'ಪುಷ್ಪ' ಸಿನಿಮಾದ ಫೈಟ್ ವಿಡಿಯೋ ಲೀಕ್: ಪ್ರಕರಣ ದಾಖಲಿಸಿದ ಚಿತ್ರತಂಡ

ಅಲ್ಲು ಅರ್ಜುನ್ ನಟಿಸಿರುವ 'ಪುಷ್ಪ' ಸಿನಿಮಾ ಭಾರಿ ನಿರೀಕ್ಷೆ ಮೂಡಿಸಿದೆ. ನಿರೀಕ್ಷೆಗೆ ತಕ್ಕಂತೆಯೇ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುವ ಭರವಸೆಯೊಂದಿಗೆ ಚಿತ್ರತಂಡ ಸಹ ಅದ್ಧೂರಿಯಾಗಿ ಸಿನಿಮಾವನ್ನು ನಿರ್ಮಿಸುತ್ತಿದೆ.

ಆದರೆ 'ಪುಷ್ಪ' ಸಿನಿಮಾಕ್ಕೆ ಸತತವಾಗಿ ಅಡೆ-ತಡೆಗಳು ಎದುರಾಗುತ್ತಲೇ ಇವೆ. ಕೊರೊನಾ ಕಾರಣದಿಂದ ಎರಡು ಬಾರಿ ಚಿತ್ರೀಕರಣ ಸ್ಥಗಿತವಾಯ್ತು. ಆ ನಂತರ ಚಿತ್ರತಂಡದ ಹಲವರಿಗೆ ಡೆಂಗ್ಯೂ ಆಗಿ ಸಮಸ್ಯೆ ಉಂಟಾಯಿತು. ಎಲ್ಲವನ್ನೂ ಮೀರಿ ಚಿತ್ರತಂಡ ಕೆಲಸ ಮಾಡುತ್ತಿರಬೇಕಾದರೆ ಸಿನಿಮಾದ ಕೆಲವು ದೃಶ್ಯಗಳನ್ನು ಯಾರೊ ಕಿಡಿಗೇಡಿಗಳು ಸಾಮಾಜಿಕ ಜಾಲತಾಣದಲ್ಲಿ ಲೀಕ್ ಮಾಡಿದ್ದಾರೆ.

'ಪುಷ್ಪ' ಸಿನಿಮಾದ ಫೈಟ್ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಎಡಿಟಿಂಗ್ ಅಥವಾ ಮಿಕ್ಸಿಂಗ್ ಮಾಡಬೇಕಾದ ತಂತ್ರಜ್ಞರ ತಂಡದಲ್ಲಿರುವವ ಯಾರೊ ವಿಡಿಯೋವನ್ನು ಲೀಕ್ ಮಾಡಿದ್ದಾರೆ ಎಂಬುದು ಗೊತ್ತಾಗಿತ್ತು, ಚಿತ್ರತಂಡ ಈಗಾಗಲೇ ಪ್ರಕರಣ ದಾಖಲಿಸಿದೆ.

18 ಸೆಕೆಂಡ್‌ನ ಫೈಟ್ ದೃಶ್ಯ ಲೀಕ್

18 ಸೆಕೆಂಡ್‌ನ ಫೈಟ್ ದೃಶ್ಯ ಲೀಕ್

18 ಸೆಕೆಂಡ್‌ನ ಫೈಟ್ ದೃಶ್ಯ ಇದೀಗ ಲೀಕ್ ಆಗಿದ್ದು ಅಲ್ಲು ಅರ್ಜುನ್ ಕಬ್ಬಿಣದ ಚೇರಿನಲ್ಲಿ ವಿಲನ್‌ಗೆ ಹೊಡೆಯುತ್ತಿರುವ ದೃಶ್ಯ ಇದಾಗಿದೆ. ಮಾಸ್ ಲುಕ್‌ನಲ್ಲಿ ಅಲ್ಲು ಅರ್ಜುನ್ ಚೇರ ಅನ್ನು ಕೊರಳಲ್ಲೇ ಹಿಡಿದು ಪಂಚೆ ಎತ್ತಿಕಟ್ಟಿ ವಿಲನ್‌ಗಳನ್ನು ಚೆಂಡಾಡುತ್ತಿರುವ ದೃಶ್ಯವನ್ನು ಈ ಲೀಕ್ಡ್ ವಿಡಿಯೋ ಒಳಗೊಂಡಿದೆ. ಲೀಕ್ಡ್ ವಿಡಿಯೋವನ್ನು ಎಡಿಟಿಂಗ್ ಯುನಿಟ್‌ಗೆ ಸಂಬಂಧಿಸಿದವರೇ ಲೀಕ್ ಮಾಡಿದ್ದಾರೆ ಎಂಬ ಅನುಮಾನಗಳು ವ್ಯಕ್ತವಾಗುತ್ತಿವೆ.

