12000 ಸ್ಕ್ರೀನ್‌ಗಳಲ್ಲಿ 'ಪುಷ್ಪ-2' ರಿಲೀಸ್; ಒಂದೇ ಥಿಯೇಟರ್‌ನಲ್ಲಿ 6 ಭಾಷೆಗಳಲ್ಲಿ ಚಿತ್ರ ನೋಡಿ

ಅಲ್ಲು ಅರ್ಜುನ್ ನಟನೆಯ 'ಪುಷ್ಪ'-2 ಸಿನಿಮಾ ಸೆನ್ಸಾರ್ ಮುಗಿಸಿದೆ. 3 ಗಂಟೆ 20 ನಿಮಿಷಗಳ ದೊಡ್ಡ ಸಿನಿಮಾ ಇದು. ಸುಕುಮಾರ್ ನಿರ್ದೇಶನದ ಈ ಆಕ್ಷನ್ ಥ್ರಿಲ್ಲರ್ ಸಿನಿಮಾ ಮುಂದಿನ ವಾರ ತೆರೆಗೆ ಬರ್ತಿದೆ. ಬಹಳ ದೊಡ್ಡಮಟ್ಟದಲ್ಲಿ ಸಿನಿಮಾ ತೆರೆಗಪ್ಪಳಿಸುತ್ತಿದೆ.

' ಪುಷ್ಪ'-2 ಚಿತ್ರದ ಪ್ರಚಾರ ಭರ್ಜರಿಯಾಗಿ ಸಾಗುತ್ತಿದೆ. ಪಾಟ್ನದಲ್ಲಿ ಈವೆಂಟ್ ಮಾಡಿ ಟ್ರೈಲರ್ ರಿಲೀಸ್ ಮಾಡಿದ್ದ ಚಿತ್ರತಂಡ ಚೆನ್ನೈ ಈವೆಂಟ್‌ನಲ್ಲಿ 'ಕಿಸ್ಸಿಕ್' ಸಾಂಗ್ ಕೇಳಿಸಿತ್ತು ಚಿತ್ರತಂಡ. ಬಳಿಕ ಕೊಚ್ಚಿ, ಗೋವಾದಲ್ಲಿ ಈವೆಂಟ್ ಮಾಡಿ ಸಿನಿಮಾವನ್ನು ಪ್ರೇಕ್ಷಕರ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನ ಮಾಡಲಾಯಿತು. ಇದೀಗ ಮುಂಬೈನಲ್ಲಿ ಚಿತ್ರದ ಗ್ರ್ಯಾಂಡ್ ಈವೆಂಟ್ ನಡೆದಿದೆ.

Pushpa- 2 releasing in 12 000 screens Audience enjoy the movie in 6 languages

ಸೂಪರ್ ಹಿಟ್ 'ಪುಷ್ಪ' ಸೀಕ್ವೆಲ್ ಇದು. ಹಾಗಾಗಿ ಸಹಜವಾಗಿಯೇ ನಿರೀಕ್ಷೆ ಗರಿಗೆದರಿದೆ. 1000 ಕೋಟಿ ರೂ. ಕಲೆಕ್ಷನ್ ಟಾರ್ಗೆಟ್ ಮಾಡಿ ಸಿನಿಮಾ ರಿಲೀಸ್ ಮಾಡಲಾಗುತ್ತಿದೆ. ದೊಡ್ಡಮಟ್ಟದಲ್ಲೇ ಪ್ರೀ ರಿಲೀಸ್ ಬ್ಯುಸಿನೆಸ್ ನಡೆದಿದೆ. ಟ್ರೈಲರ್ ಹಾಗೂ ಸಾಂಗ್ಸ್ ಹಿಟ್ ಆಗಿದೆ. ಮತ್ತೊಂದು ಸಾಂಗ್ ಬಿಡುಗಡೆಗೆ ಕೌಂಟ್‌ಡೌನ್ ಶುರುವಾಗಿದೆ. ಕರ್ನಾಟಕದಲ್ಲಿ ಕೂಡ ದೊಡ್ಡಮಟ್ಟದಲ್ಲಿ 'ಪುಷ್ಪ'-2 ರಿಲೀಸ್ ಪ್ಲ್ಯಾನ್ ನಡೀತಿದೆ.

