ಪುಷ್ಪ 2: ಪ್ರತೀಕಾರದೊಂದಿಗೆ ಬರುತ್ತಿರುವ ಫಹಾದ್ ಫಾಸಿಲ್ ಲುಕ್ ನೋಡಿ ಗಾಬರಿಯಾಗಬೇಡಿ!

ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಸಾಲಿನಲ್ಲಿ ತೆಲುಗು ನಟ, ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್, ಫಹಾದ್ ಫಾಸಿಲ್, ರಶ್ಮಿಕಾ ಮಂದಣ್ಣ ಸೇರಿದಂತೆ ದೊಡ್ಡ ತಾರಾಬಳಗವನ್ನು ಹೊಂದಿರುವ 'ಪುಷ್ಪ 2: ದಿ ರೂಲ್' ಕೂಡ ಸೇರಿದೆ. ಇತ್ತೀಚೆಗೆ ಚಿತ್ರದ ನಿರ್ಮಾಪಕರು ಅಲ್ಲು ಅರ್ಜುನ್ ಅವರ ಹುಟ್ಟುಹಬ್ಬದ ಸಂದರ್ಭದಲ್ಲಿ ಅವರ ಪೋಸ್ಟರ್ ಬಿಡುಗಡೆ ಮಾಡಿ ಭಾರಿ ಕುತೂಹಲ ಮೂಡಿಸಿದ್ದರು.

ಆಗಸ್ಟ್ 8 ರಂದು ನಟ ಫಹಾದ್ ಫಾಸಿಲ್ ಬರ್ತ್‌ಡೇ ಹಿನ್ನೆಲೆ ಚಿತ್ರತಂಡ ಅವರ ಫೋಸ್ಟರ್ ಬಿಡುಗಡೆ ಮಾಡಿದೆ. ಭನ್ವರ್ ಸಿಂಗ್ ಶೇಖಾವತ್ ಪಾತ್ರದಲ್ಲಿ ಪುಷ್ಟ ದಿ ರೈಸ್‌ನಲ್ಲಿ ಛಾಪು ಮೂಡಿಸಿದ್ದ ನಟ ಫಹಾದ್ ಫಾಸಿಲ್. ಪುಷ್ಪರಾಜ್ ಆಗಿ ಪ್ರೇಕ್ಷಕರ ಮನಗೆದ್ದ ಅಲ್ಲು ಅರ್ಜುನ್ ಅವರಂತೆಯೇ ಪ್ರೇಕ್ಷಕರ ಮನಸ್ಸಿನಲ್ಲಿ ಗಮನಾರ್ಹವಾದ ಅಚ್ಚು ಹೊತ್ತಿದವರು ಫಹಾದ್ ಫಾಸಿಲ್ ಅಥವಾ ಭನ್ವರ್ ಸಿಂಗ್ ಶೇಖಾವತ್.

Pushpa 2: On Fahadh Faasils Birthday, Bhanwar Singh Shekhawat look revealed

ಮಂಗಳವಾರ, ಫಹದ್ ಫಾಸಿಲ್ ಅವರ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದು, ಪುಷ್ಪಾ ತಂಡವು ಅವರ ಈ ದಿನವನ್ನು ಇನ್ನಷ್ಟು ವಿಶೇಷಗೊಳಿಸಲು, ಅವರ ಪಾತ್ರದ ಪೋಸ್ಟರ್ ಅನ್ನು ಬಿಡುಗಡೆ ಮಾಡಿದೆ. ಚಿತ್ರ ತಂಡವು ಸಾಮಾಜಿಕ ಮಾಧ್ಯಮದಲ್ಲಿ ಫಹಾದ್ ಫಾಸಿಲ್ ಅವರ ಈ ಖಡಕ್ ಲುಕ್‌ನ ಫೋಸ್ಟರ್ ಬಿಟ್ಟು ಶುಭ ಹಾರೈಸಿದೆ.

