ಸುಕ್ಕು ಜೊತೆ ಕೈ ಜೋಡಿಸಿದ ಬುಚ್ಚಿಬಾಬು; 'ಕೆಜಿಎಫ್' ಫ್ಯಾನ್ಸ್‌ಗೆ ಮತ್ತೆ 'ಆ' ಮಾತು ನೆನಪಾಯ್ತು!
'ಪುಷ್ಪ' ಸಿನಿಮಾ ಹತ್ತು 'ಕೆಜಿಎಫ್' ಸಿನಿಮಾಗಳಿಗೆ ಸಮ ಎಂದು ತೆಲುಗು ನಿರ್ದೇಶಕ ಬುಚ್ಚಿಬಾಬು ಹೇಳಿದ ಮಾತು ನಿಮಗೆ ನೆನಪಿರಬೇಕು. ಆದರೆ 'ಪುಷ್ಪ' ಸಿನಿಮಾ ರಿಲೀಸ್ ಆದಮೇಲೆ ನಿರ್ದೇಶಕರ ಮಾತು ಸುಳ್ಳಾಗಿತ್ತು. ಈಗ 'ಪುಷ್ಪ' ಸೀಕ್ವೆಲ್‌ನಲ್ಲಿ ಆ ಮಾತನ್ನು ನಿಜ ಮಾಡಲು ಬುಚ್ಚಿಬಾಬು ಹೊರಟಂತಿದೆ.
ಸುಕುಮಾರ್ ನಿರ್ದೇಶನದ 'ಪುಷ್ಪ' ಸಿನಿಮಾ ಕಳೆದ ವರ್ಷ ಬಿಡುಗಡೆಯಾಗಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. 350 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿ ದಾಖಲೆ ಬರೀತು. ಪುಷ್ಪರಾಜ್ ಅವತಾರದಲ್ಲಿ ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಧೂಳೆಬ್ಬಿಸಿದ್ದರು. ಸುಕುಮಾರ್ ನಿರ್ದೇಶನಕ್ಕೂ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು. ಆದರೆ ಬುಚ್ಚಿಬಾಬು ಹೇಳಿದಂತೆ ಹತ್ತು 'ಕೆಜಿಎಫ್' ಸಿನಿಮಾಗಳಿಗೆ ಆ ಸಮನಾಗಿ ಇರಲಿಲ್ಲ. ಬದಲಿಗೆ ರಾಕಿ ಭಾಯ್ ಕಥೆಯಿಂದಲೇ ಪ್ರೇರಣೆಗೊಂಡು 'ಪುಷ್ಪ' ಕಥೆಯನ್ನು ಹೇಳಿದ್ದರು. ಇದೇ ಕಾರಣಕ್ಕೆ 'ಕೆಜಿಎಫ್' ಅಭಿಮಾನಿಗಳು ಬುಚ್ಚಿಬಾಬುನ ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ರಾಕಿ ಭಾಯ್ ಮುಂದೆ 'ಪುಷ್ಪ' ಬಚ್ಚಾ ಅಂತ ಟಾಂಗ್ ಕೊಟ್ಟಿದ್ದರು.
'ಪುಷ್ಪ' ಸೀಕ್ವೆಲ್‌ಗೆ ಭರದ ತಯಾರಿ ನಡೀತಿದೆ. ಫಸ್ಟ್ ಪಾರ್ಟ್‌ಗಿಂತ ದೊಡ್ಡಮಟ್ಟದಲ್ಲಿ ಸಿನಿಮಾ ಕಟ್ಟಿಕೊಡಲು ನಿರ್ದೇಶಕ ಸುಕುಮಾರ್ ಮುಂದಾಗಿದ್ದಾರೆ. 'ಕೆಜಿಎಫ್' ಸೆಕೆಂಡ್ ಚಾಪ್ಟರ್ ನೋಡಿದ ಮೇಲೆ ಸುಕ್ಕು ಪುಷ್ಪರಾಜ್ ಕಥೆಯನ್ನು ಮತ್ತಷ್ಟು ತಿದ್ದಿ ತೀಡುವ ಕೆಲಸ ಮಾಡುತ್ತಿದ್ದಾರೆ. ಇದೇ ಕಾರಣಕ್ಕೆ ಸಿನಿಮಾ ಸೆಟ್ಟೇರೋದು ತಡವಾಗ್ತಿದೆ. ಇದೀಗ ಸುಕುಮಾರ್ ಜೊತೆಗೆ ಅವರ ಶಿಷ್ಯ ಬುಚ್ಚಿಬಾಬು ಕೂಡ 'ಪುಷ್ಪ'-2 ಸ್ಟೋರಿ ಡಿಸ್ಕಷನ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಅದಕ್ಕೆ ಸಂಬಂಧಿಸಿದ ಫೋಟೊಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಇದನ್ನು ನೋಡಿದ 'ಕೆಜಿಎಫ್' ಅಭಿಮಾನಿಗಳಿಗೆ ಮತ್ತೆ ಅಂದು ಬುಚ್ಚಿಬಾಬು ಹೇಳಿದ ಮಾತು ನೆನಪಾಗುತ್ತಿದೆ.

