ಮತ್ತೆ ಟೂ ಪೀಸ್‌ನಲ್ಲಿ ಕ್ಯಾಮರಾ ಮುಂದೆ ಅನು ಕಣ್ಣಾಮುಚ್ಚಾಲೆ: ಶೃಂಗಾರ ದೇವತೆ ಎಂದ ಅಭಿಮಾನಿಗಳು!

By ಫಿಲ್ಮಿಬೀಟ್ ಡೆಸ್ಕ್

ತೆಲುಗು ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಕಳೆದ ಕೆಲದಿನಗಳಿಂದ ಹಾಟ್ ಹಾಟ್ ಫೋಟೊ, ವಿಡಿಯೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ತೇಲಿಬಿಡುತ್ತಿದ್ದಾರೆ. ಇತ್ತೀಚೆಗೆ ಮಗನ ಹುಟ್ಟುಹಬ್ಬ, ಮದುವೆ ವಾರ್ಷಿಕೋತ್ಸವಕ್ಕೆ ಪತಿ, ಮಕ್ಕಳ ಜೊತೆ ದೇಶ ವಿದೇಶಗಳಲ್ಲಿ ಸುತ್ತಾಡಿದ್ದಾರೆ. ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಪೂಲ್, ಬೀಚ್‌ನಲ್ಲಿ ಸಖತ್ ಎಂಜಾಯ್ ಮಾಡಿದ್ದಾರೆ. ಅನು ಮಾದಕ ಸೌಂದರ್ಯಕ್ಕೆ ಅಭಿಮಾನಿಗಳು ಕಳೆದು ಹೋಗಿದ್ದಾರೆ.

ಎರಡು ಮಕ್ಕಳ ತಾಯಿಯಾದರೂ ಅನುಸೂಯಾ ಭಾರಧ್ವಜ್ ಶಿಲ್ಪದಂತೆ ಕಟೆದ ಸೌಂದರ್ಯದಿಂದ ಮೋಡಿ ಮಾಡುತ್ತಿದ್ದಾರೆ. ಇತ್ತೀಚೆಗೆ ವಿಜಯ್ ದೇವರಕೊಂಡ ನಟನೆಯ 'ಲೈಗರ್' ಸಿನಿಮಾ ಸೋಲಿನ ಬಗ್ಗೆ ಆಕೆ ಟ್ವೀಟ್ ಮಾಡಿ ವ್ಯಂಗ್ಯವಾಡಿದ್ದರು. ಈ ಕಾಮೆಂಟ್ ವೈರಲ್ ಆಗುತ್ತಿದ್ದಂತೆ ದೇವರಕೊಂಡ ಅಭಿಮಾನಿಗಳು ಆಕೆಯನ್ನು 'ಆಂಟಿ' ಟ್ರೋಲ್ ಎಂದು ಟ್ರೋಲ್ ಮಾಡಲು ಆರಂಭಿಸಿದ್ದರು. ಇದೇ ವಿಚಾರವನ್ನು ಸೋಶಿಯಲ್ ಮೀಡಿಯಾದಲ್ಲಿ ಅನು ವರ್ಸಸ್ ದೇವರಕೊಂಡ ಫ್ಯಾನ್ಸ್ ಕಿರಿಕ್ ತಾರಕ್ಕೇರಿತ್ತು.

Pushpa Actress Anasuya Bharadwaj Goes Bold In A white Bikini, Hot Video Goes Viral

ಇದೀಗ ಮತ್ತೆ ಬಿಕಿನಿ ತೊಟ್ಟು ಅನಸೂಯ ಸದ್ದು ಮಾಡ್ತಿದ್ದಾರೆ. ಕೆಲ ದಿನಗಳ ಹಿಂದೆ ಕಪ್ಪು, ಹಸಿರು ಬಣ್ಣದ ಬಿಕಿನಿಯಲ್ಲಿ ಪತಿ ಹಾಗೂ ಮಕ್ಕಳ ಜೊತೆ ಸ್ವಿಮ್ಮಿಂಗ್ ಪೂಲ್‌ನಲ್ಲಿ ಅನು ಕಾಣಿಸಿಕೊಂಡಿದ್ದರು. ಇದೀಗ ಬಿಳಿ ಬಣ್ಣದ ಬಿಕಿನಿ ತೊಟ್ಟು ಸಾಗರ ತೀರದಲ್ಲಿ ಮೋಜು ಮಸ್ತಿ ಮಾಡಿದ್ದಾರೆ. ತುಂಡುಡುಗೆಯಲ್ಲಿ ಕ್ಯಾಮರಾ ಮುಂದೆ ಮಾದಕ ಮೈಮಾಟ ಪ್ರದರ್ಶಿಸಿದ್ದಾರೆ. ಆ ಫೋಟೊ, ವಿಡಿಯೋಗಳನ್ನು ಒಂದೊಂದಾಗಿ ಶೇರ್ ಮಾಡುತ್ತಿದ್ದಾರೆ.

ಕ್ಯಾಮರಾ ಮುಂದೆ ಕಣ್ಣಾಮುಚ್ಚಾಲೆ

ನಟಿ, ನಿರೂಪಕಿ ಅನಸೂಯ ಭಾರಧ್ವಜ್ ಬಿಕಿನಿ ತೊಟ್ಟು ಕಾಣಿಸಿಕೊಂಡಿರುವುದೇನೋ ನಿಜ. ಆದರೆ ಈಜುಡುಗೆಯಲ್ಲಿ ಕ್ಯಾಮರಾ ಮುಂದೆ ನಿಂತು ಸಂಪೂರ್ಣವಾಗಿ ಪೋಸ್ ಕೊಟ್ಟಿರುವ ಫೋಟೊಗಳನ್ನು ಆಕೆ ಶೇರ್ ಮಾಡಿಲ್ಲ. ಬದಲಿಗೆ ಕ್ಯಾಮರಾ ಮುಂದೆ ಅತ್ತ ಇತ್ತ ಸುಳಿದಾಡುತ್ತಾ, ಟೂ ಪೀಸ್‌ನಲ್ಲಿ ಕಂಡು ಕಾಣದಂತೆ ದರ್ಶನ ಕೊಟ್ಟಿದ್ದಾರೆ. ಇದೀಗ ಅಂತದ್ದೇ ಮತ್ತೊಂದು ವಿಡಿಯೋ ಶೇರ್ ಮಾಡಿದ್ದಾರೆ.

