Pushpa 2 Trailer ; ಪುಷ್ಪ 2 ಅಬ್ಬರ, ಅಲ್ಲು ಅರ್ಜುನ್ ಆರ್ಭಟಕ್ಕೆ ಕೇವಲ ಐದೇ ನಿಮಿಷದಲ್ಲಿ ಎಲ್ಲಾ ದಾಖಲೆ ಉಡೀಸ್...!

ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ ಉತ್ತರ ಭಾರತದಲ್ಲಿ ಕೂಡ ಅಪಾರವಾದ ಅಭಿಮಾನಿ ಬಳಗವನ್ನೊಂದಿರುವವರು ಅಲ್ಲು ಅರ್ಜುನ್. ಇದಕ್ಕೆ ನಿನ್ನೆ ಬಿಹಾರದಲ್ಲಿ ನೆರೆದ ಜನಸ್ತೋಮ ಸಾಕ್ಷಿ.

ಬಿಹಾರದ ಪಾಟ್ನಾದಲ್ಲಿ ನಿನ್ನೆ ಹತ್ ಹತ್ರ ಎರಡು ಲಕ್ಷ ಜನರ ಎದುರು ಅಲ್ಲು ಅರ್ಜುನ್ ಅಬ್ಬರಿಸಿದರು. ಹಿಂದಿಯಲ್ಲಿಯೇ ಮಾತನಾಡಿದರು. ಬಿಹಾರನಲ್ಲಿರುವ ಅಭಿಮಾನಿಗಳ ಅಭಿಮಾನದ ಮಳೆಯಲ್ಲಿ ಮಿಂದೆದ್ದರು. ಇನ್ನೂ.. ಅಲ್ಲು ಅರ್ಜುನ್ ಮತ್ತು ಪುಷ್ಪ ಕ್ರೇಜ್ ಕೇವಲ ಬಿಹಾರದಲ್ಲಿ ಮಾತ್ರ ನಿನ್ನೆ ಇರಲಿಲ್ಲ. ಭಾರತದೆಲ್ಲೆಡೆ ಪುಷ್ಪ 2 ಜ್ವರ ಆವರಿಸಿಕೊಂಡಿತ್ತು. ಇದಕ್ಕೆ ಚಿತ್ರದ ಟ್ರೇಲರ್‌ ಸೃಷ್ಟಿಸಿದ ದಾಖಲೆಗಳೇ ಕೈಗನ್ನಡಿ

Pushpa 2 Trailer Breaks Records Allu Arjun-Sukumar Sequel Sets New Milestones in Indian Cinema

ಹೌದು.. ಮೈತ್ರಿ ಮೂವಿ ಮೇಕರ್ಸ್ ಯೂಟ್ಯೂಬ್‌ ಚಾನೆಲ್‌ನಲ್ಲಿ ನಿನ್ನೆ ಬಿಡುಗಡೆಯಾದ ಪುಷ್ಪ 2 ಟ್ರೇಲರ್ ಅಪರೂಪದ ದಾಖಲೆ ನಿರ್ಮಾಣ ಮಾಡಿದೆ. ವೀವ್ಸ್ ವಿಚಾರದಲ್ಲಿ ಕೇವಲ ಐದು ನಿಮಿಷದಲ್ಲಿ ನಾಲ್ಕು ಲಕ್ಷದ ಗಡಿಯನ್ನು ದಾಟುವ ಮೂಲಕ ಯೂಟ್ಯೂಬ್‌ನಲ್ಲಿ ಹೊಸ ಇತಿಹಾಸವನ್ನು ನಿರ್ಮಿಸಿದೆ. ಈ ಮೂಲಕ ಭಾರತೀಯ ಚಿತ್ರರಂಗದ ಇತಿಹಾಸದಲ್ಲಿಯೇ ಇಂತಹದ್ದೊಂದು ಸಾಧನೆಯನ್ನು ಮಾಡಿದ ಮೊದಲ ಸಿನಿಮಾ ಎನ್ನುವ ಹೆಗ್ಗಳಿಕೆಗೆ ಈ ಚಿತ್ರ ಪಾತ್ರವಾಗಿದೆ. ಇನ್ನೂ ಟ್ರೇಲರ್ ಬಿಡುಗಡೆಯಾದ ಒಂದು ಘಂಟೆಯಲ್ಲಿ ಈ ವೀಕ್ಷಣೆಯ ಸಂಖ್ಯೆ 3,871,782 ದಾಟಿದೆ. ಎರಡು ಘಂಟೆಯಲ್ಲಿ ತೆಲುಗು ಟ್ರೇಲರ್ 5.66 ಮಿಲಿಯನ್ ವೀಕ್ಷಣೆಯನ್ನು ಕಂಡಿದೆ

ಇನ್ನೂ ಪುಷ್ಪ 2 ನೋಡುವ ಆತುರ ಮತ್ತು ಕಾತುರ ಉತ್ತರ ಭಾರತದವರಿಗೂ ಕೂಡ ಇದೆ. ಇದಕ್ಕೆ ಪುರಾವೆ ಎನ್ನುವಂತೆ ಬಿಡುಗಡೆಯಾದ ಒಂದು ಗಂಟೆಯಲ್ಲಿ ಹಿಂದಿ ಟ್ರೇಲರ 2.9 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ. ಹದಿಮೂರು ಘಂಟೆಯ ನಂತರ ಈ ಸಂಖ್ಯೆ 24,659,583ಕ್ಕೆ ತಲುಪಿದೆ.