ನಿರೀಕ್ಷೆ ಮೂಡಿಸಿದೆ 'ಪುಷ್ಪ'-2
'ಕೆಜಿಎಫ್'ಗೆ ಕಂಪೇರ್ ಮಾಡಿದರೆ 'ಪುಷ್ಪ' ಅಷ್ಟಕ್ಕಷ್ಟೇ ಅನ್ನಿಸಬಹುದು. ಆದರೆ ಸಿನಿಮಾ ಬಾಕ್ಸಾಫೀಸ್‌ನಲ್ಲಿ ಬಂಗಾರದ ಬೆಳೆ ತೆಗೆದಿತ್ತು. ಅಲ್ಲು ಅರ್ಜುನ್ ಪರ್ಫಾರ್ಮನ್ಸ್ ನೋಡಿ ಬಾಲಿವುಡ್ ಪ್ರೇಕ್ಷಕರು ಫಿದಾ ಆಗೋಗಿದ್ದರು. ಸಿನಿಮಾ ಹಿಂದಿ ಬೆಲ್ಟ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡಿ ಹುಬ್ಬೇರಿಸಿತ್ತು. ಹಾಗಾಗಿ ಸಹಜವಾಗಿಯೇ 'ಪುಷ್ಪ' ದಿ ರೂಲ್ ಸಿನಿಮಾ ಭಾರೀ ನಿರೀಕ್ಷೆ ಹುಟ್ಟಾಕ್ಕಿದೆ.

ಶಿಷ್ಯನ ಚಿತ್ರಕ್ಕೆ ಗುರುವಿನ ಟಿಪ್ಸ್!
ಸುಕುಮಾರ್ ಮತ್ತು ಬುಚ್ಚಿಬಾಬು ಒಟ್ಟಿಗೆ ಕೂತು ಗಹನವಾದ ಚರ್ಚೆಯಲ್ಲಿ ಮುಳುಗಿರುವ ಫೋಟೊಗಳು ವೈರಲ್ ಆಗಿದೆ. ಆದರೆ 'ಪುಷ್ಪ'-2 ಚಿತ್ರಕ್ಕೆ ಬುಚ್ಚಿಬಾಬು ಸಲಹೆ ಸೂಚನೆ ಕೊಡುತ್ತಿದ್ದಾರಾ ಅಥವಾ ಶಿಷ್ಯನ ಮುಂದಿನ ಚಿತ್ರಕ್ಕೆ ಗುರು ಸುಕ್ಕು ಟಿಪ್ಸ್ ಕೊಡ್ತಿದ್ದಾರಾ ಅನ್ನೋದು ಗೊತ್ತಾಗುತ್ತಿಲ್ಲ. ಒಟ್ಟಾರೆ ಈ ಫೋಟೊಗಳಂತೂ ಭಾರೀ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಚರ್ಚೆ ಹುಟ್ಟಾಕ್ಕಿದೆ.

ಎನ್‌ಟಿಆರ್‌ಗೆ ಬುಚ್ಚಿಬಾಬು ಆಕ್ಷನ್ ಕಟ್
RRR ಸಿನಿಮಾ ನಂತ್ರ ಜ್ಯೂನಿಯರ್ ಎನ್‌ಟಿಆರ್ ಸಾಲು ಸಾಲು ಸಿನಿಮಾಗಳಲ್ಲಿ ನಟಿಸೋಕೆ ಮುಂದಾಗಿದ್ದಾರೆ. ಬುಚ್ಚಿಬಾಬು ಹೇಳಿರುವ ಒಂದು ಕಥೆ ಕೂಡ ಇಷ್ವವಾಗಿದ್ದು, ಚಿತ್ರಕಥೆ ಸಿದ್ಧವಾದ ಮೇಲೆ ನಟಿಸೋ ಬಗ್ಗೆ ನಿರ್ಧಾರ ಕೈಗೊಳ್ಳಲಿದ್ದಾರೆ. ಕೊರಟಾಲ ಶಿವ ಹಾಗೂ ಪ್ರಶಾಂತ್ ನೀಲ್ ನಿರ್ದೇಶನದ ಸಿನಿಮಾಗಳು ಮುಗಿದ ಮೇಲೆ ಈ ಚಿತ್ರ ಶುರುವಾಗುವ ಸಾಧ್ಯತೆ ಇದೆ.

ಅಷ್ಟಕ್ಕೂ ಈ ಬುಚ್ಚಿಬಾಬು ಯಾರು ಗೊತ್ತಾ?
ಹಲವು ವರ್ಷಗಳಿಂದ ನಿರ್ದೇಶಕ ಸುಕುಮಾರ್ ಬಳಗದಲ್ಲಿ ಬುಚ್ಚಿಬಾಬು ಗುರ್ತಿಸಿಕೊಂಡಿದ್ದಾರೆ. ಸುಕ್ಕು ಆತ್ಮೀಯ ಶಿಷ್ಯರಲ್ಲಿ ಬುಚ್ಚಿಬಾಬು ಕೂಡ ಒಬ್ಬರು. ಗುರುಗಳು ನಿರ್ದೇಶಿಸಿದ ಸಿನಿಮಾಗಳಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿ ಬುಚ್ಚಿಬಾಬು 'ಉಪ್ಪೆನ' ಸಿನಿಮಾ ಮೂಲಕ ಸ್ವತಂತ್ರ ನಿರ್ದೇಶಕರಾದರು. ಪಂಜಾ ವೈಷ್ಣವ್ ತೇಜ್ ಹಾಗೂ ಕೃತಿ ಶೆಟ್ಟಿ ಜೋಡಿಯ 'ಉಪ್ಪೆನ' ಸಿನಿಮಾ ಕಳೆದ ರಿಲೀಸ್ ಆಗಿ ಸೂಪರ್ ಹಿಟ್ ಆಗಿತ್ತು.


Click it and Unblock the Notifications











