ಪುಷ್ಪ ಪ್ಯಾನ್ ಇಂಡಿಯಾ ಆಗಿದ್ದು ರಾಜಮೌಳಿಯಿಂದಲೇ!
ಸದ್ಯ ಎಲ್ಲೆಲ್ಲೂ ಪುಷ್ಪ ಸಿನಿಮಾದ ಬಗ್ಗೆಯೇ ಮಾತು ಕತೆ ಶುರುವಾಗಿದೆ. ಪುಷ್ಪ ಸಿನಿಮಾ ಇಂದು (ಡಿಸೆಂಬರ್ 17) ತೆರೆಗೆ ಬಂದಿದೆ. ಬಹುಭಾಷೆಗಳಲ್ಲಿ ತೆರೆಗೆ ಬಂದಿದ್ದು, ಇದು ಪ್ಯಾನ್ ಇಂಡಿಯಾ ಸಿನಿಮಾ. ಹಾಗಾಗಿ ದೇಶಾದ್ಯಂತ ಈ ಚಿತ್ರಕ್ಕೆ ಸಿಕ್ಕಾಪಟ್ಟೆ ಹೈಪ್ ಕ್ರಿಯೇಟ್ ಆಗಿದೆ. ಈ ಚಿತ್ರದ ಬಗ್ಗೆ ನಿರ್ದೇಶಕ ಸುಕುಮಾರ್ ವಿಶೇಷವಾದ ಸಂಗತಿಯೊಂದನ್ನು ಹಂಚಿಕೊಂಡಿದ್ದಾರೆ.
ಪುಷ್ಪ ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ ಆಗಲು ಕಾರಣ ನಿರ್ದೇಶಕ ರಾಜಮೌಳಿ ಅವರಂತೆ. ಈ ವಿಚಾರವನ್ನು ಇತ್ತೀಚೆಗೆ ಸುದ್ದಿಗೋಷ್ಟಿಯಲ್ಲಿ ನಿರ್ದೇಶಕ ಸುಕುಮಾರ್ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಪುಷ್ಪ ಸಿನಿಮಾವನ್ನು ಪ್ಯಾನ್ ಇಂಡಿಯಾ ಎಂದು ಪ್ರಕಟ ಮಾಡಿದ ಬಳಿಕ, ಈ ಯೋಜನೆಯನ್ನು ಕೈ ಬಿಡಲಾಗಿತ್ತಂತೆ. ಪುಷ್ಪ ಸಿನಿಮಾವನ್ನು ಕೇವಲ ತೆಲುಗಿನಲ್ಲಿ ಬಿಡುಗಡೆ ಮಾಡಬೇಕು ಎಂದು ನಿರ್ಧರಿಸಲಾಗಿತ್ತಂತೆ. ಆದರೆ ಈ ವಿಚಾರ ಗೊತ್ತಾಗಿ ಚಿತ್ರ ತಂಡವನ್ನು ನಿರ್ದೇಶಕ ರಾಜಮೌಳಿ ಸಂಪರ್ಕಿಸಿದ್ದರಂತೆ.
ಈ ಬಗ್ಗೆ ಸುಕುಮಾರ್ ಹೇಳಿದ್ದು ಹೀಗೆ "ನಾವು ಪುಷ್ಪ ಸಿನಿಮಾವನ್ನು ಪ್ಯಾನ್ ಇಂಡಿಯಾ ಯೋಜನೆ ಇಂದ ಕೈ ಬಿಟ್ಟಿರುವುದು ರಾಜಮೌಳಿ ಅವರಿಗೆ ಹೇಗೋ ಗೊತ್ತಾಗಿದೆ. ಅವರೇ ನಮಗೆ ಕರೆ ಮಾಡಿ ಈ ಬಗ್ಗೆ ವಿಚಾರಿಸಿದ್ದರು. ಪ್ಯಾನ್ ಇಂಡಿಯಾ ರಿಲೀಸ್ ಮಾಡುವ ಯೋಜನೆ ಕೈ ಬಿಡಬೇಡಿ. ದೇಶದ ಹಲವು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಮಾಡಿ. ಅದು ಪ್ಯಾನ್ ಇಂಡಿಯಾ ಆಗುತ್ತದೆ. ಅದಕ್ಕೆ ಹೆಚ್ಚಿನದನ್ನು ನೀವು ಏನು ಮಾಡಬೇಕಾಗಿಲ್ಲ ಎಂದರು. ಅವರ ಫೋನ್ ಕಾಲ್ ಬಳಿಕ ನಾವು ಪುಷ್ಪ ಚಿತ್ರವನ್ನು ಪ್ಯಾನ್ ಇಂಡಿಯಾ ಸಿನಿಮಾವನ್ನಾಗಿ ಮಾಡಲು ಮುಂದಾದೆವು. ರಾಜಮೌಳಿ ಅವರು ಅಂದು ಮಾಡಿದ ಒಂದು ಫೋನ್ ಕಾಲ್ ಈಗ ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಆಗಿದೆ" ಎಂದರು ಸುಕುಮಾರ್.

ಸದ್ಯ ಪುಷ್ಪ ಹಲವು ಭಾಷೆಗಳಲ್ಲಿ ತೆರೆಗೆ ಬರ್ತಿದೆ. ಅದಕ್ಕಾಗಿಯೇ ಇಡೀ ಚಿತ್ರ ತಂಡ ದೇಶದಾದ್ಯಂತ ಸುತ್ತಿ ಸಿನಿಮಾದ ಪ್ರಚಾರವನ್ನು ಮಾಡಿತ್ತು. ಹೈದ್ರಾಬಾದ್ ಬಳಿಕ, ಚೆನ್ನೈ, ಬೆಂಗಳೂರು, ಕೊಚ್ಚಿ, ಮುಂಬೈನಲ್ಲಿ ಸುದ್ದಿಗೋಷ್ಟಿ ನಡೆಸಿ ಚಿತ್ರತಂಡ ಪ್ರಚಾರ ಮಾಡಿತ್ತು. ಈಗ ಪುಷ್ಪ ಪ್ಯಾನ್ ಇಂಡಿಯಾ ಸಿನಿಮಾ ಎನ್ನುವ ಟೈಟಲ್‌ನೊಂದಿಗೆ ತೆರೆಗೆ ಬರ್ತಿದೆ. ಅಂತೂ ಕೇವಲ ತೆಲುಗಿನಲ್ಲಿ ರಿಲೀಸ್ ಆಗಬೇಕಿದ್ದ ಸಿನಿಮಾ ರಾಜಮೌಳಿ ಮಾತಿನಿಂದಾಗಿ ಪ್ಯಾನ್ ಇಂಡಿಯಾ ಸಿನಿಮಾ ಆಗಿ ತೆರೆಗೆ ಬರ್ತಿದೆ.


Click it and Unblock the Notifications











