Don't Miss!
- News
ಸೈಕಲ್ ಆಯಿತು ಈಗ ಸರ್ಕಾರಿ ಶಾಲಾ ಮಕ್ಕಳಿಗಿಲ್ಲ ಶೂ, ಸಾಕ್ಸ್ ಭಾಗ್ಯ!
- Lifestyle
Today Rashi Bhavishya: ಸೋಮವಾರದ ದಿನ ಭವಿಷ್ಯ: ಕರ್ಕ, ತುಲಾ, ಕುಂಭ ರಾಶಿಯ ಉದ್ಯೋಗಿಗಳಿಗೆ ಶುಭ ದಿನ
- Sports
ಕ್ರಿಕೆಟ್ ಅಭಿಮಾನಿಗಳಿಗೆ ಸಿಹಿ ಸುದ್ದಿ: ರೋಹಿತ್ ಶರ್ಮಾ ಕೋವಿಡ್ ವರದಿ ನೆಗೆಟಿವ್; ಟಿ20 ಸರಣಿಗೆ ರೆಡಿ
- Finance
Gold Rate Today: ಚಿನ್ನ ಸ್ಥಿರ: ಪ್ರಮುಖ ನಗರಗಳಲ್ಲಿ ಜು.3ರಂದು ಬೆಲೆ ಎಷ್ಟು
- Technology
ಶೀಘ್ರದಲ್ಲೇ ವಾಟ್ಸಾಪ್ ಸೇರಲಿದೆ ಅತಿ ಉಪಯುಕ್ತ ಫೀಚರ್ಸ್! ವಿಶೇಷತೆ ಏನು?
- Automobiles
ಜೂನ್ ತಿಂಗಳಿನಲ್ಲಿ 4.84 ಲಕ್ಷಕ್ಕೂ ಹೆಚ್ಚು ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ ಹೀರೋ ಮೋಟೊಕಾರ್ಪ್
- Education
JNV Result 2022 : 6ನೇ ತರಗತಿ ತಾತ್ಕಾಲಿಕ ಆಯ್ಕೆ ಪಟ್ಟಿ ಜು.10ರಂದು ಪ್ರಕಟ ಸಾಧ್ಯತೆ
- Travel
ಕೆಮ್ಮಣ್ಣು ಗುಂಡಿ - ಒಂದು ಮನಮೋಹಕ ತಾಣ!
'ಪುಷ್ಪ 2'ನಲ್ಲಿ ರಶ್ಮಿಕಾ ಪಾತ್ರಕ್ಕೆ ಕತ್ತರಿ? ನಿರ್ಮಾಪಕ ಕೊಟ್ಟರು ಸ್ಪಷ್ಟನೆ
ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ 'ಪುಷ್ಪ' ಸಿನಿಮಾ ಭಾರಿ ದೊಡ್ಡ ಹಿಟ್ ಆಗಿದೆ. ಕೋವಿಡ್ ನಂತರ ದಕ್ಷಿಣ ಭಾರತ ಸಿನಿಮಾಗಳಿಗೆ ಬಾಲಿವುಡ್ ಮಾರುಕಟ್ಟೆಯನ್ನು ಎಕ್ಸ್‌ಪ್ಲೋರ್ ಮಾಡಿಕೊಟ್ಟ ಸಿನಿಮಾ ಇದು.
ರಕ್ತ ಚಂದನದ ಕತೆ ಹೊಂದಿರುವ 'ಪುಷ್ಪ' ಸಿನಿಮಾ ಪಕ್ಕಾ ಹಳ್ಳಿ ನೆಲದ ಕತೆಯಾಗಿದ್ದು ಸಿನಿಮಾ ಬಿಡುಗಡೆ ಆದ ರಾಜ್ಯಗಳಲ್ಲೆಲ್ಲ ಸೂಪರ್ ಹಿಟ್ ಆಯಿತು. ಸಿನಿಮಾದ ಹಾಡುಗಳು, ಡೈಲಾಗ್‌ಗಳು, ಪಾತ್ರಗಳೆಲ್ಲವೂ ಜನರ ಮೆಚ್ಚುಗೆ ಗಳಿಸಿದವು.
