twitter
    For Quick Alerts
    ALLOW NOTIFICATIONS  
    For Daily Alerts

    'ಪುಷ್ಪ' ಬಿಡುಗಡೆಗೆ ಮುನ್ನವೇ ನೂರು ಕೋಟಿ ಕ್ಲಬ್‌ಗೆ ಎಂಟ್ರಿ, ಹೇಗೆ?

    |

    ಕೆಲ ವರ್ಷಗಳ ಮುಂಚೆ ನೂರು ಕೋಟಿ ಕ್ಲಬ್ ಎನ್ನುವುದು ಕೆವಲ ಬಾಲಿವುಡ್ ಸೂಪರ್ ಸ್ಟಾರ್‌ಗಳಿಗೆ ಎಂಬ ಮಾತಿತ್ತು. ಅದನ್ನು ಮೊದಲಿಗೆ ಪುಡಿ ಮಾಡಿದ್ದು ನಟ ರಜನೀಕಾಂತ್. ಆದರೆ ಇತ್ತೀಚೆಗೆ ದಕ್ಷಿಣ ಭಾರತದ ಸಿನಿಮಾಗಳಿಗೆ ನೂರು ಕೋಟಿ ಎಂಬುದು ಚಿಲ್ಲರೆ ಲೆಕ್ಕವಾಗಿಬಿಟ್ಟಿದೆ.

    ದಕ್ಷಿಣ ಭಾರತದ ಸಿನಿಮಾಗಳಿಗೆ ಬಹುದೊಡ್ಡ ಬೇಡಿಕೆ ಇತ್ತೀಚಿನ ಕೆಲ ವರ್ಷಗಳಲ್ಲಿ ಕುದುರಿದ್ದು, ಸಿನಿಮಾ ಬಿಡುಗಡೆ ಮುನ್ನವೇ 100 ಕೋಟಿ ಬ್ಯುಸಿನೆಸ್‌ ಅನ್ನು ದಕ್ಷಿಣ ಭಾರತದ ಸ್ಟಾರ್ ನಟರ ಸಿನಿಮಾಗಳು ಮಾಡುತ್ತಿವೆ.

    ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾ ಬಿಡುಗಡೆಗೆ ರೆಡಿಯಾಗಿದೆ. ದೊಡ್ಡ ಬಜೆಟ್‌ನ ಈ ಸಿನಿಮಾ ಈಗಾಗಲೇ 100 ಕೋಟಿಗೂ ಹೆಚ್ಚು ಬ್ಯುಸಿನೆಸ್ ಮಾಡಿಯಾಗಿದೆ. ಸಿನಿಮಾ ಬಿಡುಗಡೆಗೆ ಇನ್ನೂ ಮೂರು ದಿನ ಇರುವಾಗಲೇ ಮೊದಲ ದಿನದ ಮೊದಲ ಶೋನ ಬಹುತೇಕ ಟಿಕೆಟ್‌ಗಳು ಖಾಲಿಯಾಗಿವೆ. ಹಾಗಾಗಿ ಈ ಸಿನಿಮಾ ಮೊದಲ ದಿನದ ಕಲೆಕ್ಷನ್‌ನ ಈ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದೆ ಎಂದು ಪರಿಣಿತರು ಲೆಕ್ಕಾಚಾರ ಹಾಕಿದ್ದಾರೆ.

