ಆರ್‌ಆರ್‌ಆರ್‌ ರೀತಿ ವಿದೇಶದಲ್ಲಿ ಮೆರೆಯಲು ಹೋಗಿ ಬಾಡಿದ 'ಪುಷ್ಪ'; ಪ್ರಚಾರದ ದುಡ್ಡಾದ್ರೂ ಬಂತಾ?

ಚಿತ್ರರಂಗದಲ್ಲಿ ಹಲವಾರು ರೀತಿಯ ವಿಭಿನ್ನ ಟ್ರೆಂಡ್‌ಗಳನ್ನು ಹುಟ್ಟುಹಾಕಿ ಇತರರಿಗೆ ಮಾದರಿಯಾಗಿದ್ದ ಎಸ್ ಎಸ್ ರಾಜಮೌಳಿ ಈ ವರ್ಷ ಬಿಡುಗಡೆಗೊಂಡ ತಮ್ಮ ಆರ್ ಆರ್ ಆರ್ ಚಿತ್ರದ ಮೂಲಕವೂ ಸಹ ಮತ್ತೊಂದು ವಿಭಿನ್ನ ಟ್ರೆಂಡ್ ಅನ್ನು ಹುಟ್ಟುಹಾಕಿದ್ದಾರೆ. ಹೌದು, ಮೊದಲಿಗೆ ಭಾರತದ ಪ್ರಮುಖ ಭಾಷೆಗಳಲ್ಲಿ ಬಿಡುಗಡೆಗೊಂಡು 1200 ಕೋಟಿ ಗಳಿಸಿ ಅಬ್ಬರಿಸಿದ್ದ ತಮ್ಮ ಆರ್ ಆರ್ ಆರ್ ಚಿತ್ರವನ್ನು ಜಾಪನೀಸ್ ಭಾಷೆಗೆ ಡಬ್ ಮಾಡಿ ಜಪಾನ್‌ನಲ್ಲಿ ದೊಡ್ಡದಾಗಿ ಬಿಡುಗಡೆ ಮಾಡಲಾಗಿತ್ತು.

ಆರ್ ಆರ್ ಆರ್ ಚಿತ್ರತಂಡದ ಈ ಯೋಜನೆ ಬೃಹತ್ ಯಶಸ್ಸು ಸಾಧಿಸಿತು. ಜಪಾನ್‌ನ ವಿವಿಧ ಪ್ರಮುಖ ನಗರಗಳಲ್ಲಿ ಆರ್ ಆರ್ ಆರ್ ಚಿತ್ರವನ್ನು ವೀಕ್ಷಿಸಲು ಸಿನಿ ರಸಿಕರು ಮುಗಿಬಿದ್ದಿದ್ದರು. ಈ ಮೂಲಕ ಮೂವತ್ತಕ್ಕೂ ಹೆಚ್ಚು ದಿನಗಳ ಕಾಲ ಜಪಾನ್‌ನಲ್ಲಿ ಪ್ರದರ್ಶನ ಕಂಡ ಆರ್ ಆರ್ ಆರ್ ಅಲ್ಲಿಯೂ ಸಹ ಕೋಟ್ಯಂತರ ರೂಪಾಯಿಗಳನ್ನು ಬಾಚಿಕೊಂಡಿತು.

ಹೀಗೆ ವಿದೇಶದಲ್ಲಿ ಆರ್ ಆರ್ ಆರ್ ಅಬ್ಬರಿಸಿದ ಬೆನ್ನಲ್ಲೇ ಅಲ್ಲು ಅರ್ಜುನ್ ಹಾಗೂ ಸುಕುಮಾರ್ ಕಾಂಬಿನೇಶನ್‌ನ ಪುಷ್ಪ ಚಿತ್ರವನ್ನೂ ಕೂಡ ಇದೇ ಮಾದರಿಯಲ್ಲಿ ರಷ್ಯಾದಲ್ಲಿ ಬಿಡುಗಡೆಗೊಳಿಸಲಾಯಿತು. ಅಲ್ಲು ಅರ್ಜುನ್, ಸುಕುಮಾರ್‌ ಹಾಗೂ ರಶ್ಮಿಕಾ ಮಂದಣ್ಣ ಸೇರಿದಂತೆ ಪುಷ್ಪ ಚಿತ್ರದ ಬಹುತೇಕ ಸದಸ್ಯರು ರಷ್ಯಾಗೆ ಭೇಟಿ ನೀಡಿ ಚಿತ್ರದ ಪ್ರಚಾರವನ್ನು ಮಾಡಿದರು. ಆದರೆ ಪುಷ್ಪ ಚಿತ್ರ ಮಾತ್ರ ರಷ್ಯಾದಲ್ಲಿ ಸದ್ದು ಮಾಡುವಲ್ಲಿ ಯಶಸ್ವಿಯಾಗಲೇ ಇಲ್ಲ. ರಷ್ಯಾದಲ್ಲಿ ಚಿತ್ರ ಸೋತದ್ದರ ಬಗ್ಗೆ ಸದ್ಯ ಟ್ರೋಲ್ ಕೂಡ ಆರಂಭಗೊಂಡಿವೆ. ಅತ್ತ ರಷ್ಯಾದ ರಾಜಧಾನಿ ಮಾಸ್ಕೊದಲ್ಲಿಯೇ ಪುಷ್ಪ ಚಿತ್ರವನ್ನು ತೆಗೆದು ಹಾಕಲಾಗಿದೆ.

ಕಲೆಕ್ಷನ್ ಬಗ್ಗೆ ಇಲ್ಲ ಅಪ್‌ಡೇಟ್!