ಮಾದಕ ಮೈಮಾಟ ಪ್ರದರ್ಶನ

ಹೊಸ ವಿಡಿಯೋದಲ್ಲಿ ಬಿಕಿನಿ ತೊಟ್ಟು, ಮೇಲೊಂದು ಬಟ್ಟೆ ಸುತ್ತಿಕೊಂಡು ಬೀಚ್ ನಡುವಿನ ಮರದ ಸೇತುವೆ ಮೇಲೆ ಅನಸೂಯ ಅಡ್ಡಾಡಿದ್ದಾರೆ. ಸನ್‌ಗ್ಲಾಸ್ ಧರಿಸಿ ಕ್ಯಾಮರಾ ಕಡೆ ವಾರೆ ನೋಟ ಬೀರುತ್ತಾ ಪಡ್ಡೆ ಹುಡುಗರ ನಿದ್ದೆ ಕೆಡಿಸಿದ್ದಾರೆ. ಸದ್ಯ ಈ ವಿಡಿಯೋಗೆ ಲೈಕ್ಸ್‌, ಕಾಮೆಂಟ್ಸ್ ಮೂಲಕ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಕೆಲವರಂತೂ ನಿಮ್ಮ ಸೌಂದರ್ಯಕ್ಕೆ ಮಾರ ಹೋದೆವು, ನೀವು ಶೃಂಗಾರ ದೇವತೆಯಂತೆ ಕಾಣುತ್ತಿದ್ದೀರಾ ಅಂತೆಲ್ಲಾ ಕಾಮೆಂಟ್ ಮಾಡ್ತಿದ್ದಾರೆ.

Pushpa Actress Anasuya Bharadwaj Goes Bold In A white Bikini, Hot Video Goes Viral

ಎದೆಯ ಮೇಲಿನ ಟ್ಯಾಟೂ

ಅನುಸೂಯ ತಮ್ಮ ಎದೆ ಹಾಗೂ ಕೈ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆಕೆಯ ಪತಿಯ ಹೆಸರು ಸುಶಾಂಕ್ ಭಾರಧ್ವಜ್. ಆದರೆ ಅವರಿಗೆ ನಿಕ್ಕು ಎನ್ನುವ ಮುದ್ದು ಹೆಸರು ಇದೆ. ಎಂಗೇಜ್‌ಮೆಂಟ್ ಆಗಿ ಒಂದೂವರೆ ವರ್ಷದ ನಂತರ ಮದುವೆ ಆಗಿದ್ದರಂತೆ. ಹಾಗಾಗಿ ಮೊದಲ ಎಂಗೇಜ್‌ಮೆಂಟ್ ಆನಿವರ್ಸರಿ ಸಮಯದಲ್ಲಿ ಈ ರೀತಿ ಪತಿಯ ಮುದ್ದು ಹೆಸರನ್ನು ಎದೆ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾಗಿ ಆಕೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದರು.

ತೆಲುಗು ಸಿನಿಮಾಗಳಲ್ಲಿ ಬ್ಯುಸಿ

ನಿರೂಪಕಿಯಾಗಿ ಮನರಂಜನಾ ಕ್ಷೇತ್ರಕ್ಕೆ ಅನಸೂಯ ಭಾರಧ್ವಜ್ ಎಂಟ್ರಿ ಕೊಟ್ಟರು. 'ಜಬರ್ದಸ್ತ್' ಕಾಮಿಡಿ ಶೋ ನಿರೂಪಕಿಯಾಗಿ ಜನಪ್ರಿಯತೆ ಗಳಿಸಿದರು. ನಂತರ ಸಿನಿಮಾಗಳನ್ನು ಸಣ್ಣಪುಟ್ಟ ಪಾತ್ರ ಮಾಡಲು ಅನು ಆರಂಭಿಸಿದ್ದರು. ರಾಮ್‌ಚರಣ್ ನಟನೆಯ 'ರಂಗಸ್ಥಳಂ' ಚಿತ್ರದಲ್ಲಿ ರಂಗಮತ್ತ ಪಾತ್ರ ಒಳ್ಳೆ ಹೆಸರು ತಂದುಕೊಟ್ಟಿತ್ತು. ನಂತರ ಹಲವು ಸಿನಿಮಾಗಳಲ್ಲಿ ನಟಿಸುತ್ತಾ ಬರ್ತಿದ್ದಾರೆ. 'ಪುಷ್ಪ' ಚಿತ್ರದಲ್ಲಿ ದಾಕ್ಷಾಯಿಣಿ ಎನ್ನುವ ನೆಗೆಟಿವ್ ರೋಲ್‌ನಲ್ಲಿ ಗಮನ ಸೆಳೆದಿದ್ದರು. ಈಗ ಕಿರುತೆರೆ ಬಿಟ್ಟು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

More from Filmibeat

English summary
Pushpa Actress Anasuya Bharadwaj Goes Bold In A white Bikini, Hot Video Goes Viral. her fans could not stop admiring her looks. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X