'ಪುಷ್ಪ'-2 ಚಿತ್ರಕ್ಕೆ ಅಲ್ಲು ಅರ್ಜುನ್, ಸುಕ್ಕು, ರಶ್ಮಿಕಾ, ಶ್ರೀಲೀಲಾ, ಫಹಾದ್ ಸಂಭಾವನೆ ಎಷ್ಟು?

ಸುಕುಮಾರ್ ನಿರ್ದೇಶನದ 'ಪುಷ್ಪ'-2 ಸಿನಿಮಾ ಭಾರೀ ಹೈಪ್ ಕ್ರಿಯೇಟ್ ಮಾಡ್ತಿದೆ. ಇನ್ನೆರಡು ದಿನಗಳಲ್ಲಿ ಚಿತ್ರದ ಅಸಲಿ ಕಥೆ ಗೊತ್ತಾಗಲಿದೆ. ಈಗಾಗಲೇ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಶುರುವಾಗಿದೆ. ಆದರೆ ಟಿಕೆಟ್ ದರ ಹೆಚ್ಚಾಗಿರುವುದು ನೋಡಿ ಸಿನಿರಸಿಕರು ಶಾಕ್ ಆಗಿದೆ. ಕೆಲವೆಡೆ ಟಿಕೆಟ್ ದರ 3000 ರೂಪಾಯಿ ಇದೆ.

ಅರೇ ಒಂದು ಚಿತ್ರಕ್ಕೆ ಒಬ್ಬರಿಗೆ 3 ಸಾವಿರ ರೂಪಾಯಿನಾ? ಎಂದು ಕೆಲವರು ಶಾಕ್ ಆಗಿದ್ದಾರೆ. ಇನ್ನು ಕರ್ನಾಟಕದಲ್ಲಿ ಕೂಡ 1000 ರೂ, 2000 ರೂ. ವರೆಗೆ ಟಿಕೆಟ್ ಬೆಲೆ ಹೆಚ್ಚಿಸಿದ್ದಾರೆ. ಇಷ್ಟು ಹಣ ಕೊಟ್ಟು ನೋಡುವಂಥದ್ದು ಏನಿದೆ? ಎಂದು ಕೆಲವರು ತಲೆ ಕೆಡಿಸಿಕೊಂಡಿದ್ದಾರೆ. ಅತ್ತ ಆಂಧ್ರ, ತೆಲಂಗಾಣದಲ್ಲಿ ಕೂಡ ಟಿಕೆಟ್ ದರ ಗಣನೀಯವಾಗಿ ಹೆಚ್ಚಿಸಲಾಗಿದೆ. 'ಪುಷ್ಪ'-2 ಪ್ರೀಮಿಯರ್ ಶೋಗಳ ಟಿಕೆಟ್ ದರ ದುಪ್ಪಟ್ಟಾಗಿದೆ. ಅಷ್ಟಕ್ಕೂ ಯಾಕೆ ಟಿಕೆಟ್ ದರ ಇಷ್ಟು ಜಾಸ್ತಿ ಅಂದ್ರೆ ಬಜೆಟ್ ಜಾಸ್ತಿ ಎನ್ನುವ ಚರ್ಚೆ ಶುರುವಾಗಿದೆ

Pushpa-2 Movie Star Cast Salary Know remuneration charged by Allu arjun Rashmika and others

'ಪುಷ್ಪ'-2 ಚಿತ್ರದ ಬಜೆಟ್ ಜಾಸ್ತಿ, ಅದನ್ನು ವಾಪಸ್ ಪಡೆಯಬೇಕು ಅಂದ್ರೆ ಟಿಕೆಟ್ ದರ ಹೆಚ್ಚಿಸಲೇಬೇಕು ಎಂದು ಆಂಧ್ರ, ತೆಲಂಗಾಣ ಸರ್ಕಾರದ ಬಳಿಕ ಚಿತ್ರತಂಡ ಅನುಮಪತಿ ಪಡೆದಿದೆ ಎನ್ನುವ ಚರ್ಚೆ ನಡೀತಿದೆ. ಕೆಲ ವರ್ಷಗಳಿಂದ ಆಂಧ್ರ, ತೆಲಂಗಾಣದಲ್ಲಿ ದೊಡ್ಡ ಸಿನಿಮಾಗಳಿಗೆ ಮನಸೋ ಇಚ್ಛೆ ಟಿಕೆಟ್ ದರ ಹೆಚ್ಚಿಸುವ ಅವಕಾಶ ಇಲ್ಲ. ಆದರೆ ಸರ್ಕಾರಕ್ಕೆ ಆಪ್ತರಾಗಿರುವ ನಿರ್ಮಾಪಕರು ಅವಕಾಶ ಪಡೆದುಕೊಳ್ಳುತ್ತಿದ್ದಾರೆ.

