'ಪುಷ್ಪ 2' ಶೂಟಿಂಗ್ ಮುಂದೂಡಿಕೆ: ಕಥೆಯಲ್ಲಿ ದೊಡ್ಡ ಬದಲಾವಣೆ!
ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಚಿತ್ರ ರಿಲೀಸ್ ಆಗಿ, ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಚಿತ್ರ ರಿಲೀಸ್ ಬಳಿಕ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಟ್ಟದ ಗಳಿಕೆ ಮಾಡಿದೆ. ಇನ್ನು ಅಲ್ಲು ಅರ್ಜುನ್‌ರನ್ನು ಪುಷ್ಪರಾಜ್ ಅವತಾರದಲ್ಲಿ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ. ಸದ್ಯ ಪುಷ್ಪ2 ಚಿತ್ರ ನಿರೀಕ್ಷೆ ಮೂಡಿಸಿದೆ.
ಆದರೆ ಚಿತ್ರ ತಂಡದಿಂದ ಹೊಸದೊಂದು ಮಾಹಿತಿ ಹೊರ ಬಿದ್ದಿದೆ. ಪುಷ್ಪ2 ಚಿತ್ರ ಸದ್ಯಕ್ಕೆ ಸೆಟ್ಟೇರುವುದಿಲ್ಲವಂತೆ. ಈ ಬಗ್ಗೆ ಟಾಲಿವುಡ್ ಅಂಗಳದಲ್ಲಿ ಗುಸುಗುಸು ಕೇಳಿ ಬರ್ತಿದೆ. ಪುಷ್ಪ ಚಿತ್ರದ ಶೂಟಿಂಗ್ ಸದ್ಯಕ್ಕೆ ಆರಂಭ ಇಲ್ಲ. ಪುಷ್ಪ ಭಾಗ ಒಂದರ ಯಶಸ್ಸು ಪುಷ್ಪ ಚಿತ್ರದ ಭಾಗ ಎರಡರ ಮೇಲೆ ಎಲ್ಲಿಲ್ಲದ ನಿರೀಕ್ಷೆ ಹುಟ್ಟುವಂತೆ ಮಾಡಿದೆ.
ಹಾಗಾಗಿ ನಿರೀಕ್ಷೆಗಳನ್ನು ಮುಟ್ಟಲು ಚಿತ್ರ ತಂಡ ದಿಟ್ಟ ನಿರ್ಧಾರ ಮಾಡಿದೆಯಂತೆ. ಹಾಗಾಗಿ ಕತೆಯಲ್ಲಿ ಒಂದಷ್ಟು ಬದಲಾವಣೆ ಮಾಡಲು ಚಿತ್ರ ತಂಡ ಸಜ್ಜಾಗಿದೆ.

ಮಾರ್ಚ್‌ಗಿಲ್ಲ 'ಪುಷ್ಪ 2' ಚಿತ್ರೀಕರಣ!
ಪುಷ್ಪ ಚಿತ್ರದ ಸಕ್ಸಸ್ ಬೆನ್ನಲ್ಲೆ ಚಿತ್ರ ತಂಡ ಭಾಗ ಎರಡರ ಚಿತ್ರೀಕರಣಕ್ಕೆ ಸಜ್ಜಾಗಿತ್ತು. 2022 ಮಾರ್ಚ್‌ನಲ್ಲಿ ಚಿತ್ರದ ಶೂಟಿಂಗ್ ಆರಂಭಿಸಲು ಚಿತ್ರ ತಂಡ ಪ್ಲ್ಯಾನ್ ಮಾಡಿತ್ತು. ಆದರೆ ಈ ಈ ಯೋಜನೆಯನ್ನು ಕೈಬಿಡಲಾಗಿದೆ. ಯಾಕೆಂದರೆ ಪುಷ್ಪ ಭಾಗ ಒಂದಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಹಾಗಾಗಿ ಭಾಗ ಎರಡು ನಿರೀಕ್ಷೆಯನ್ನು ಮುಟ್ಟಬೇಕು ಎನ್ನುವ ಕಾರಣಕ್ಕೆ ಚಿತ್ರದ ಕಥೆಯಲ್ಲಿ ಸಾಕಷ್ಟು ಬದಲಾವಣೆ ಮಾಡಲು ನಿರ್ದೇಶಕ ಸುಕುಮಾರ್ ಮುಂದಾಗಿದ್ದಾರಂತೆ.

