Pushpa 2 Trailer ; ಪುಷ್ಪ ಕೇವಲ ಹೆಸರಲ್ಲ ಅದೊಂದು ಬ್ರ್ಯಾಂಡ್, ಬೆಂಕಿ-ಬಿರುಗಾಳಿ ಹೇಗಿದೆ ಟ್ರೇಲರ್..?

ಕೇವಲ ದಕ್ಷಿಣ ಭಾರತದಲ್ಲಿ ಮಾತ್ರ ಅಲ್ಲ ಉತ್ತರ ಭಾರತದಲ್ಲಿ ಕೂಡ ಅಪಾರವಾದ ಅಭಿಮಾನಿ ಬಳಗವನ್ನೊಂದಿರುವವರು ಅಲ್ಲು ಅರ್ಜುನ್. ಇದಕ್ಕೆ ಕೈಗನ್ನಡಿ ಎಂಬಂತೆ ಆ ಕಾಲದಲ್ಲಿಯೇ ಅಲ್ಲು ಅರ್ಜುನ್ ಅಭಿನಯದ ' ನಾ ಪೇರು ಸೂರ್ಯ' ಚಿತ್ರ ಹಿಂದಿಗೆ ' ಸೂರ್ಯ ದಿ ಸೋಲ್ಜರ್‌' ಹೆಸರಿನಲ್ಲಿ ಯೂಟ್ಯೂಬ್‌ನಲ್ಲಿ ಬಿಡುಗಡೆಯಾದಾಗ ಕೇವಲ ಮೂರೇ ದಿನದಲ್ಲಿ ಒಂದು ಕೋಟಿ ಜನ ಈ ಚಿತ್ರವನ್ನು ನೋಡಿದ್ದರು. ಕೇವಲ ಇದೊಂದೇ ಚಿತ್ರ ಅಲ್ಲ ಅಲ್ಲು ಅರ್ಜುನ್ ಅಭಿನಯದ 'ದುವ್ವಾಡ ಜಗನ್ನಾಥಂ' ಮತ್ತು 'ಸರೈನೋಡು' ಹಿಂದಿ ಡಬ್ಬಿಂಗ್ ವರ್ಷನ್‌ಗಳೂ ಅಲ್ಲಿ ಉತ್ತಮ ಪ್ರತಿಕ್ರಿಯೆ ಪಡೆದಿದ್ದವು. 'ನಾ ಪೇರು ಸೂರ್ಯ' ಕೂಡ ದಾಖಲೆ ಬರೆದಿತ್ತು.

ಆದರೂ ಕೂಡ ಅಲ್ಲು ಅರ್ಜುನ್‌ಗೆ ತಾವು ಆಗಲೇ ಪ್ಯಾನ್ ಇಂಡಿಯಾ ಸ್ಟಾರ್ ಆಗಿದ್ದೇನೆ ಎನ್ನುವ ನಂಬಿಕೆ ಬಂದಿರಲಿಲ್ಲ. ಈ ಕಾರಣಕ್ಕೆ ಪುಷ್ಪ ಚಿತ್ರದ ಮೂಲಕ ಪ್ಯಾನ್ ಇಂಡಿಯಾ ಮಹಾ ಯಾಗವನ್ನು ಮಾಡಿದ ಅಲ್ಲು ಅರ್ಜುನ್ ಗೆದ್ದು ಬೀಗಿದರು. ದಕ್ಷಿಣದ ಜೊತೆ ಜೊತೆಯಲ್ಲಿಯೇ ಉತ್ತರದಲ್ಲಿ ಕೂಡ ಗೆಲುವಿನ ಬಾವುಟ ಹಾರಿಸಿದರು. ಪುಷ್ಪ ಮೂಲಕ ಉತ್ತರದಲ್ಲಿ ಸಂಚಲನವನ್ನೇ ಸೃಷ್ಟಿಸಿದರು.

Pushpa 2 Trailer Much Awaited Trailer Of Pushpa 2 Starring Allu Arjun And Rashmika Is Out Now

ಇಂಥಾ ಅಲ್ಲು ಅರ್ಜುನ್, ಇದೀಗ ಪುಷ್ಪ 02 ಚಿತ್ರದ ಮೂಲಕ ಹೊಸದೊಂದು ದಾಖಲೆ ಬರೆಯುವ ಉತ್ಸಾಹದಲ್ಲಿದ್ದಾರೆ. ಉತ್ತರ ಭಾರತದಲ್ಲಿ ಅದರಲ್ಲಿಯೂ ವಿಶೇಷವಾಗಿ ಬಿಹಾರದಲ್ಲಿ ಪುಷ್ಪ ಮೊದಲ ಭಾಗಕ್ಕೆ ಸಿಕ್ಕ ಪ್ರೀತಿಯಿಂದ ಪುಳಕಿತಗೊಂಡು ಬಿಹಾರದ ರಾಜಧಾನಿ ಪಾಟ್ನಾದಲ್ಲಿ ತಮ್ಮ ಪುಷ್ಪ 02 ಚಿತ್ರದ ಟ್ರೇಲರ್‌ನ ಅಸಂಖ್ಯಾತ, ಅಗಣಿತ ಜನರ ಮುಂದೆ ಬಿಡುಗಡೆ ಮಾಡಿದ್ದಾರೆ. ಆ ಭಾಷೆ ಈ ಭಾಷೆಯ ಜನರು ಎನ್ನದೇ ಎಲ್ಲ ಭಾಷೆಯ ಜನರನ್ನು ಅಲ್ಲು ಅರ್ಜುನ್ ಈ ಮೂಲಕ ಹುಚ್ಚೆಬ್ಬಿಸಿದ್ದಾರೆ. 02:48 ಸೆಕೆಂಡ್ ಇರುವ ಈ ಚಿತ್ರದ ಟ್ರೇಲರ್ ಸದ್ಯಕ್ಕೆ ಎಲ್ಲರ ಚಿತ್ತ ಕದ್ದಿದೆ. ಅದರಲ್ಲಿಯೂ ಮಾಸ್ ಪ್ರೇಕ್ಷಕರು ಪುಷ್ಪರಾಜ್‌ಗೆ ಬಹುಪರಾಕ್ ಹಾಕುತ್ತಿದ್ದಾರೆ. ಅಲ್ಲು ಅರ್ಜುನ್ ಅವರ ಸ್ಟೈಲ್ ಕಂಡು ಸ್ಮೈಲ್ ಮಾಡುತ್ತಿದ್ದಾರೆ. ಸ್ವ್ಯಾಗ್‌ಗೆ ಸಲಾಂ ಹೊಡೆಯುತ್ತಿದ್ದಾರೆ.