ಕಲೆಕ್ಷನ್ ಬಗ್ಗೆ ಇಲ್ಲ ಅಪ್‌ಡೇಟ್!

ಪುಷ್ಪ ಚಿತ್ರ ರಷ್ಯಾದಲ್ಲಿ ಮಕಾಡೆ ಮಲಗಿದೆ ಎಂದು ಹೇಳಲು ಕಾರಣ ಚಿತ್ರತಂಡ ಚಿತ್ರ ಬಿಡುಗಡೆಯಾದ ನಂತರ ಕಲೆಕ್ಷನ್ ಕುರಿತು ಯಾವುದೇ ಮಾಹಿತಿಯನ್ನು ನೀಡದೇ ಇರುವುದು. ಹೌದು, ರಷ್ಯಾದಲ್ಲಿ ಪುಷ್ಪ ಬಿಡುಗಡೆಯಾಗುವ ಮುನ್ನ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಪೋಸ್ಟ್ ಹಂಚಿಕೊಂಡಿರುವ ಚಿತ್ರತಂಡ ಬಿಡುಗಡೆಯಾದ ನಂತರ ಕಲೆಕ್ಷನ್ ಬಗ್ಗೆಯೂ ಒಂದೇ ಒಂದು ಪೋಸ್ಟ್ ಅನ್ನೂ ಸಹ ಹಂಚಿಕೊಂಡಿಲ್ಲ ಹಾಗೂ ಚಿತ್ರ ಒಳ್ಳೆಯ ಪ್ರದರ್ಶನವನ್ನು ಕಾಣುತ್ತಿದೆ ಎಂಬ ಪೋಸ್ಡರ್ ಅನ್ನೂ ಕೂಡ ಶೇರ್ ಮಾಡಿಲ್ಲ. ಈ ಮೂಲಕ ಚಿತ್ರ ರಷ್ಯಾದಲ್ಲಿ ಸೋತು ಸುಣ್ಣವಾಗಿದೆ ಎನ್ನುವುದಂತೂ ಖಚಿತವಾಗಿದೆ.

ಪ್ರಚಾರಕ್ಕೆ ಹಾಕಿದ್ದ ಹಣವಾದ್ರೂ ಬಂತಾ?

ಪ್ರಚಾರಕ್ಕೆ ಹಾಕಿದ್ದ ಹಣವಾದ್ರೂ ಬಂತಾ?

ಇನ್ನು ಪುಷ್ಪ ಚಿತ್ರತಂಡ ರಷ್ಯಾದಲ್ಲಿ ಪ್ರಚಾರ ನಡೆಸಲೆಂದೇ ಸುಮಾರು ಐದರಿಂದ ಏಳು ಕೋಟಿ ಖರ್ಚು ಮಾಡಿತ್ತು ಎಂದು ವರದಿಯಾಗಿತ್ತು. ಸದ್ಯ ಚಿತ್ರತಂಡ ಸೈಲೆಂಟ್ ಆಗಿರುವುದನ್ನು ನೋಡಿದರೆ ಚಿತ್ರದ ಪ್ರಚಾರಕ್ಕಾಗಿ ಖರ್ಚು ಮಾಡಲಾಗಿದ್ದ ಹಣವಾದ್ರೂ ವಾಪಸ್ ಬಂತಾ ಎಂಬ ಪ್ರಶ್ನೆ ಮೂಡದೇ ಇರದು. ಈ ವಿಷಯದ ಕುರಿತಾಗಿ ಸಾಮಾಜಿಕ ಜಾಲತಾಣದಲ್ಲಿಯೂ ಸಹ ಚರ್ಚೆಗಳು ನಡೆಯುತ್ತಿದ್ದು, ಆರ್ ಆರ್ ಆರ್ ರೀತಿ ವಿದೇಶಿ ನೆಲದಲ್ಲಿ ಮೆರೆಯಲು ಹೋದ ಪುಷ್ಪ ಮಕಾಡೆ ಮಲಗಿದೆ ಎಂದು ಟ್ರೋಲ್ ಆಗುತ್ತಿದೆ.

ಆರ್ ಆರ್ ಆರ್ ಗಳಿಸಿದ್ದೆಷ್ಟು?

ಆರ್ ಆರ್ ಆರ್ ಗಳಿಸಿದ್ದೆಷ್ಟು?

ಜಪಾನಿನಲ್ಲಿ ಬಿಡುಗಡೆಯಾಗಿ ಭರ್ಜರಿ ಪ್ರದರ್ಶನ ಕಂಡ ಆರ್ ಆರ್ ಚಿತ್ರ ಸುಮಾರು 24.10 ಕೋಟಿ ರೂಪಾಯಿಗಳನ್ನು ಗಳಿಕೆ ಮಾಡಿತ್ತು. ಈ ಮೂಲಕ ಜಪಾನಿನಲ್ಲಿ ಅತಿಹೆಚ್ಚು ಗಳಿಕೆ ಮಾಡಿದ ಭಾರತದ ಚಿತ್ರ ಎಂಬ ದಾಖಲೆಯನ್ನೂ ಸಹ ಆರ್ ಆರ್ ಆರ್ ಬರೆಯಿತು. ಈ ಹಿಂದೆ ರಜನಿಕಾಂತ್ ನಟನೆಯ ಮುತ್ತು ಚಿತ್ರ ಜಪಾನಿನಲ್ಲಿ 23.50 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಈ ದಾಖಲೆಯನ್ನು ಆರ್ ಆರ್ ಆರ್ ಮುರಿದು ಹಾಕಿದೆ.

More from Filmibeat

English summary
Pushpa failed to create magic like RRR in overseas and becomes huge flop in Russia . Read on
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X