ನಗರದ ಕೆಜಿ ರಸ್ತೆಯ 3 ಚಿತ್ರಮಂದಿರಗಳಲ್ಲಿ 'ಪುಷ್ಪ'-2 ಸಿನಿಮಾ ಪ್ರದರ್ಶನಗೊಳ್ಳಲಿದೆ. ಸಂತೋಷ್, ಅನುಪಮಾ ಹಾಗೂ ತ್ರಿವೇಣಿ ಚಿತ್ರಮಂದಿರಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ. ಇದೆಲ್ಲದರ ನಡುವೆ ಸಿನಿಮಾ ರಿಲೀಸ್ ಬಗ್ಗೆ ಮುಂಬೈ ಸುದ್ದಿಗೋಷ್ಠಿಯಲ್ಲಿ ಚಿತ್ರತಂಡ ಮಾಹಿತಿ ನೀಡಿದೆ. ವಿಶ್ವದಾದ್ಯಂತ 12 ಸಾವಿರ ಸ್ಕ್ರೀನ್‌ಗಳಲ್ಲಿ ಮುಂದಿನ ವಾರ ಸಿನಿಮಾ ಬಿಡುಗಡೆ ಆಗುತ್ತದೆ ಎಂದು ನಿರ್ಮಾಪಕರು ಹೇಳಿದ್ದಾರೆ.

'ಪುಷ್ಪ'-2 ಸಿನಿಮಾ ತೆಲುಗು, ಕನ್ನಡ, ಹಿಂದಿ, ಬೆಂಗಾಳಿ ಸೇರಿ 6 ಭಾಷೆಗಳಲ್ಲಿ ಬಿಡುಗಡೆ ಆಗುತ್ತಿದೆ. ಅಚ್ಚರಿ ಎಂದರೆ ಪ್ರೇಕ್ಷಕರು ಯಾವುದೇ ಚಿತ್ರಮಂದಿರದಲ್ಲಿ ತಮ್ಮಿಷ್ಟದ ಭಾಷೆಯಲ್ಲಿ ಸಿನಿಮಾ ನೋಡುವ ಅವಕಾಶ ಇದೆ. Cinedubs App ಬಳಸಿ ಪ್ರೇಕ್ಷಕರು ಯಾವುದೇ ಚಿತ್ರಮಂದಿರದಲ್ಲಿ 6 ಭಾಷೆಗಳಲ್ಲಿ ಸಿನಿಮಾ ನೋಡಬಹುದು ಎಂದು ನಿರ್ಮಾಪಕರು ಹೇಳಿದ್ದಾರೆ.

Pushpa- 2 releasing in 12 000 screens Audience enjoy the movie in 6 languages

ಈಗಾಗಲೇ ಕೆಲ ಚಿತ್ರಗಳಿಗೆ ಇಂತಾದೊಂದು ಆಪ್ ಬಳಸುವ ಅವಕಾಶ ಕಲ್ಪಿಸಲಾಗಿತ್ತು. 'ಪುಷ್ಪ'-2 ಚಿತ್ರದಿಂದ ಅದು ದೊಡ್ಡಮಟ್ಟದಲ್ಲಿ ಬಳಕೆಗೆ ಬರುವ ಸಾಧ್ಯತೆಯಿದೆ. 'ಪುಷ್ಪ'-2 ಸಿನಿಮಾ 1000 ಕೋಟಿ ರೂ.ಗೂ ಅಧಿಕ ಪ್ರೀ ರಿಲೀಸ್ ಬ್ಯುಸಿನೆಸ್ ಮಾಡಿದೆ. ಅದಕ್ಕೆ ತಕ್ಕಂತೆ ಓಪನಿಂಗ್ ಸಿಗುವ ನಿರೀಕ್ಷೆಯಿದೆ. ಬಾಕ್ಸಾಫೀಸ್‌ನಲ್ಲಿ ಹೊಸ ದಾಖಲೆ ಬರೆಯುವ ಲೆಕ್ಕಾಚಾರ ಶುರುವಾಗಿದೆ.

