"ಇನ್ನು ಸಾಕಪ್ಪಾ, ಸೊಂಟ ಬಿದ್ದು ಹೋಗುತ್ತೆ.. 'ಸಾಮಿ ಸಾಮಿ' ಅಂತ ಕುಣಿಯಲ್ಲ": ರಶ್ಮಿಕಾ ಮಂದಣ್ಣ

By ಫಿಲ್ಮಿಬೀಟ್ ಡೆಸ್ಕ್

'ಪುಷ್ಪ' ಚಿತ್ರದ 'ಸಾಮಿ ಸಾಮಿ' ಸಾಂಗ್ ಯಾವ ರೇಂಜಿಗೆ ಸೂಪರ್ ಹಿಟ್ ಆಯ್ತು ಅನ್ನೋದು ಗೊತ್ತೇಯಿದೆ. ನಟಿ ರಶ್ಮಿಕಾ ಕೆಂಪು- ಹಸಿರು ಲಂಗಾ ದಾವಣಿಯಲ್ಲಿ ಬಿಂದಾಸ್ ಹೆಜ್ಜೆ ಹಾಕಿ ರಂಗೇರಿಸಿದ್ದರು. ರಶ್ಮಿಕಾ ಹೋದಲ್ಲಿ ಬಂದಲ್ಲಿ ಇದೇ ಸಾಂಗ್‌ಗೆ ಹೆಜ್ಜೆ ಹಾಕುವಂತೆ ಕೇಳುತ್ತಿದ್ದರು. ಆಕೆ ಕೂಡ ಪದೇ ಪದೇ ಸೊಂಟ ಬಳುಕಿಸಿ ಸುಸ್ತಾಗಿದ್ದಾರೆ. ಇನ್ನು ಆಗಲ್ಲಪ್ಪ ಎಂದಿದ್ದಾರೆ.

2021ರ ಡಿಸೆಂಬರ್‌ನಲ್ಲಿ 'ಪುಷ್ಪ' ಸಿನಿಮಾ ರಿಲೀಸ್ ಆಗಿ ಬ್ಲಾಕ್ ಬಸ್ಟರ್ ಹಿಟ್ ಆಗಿತ್ತು. ಅದಕ್ಕೂ ಮುನ್ನ ದೇವಿಶ್ರೀ ಪ್ರಸಾದ್ ಮ್ಯೂಸಿಕ್‌ನಲ್ಲಿ ಬಂದ 'ಸಾಮಿ ಸಾಮಿ' ಸಾಂಗ್ ಸೆನ್ಸೇಷನ್ ಕ್ರಿಯೇಟ್ ಮಾಡಿತ್ತು. ಶೇಖರ್ ಮಾಸ್ಟರ್ ಕೊರಿಯೋಗ್ರಫಿಯಲ್ಲಿ ಒಂದಷ್ಟು ಡ್ಯಾನ್ಸರ್ಸ್ ರಶ್ಮಿಕಾ ಜೊತೆ ಹೆಜ್ಜೆ ಹಾಕಿದ್ದರು. ಬಹಳ ಅದ್ಧೂರಿಯಾಗಿ ಸಾಂಗ್ ಶೂಟ್ ಮಾಡಿದ್ದರು. ಚಿತ್ರದ ಹುಕ್ ಬೀಟ್‌ಗೆ ರಶ್ಮಿಕಾ ಸೊಂಟವನ್ನು ಓರೆಯಾಗಿ ಬಗ್ಗಿಸಿ ಸ್ಟೆಪ್ ಹಾಕಿದ್ದರು. ಈ ಹುಕ್ ಸ್ಟೆಪ್ ವೈರಲ್ ಆಗಿತ್ತು.

Pushpa Actress Rashmika Mandanna reveals why she wont dance to Saami Saami ever again

ನೋಡೊಕೆ ಸಿಂಪಲ್ ಅನ್ನಿಸಿದರೂ ಈ ಸ್ಟೆಪ್ ಅಷ್ಟು ಸುಲಭ ಅಲ್ಲ. ಆದರೆ ರಶ್ಮಿಕಾ ಡ್ಯಾನ್ಸ್ ಮೂವ್ಸ್ ನೋಡಿ ಸಿನಿರಸಿಕರು ಫಿದಾ ಆಗಿದ್ದರು. ಇನ್ಮುಂದೆ ಈ ತರ ಡ್ಯಾನ್ಸ್ ಮಾಡೋದು ಕಷ್ಟ ಎಂದು ಸಾನ್ವಿ ಈಗ ಹೇಳಿದ್ದಾರೆ. ಇತ್ತೀಚೆಗೆ ಕೊಡಗಿನ ಕುವರಿ ಟ್ವಿಟ್ಟರ್‌ನಲ್ಲಿ ಅಭಿಮಾನಿಗಳು ಜೊತೆ ಸಂಭಾಷಣೆ ನಡೆಸಿದ್ದಾರೆ. ರಶ್‌ಅವರ್(#RushHour ) ಹೆಸರಿನಲ್ಲಿ ಅಭಿಮಾನಿಗಳ ಪ್ರಶ್ನೆಗಳಿಗೆ ಉತ್ತರ ಕೊಟ್ಟಿದ್ದಾರೆ. ಈ ವೇಳೆ ಅಭಿಮಾನಿಯೊಬ್ಬರು ನಿಮ್ಮೊಟ್ಟಿಗೆ 'ಸಾಮಿ ಸಾಮಿ' ಸಾಂಗ್‌ಗೆ ಡ್ಯಾನ್ಸ್ ಮಾಡುವ ಬಯಕೆ ವ್ಯಕ್ತಪಡಿಸಿದ್ದಾರೆ.