ಹೇಳಿಕೆ ಬಿಡುಗಡೆ ಮಾಡಿರುವ ಮೈತ್ರಿ ಮೂವೀಸ್

ಹೇಳಿಕೆ ಬಿಡುಗಡೆ ಮಾಡಿರುವ ಮೈತ್ರಿ ಮೂವೀಸ್

ಸಿನಿಮಾದ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಈ ಕುರಿತು ಹೇಳಿಕೆಯೊಂದನ್ನು ಪ್ರಕಟಿಸಿದ್ದು, ''ಮೈತ್ರಿ ಮೂವೀಸ್‌ಗೆ ಸೇರಿದ ಸಿನಿಮಾದ ವಿಡಿಯೋ ಮೆಟಿರಿಯಲ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಪುಷ್ಪ' ಸಿನಿಮಾದ ವಿಡಿಯೋ ಲೀಕ್ ಆಗಿರುವುದು ಬಹಳ ನಿರಾಶೆ ತಂದಿದೆ. ವಿಡಿಯೋ ಲೀಕ್ ಮಾಡಿರುವ ಘಟನೆಯನ್ನು ನಾವು ಖಂಡಿಸುತ್ತಿದ್ದೇವೆ. ಈ ಕುರಿತು ಈಗಾಗಲೇ ಸೈಬರ್ ಕ್ರೈಂ ಪೊಲೀಸರಿಗೆ ದೂರು ನೀಡಿದ್ದೇವೆ. ಯಾರು ಈ ಕಿಡಿಗೇಡಿತನದ ಕೆಲಸ ಮಾಡಿದ್ದಾರೊ ಅವರು ಭಾರತೀಯ ದೇಶದ ಕಾನೂನಿನ ಪ್ರಕಾರ ಶಿಕ್ಷೆಗೆ ಗುರಿಯಾಗುತ್ತಾರೆ'' ಎಂದು ಹೇಳಿದೆ.

ಈ ಹಿಂದೆಯೂ ವಿಡಿಯೋ ಲೀಕ್ ಆಗಿತ್ತು

ಈ ಹಿಂದೆಯೂ ವಿಡಿಯೋ ಲೀಕ್ ಆಗಿತ್ತು

ಈ ಹಿಂದೆಯೂ ಒಮ್ಮೆ 'ಪುಷ್ಪ' ಸಿನಿಮಾದ ವಿಡಿಯೋ ಲೀಕ್ ಆಗಿತ್ತು. 'ಪುಷ್ಪ' ಸಿನಿಮಾದ ಹಾಡೊಂದರ ಚಿತ್ರೀಕರಣದ ವಿಡಿಯೋ ಅದಾಗಿತ್ತು, ಶೂಟಿಂಗ್ ನೋಡಲು ಹೋಗಿದ್ದ ಅಭಿಮಾನಿಗಳು ಯಾರೊ ಆ ಹಾಡಿನ ದೃಶ್ಯಗಳನ್ನು ಚಿತ್ರೀಕರಿಸಿ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ವಿಡಿಯೋದಲ್ಲಿ ಅಲ್ಲು ಅರ್ಜುನ್, ಸಹ ನಟರೊಟ್ಟಿಗೆ ನರ್ತಿಸುವ ದೃಶ್ಯಗಳಿದ್ದವು. ಜೊತೆಗೆ ಹಾಡು ಸಹ ಅಸ್ಪಷ್ಟವಾಗಿ ಕೇಳುತ್ತಿತ್ತು. ಆವಾಗಲೂ ಚಿತ್ರತಂಡ ಸೈಬರ್ ಪೊಲೀಸರಿಗೆ ದೂರು ನೀಡಿತ್ತು. ಅದಾಗ್ಯೂ 'ಪುಷ್ಪ' ಸಿನಿಮಾದ ವಿಡಿಯೋ ಲೀಕ್‌ಗಳು ನಿಂತಿಲ್ಲ. ಇದರ ಮಧ್ಯೆ, ಸಿನಿಮಾದ 'ದಾಕ್ಕೊ-ದಾಕ್ಕೊ ಮೇಕ' ಹಾಡಿಗೆ ನೃತ್ಯ ಸಂಯೋಜಿಸಿರುವ ಗಣೇಶ್ ಆಚಾರ್ಯ ಸ್ವತಃ ಹಾಡಿನ ಚಿತ್ರೀಕರಣದ ವಿಡಿಯೋವನ್ನು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದರು. ಆ ನಂತರ ಅದನ್ನು ಡಿಲೀಟ್ ಮಾಡಿದರು. ಆದರೆ ಆ ವಿಡಿಯೋವನ್ನು ಸಹ ಕೆಲವರು ಸೇವ್ ಮಾಡಿಕೊಂಡು ವೈರಲ್ ಮಾಡಿದರು.

ಎರಡು ಭಾಗದಲ್ಲಿ ತೆರೆಗೆ ಬರುತ್ತಿರುವ ಸಿನಿಮಾ

ಎರಡು ಭಾಗದಲ್ಲಿ ತೆರೆಗೆ ಬರುತ್ತಿರುವ ಸಿನಿಮಾ

'ಪುಷ್ಪ' ಸಿನಿಮಾದಲ್ಲಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ ಮುಖ್ಯ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ಕನ್ನಡಿಗ ಡಾಲಿ ಧನಂಜಯ್, ಕಿಶೋರ್ ಸಹ ಮುಖ್ಯ ಪಾತ್ರಗಳಲ್ಲಿದ್ದಾರೆ. ಮುಖ್ಯ ವಿಲನ್ ಆಗಿ ಮಲಯಾಳಂ ಫಹಾದ್ ಫಾಸಿಲ್ ನಟಿಸುತ್ತಿದ್ದು, ಜಗಪತಿ ಬಾಬು ಹಾಗೂ ಕಮಿಡಿಯನ್ ಸುನಿಲ್ ಸಹ ವಿಲನ್‌ಗಳಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾವು ಎರಡು ಭಾಗಗಳಲ್ಲಿ ತೆರೆಗೆ ಬರಲಿದೆ. ಮೊದಲ ಭಾಗವು ಡಿಸೆಂಬರ್ 25ಕ್ಕೆ ಬಿಡುಗಡೆ ಆಗಲಿದೆ.

More from Filmibeat

English summary
Allu Arjun starer 'Pushpa' movie fight video leaked on Internet. Movie production house Mythri movie makers gave complaint to cyber crime police.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X