ಒಂದು ಅಂದಾಜಿನ ಪ್ರಕಾರ 'ಪುಷ್ಪ'-2 ಬಜೆಟ್ 500 ಕೋಟಿ ರೂ. ದಾಟಿದೆ ಎನ್ನಲಾಗ್ತಿದೆ. ಅದಕ್ಕೆ ಕಾರಣ ಕಲಾವಿದರು, ತಂತ್ರಜ್ಞರ ಸಂಭಾವನೆ. ಕ್ರೇಜ್‌ಗೆ ತಕ್ಕಂತೆ ಕಲಾವಿದರು ಸಂಭಾವನೆ ಕೇಳಿ ಪಡೆದಿದ್ದಾರೆ. ಅದನ್ನು ವಾಪಸ್ ಪಡೆಯಲು ನಿರ್ಮಾಪಕರು ಈಗ ಟಿಕೆಟ್ ದರ ಹೆಚ್ಚಿಸುವ ಸಾಹಸಕ್ಕೆ ಕೈಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಸಿನಿಮಾ 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ.

Pushpa-2 Movie Star Cast Salary Know remuneration charged by Allu arjun Rashmika and others

1. ರಶ್ಮಿಕಾ ಸಂಭಾವನೆ

'ಪುಷ್ಪ' ಚಿತ್ರದಲ್ಲಿ ಪುಷ್ಪರಾಜ್ ಪ್ರೇಯಸಿ ಆಗಿ ರಶ್ಮಿಕಾ ಮಂದಣ್ಣ ಮಿಂಚಿದ್ದರು. ಇಬ್ಬರ ಕೆಮೆಸ್ಟ್ರಿ ವರ್ಕ್ ಆಗಿತ್ತು. ಇದೀಗ ಸೀಕ್ವೆಲ್‌ನಲ್ಲಿ ಕತೆ ಮುಂದುವರೆಯುತ್ತಿದ್ದು ನಾಯಕನ ಮಡದಿ ಪಾತ್ರ ಮುಂದುವರೆದಿದೆ. ಕಳೆದ ವರ್ಷ 'ಅನಿಮಲ್' ಸಿನಿಮಾ ಮಾಡಿ ರಶ್ಮಿಕಾ ಕ್ರೇಜ್ ಹೆಚ್ಚಾಗಿತ್ತು. ಅದಕ್ಕೆ ತಕ್ಕಂತೆ 'ಪುಷ್ಪ'-2 ಚಿತ್ರದ ಸಂಭಾವನೆ ಡಿಮ್ಯಾಂಡ್ ಮಾಡಿದ್ದಾರೆ ಎನ್ನಲಾಗ್ತಿದೆ. 10 ಕೋಟಿ ರೂ. ವರೆಗೆ ಕೊಡಗಿನ ಕುವರಿ ಸಂಭಾವನೆ ಪಡೆದಿದ್ದಾರೆ ಎನ್ನುವ ಚರ್ಚೆ ನಡೀತಿದೆ.

2. ಸುಕುಮಾರ್ ಲೆಕ್ಕ

ಅಂದಹಾಗೆ 'ಪುಷ್ಪ' ಎಂಬ ಚಿತ್ರದ ರುವಾರಿ ನಿರ್ದೇಶಕ ಸುಕುಮಾರ್. ವೆಬ್ ಸೀರಿಸ್ ಮಾಡಲು ಬರೆದಿದ್ದ ಕಥೆಯನ್ನು ಸಿನಿಮಾ ರೂಪಕ್ಕೆ ತಂದಿದ್ದರು. ಪಾರ್ಟ್‌-1 ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಹಾಗಾಗಿ ಸೀಕ್ವೆಲ್ ಮೇಲೆ ನಿರೀಕ್ಷೆ ಹೆಚ್ಚಾಯಿತು. ಇದೀಗ 'ಪುಷ್ಪ'-2ಗಾಗಿ 40ರಿಂದ 50 ಕೋಟಿ ರೂ. ಸಂಭಾವನೆ ಜೊತೆಗೆ ಲಾಭದಲ್ಲಿ ಪಾಲು ಪಡೆಯಲು ಸುಕುಮಾರ್ ನಿರ್ಧರಿಸಿದ್ದಾರೆ ಎನ್ನುವ ಚರ್ಚೆ ನಡೀತಿದೆ.