ಮೊದಲ ಭಾಗಕ್ಕಿಂತ ಹಲವು ಪಟ್ಟು ದೊಡ್ಡದಾಗಿ ಸೀಕ್ವೆಲ್ ಮೂಡಿ ಬಂದಿದೆ. ಬಜೆಟ್, ಸ್ಕೇಲ್, ಕಲಾವಿದರು, ತಂತ್ರಜ್ಞರ ಸಂಭಾವನೆ ಕೂಡ ಹೆಚ್ಚಾಗಿದೆ. ಅದೇ ರೀತಿಯಲ್ಲಿ ಕಲೆಕ್ಷನ್ ನಿರೀಕ್ಷೆ ಮಾಡಲಾಗುತ್ತಿದೆ. ಇನ್ನು ಮೊದಲ ಭಾಗದಲ್ಲಿದ್ದ ಬಹುತೇಕ ಕಲಾವಿದರು ಎರಡನೇ ಭಾಗದಲ್ಲಿ ಕಾಣಿಸಿಕೊಂಡಿದ್ದಾರೆ.

ಮತ್ತೊಮ್ಮೆ ಪುಷ್ಪರಾಜ್ ಜೋಡಿ ಶ್ರೀವಲ್ಲಿಯಾಗಿ ರಶ್ಮಿಕಾ ಮಂದಣ್ಣ ನಟಿಸಿದ್ದಾರೆ. ಜಾಲಿ ರೆಡ್ಡಿಯಾಗಿ ಧನಂಜಯ್ ಮಿಂಚಿದ್ದಾರೆ. ಶ್ರೀಲೀಲಾ ಸ್ಪೆಷಲ್ ಸಾಂಗ್‌ಗೆ ಹೆಜ್ಜೆ ಹಾಕಿದ್ದಾರೆ. ತಾರಕ್ ಪೊನ್ನಪ್ಪ ಕೂಡ ಮುಖ್ಯವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಒಟ್ನಲ್ಲಿ 'ಪುಷ್ಪ'-2 ಚಿತ್ರದಲ್ಲಿ ಕನ್ನಡಿಗರ ದರ್ಬಾರ್ ಜೋರಾಗಿದೆ. ಅಜನೀಶ್ ಲೋಕನಾಥ್ ಹಿನ್ನೆಲೆ ಸಂಗೀತ ಕೂಡ ಇದೆ ಎನ್ನಲಾಗ್ತಿದೆ.

ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆ 'ಪುಷ್ಪ'-2 ಸಿನಿಮಾ ನಿರ್ಮಾಣ ಮಾಡಿದೆ. ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಆದರೆ ಡಿಎಸ್‌ಪಿ ಸಂಗೀತ ಇಷ್ಟವಾಗದೇ ತಮನ್ ಅವರಿಂದ ಮ್ಯೂಸಿಕ್ ಮಾಡಿಸಿರುವ ಬಗ್ಗೆಯೂ ಗುಸುಗುಸು ಕೇಳಿಬಂದಿದೆ. ಇತ್ತೀಚೆಗೆ ಪರೋಕ್ಷವಾಗಿ ಈ ಬಗ್ಗೆ ವೇದಿಕೆಯಲ್ಲಿ ದೇವಿಶ್ರೀಪ್ರಸಾದ್ ಅಸಮಾಧಾನ ಹೊರ ಹಾಕಿದ್ದರು.

More from Filmibeat

English summary
Audience can watch Pushpa-2 film in 6 languages using the Cinedubs App at theater;
Read more about: pushpa allu arjun box office
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X