ಇನ್ನೂ ಈ ಬಾರಿ ಪುಷ್ಪ 2 ಚಿತ್ರವನ್ನು ಬೆಂಗಾಲಿಯಲ್ಲಿ ಕೂಡ ಬಿಡುಗಡೆ ಮಾಡಲಾಗುತ್ತಿದೆ. ಚಿತ್ರದ ಟ್ರೇಲರ್‌ನ ಕೂಡ ಬೆಂಗಾಲಿಯಲ್ಲಿ ನಿನ್ನೆ ಬಿಡುಗಡೆ ಮಾಡಲಾಗಿದೆ. ವಿಶೇಷ ಅಂದರೆ ಬೆಂಗಾಲಿಯಲ್ಲಿ ಕೂಡ ಪುಷ್ಪ 2 ಟ್ರೇಲರ್‌ ಮೋಡಿ ಮಾಡಿದೆ. ಬೆಂಗಾಲ್ ಜನರ ಹೃದಯವನ್ನು ಗೆದ್ದಿದೆ. ಹದಿಮೂರು ಘಂಟೆಯಲ್ಲಿ ಟ್ರೇಲರ್ 406,699 ವೀಕ್ಷಣೆಯನ್ನು ಕಂಡಿದೆ. ತಮಿಳಿನಲ್ಲಿ ಈ ಸಂಖ್ಯೆ 03 ಮಿಲಿಯನ್ ದಾಟಿದ್ದರೆ, ಕನ್ನಡದಲ್ಲಿ ಪುಷ್ಪ 2 ಟ್ರೇಲರ್ 222,141 ವೀಕ್ಷಣೆಯನ್ನು ಕಂಡಿದೆ.

ಹೀಗೆ ಯೂಟ್ಯೂಬ್‌ನಲ್ಲಿ ದಾಖಲೆಯನ್ನು ಬರೆದ ಪುಷ್ಪ 2ದಲ್ಲಿ ಶ್ರೀವಲ್ಲಿಯ ಪಾತ್ರದ ಮೂಲಕ ರಶ್ಮಿಕಾ ಮಂದಣ್ಣ ಮತ್ತೊಮ್ಮೆ ನಿಮ್ಮೆಲ್ಲರ ಎದುರು ಬರಲಿದ್ದಾರೆ. ಇನ್ನೂ ರಶ್ಮಿಕಾ ಮಂದಣ್ಣ ಜೊತೆ ಡಾಲಿ ಧನಂಜಯ್ ಕೂಡ ಜಾಲಿ ರೆಡ್ಡಿಯಾಗಿ ಅಬ್ಬರಿಸಲಿದ್ದಾರೆ. ಶ್ರೀಲೀಲಾ ವಿಶೇಷವಾದ ಹಾಡೊಂದಕ್ಕೆ ಹೆಜ್ಜೆ ಹಾಕಿದ್ದಾರೆ. ಇವರನ್ನು ಹೊರತು ಪಡಿಸಿದರೆ ಫಹಾದ್ ಫಾಸಿಲ್ ಚಿತ್ರದ ಮತ್ತೊಂದು ಆಕರ್ಷಣೆ.

ಇನ್ನುಳಿದಂತೆ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಇದೆ. ಇನ್ನೂ ಹಿಂದಿಯಲ್ಲಿ ಪುಷ್ಪ ಮೊದಲ ಭಾಗವನ್ನು ವಿತರಣೆ ಮಾಡಿದ್ದ ರವೀನಾ ಟಂಡನ್ ಅವರ ಪತಿ ಅನಿಲ್ ಥಡಾನಿ ಪುಷ್ಪ 2 ಚಿತ್ರವನ್ನು ಕೂಡ ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ. ಸದ್ಯ ಎಲ್ಲ ಭಾಷೆಯಲ್ಲಿಯೂ ಚಿತ್ರದ ಟ್ರೇಲರ್ ಸದ್ದು ಯೂಟ್ಯೂಬ್‌ನಲ್ಲಿ ಜೋರಾಗಿದ್ದು ಚಿತ್ರ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಲಿದೆ.

More from Filmibeat

Read more about: allu arjun trailer tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X