"ಪುಷ್ಪ 2 ದಿ ರೂಲ್ ತಂಡವು ಪ್ರತಿಭಾವಂತ ಫಹಾದ್ ‌ಫಾಸಿಲ್‌ಗೆ ಜನ್ಮದಿನದ ಶುಭಾಶಯಗಳನ್ನು ಕೋರುತ್ತದೆ. ಭನ್ವರ್ ಸಿಂಗ್ ಶೇಖಾವತ್ ಸರ್ ಪ್ರತೀಕಾರದೊಂದಿಗೆ ಮತ್ತೆ ದೊಡ್ಡ ಪರದೆಯ ಮೇಲೆ ಬರಲಿದ್ದಾರೆ" ಎಂದಿದೆ.

ಪುಷ್ಪದ ಪೊಲೀಸ್ ಅಧಿಕಾರಿ ಭನ್ವರ್ ಸಿಂಗ್ ಶೇಖಾವತ್

ಪುಷ್ಪ ದಿ ರೈಸ್ ಚಿತ್ರದಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದ ಪಹಾದ್ ಫಾಸಿಲ್ ಪ್ರೇಕ್ಷಕರನ್ನು ರಂಜಿಸಿದ್ದರು. ತಮ್ಮ ಮನೋಜ್ಞ ಅಭಿನಯದಿಂದ ಎಲ್ಲರನ್ನೂ ಬೆರಗುಗೊಳಿಸಿದ್ದರು. ಭನ್ವರ್ ಸಿಂಗ್ ಶೇಖಾವತ್ ಆಗಿ ಚಿತ್ರವನ್ನು ಆಕ್ರಮಿಸಿಕೊಂಡಿದ್ದರು. ಚಿತ್ರದಲ್ಲಿ ಕಾಣಿಸಿಕೊಳ್ಳುವ ಕೆಲವೇ ಹೊತ್ತಿನಲ್ಲಿಯೂ ಜನರ ಮನಸ್ಸಿನಲ್ಲಿ ಉಳಿದಿದ್ದರು. ಈಗ ಪುಷ್ಪ 2: ದಿ ರೂಲ್‌ನಲ್ಲಿ ವಾರ ಪಾತ್ರ ವಿಶಾಲವಾಗಿದ್ದು, ಈ ಚಿತ್ರದ ಬಗೆಗಿನ ನಿರೀಕ್ಷೆ ಹೆಚ್ಚಾಗಲು ಫಹಾದ್ ಫಾಸಿಲ್ ಕೂಡ ದೊಡ್ಡ ಕಾರಣ.

Pushpa 2: On Fahadh Faasils Birthday, Bhanwar Singh Shekhawat look revealed

ಪುಷ್ಪ 2: ದಿ ರೂಲ್‌

ಪುಷ್ಪ 2: ದಿ ರೂಲ್ ಸಿನಿಮಾ ಪುಷ್ಷ ದಿ ರೈಸ್‌ನ ಮುಂದುವರೆದ ಭಾಗ. ಸುಕುಮಾರ್ ನಿರ್ದೇಶನದ ತೆಲುಗು ಭಾಷೆಯ ಚಲನಚಿತ್ರವಾಗಿದೆ. ಸ್ಟೈಲಿಶ್ ಸ್ಟಾರ್ ಅಲ್ಲು ಅರ್ಜುನ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಫಹಾದ್ ಫಾಸಿಲ್, ಸುನೀಲ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಚಲನಚಿತ್ರವನ್ನು ಮೈತ್ರಿ ಮೂವೀ ಮೇಕರ್ಸ್ ಮತ್ತು ಮುತ್ತಂಸೆಟ್ಟಿ ಮೀಡಿಯಾ ನಿರ್ಮಿಸಿದೆ. ಇದು ಪುಷ್ಪ ಸರಣಿಯ ಎರಡನೇ ಭಾಗವಾಗಿದ್ದು, ನಟ ವಿಜಯ್ ಸೇತುಪತಿ ಒಂದು ವಿಭಿನ್ನ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಮುಂದಿನ ವರ್ಷ ಚಿತ್ರ ತೆರೆಗೆ ಅಪ್ಪಳಿಸಲಿದೆ.

More from Filmibeat

English summary
Pushpa 2: On actor Fahadh Faasil's birthday, Bhanwar Singh Shekhawat look revealed. see here. know more
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X