Allu Arjun Pushpa 2: ಅಲ್ಲು ಅರ್ಜುನ್ ಬರ್ತ್‌ಡೇ: 'ಪುಷ್ಪ 2' ರೋಲ್ ಮತ್ತಷ್ಟು ಪವರ್‌ಫುಲ್
ಐಕಾನ್ ಸ್ಟಾರ್ ಅಲ್ಲು ಅರ್ಜುನ್ ಇಂದು (ಏಪ್ರಿಲ್ 08)ಕ್ಕೆ ತಮ್ಮ 40ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕಳೆದ ವರ್ಷ ಬಿಡುಗಡೆಯಾದ ಪುಷ್ಪ -1 ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ. 'ಪುಷ್ಪ: ದಿ ರೈಸ್' ಈಗಾಗಲೇ ದೊಡ್ಡ ಮಟ್ಟದಲ್ಲಿ ವಿಶ್ವದಾದ್ಯಂತ ಹೆಸರು ಮಾಡಿದೆ. 'ಪುಷ್ಪ' ಹಿಂದಿ ಮಾರ್ಕೆಟ್‌ನಲ್ಲಿ ಕೂಡ ಸುಮಾರು ನೂರು ಕೋಟಿಗೂ ಹೆಚ್ಚಿನ ಗಳಿಕೆ ಮಾಡಿದೆ. 300 ಕೋಟಿಗೂ ಹೆಚ್ಚು ಹಣ ಗಳಿಕೆ ಮಾಡುವ ಮೂಲಕ 2021 ರಲ್ಲಿ ಅತಿ ಹೆಚ್ಚಿನ ಗಳಿಕೆ ಮಾಡಿದ ಚಿತ್ರ ಎಂಬ ಹೆಗ್ಗಳಿಕೆಗೆ ಗಳಿಸಿದೆ. 'ಪುಷ್ಪ' ಹೀಗಾಗಿ 'ಪುಷ್ಪ-2' ಗಾಗಿ ದೊಡ್ಡಮಟ್ಟದ ನಿರೀಕ್ಷೆಗಳು ಕೂಡ ಗರಿಗೆದರಿದೆ.
'ಪುಷ್ಪ' ಚಿತ್ರದ ಯಶಸ್ಸಿನಲ್ಲಿ ಅತಿದೊಡ್ಡ ಪಾತ್ರವಹಿಸಿದ್ದು ಅದರ ಹಾಡುಗಳು. ಇಂದಿಗೂ ಈ ಚಿತ್ರದ ಹಾಡುಗಳು ಎಲ್ಲಾ ಭಾಷೆಯಲ್ಲಿ ಕೂಡ ಚಾರ್ಟ್‌ಬಸ್ಟರ್ ಆಗಿವೆ. ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನದಲ್ಲಿ ಈಗ 'ಪುಷ್ಪ-2' ಚಿತ್ರಕ್ಕೆ ಸಂಬಂಧಿಸಿದಂತೆ 1 ಅಥವಾ 2 ಅಲ್ಲ ಆದರೆ 3 ಚಾರ್ಟ್‌ಬಸ್ಟರ್ ಹಾಡುಗಳನ್ನು ಸಂಯೋಜಿಸಲಾಗಿದೆ. ಈ 3 ಹಾಡುಗಳು ಮುಂಬರುವ ದಿನಗಳಲ್ಲಿ ದೊಡ್ಡಮಟ್ಟದ ಸಂಚಲನವನ್ನು ಸೃಷ್ಟಿ ಮಾಡುತ್ತದೆ ಅಂತ ಸಿನಿಮಾ ತಂಡದ ಕಡೆಯಿಂದ ಕೇಳಿ ಬರುತ್ತಿರುವ ಮಾತುಗಳು.

