ಕರ್ನಾಟಕದಲ್ಲಿ 'KGF-2' ರೆಕಾರ್ಡ್ ಮುರಿತ್ತೀವಿ; 'ಪುಷ್ಪ-2' ವಿತರಕನ ಹೇಳಿಕೆಗೆ ಕನ್ನಡಿಗರು ಗರಂ

ಐಕಾನ್ ಸ್ಟಾರ್ ಅಲ್ಲು ಅರ್ಜುನ್ ನಟನೆಯ 'ಪುಷ್ಪ-2' ಬಿಡುಗಡೆಗೆ ದಿನಗಣನೆ ಶುರುವಾಗಿದೆ. ಡಿಸೆಂಬರ್ 5ಕ್ಕೆ ಸಿನಿಮಾ ವಿಶ್ವದಾದ್ಯಂತ ತೆರೆಗೆ ಬರಲಿದೆ. 3 ವರ್ಷಗಳ ಹಿಂದೆ 'ಪುಷ್ಪ' ಚಿತ್ರ ಬ್ಲಾಕ್‌ಬಸ್ಟರ್ ಹಿಟ್ ಆಗಿತ್ತು. ಸದ್ಯ ಸೀಕ್ವೆಲ್ ಬಗ್ಗೆ ಭಾರೀ ನಿರೀಕ್ಷೆಯಿದೆ. ಆದರೆ ಸದ್ಯಕ್ಕೆ ಸಿನಿಮಾ ಬಗ್ಗೆ ದೊಡ್ಡಮಟ್ಟದಲ್ಲಿ ಹೈಪ್ ಕ್ರಿಯೇಟ್ ಆಗಿಲ್ಲ.

'ಪುಷ್ಪ-2' ಚಿತ್ರದ 2 ಹಾಡುಗಳು ಸಿನಿರಸಿಕರ ಮನಗೆದ್ದಿದೆ. ಆದರೆ ಟೀಸರ್‌ಗಳು ಸದ್ದು ಮಾಡಲಿಲ್ಲ. ಮುಂದಿನ ದಿನಗಳಲ್ಲಿ ಟ್ರೈಲರ್ ರಿಲೀಸ್ ಮಾಡಿ ಪ್ರೇಕ್ಷಕರ ಗಮನ ಸೆಳೆಯುವ ಲೆಕ್ಕಾಚಾರ ನಡೀತಿದೆ. ದೊಡ್ಡಮಟ್ಟದಲ್ಲೇ ಸಿನಿಮಾ ಪ್ರಮೋಷನ್, ರಿಲೀಸ್ ಪ್ಲ್ಯಾನ್ ನಡೀತಿದೆ. ಪ್ರೀ ರಿಲೀಸ್ ಬ್ಯುಸಿನೆಸ್ 1000 ಕೋಟಿ ರೂ. ದಾಟಿದೆ ಎಂದು ಹೇಳಲಾಗ್ತಿದೆ. ಭಾರೀ ಮೊತ್ತಕ್ಕೆ ಚಿತ್ರದ ವಿತರಣೆ ಹಕ್ಕು ಬಿಕರಿಯಾಗಿದೆ.

Pushpa-2 will be releasing in karnataka more then KGF-2 says distributor

ಇತ್ತೀಚೆಗೆ 'ಪುಷ್ಪ-2' ಚಿತ್ರತಂಡ ಸುದ್ದಿಗೋಷ್ಠಿ ನಡೆಸಿ ಚಿತ್ರದ ಬಗ್ಗೆ ಮಾಹಿತಿ ನೀಡಿದೆ. ಮುಖ್ಯವಾಗಿ ಚಿತ್ರದ ವಿತರಕರು ಭಾಗವಹಿಸಿ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ಇನ್ನು 'ಪುಷ್ಪ-3' ಬಗ್ಗೆಯೂ ನಿರ್ಮಾಪಕರು ಸುಳಿವು ಕೊಟ್ಟಿದ್ದಾರೆ. ಉತ್ತರ ಭಾರತ, ಕರ್ನಾಟಕ, ತಮಿಳುನಾಡು, ಕೇರಳ ಹಾಗೂ ಓವರ್‌ಸೀಸ್ ರೈಟ್ಸ್ ಭಾರೀ ಮೊತ್ತಕ್ಕೆ ಮಾರಾಟವಾಗಿದೆ. ಎನ್‌ ಸಿನಿಮಾಸ್ ಸಂಸ್ಥೆ ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿದೆ.

'KGF' ಸರಣಿ ಸಿನಿಮಾಗಳನ್ನು ಉತ್ತರ ಭಾರತದಲ್ಲಿ ರಿಲೀಸ್ ಮಾಡಿ ಗೆದ್ದ AA ಫಿಲ್ಮ್ಸ್ ಸಂಸ್ಥೆ 'ಪುಷ್ಪ-2' ರೈಟ್ಸ್ ಕೂಡ ಕೊಂಡುಕೊಂಡಿದೆ. ಅನಿಲ್ ತದಾನಿ ಕೂಡ ಸುದ್ದಿಗೋಷ್ಠಿಯಲ್ಲಿ ಭಾಗಿ ಆಗಿದ್ದರು. ಇನ್ನು ಎಜಿಎಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆ ತಮಿಳುನಾಡು ಹಾಗೂ E4 ಎಂಟರ್‌ಟೈನ್‌ಮೆಂಟ್ ಸಂಸ್ಥೆ ಕೇರಳ ರೈಟ್ಸ್ ಸ್ವಂತ ಮಾಡಿಕೊಂಡಿವೆ.