ಅಭಿಮಾನಿಯ ಬಯಕೆ ಬಗ್ಗೆ ಮಾತನಾಡಿರುವ ರಶ್ಮಿಕಾ, "ಸಾಮಿ ಸಾಮಿ ಸ್ಟೆಪ್ ಈಗಾಗಲೇ ಸಾಕಷ್ಟು ಬಾರಿ ಮಾಡಿದ್ದೀನಿ. ಇದೇ ತರ ಮಾಡುತ್ತಿದ್ದರೆ ವಯಸ್ಸಾದಂತೆ ನನಗೆ ಬೆನ್ನು ನೋವು ಸಮಸ್ಯೆ ಎದುರಾಗಬಹುದು. ಪ್ರತಿ ಸಲ ಇದೇ ಡ್ಯಾನ್ಸ್ ಯಾಕೆ ಕೇಳ್ತೀರಾ? ನಾವು ಭೇಟಿ ಆದಾಗ ಬೇರೆ ಏನಾದರೂ ಸ್ಟೆಪ್ ಹಾಕೋಣ" ಎಂದು ಹೇಳಿದ್ದಾರೆ. ಸಸ್ಯ ಈ ಕಾಮೆಂಟ್ ವೈರಲ್ ಆಗಿದೆ. ಹೀಗೆ ಅಭಿಮಾನಿಗಳು ಕೇಳಿದ ಸಾಕಷ್ಟು ಪ್ರಶ್ನೆಗಳಿಗೆ ರಶ್ಮಿಕಾ ಉತ್ತರಿಸಿದ್ದಾರೆ.

Pushpa Actress Rashmika Mandanna reveals why she wont dance to Saami Saami ever again

ಮತ್ತೊಬ್ಬ ಅಭಿಮಾನಿ ನಿಮ್ಮ ಫೇವರಿಟ್ ಸೌತ್ ಇಂಡಿಯನ್ ಫುಡ್ ಯಾವುದು ಎಂದು ಕೇಳಿದ್ದಾರೆ. "ಅನ್ನದ ಜೊತೆಗೆ ಸಾಂಬರ್, ರಸಂ, ಪಪ್ಪು, ಮೊಸರು ಯಾವುದಾದರೂ ಸರಿ, ಅನ್ನ ಮಾತ್ರ ಕಡ್ಡಾಯವಾಗಿ ಇರಬೇಕು ಎಂದಿದ್ದಾರೆ. ಇನ್ನು ನೆಗೆಟಿವ್ ಕಾಮೆಂಟ್‌ಗಳನ್ನು ಎದುರಿಸುವುದು ಹೇಗೆ ಎಂದು ಕೇಳಿದ್ದಕ್ಕೆ "ಅಪರಿಮಿತ ಪ್ರೀತಿ ಹಂಚಿದರೆ ನೆಗೆಟಿವ್ ಪಾಸಿಟಿವ್ ಆಗಿ ಬದಲಾಗುತ್ತದೆ" ಎಂದಿದ್ದಾರೆ. ದಳಪತಿ ವಿಜಯ್ ಬಗ್ಗೆ ಒಂದು ಮಾತಲ್ಲಿ ಹೇಳಿ ಅಂದರೆ 'ಲವ್' ಎಂದು ಕಾಮೆಂಟ್ ಮಾಡಿದ್ದಾರೆ. ದಳಪತಿ ಜೊತೆ ಮತ್ತೆ ಸಿನಿಮಾ? ಎಂದಾಗ ಇನ್ನು ಒಂದು ಸಿನಿಮಾ ಮಾಡಿ 3 ತಿಂಗಳು ಕಳೆದಿಲ್ಲ, ಆಗ್ಲೇನಾ? ಎಂದಿದ್ದಾರೆ.

ನಿಮ್ಮ ಸಹೋದರಿ ಷಿಮಾನ್ ಹೇಗಿದ್ದಾರೆ ಎನ್ನುವ ಪ್ರಶ್ನೆಗೆ ಎಮೋಷನಲ್ ಆಗಿರುವ ರಶ್ಮಿಕಾ "ಆಕೆಯಿಂದ ದೂರ ಇದ್ದಾಗಲೆಲ್ಲಾ ಬಹಳ ಮಿಸ್ ಮಾಡಿಕೊಳ್ಳುತ್ತಿರುತ್ತೀನಿ. ನೋಡ್ತಾ ನೋಡ್ತಾ ಅವಳು ಬೇಗ ಬೇಗ ಬೆಳೆಯುತ್ತಿದ್ದಾಳೆ. ನಾಲ್ಕನೇ ತರಗತಿಯಿಂದ 5ನೇ ತರಗತಿಗೆ ಹೋಗುತ್ತಿದ್ದಾಳೆ. ಅವಳ ಸ್ಕೂಲ್ ಪರೀಕ್ಷೆ ನಡೀತಿದೆ. ಆಕೆಗೆ ಎಲ್ಲರೂ ಆಲ್‌ಬೆಸ್ಟ್ ಹೇಳಿ" ಎಂದು ರಶ್ಮಿಕಾ ಬರೆದುಕೊಂಡಿದ್ದಾರೆ. ಸದ್ಯ ರಶ್ಮಿಕಾ 'ಪುಷ್ಪ'- 2 ಹಾಗೂ ಬಾಲಿವುಡ್‌ನ 'ಅನಿಮಲ್' ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಶೀಘ್ರದಲ್ಲೇ ಹೊಸ ಸಿನಿಮಾ ಘೋಷಿಸಲಿದ್ದಾರೆ.

More from Filmibeat

English summary
Pushpa Actress Rashmika Mandanna reveals why she won't dance to Saami Saami ever again. Recently she did a Rush Hour chat session to interact with her fans. know more.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X