'ಪುಷ್ಪ' ಸಿನಿಮಾದ ಪುಷ್ಪ ಪಾತ್ರ ಹಿಟ್ ಆದಷ್ಟೆ ಸಿನಿಮಾದಲ್ಲಿ ರಶ್ಮಿಕಾ ನಟಿಸಿದ್ದ ಶ್ರೀವಲ್ಲಿ ಪಾತ್ರವೂ ಹಿಟ್ ಆಗಿತ್ತು. ಆದರೆ ಹೊಸದಾಗಿ ಹರಡಿರುವ ಸುದ್ದಿಯಂತೆ 'ಪುಷ್ಪ 2' ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣರ ಪಾತ್ರ ಬಹಳ ಕಿರಿದಾಗಿ ಇರಲಾಗುತ್ತದೆಯಂತೆ. 'ಪುಷ್ಪ 2' ನಲ್ಲಿ ರಶ್ಮಿಕಾ ಸಾವನ್ನಪ್ಪುತ್ತಾರೆ ಎಂಬ ಮಾತುಗಳು ಸಹ ಕೇಳಿಬರುತ್ತಿವೆ. ಆದರೆ ಈ ಎಲ್ಲ ಊಹಾಪೋಹಗಳಿಗೆ ಸಿನಿಮಾದ ನಿರ್ಮಾಪಕರೇ ಸ್ಪಷ್ಟನೆ ನೀಡಿದ್ದಾರೆ.

ರಶ್ಮಿಕಾ ಪಾತ್ರಕ್ಕೆ ಕತ್ತರಿ?
'ಪುಷ್ಪ' ಸಿನಿಮಾದಲ್ಲಿ ಇಡೀ ಸಿನಿಮಾದಲ್ಲಿ ನಾಯಕ ಪುಷ್ಪರಾಜ್ ಅಬ್ಬರವೇ ಹೆಚ್ಚಾಗಿ ಇರಲಿದೆ. ಫಹಾದ್ ಫಾಸಿಲ್ ಹಾಗೂ ಪುಷ್ಪರಾಜ್ ನಡುವಿನ ಗುದ್ದಾಟವೇ ಸಿನಿಮಾದ ಪ್ರಮುಖ ಅಂಶ. ಇದೇ ಕಾರಣಕ್ಕೆ 'ಪುಷ್ಪ 2' ಚಿತ್ರದಲ್ಲಿ ನಟಿ ರಶ್ಮಿಕಾ ಮಂದಣ್ಣ ಪಾತ್ರವನ್ನು ಕಡಿತಗೊಳಿಸಲಾಗಿದೆ. ಅಂದರೆ ರಶ್ಮಿಕಾ ಮಂದಣ್ಣ ಮೊದಲ ಭಾಗದ ಹಾಗೆ ಏರನಡೇ ಭಾಗದಲ್ಲಿ ಹೆಚ್ಚಾಗಿ ಇರುವುದಿಲ್ಲ. ಶ್ರೀವಲ್ಲಿ ಪಾತ್ರವನ್ನು ಬಹುತೇಕವಾಗಿ ನಿರ್ದೇಶಕರು ಕಡಿತಗೊಳಿಸಿದ್ದಾರೆ. ಹಾಗಾಗಿ ಪುಷ್ಪ 2 ಸಿನಿಮಾದಲ್ಲಿ ಹೆಚ್ಚು ಕಾಲ ರಶ್ಮಿಕಾ ಮಂದಣ್ಣ ಶ್ರೀವಲ್ಲಿಯಾಗಿ ಮಿಂಚುವುದಿಲ್ಲ. ಅವಶ್ಯಕ ಎನಿಸುವಂತಹ ಸನ್ನಿವೇಶಗಳಲ್ಲಿ ಮಾತ್ರ ಶ್ರೀವಲ್ಲಿಯ ಪಾತ್ರ ಬಂದು ಹೋಗುತ್ತದೆ ಎನ್ನಲಾಗುತ್ತಿದೆ.

ಕ್ಲೈಮ್ಯಾಕ್ಸ್‌ನಲ್ಲಿ ಶ್ರೀವಲ್ಲಿ ಸಾವು?