ರಕ್ತ ಚಂದನದ 'ಪುಷ್ಪ'
ಸ್ಮಗ್ಲರ್ ಆಗಿ ಕಾಣಿಸಿಕೊಂಡಿದ್ದ ಅಲ್ಲು ಅರ್ಜುನ್, 'ಪುಷ್ಪ: ದಿ ರೂಲ್ 'ನಲ್ಲಿ ಮತ್ತಷ್ಟು ರಗಡ್ ಲುಕ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. 'ಪುಷ್ಪ' ಪಾತ್ರದ ಹಿನ್ನೆಲೆ ಮತ್ತು ಚಿತ್ರಕಥೆಯನ್ನು ಗಮನದಲ್ಲಿಟ್ಟುಕೊಂಡು ಸಂಯೋಜಕ ದೇವಿ ಶ್ರೀ ಪ್ರಸಾದ್ ಈಗಾಗಲೇ 'ಪುಷ್ಪ- 2' ಗಾಗಿ 3 ಹಾಡುಗಳನ್ನು ಮಾಡಿದ್ದಾರೆ. 'ಪುಷ್ಪ: ದಿ ರೈಸ್' ಚಿತ್ರದ ಅದ್ಭುತ ಯಶಸ್ಸಿನ ನಂತರ, ಮ್ಯೂಸಿಕ್ ಡೈರೆಕ್ಟರ್ ದೇವಿ ಶ್ರೀ ಪ್ರಸಾದ್ ಬಹುನಿರೀಕ್ಷಿತ ಸೀಕ್ವೆಲ್‌ಗಾಗಿ ಮೂರು ಅದ್ಭುತವಾದ ಹಾಡುಗಳನ್ನು ಸಂಯೋಜಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಪುಷ್ಪ 2 ಸಾಂಗ್‌ಗಳು ರೆಡಿ
ಚಿತ್ರದ ಆರಂಭದ ಸಮಯದಲ್ಲಿ 'ಪುಷ್ಪ' ಕೇವಲ ಒಂದೇ ಸಿನಿಮಾ ಆಗಿತ್ತು. ಕಥೆ ದೊಡ್ಡದಾಗಿತ್ತು. ಚಿತ್ರಕಥೆ ಕೂಡ ಸಿದ್ಧವಾಗಿತ್ತು. ಈ ಕಾರಣಕ್ಕೆ ಸಿನಿಮಾವನ್ನು ಎರಡು ಭಾಗಗಳಾಗಿ ವಿಂಗಡಣೆ ಮಾಡಲಾಯಿತು. ಮೊದಲನೆಯ ಭಾಗ 'ಪುಷ್ಪ-ದಿ ರೈಸ್', ಎರಡನೇ ಭಾಗ 'ಪುಷ್ಪ- ದಿ ರೂಲ್' ಹೀಗೆ ಎರಡು ಭಾಗಗಳಲ್ಲಿ ತೆರೆಗೆ ತರಲು ನಿರ್ಮಾಪಕರು ನಿರ್ಧರಿಸಿದ್ದರು. ದೇವಿ ಶ್ರೀ ಪ್ರಸಾದ್ ಚಿತ್ರಕ್ಕೆ ಕಂಪೋಸ್ ಮಾಡಿದ್ದ ಎರಡು ಹಾಡುಗಳನ್ನು ಇದೇ ಕಾರಣಕ್ಕೆ ಆ ಸಮಯದಲ್ಲಿ ಕೈಬಿಡಲಾಗಿತ್ತು. ಈಗ ನಿರ್ಮಾಪಕರು 'ಪುಷ್ಪ -2 ಚಿತ್ರೀಕರಣವನ್ನು ಪ್ರಾರಂಭಿಸಲು ಸಿದ್ಧರಾಗಿದ್ದಾರೆ. ದೇವಿ ಶ್ರೀ ಪ್ರಸಾದ್ ಈ ಹಿಂದೆ ಸಂಯೋಜಿಸಿದ ಎರಡು ಹಾಡುಗಳಿಗೆ ಕಡೆಯ ನಿಮಿಷದಲ್ಲಿ ಒಂದಷ್ಟು ಬದಲಾವಣೆಗಳನ್ನು ಮಾಡಿದ್ದಾರೆ.' ಪುಷ್ಪ 2' ಸಿನಿಮಾಗಾಗಿ ಮೂರು ಹಾಡುಗಳನ್ನು ಪೂರ್ಣಗೊಳಿಸಿದ್ದಾರೆ ಎಂದು ಟಾಲಿವುಡ್‌ನಲ್ಲಿ ಹರಿದಾಡುತ್ತಿದೆ.

'ಪುಷ್ಪ 2' ಶೂಟಿಂಗ್ ಯಾವಾಗ?
ಐಕಾನ್ ಸ್ಟಾರ್ ಅಲ್ಲು ಅರ್ಜುನ್, ಕ್ರಿಯೇಟಿವ್ ಡೈರೆಕ್ಟರ್ ಸುಕುಮಾರ್ ನಿರ್ದೇಶನದ ಪ್ಯಾನ್ ಇಂಡಿಯಾ ಚಿತ್ರ 'ಪುಷ್ಪ-1'. ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿರುವುದರಿಂದ 'ಪುಷ್ಪ -2' ಮೇಲೆ ನಿರೀಕ್ಷೆಗಳು ಕೂಡ ದೊಡ್ಡದಾಗಿದೆ. ರೆಡ್ ಸ್ಯಾಂಡಲ್‌ವುಡ್ ಹಿನ್ನಲೆಯಲ್ಲಿ ಮೂಡಿಬರುತ್ತಿರುವ ಈ ಚಿತ್ರವನ್ನು ಸುಕುಮಾರ್ ಎರಡು ಭಾಗಗಳಲ್ಲಿ ತೆರೆಗೆ ತರುತ್ತಿರುವ ವಿಷಯ ಗೊತ್ತಿರುವುದೇ. ಮೊದಲ ಭಾಗ ನಿರೀಕ್ಷೆಗೂ ಮೀರಿ ಭರ್ಜರಿ ಯಶಸ್ಸು ಕಂಡಿದ್ದರಿಂದ ಇದೀಗ 'ಪುಷ್ಪ 2' ಮೇಲಿನ ನಿರೀಕ್ಷೆ ಹೆಚ್ಚಿದೆ. ಔಟ್ ಅಂಡ್ ಔಟ್ ಆ್ಯಕ್ಷನ್ ಎಂಟರ್ ಟೈನರ್ ಆಗಿ ತೆರೆಕಂಡಿರುವ ಈ ಸಿನಿಮಾದಲ್ಲಿ ಲಕ್ಕಿ ಬ್ಯೂಟಿ ರಶ್ಮಿಕಾ ಮಂದಣ್ಣ ನಾಯಕಿಯಾಗಿ ನಟಿಸಿದ್ದಾರೆ. 'ಪುಷ್ಪ -1' ಚಿತ್ರದ ಮೂಲಕ ಸಖತ್ ಸಕ್ಸಸ್ ಕಂಡ ಸುಕುಮಾರ್ ಈಗ 'ಪುಷ್ಪ -2' ತೆರೆಗೆ ಯಾವ ರೀತಿಯಲ್ಲಿ ತರುತ್ತಾರೆ ಎಂಬ ಕುತೂಹಲ ಮನೆ ಮಾಡಿದೆ.

