ತೀವ್ರಬೆನ್ನು ನೋವಿದ್ದರೂ ಪುಷ್ಪ 2 ಚಿತ್ರೀಕರಣದಲ್ಲಿ ನಟ ಅಲ್ಲು ಅರ್ಜುನ್: ಶೂಟಿಂಗ್ ನಿಲ್ಲಿಸಿದ ನಿರ್ದೇಶಕ!
ಎರಡು ವರ್ಷಗಳಿಂದ ಸಕತ್ ಹೈಪ್ ಕ್ರಿಯೇಟ್ ಮಾಡಿರುವ ಸಿನಿಮಾ ಪುಷ್ಪ. ಪುಷ್ಪ ಮೊದಲ ಭಾಗ ಬಿಡುಗಡೆಯಾಗಿ ಎರಡನೇ ಭಾಗಕ್ಕಾಗಿ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಇದರ ನಡುವೆ ಪುಷ್ಪ: ದಿ ರೂಲ್ ಸಿನಿಮಾ ಚಿತ್ರೀಕರಣ ಕೂಡ ಭರ್ಜರಿಯಾಗಿ ನಡೆಯುತ್ತಿತ್ತು. ಆದರೆ, ಈಗ ಶೂಟಿಂಗ್ ಸ್ಪಾಟ್‌ನಿಂದ ಹೊಸ ಅಪ್‌ಡೇಟ್ ಸಿಕ್ಕಿದೆ.
ಸುಕುಮಾರ್ ನಿರ್ದೇಶಕನ ಮುಂಬರುವ ಚಿತ್ರ, ಪುಷ್ಪ: ದಿ ರೂಲ್‌ನಲ್ಲಿ ನಟ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಳಿ ಧನಂಜಯ್ ಸೇರಿದಂತೆ ಹಲವು ಮಂದಿ ನಟಿಸುತ್ತಿದ್ದು, ಇದು ಬಹುನಿರೀಕ್ಷಿತ ಸೀಕ್ವೆಲ್‌ಗಳಲ್ಲಿ ಒಂದಾಗಿದೆ. ಸಿನಿಮಾ ಚಿತ್ರೀಕರಣ ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ನಡೆಯುತ್ತಿದೆ.

ತೀವ್ರ ಬೆನ್ನು ನೋವಿಗೆ ಒಳಗಾದ ನಟ ಅಲ್ಲು ಅರ್ಜುನ್
ಹೈದರಾಬಾದ್‌ನ ರಾಮೋಜಿ ಫಿಲ್ಮ್ ಸಿಟಿಯಲ್ಲಿ ಪುಪ್ಪ ಶೂಟಿಂಗ್ ನಡೆಯುತ್ತಿದ್ದು, ಇದರಲ್ಲಿ ಕೆಲವು ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ. ಚಿತ್ರದ ಫಸ್ಟ್‌ಲುಕ್‌ನಲ್ಲಿ ಅಲ್ಲು ಅರ್ಜುನ್ ಜಾತರಾ ಗೆಟ್‌ಅಪ್‌ನಲ್ಲಿ ಕಾಣಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ದೃಶ್ಯಗಳನ್ನು ಚಿತ್ರೀಕರಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಆದರೆ, ಶೂಟಿಂಗ್ ಅನ್ನು ಇದೀಗ ಡಿಸೆಂಬರ್ ಎರಡನೇ ವಾರಕ್ಕೆ ಮುಂದೂಡಲಾಗಿದೆ ಎಂದು ಅಲ್ಲು ಅರ್ಜುನ್ ತಂಡವನ್ನು ಉಲ್ಲೇಖಿಸಿ ಹಿಂದೂಸ್ತಾನ್ ಟೈಮ್ಸ್ ವರದಿ ಮಾಡಿದೆ. "ಅಲ್ಲು ಅರ್ಜುನ್ ಒಂದು ಹಾಡು ಮತ್ತು ಫೈಟ್ ಸೀಕ್ವೆನ್ಸ್ ಚಿತ್ರೀಕರಣಕ್ಕಾಗಿ ಜಾತಾರಾ ಗೆಟಪ್‌ನಲ್ಲಿದ್ದರು. ಆದರೆ, ಅವರಿಗೆ ತೀವ್ರವಾದ ಬೆನ್ನು ನೋವು ಕಾಡಿದೆ" ಎಂದು ಮಾಹಿತಿ ನೀಡಿದ್ದಾರೆ.
"ಭಾರಿ ವೇಷಭೂಷಣ ಮತ್ತು ಫೈಟಿಂಗ್ ದೃಶ್ಯಗಳಲ್ಲಿ ಅವರು ನಟಿಸುತ್ತಿದ್ದರು. ತೀವ್ರವಾದ ಬೆನ್ನು ನೋವಿನಲ್ಲಿಯೂ ಶೂಟಿಂಗ್ ಮುಂದುವರೆಸಲು ಅವರು ಹೇಳಿದರು. ಆದರೆ, ಸುಕುಮಾರ್ ಅವರು ಶೂಟಿಂಗ್ ನಿಲ್ಲಿಸಿದ್ದಾರೆ. ಆರೋಗ್ಯದ ಮೇಲೆ ಮತ್ತಷ್ಟು ಪರಿಣಾಮ ಬೀರುವ ಕಾರಣ ವಿರಾಮ ತೆಗೆದುಕೊಳ್ಳಲು ತಿಳಿಸಿದ್ದಾರೆ" ಅಲ್ಲು ಅರ್ಜುನ್ ಚೇತರಿಸಿಕೊಂಡ ನಂತರ ಶೂಟಿಂಗ್ ಮತ್ತೆ ಶುರುವಾಗಲಿದೆ" ಎಂದು ಮೂಲಗಳು ಹೇಳುತ್ತವೆ.