'ಪುಷ್ಪ 2' ಚಿತ್ರದ ಕ್ಲೈಮಾಕ್ಸ್‌ನಲ್ಲಿ ರಶ್ಮಿಕಾ ಮಂದಣ್ಣ ಪಾತ್ರ ಅಂದರೆ ಶ್ರೀವಲ್ಲಿಯನ್ನು ಬಳಸಿಕೊಂಡು ಪುಷ್ಪ ರಾಜ್‌ನನ್ನು ಹಿಡಿಯಲು ವಿಲನ್‌ಗಳು ಹೊಂಚು ರೂಪಿಸುತ್ತಾರೆ. ಈ ಗದ್ದಲದಲ್ಲಿ ಶ್ರೀವಲ್ಲಿ ವೈರಿಗಳ ಕೈಯಲ್ಲಿ ಸತ್ತು ಹೋಗುತ್ತಾಳೆ. ರಶ್ಮಿಕಾ ಮಂದಣ್ಣ ಪಾತ್ರ ಈ ಚಿತ್ರದಲ್ಲಿ ಟ್ರ್ಯಾಜಿಡಿಯಾಗಿ ಅಂತ್ಯವಾಗಲಿದೆಯಂತೆ. ಶ್ರೀವಲ್ಲಿ ಸಾವಿನ ನಂತರ ವಿಲನ್ ಮತ್ತು ಹೀರೋ ನಡುವಿನ ಕ್ಲೈಮಾಕ್ಸ್ ದೃಶ್ಯಗಳ ಇರುತ್ತವೆಯಂತೆ. ಶ್ರೀವಲ್ಲಿಯ ಸಾವಿನ ದ್ವೇಷ ತೀರಿಸಿಕೊಳ್ಳುತ್ತಾನೆ ಪುಷ್ಪರಾಜ್ ಎನ್ನುವ ಸುದ್ದಿಗಳು ಹರಿದಾಡುತ್ತಿವೆ.

ನಿರ್ಮಾಪಕ ಕೊಟ್ಟರು ಸ್ಪಷ್ಟನೆ
ಆದರೆ ಈ ಸುದ್ದಿಗಳನ್ನೆಲ್ಲ ನಿರ್ಮಾಪಕರು ತಳ್ಳಿ ಹಾಕಿದ್ದಾರೆ. 'ಪುಷ್ಪ' ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ನಿರ್ಮಾಣ ಮಾಡುತ್ತಿದ್ದು, ನಿರ್ಮಾಪಕ ವೈ ರವಿಶಂಕರ್ ಮಾತನಾಡಿ, ''ಇದೆಲ್ಲಾ ಸುಳ್ಳು ಸುದ್ದಿ. ನಿಜ ಹೇಳಬೇಕೆಂದರೆ ನಾವೇ ಈ ವರೆಗೂ ಕತೆ ಕೇಳಿಲ್ಲ. ಕತೆ ಇನ್ನೂ ಹೊರಗೇ ಬಂದಿಲ್ಲವಾದ್ದರಿಂದ, ಮಾಧ್ಯಮಗಳು ತಮಗೆ ತೋಚಿದಂತೆ ಬರೆಯುತ್ತಿವೆ. ಜನ ಅದನ್ನು ನಂಬುತ್ತಿದ್ದಾರೆ ಅಷ್ಟೆ, ಆದರೆ ಇದೆಲ್ಲ ಸುಳ್ಳು ಸುದ್ದಿ'' ಎಂದಿದ್ದಾರೆ.

'ಪುಷ್ಪ 2' ಶೂಟಿಂಗ್ ಯಾವಾಗ ಪ್ರಾರಂಭವಾಗಲಿದೆ
'ಪುಷ್ಪ 2' ಸಿನಿಮಾದ ಶೂಟಿಂಗ್ ಯಾವಾಗ ಪ್ರಾರಂಭವಾಗುತ್ತದೆ ಎಂಬ ಬಗ್ಗೆಯೂ ಮಾಹಿತಿ ನೀಡಿರುವ ನಿರ್ಮಾಪಕ ರವಿಶಂಕರ್, ''ಪುಷ್ಪ 2' ಸಿನಿಮಾದ ಚಿತ್ರೀಕರಣವು ಆಗಸ್ಟ್ ತಿಂಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ನಾವು ಈಗಾಗಲೇ ತಯಾರಿ ಆರಂಭಿಸಿದ್ದೇವೆ'' ಎಂದಿದ್ದಾರೆ. 'ಪುಷ್ಪ' ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದರು. 'ಪುಷ್ಪ 2' ನಲ್ಲಿ ಅಲ್ಲು ಅರ್ಜುನ್‌ರ ಪುಷ್ಪರಾಜ್ ಪಾತ್ರ ಹಾಗೂ ಫಹಾದ್ ಫಾಸಿಲ್‌ರ ಭೈರೋಸಿಂಗ್ ಶೇಖಾವತ್ ಪಾತ್ರಗಳು ಪರಸ್ಪರ ಎದುರು ಬದುರಾಗಲಿವೆ.