    ಆಂಧ್ರ-ತೆಲಂಗಾಣದಲ್ಲಿ 106 ಕೋಟಿಗೆ ಮಾರಾಟ

    ಆಂಧ್ರ-ತೆಲಂಗಾಣದಲ್ಲಿ 106 ಕೋಟಿಗೆ ಮಾರಾಟ

    ಆಂಧ್ರ ಹಾಗೂ ತೆಲಂಗಾಣದಲ್ಲಿ 'ಪುಷ್ಪ' ಸಿನಿಮಾದ ಬಿಡುಗಡೆ ಹಕ್ಕು ಬರೋಬ್ಬರಿ 106 ಕೋಟಿ ರುಪಾಯಿಗೆ ಮಾರಾಟವಾಗಿದೆ. ನಿಜಾಮ್ ಏರಿಯಾದಲ್ಲಿ ಅತಿ ಹೆಚ್ಚು ಅಂದರೆ 40 ಕೋಟಿ, ಸೀಡೆಡ್ ಪ್ರಾಂತ್ಯದಲ್ಲಿ 18 ಕೋಟಿ, ಉತ್ತರ ಆಂಧ್ರಕ್ಕೆ 12.50 ಕೋಟಿ, ಗುಂಟೂರು ಪ್ರಾಂತ್ಯದಲ್ಲಿ 9 ಕೋಟಿ, ಈಸ್ಟ್ ಗೋದಾವರಿ ಜಿಲ್ಲೆಯಲ್ಲಿ 8 ಹಾಗೂ ವೆಸ್ಟ್ ಗೋದಾವರಿ ಜಿಲ್ಲೆಯಲ್ಲಿ 7 ಕೋಟಿ, ಕೃಷ್ಣ ಪ್ರಾಂತ್ಯದಲ್ಲಿ 7.50 ಕೋಟಿ, ನೆಲ್ಲೂರು ಭಾಗದಲ್ಲಿ 4 ಕೋಟಿಗೆ ಸಿನಿಮಾ ಮಾರಾಟವಾಗಿದೆ.

    130 ಕೋಟಿ ಹಣ ಗಳಿಸಿ ಆಗಿದೆ

    130 ಕೋಟಿ ಹಣ ಗಳಿಸಿ ಆಗಿದೆ

    ಭಾರತದ ಉಳಿದ ಭಾಗಗಳಿಗೆ 12 ಕೋಟಿ ಹಣಕ್ಕೆ ಸಿನಿಮಾ ಮಾರಾಟವಾಗಿದೆ. ಇದರ ಜೊತೆಗೆ ವಿವಿಧ ಭಾಷೆಗಳ ಡಬ್ಬಿಂಗ್ ಸಿನಿಮಾಗಳ ಬಿಡುಗಡೆ ಹಕ್ಕು 20 ಕೋಟಿಗೆ ಮಾರಾಟವಾಗಿದೆ. ಭಾರತ ಬಿಟ್ಟು ವಿದೇಶದಲ್ಲಿ ಸಿನಿಮಾ ಮಾರಾಟದ ಹಕ್ಕು 13 ಕೋಟಿಗೆ ವ್ಯಾಪಾರವಾಗಿದೆ. ವಿಶ್ವದಾದ್ಯಂತ ಕೇವಲ ಚಿತ್ರಮಂದಿರ ಬಿಡುಗಡೆ ಹಕ್ಕು ಮಾರಾಟದಿಂದ 'ಪುಷ್ಪ' ಸಿನಿಮಾ ಈವರೆಗೆ 130 ಕೋಟಿ ರುಪಾಯಿ ಹಣ ಗಳಿಸಿ ಆಗಿದೆ. ಸಿನಿಮಾದ ಡಿಜಿಟಲ್, ಸ್ಯಾಟಲೈಟ್ ಹಕ್ಕು, ಆಡಿಯೋ ಹಕ್ಕುಗಳ ಮಾರಾಟದಿಂದ ಬಂದ ಮೊತ್ತ ಸೇರಿದರೆ ಸಿನಿಮಾ ಈಗಾಗಲೇ 200 ಕೋಟಿ ಗಳಿಕೆಯನ್ನು ದಾಟಿ ಆಗಿದೆ!