Pushpa-2 will be releasing in karnataka more then KGF-2 says distributor

ಕರ್ನಾಟಕ ವಿತರಣೆ ಹಕ್ಕು ಕೊಂಡುಕೊಂಡಿರುವ ಲಕ್ಷ್ಮಿಕಾಂತ್ ರೆಡ್ಡಿ ಮಾತನಾಡಿ ದೊಡ್ಡಮಟ್ಟದಲ್ಲಿ ಸಿನಿಮಾ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ. ಈವರೆಗೆ ಕರ್ನಾಟಕದಲ್ಲಿ 'KGF-2' ದೊಡ್ಡದಾಗಿ ಬಿಡುಗಡೆಯಾಗಿ ದಾಖಲೆ ಬರೆದಿದೆ. 'ಪುಷ್ಪ-2' ಮೂಲಕ ಅದನ್ನು ಮೀರಿಸುತ್ತೇವೆ ಎಂದು ಹೇಳಿದ್ದಾರೆ. ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

'ಪುಷ್ಪ-2' ಚಿತ್ರದ ಮೂಲಕ ಕರ್ನಾಟಕದಲ್ಲಿ ದೊಡ್ಡದಾಗಿ ಬ್ಯುಸಿನೆಸ್ ಮಾಡಿ ತೋರಿಸ್ತೀವಿ. ಈವರೆಗೆ ಕರ್ನಾಟಕದಲ್ಲಿ ಅತಿಹೆಚ್ಚು ಬ್ಯುಸಿನೆಸ್ ಅಂದ್ರೆ 90 ಕೋಟಿ ರೂ. ಆಗಿದೆ. ಅದನ್ನು ಮೀರಿಸಬೇಕು ಎನ್ನುವುದು 'ಪುಷ್ಪ-2' ನಿರ್ಮಾಪಕರ ಲೆಕ್ಕಾಚಾರ. ಕಂಡಿತ ಅದನ್ನು ಸಾಧಿಸಿ ತೋರಿಸುತ್ತೇವೆ. ಈವೆರೆಗೆ ಅತಿಹೆಚ್ಚು ಅಂದ್ರೆ 'KGF-2' ಸುಮಾರು 350 ಸಿಂಗಲ್ ಸ್ಕ್ರೀನ್‌ ಹಾಗೂ 80 ಮಲ್ಟಿಪ್ಲೆಕ್ಸ್‌ಗಳಲ್ಲಿ ಬಿಡುಗಡೆ ಆಗಿತ್ತು. 'ಪುಷ್ಪ-2' ಒಟ್ಟು 500 ಸ್ಕ್ರೀನ್‌ ಹಾಕಬೇಕು ಎಂದುಕೊಂಡಿದ್ದೇವೆ ಎಂದು ಲಕ್ಷ್ಮಿಕಾಂತ್ ರೆಡ್ಡಿ ಹೇಳಿದ್ದಾರೆ.

'KGF-2' ಮೊದಲ ದಿನ 28ರಿಂದ 30 ಕೋಟಿ ರೂ. ಕರ್ನಾಟಕದಲ್ಲಿ ಗಳಿಕೆ ಕಂಡಿತ್ತು. ಅದನ್ನು 'ಪುಷ್ಪ-2' ಮೀರಿಸಬೇಕು, ಕರ್ನಾಟಕದಲ್ಲಿ ಅಲ್ಲು ಅರ್ಜುನ್‌ ಅಂದ್ರೆ ಅಭಿಮಾನ ಹೆಚ್ಚು. 'ಪುಷ್ಪ' ಚಿತ್ರ ಒಂದೇ ಭಾಷೆಯಲ್ಲಿ ತೆರೆಗೆ ಬಂದಿತ್ತು. ಈಗ ಪಾರ್ಟ್‌-2 ಹಿಂದಿ, ಕನ್ನಡ ಎಲ್ಲಾ ಭಾಷೆಗಳಲ್ಲಿ ಬರುವುದರಿಂದ ಭಾರೀ ಬ್ಯುಸಿನೆಸ್ ಮಾಡುತ್ತದೆ ಎಂದು ಭಾವಿಸುತ್ತೇವೆ ಎಂದು ವಿತರಕರು ವಿವರಿಸಿದ್ದಾರೆ.

ಕನ್ನಡಕ್ಕೆ ಡಬ್ ಮಾಡಿ ಬಿಡುಗಡೆ ಮಾಡಿದರೆ ಮಾತ್ರ ನೋಡ್ತೀವಿ, ಬೆಂಬಲಿಸುತ್ತೀವಿ. ತೆಲುಗು, ಹಿಂದಿ ಹೇರಿಕೆ ಸಹಿಸಲ್ಲ ಎಂದು ಕನ್ನಡಿಗರು ಕಾಮೆಂಟ್ ಮಾಡುತ್ತಿದ್ದಾರೆ. ಸದ್ಯ ಲಕ್ಷ್ಮಿಕಾಂತ್ ರೆಡ್ಡಿ ಹೇಳಿಕೆ ವೈರಲ್ ಆಗುತ್ತಿದೆ. ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣದ 'ಪುಷ್ಪ'-2 ಚಿತ್ರದಲ್ಲಿ ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಸೇರಿ ದೊಡ್ಡ ತಾರಾಗಣವಿದೆ.

More from Filmibeat

English summary
Karnataka distributor Lakshmikanth reddy says he is planning to release Pushpa-2 in big way;
Read more about: allu arjun pushpa kgf
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X