ಇನ್ನೂ ಪುಷ್ಪ -02 ಅಲ್ಲು ಅರ್ಜುನ್ ಚಿತ್ರವಾಗಿರಬಹುದು. ಆದರೆ ಈ ಚಿತ್ರದಲ್ಲಿ ಕನ್ನಡದ ಕಂಪು ಇದೆ. ಕನ್ನಡದ ತಾರೆಯರ ಸಂಖ್ಯೆ ಹೆಚ್ಚಿದೆ. ನಿಜಾ.. ಟ್ರೇಲರ್‌ನಲ್ಲಿ ಡಾಲಿ ಧನಂಜಯ್ ದರ್ಶನವಾಗಿಲ್ಲ. ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ಡಾಲಿ ಕಾಣಿಸಿಲ್ಲ. ಆದರೆ.. ಪುಷ್ಪ ಮೊದಲ ಭಾಗಕ್ಕಿಂತ ಹೋಲಿಸಿದರೆ ಈ ಬಾರಿ ಡಾಲಿ ಧನಂಜಯ್ ಅಬ್ಬರ ಹೆಚ್ಚಿರಲಿದೆ ಎನ್ನುವ ಮಾತು ಕೇಳಿ ಬರುತ್ತಿದೆ. ಇನ್ನೂ ಶ್ರೀಲೀಲಾ ಹಾಡು ಪಡ್ಡೆ ಹುಡುಗರ ಎದೆ ಬಡಿತ ಹೆಚ್ಚಿಸುವದರ ಜೊತೆ ಈ ವರ್ಷದ ಚಾರ್ಟ್‌ ಬಸ್ಟರ್ ಸಾಂಗ್ ಆಗಿ ಹೊರ ಹೊಮ್ಮುವುದರಲ್ಲಿ ಅನುಮಾನ ಇಲ್ಲ. ಈ ಸುಳಿವು ಚಿತ್ರದ ಟ್ರೇಲರ್ ನೀಡಿದೆ. ರಶ್ಮಿಕಾ ಮಂದಣ್ಣ ಅವರ ಶ್ರೀವಲ್ಲಿ ಪಾತ್ರ ಮತ್ತು ಆ ಪಾತ್ರಕ್ಕಿರುವ ಪ್ರಾಮುಖ್ಯತೆ ಎಂಥಹದ್ದು ಎನ್ನುವುದು ನಿಮಗೆ ಗೊತ್ತು. ಇವರನ್ನು ಹೊರತು ಪಡಿಸಿದರೆ ಫಹಾದ್ ಫಾಸಿಲ್ ಚಿತ್ರದ ಮತ್ತೊಂದು ಆಕರ್ಷಣೆ.

ಇನ್ನುಳಿದಂತೆ ಚಿತ್ರಕ್ಕೆ ದೇವಿಶ್ರೀ ಪ್ರಸಾದ್ ಸಂಗೀತ ನಿರ್ದೇಶನ ಇದೆ. ಚಿತ್ರದ ಟ್ರೇಲರ್ ಬಿಡುಗಡೆಯಾದ ಕೆಲವೇ ಕ್ಷಣಗಳಲ್ಲಿ ಯೂಟ್ಯೂಬ್‌ನಲ್ಲಿ ಟ್ರೆಂಡಿಂಗ್‌ನಲ್ಲಿದೆ. ಕೇವಲ ತೆಲುಗು ಮಾತ್ರ ಅಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಪುಷ್ಪ 2 ಟ್ರೇಲರ್ ಸದ್ದು ಜೋರಿದೆ. ಇನ್ನೂ ಹಿಂದಿಯಲ್ಲಿ ಪುಷ್ಪ ಮೊದಲ ಭಾಗವನ್ನು ವಿತರಣೆ ಮಾಡಿದ್ದ ರವೀನಾ ಟಂಡನ್ ಅವರ ಪತಿ ಅನಿಲ್ ಥಡಾನಿ ಪುಷ್ಪ 2 ಚಿತ್ರವನ್ನು ಕೂಡ ಹಿಂದಿಯಲ್ಲಿ ವಿತರಣೆ ಮಾಡಲಿದ್ದಾರೆ. ಸದ್ಯ ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು ಚಿತ್ರ ಡಿಸೆಂಬರ್ 5ಕ್ಕೆ ಬಿಡುಗಡೆಯಾಗಲಿದೆ.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X