    ದಾಖಲೆ ಬರೆಯಲಿದೆ 'ಪುಷ್ಪ' ಸಿನಿಮಾ

    ದಾಖಲೆ ಬರೆಯಲಿದೆ 'ಪುಷ್ಪ' ಸಿನಿಮಾ

    ಸಿನಿಮಾದ ಮೊದಲ ದಿನದ ಕಲೆಕ್ಷನ್ ಬಗ್ಗೆ ಈಗಾಗಲೇ ಲೆಕ್ಕಾಚಾರಗಳು ಜೋರಾಗಿ ನಡೆದಿವೆ. ನಿನ್ನೆಯಿಂದಲೂ (ಡಿಸೆಂಬರ್ 13) 'ಪುಷ್ಪ' ಸಿನಿಮಾಕ್ಕೆ ಟಿಕೆಟ್ ಬುಕಿಂಗ್ ಪ್ರಾರಂಭವಾಗಿದೆ. ಹೈದರಾಬಾದ್‌ ಒಂದರಲ್ಲೇ 'ಪುಷ್ಪ' ಸಿನಿಮಾದ 266 ಶೋ ಹಾಕಲಾಗಿದ್ದು ಅದರಲ್ಲಿ 253 ಶೋನ ಟಿಕೆಟ್‌ಗಳು ಡಿಸೆಂಬರ್ 14ರ ವೇಳೆಗೆ ಬಹುತೇಕ ಬುಕ್ ಆಗಿಬಿಟ್ಟಿವೆ. ಉಳಿದ ಟಿಕೆಟ್‌ಗಳು ಇನ್ನೆರಡು ದಿನಗಳ ಒಳಗಾಗಿ ಬುಕ್ ಆಗಲಿವೆ. ಹೈದರಾಬಾದ್ ಮಾತ್ರವೇ ಅಲ್ಲದೆ ಆಂಧ್ರ-ತೆಲಂಗಾಣದ ಇತರ ನಗರಗಳಲ್ಲಿಯೂ ಟಿಕೆಟ್‌ಗಳು ಈಗಾಗಲೇ ಬುಕ್ ಆಗಿವೆ. ಬೆಂಗಳೂರು ನಗರದಲ್ಲಿ 'ಪುಷ್ಪ'ದ ಸುಮಾರು 188 ಶೋಗಳನ್ನು ಹಾಕಲಾಗಿದ್ದು ಸುಮಾರು 80 ಕ್ಕೂ ಹೆಚ್ಚು ಶೋಗಳು ಈಗಾಗಲೇ ಭರ್ತಿಯಾಗಿವೆ.

    ಡಿಸೆಂಬರ್ 17 ಕ್ಕೆ ಸಿನಿಮಾ ಬಿಡುಗಡೆ

    ಡಿಸೆಂಬರ್ 17 ಕ್ಕೆ ಸಿನಿಮಾ ಬಿಡುಗಡೆ

    'ಪುಷ್ಪ' ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡಿದ್ದು, ಇದೀಗ ಡಿಸೆಂಬರ್ 17 ರಂದು ಸಿನಿಮಾದ ಮೊದಲ ಭಾಗವಷ್ಟೆ ಬಿಡುಗಡೆ ಆಗಲಿದೆ. ಸಿನಿಮಾದ ಎರಡನೇ ಭಾಗ ಏಪ್ರಿಲ್ ತಿಂಗಳ ವೇಳೆಗೆ ಬಿಡುಗಡೆ ಆಗಲಿದೆ. ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದು, ಸಿನಿಮಾದಲ್ಲಿ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಕನ್ನಡಿಗ ಡಾಲಿ ಧನಂಜಯ್, ವಿಲನ್ ಆಗಿ ಫಹಾದ್ ಫಾಸಿಲ್, ಹಾಸ್ಯನಟ ಸುನಿಲ್, ಅನುಸೂಯ ಇನ್ನಿತರರು ನಟಿಸಿದ್ದಾರೆ. ಸಿನಿಮಾದಲ್ಲಿ ಸಮಂತಾ ಮೊದಲ ಬಾರಿಗೆ ಐಟಂ ಹಾಡೊಂದರಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾಕ್ಕೆ ದೇವಿಶ್ರೀಪ್ರಸಾದ್ ಸಂಗೀತ ನೀಡಿದ್ದಾರೆ.

    English summary
    Allu Arjun starer Pushpa movie pre release business in more than Rs 100 crore Movie will release on December 17.
    Tuesday, December 14, 2021, 16:58
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X