ಪವರ್‌ಫುಲ್ ಆಗಿರುತ್ತೆ ಕ್ಯಾರೆಕ್ಟರ್
ಮೊದಲ ಭಾಗಕ್ಕಿಂತ 2ನೇ ಭಾಗದಲ್ಲೂ ಸಾಹಸ ದೃಶ್ಯಗಳು ಹೆಚ್ಚಾಗಿ ಇರಲಿದೆ ಎಂಬ ಮಾತು ಕೇಳಿಬರುತ್ತಿದೆ. ಮೊದಲ ಭಾಗದ ಕೊನೆಯಲ್ಲಿ ಎಂಟ್ರಿ ಕೊಟ್ಟಿದ್ದ ಫಹಾದ್ ಫಾಜಿಲ್, ಪಾರ್ಟ್ 2ರಲ್ಲಿ ಯಾವ ರೀತಿಯಲ್ಲಿ ಅಬ್ಬರಿಸುತ್ತಾರೆ ಎಂಬ ಕುತೂಹಲ ಮನೆಮಾಡಿದೆ. ಮೊದಲ ಭಾಗದಲ್ಲಿ ಬನ್ನಿ ಹಾಗೂ ಫಹಾದ್ ನಡುವೆ ಆ್ಯಕ್ಷನ್ ದೃಶ್ಯಗಳೇ ಇರಲಿಲ್ಲ. ಇದೀಗ 'ಪುಷ್ಪ- 2'ರಲ್ಲಿ ಇಬ್ಬರ ನಡುವೆ ಅದ್ಧೂರಿ ಆ್ಯಕ್ಷನ್ ಎಪಿಸೋಡ್‌ಗಳು ಇರಲಿದೆಯಂತೆ. ಹಾಗೆಯೇ ಮೊದಲ ಭಾಗದಲ್ಲಿ ತೋರಿಸಿರುವ ಮಂಗಳಂ ಶೀನ (ಸುನಿಲ್) ಮತ್ತು ಅನಸೂಯಾ ಪಾತ್ರಕ್ಕೂ ಹೆಚ್ಚಿನ ಪ್ರಾಮುಖ್ಯತೆ ನೀಡಲಿದ್ದಾರಂತೆ. ಅನಿರೀಕ್ಷಿತ ತಿರುವುಗಳು, ಪವರ್‌ಫುಲ್ ಆಗಿರುವ ಹೀರೊ ಕಮ್ ವಿಲನ್, ಇವೆಲ್ಲವೂ 'ಪುಷ್ಪ 2' ಅನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುತ್ತದೆ ಎಂದು ಹೇಳಲಾಗುತ್ತದೆ. ಸದ್ಯದಲ್ಲೇ ಸುಕುಮಾರ್ ಚಿತ್ರದ ಶೂಟಿಂಗ್ ಆರಂಭಿಸಲಿದ್ದಾರೆ. ಈಗಾಗಲೇ ಸ್ಕ್ರಿಪ್ಟ್ ವರ್ಕ್ ಮುಗಿಸಿರುವ ಸುಕುಮಾರ್, ಲೊಕೇಶನ್‌ಗಳನ್ನು ಹುಡುಕುತ್ತಿದ್ದಾರೆ. ಕೊರೊನಾದಿಂದಾಗಿ ಆಂಧ್ರ ಪ್ರದೇಶದ ಮರೆಡುಮಿಲ್ಲಿ ಅರಣ್ಯದಲ್ಲಿ ಮೊದಲ ಭಾಗದ ಚಿತ್ರೀಕರಣ ನಡೆಸಲಾಗಿದೆ. ಸುಕುಮಾರ್ ಮತ್ತು ತಂಡ ಈಗ ಕೇರಳದ ಅರಣ್ಯದಲ್ಲಿ ಶೂಟಿಂಗ್ ಮಾಡಲು ಯೋಚಿಸುತ್ತಿದೆ ಅಂತ ಟಾಲಿವುಡ್ ಹೇಳುತ್ತಿದೆ.


Click it and Unblock the Notifications