'ಪುಷ್ಪ2'ನಲ್ಲಿ ಮತ್ತಷ್ಟು ಗಟ್ಟಿ ಆಗಿರಲಿದೆ ಧನಂಜಯ್, ಫಹಾದ್ ಪಾತ್ರ!
ಪುಷ್ಪ ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ಹೆಸರಾಂತ ಕಲಾವಿದರು ಪುಷ್ಪ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಕನ್ನಡದ ನಟ ಧನಂಜಯ್, ಮಲಯಾಳಂನ ಫಹಾದ್ ಫಾಸಿಲ್, ತೆಲುಗಿನ ಸುನಿಲ್ ಹೀಗೆ ಸಾಕಷ್ಟು ನಟರು ಅಭಿನಯಿಸಿದ್ದಾರೆ. ಆದರೆ ಪುಷ್ಪ ಭಾಗ ಒಂದರಲ್ಲಿ ನಟ ಧನಂಜಯ್ ಪಾತ್ರ ಮತ್ತು ಫಹಾದ್ ಪಾತ್ರಗಳು ಇನ್ನಷ್ಟು ಗಟ್ಟಿ ಆಗಿರಬೇಕು ಎನ್ನುವ ಮಾತುಗಳು ಕೇಳಿ ಬಂದವು. ಹಾಗಾಗಿ ಭಾಗ ಎರಡರಲ್ಲಿ ಧನಂಜಯ್ ಮತ್ತು ಫಹಾದ್ ಪಾತ್ರಗಳು ತುಂಬಾ ಗಟ್ಟಿ ಆಗಿ ಇರಲಿವೆ ಎನ್ನುವುದನ್ನು ಸುಕುಮಾರ್ ಹೇಳಿದ್ದಾರೆ.

ಪುಷ್ಪ 2ಕ್ಕೂ ಮುನ್ನ ಬೇರೆ ಚಿತ್ರ ಮಾಡಲಿದ್ದಾರೆ ಅಲ್ಲು ಅರ್ಜುನ್!
ಪುಷ್ಪ2 ಚಿತ್ರವನ್ನು ಮುಂದೂಡಿ ಈ ಗ್ಯಾಪ್‌ನಲ್ಲಿ ಮತ್ತೊಂದು ಚಿತ್ರ ಮಾಡಲು ಅಲ್ಲು ಅರ್ಜುನ್ ಮತ್ತು ಸುಕುಮಾರ್ ನಿರ್ಧರಿಸಿದ್ದಾರಂತೆ. ಅಂದ್ರೆ ಇಬ್ಬರು ಪುಷ್ಪ2ಗೂ ಮುನ್ನ ಬೇರೆ, ಬೇರೆಯಾಗಿ ಸಿನಿಮಾ ಮಾಡಲು ನಿರ್ಧರಿಸಿದ್ದಾರಂತೆ. ಹಾಗಾಗಿ ಅಲ್ಲು ಅರ್ಜುನ್‌ಗೆ ಮುಂದೆ ಯಾವ ನಟ ನಿರ್ದೇಶನ ಮಾಡಲಿದ್ದಾರೆ. ಸುಕುಮಾರ್ ನಿರ್ದೇಶನದಲ್ಲಿ ಯಾವ ನಟ ಅಭಿನಯಿಸಲಿದ್ದಾರೆ ಎನ್ನುವ ಕುತೂಹಲ ಮೂಡಿದೆ.

ಪುಷ್ಪ ಹಿಂದಿ ಅವತರಣಿಕೆ ಮಹತ್ತರ ದಾಖಲೆ!
ರಿಲೀಸ್ ಬಳಿಕ ಪುಷ್ಪ ಚಿತ್ರ ಬಾಕ್ಸಾಫೀಸ್‌ನಲ್ಲಿ ದಾಖಲೆ ಮಾಡುತ್ತಿದೆ. ಸದ್ಯ ಪುಷ್ಪ ಚಿತ್ರದ ಹಿಂದಿ ಅವತರಣಿಕೆ ಎಲ್ಲಿಲ್ಲದ ಸದ್ದು ಮಾಡುತ್ತಿದೆ. ಈ ಚಿತ್ರ ಸೌತ್ ಚಿತ್ರಗಳು ಹಿಂದಿಗೆ ಡಬ್ ಆಗಿ ಅತಿ ಹೆಚ್ಚು ಗಳಿಸಿದ ಚಿತ್ರಗಳ ಪೈಕಿ ನಾಲ್ಕನೇ ಸಿನಿಮಾ ಆಗಿ ಹೊರ ಹೊಮ್ಮಿದೆ. 2ನೇ ವಾರಕ್ಕೆ ಪುಷ್ಪ ಹಿಂದಿ ಅವತರಣಿಕೆ 50 ಕೋಟಿ ಕಲೆ ಹಾಕಿದೆ.


Click it and Unblock the Notifications











