆರೆಗೆ ತರುತ್ತಿದೆ.


Click it and Unblock the Notifications