3. ಶ್ರೀಲೀಲಾ ಸಂಭಾವನೆ

ಚಿತ್ರದ ಸ್ಪೆಷಲ್ ಸಾಂಗ್‌ನಲ್ಲಿ ಬೆಂಗಳೂರು ಬೆಡಗಿ ಶ್ರೀಲೀಲಾ ಕುಣಿದಿದ್ದಾರೆ. 'ಕಿಸ್ಸಿಕ್' ಎಂದು ಪುಷ್ಪರಾಜ್ ಜೊತೆ ಬಿಂದಾಸ್ ಡ್ಯಾನ್ಸ್ ಮಾಡಿದ್ದಾರೆ. ಅದಕ್ಕಾಗಿ 2 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎನ್ನುವ ಮಾತುಗಳು ಕೇಳಿಬರ್ತಿದ್ದಾರೆ. ಶ್ರದ್ದಾ ಕಪೂರ್ 5 ಕೋಟಿ ಕೇಳಿದ್ದರಂತೆ. ಹಾಗಾಗಿ ಶ್ರೀಲೀಲಾಗೆ 2 ಕೋಟಿ ರೂ. ಕೊಟ್ಟು ಒಪ್ಪಿಸಿದರು ಎನ್ನುವ ಮಾತುಗಳು ಕೇಳಿಬಂದಿತ್ತು.

4. ಫಹಾದ್ ಫಾಸಿಲ್

'ಪುಷ್ಪ'-2 ಚಿತ್ರದ ಮತ್ತೊಂದು ಪ್ರಮುಖ ಪಾತ್ರ ಭನ್ವರ್ ಸಿಂಗ್ ಶೇಖಾವತ್. ಪ್ರೀಕ್ವೆಲ್‌ನಲ್ಲಿ ಕ್ಲೈಮ್ಯಾಕ್ಸ್ ವೇಳೆಗೆ ಆ ಪಾತ್ರ ಪರಿಚಯವಾಗಿತ್ತು. ಸೀಕ್ವೆಲ್‌ನಲ್ಲಿ ಪುಷ್ಪರಾಜ್ ಆರ್ಭಟಕ್ಕೆ ಅಡ್ಡಗಾಲು ಹಾಕುವ ಈ ಪಾತ್ರದಲ್ಲಿ ಫಹಾದ್ ಫಾಸಿಲ್ ನಟಿಸಿದ್ದಾರೆ. ಇದಕ್ಕಾಗಿ 8 ಕೋಟಿ ರೂ. ಜೇಬಿಗಿಳಿಸಿದ್ದಾರೆ ಎನ್ನುವ ಊಹಾಪೋಹ ಇದೆ.

5. ಅಲ್ಲು ಅರ್ಜುನ್ ದಾಖಲೆ

ಚಿತ್ರದ ನಾಯಕ ಅಲ್ಲು ಅರ್ಜುನ್. 'ಪುಷ್ಪ' ಬ್ರ್ಯಾಂಡ್‌ನ ಒಡೆಯ. ಸ್ಟಾರ್‌ಗಳ ಮುಖ ನೋಡಿ ಪ್ರೇಕ್ಷಕರು ಸಿನಿಮಾ ನೋಡಲು ಬರುತ್ತಾರೆ ಎನ್ನುವ ಲೆಕ್ಕಾಚಾರ ಇದೆ. ಅದೇ ಕಾರಣಕ್ಕೆ ನಾಯಕ ನಟರು ಇತ್ತೀಚೆಗೆ ನೂರಾರು ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. 'ಪುಷ್ಪ'-2 ಚಿತ್ರಕ್ಕಾಗಿ ಅಲ್ಲು ಅರ್ಜುನ್ 300 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ ಎಂದು ಫೋರ್ಬ್ಸ್ ವರದಿ ಮಾಡಿದೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ. 150 ಕೋಟಿ ರೂ. ಅಧಿಕ ಸಂಭಾವನೆ ಅಂತೂ ಅಲ್ಲು ಅರ್ಜುನ್‌ಗೆ ಸಿಕ್ಕಿದೆ. ಇನ್ನು ಶೇರ್ ಲೆಕ್ಕದಲ್ಲಿ ಒಟ್ಟು ಸಂಭಾವನೆ 300 ಕೋಟಿ ರೂ. ತಲುಪಿದರೂ ಅಚ್ಚರಿಯಿಲ್ಲ.

More from Filmibeat

English summary
Allu Arjun, Rashmika Mandanna, Sreeleela, Sukumar fahadh fasil, Here Is How Much The Pushpa-2 Cast Got Paid;
Read more about: pushpa tollywood telugu
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X