ಅಲ್ಲು ಅರ್ಜುನ್ ಜಾತಾರಾ ಗೆಟಪ್
ಪುಷ್ಪ: ದಿ ರೂಲ್‌ನ ಮೊದಲ ಪೋಸ್ಟರ್‌ನಲ್ಲಿ ಅಲ್ಲು ಅರ್ಜುನ್ ಜಾತಾರ ಗೆಟಪ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಈ ಅವತಾರ ಎಲ್ಲರ ಕುತೂಹಲ ಕೆರಳಿಸಿದೆ. ಅಲ್ಲು ಅರ್ಜುನ್ ದೇಹದ ಬಣ್ಣ, ಪಟ್ಟು ಸೀರೆ, ಕಿವಿಯೋಲೆಗಳು, ಮೂಗುಬೊಟ್ಟು, ಬಳೆಗಳು ಮತ್ತು ಉಂಗುರಗಳನ್ನು ಧರಿಸಿದ್ದರು. ಇದರ ಜೊತೆಗೆ ನಿಂಬೆಹಣ್ಣಿನ ಹಾರ ಧರಿಸಿ ಕಾಣಿಸಿಕೊಂಡಿದ್ದರು. ಪ್ರತಿ ವರ್ಷ ತಿರುಪತಿಯಲ್ಲಿ ನಡೆಯುವ ಗಂಗಮ್ಮ ತಾಯಿಯನ್ನು ಪ್ರತಿನಿಧಿಸಲು ಅಲ್ಲು ಅರ್ಜುನ್ ಈ ಅವತಾರವನ್ನು ಧರಿಸಿದ್ದಾರೆ ಎನ್ನಲಾಗಿದೆ. .
ಪುಷ್ಪ 2
ಸುಕುಮಾರ್ ನಿರ್ದೇಶನದ ಪುಷ್ಪ: ದಿ ರೈಸ್ ಡಿಸೆಂಬರ್ 2021 ರಲ್ಲಿ ತೆರೆಗೆ ಬಂದಿತ್ತು. ಸೂಪರ್ ಹಿಟ್ ಆಗಿರುವ ಈ ಸಿನಿಮಾದ ಸೀಕ್ವೆಲ್‌ಗಾಗಿ ಅಂದಿನಿಂದ ಅಭಿಮಾನಿಗಳು ಕಾಯುತ್ತಿದ್ದಾರೆ. ಚಿತ್ರದಲ್ಲಿ ಅಲ್ಲು ಅರ್ಜುನ್ ದಿನಗೂಲಿ ಕೆಲಸಗಾರನಾಗಿ ರಕ್ತ ಚಂದನ ಕಳ್ಳಸಾಗಣೆದಾರನಾಗಿ ಬದಲಾಗುವ, ಬಡತನದಿಂದ ಶ್ರೀಮಂತನಾಗಿ ತನ್ನದೇ ಆದ ಸಾಮ್ರಾಜ್ಯವನ್ನು ಸ್ಥಾಪಿಸಲು ಬಯಸುವ ವ್ಯಕ್ತಿಯ ಪಾತ್ರ ಮಾಡುತ್ತಿದ್ದಾರೆ.
ರಶ್ಮಿಕಾ ಮಂದಣ್ಣ ಶ್ರೀವಲ್ಲಿ ಎಂಬ ಪಾತ್ರದಲ್ಲಿ ನಟಿಸಿದರೆ, ಫಹಾದ್ ಫಾಸಿಲ್ ಅವರು ಭನ್ವರ್ ಸಿಂಗ್ ಶೆಖಾವತ್ ಎಂಬ ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆ. ಚಿತ್ರದ ಮುಂದಿನ ಭಾಗವು ಆಗಸ್ಟ್ 15, 2024 ರಂದು ತೆರೆಗೆ ಬರಲಿದೆ.


Click it and Unblock the Notifications











