ಕರ್ನಾಟಕದಲ್ಲಿ ಗಗನಕ್ಕೇರಿದ ಪುಷ್ಪ ಚಿತ್ರದ ಟಿಕೆಟ್‌ ದರ!

ನಟ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅಭಿನಯದ ಪುಷ್ಪ ಸಿನಿಮಾ ಇಂದು ರಿಲೀಸ್‌ ಆಗಿದೆ. ಪುಷ್ಪ ಮೂಲತಃ ತೆಲುಗಿನ ಸಿನಿಮಾ. ಆದರೆ ಕನ್ನಡ, ತಮಿಳು, ಹಿಂದಿ ಮಲಯಾಳಂ ಭಾಷೆಗೂ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಸದ್ಯ ಪುಷ್ಪ ಸಿನಿಮಾ ಅಬ್ಬರ ಕರ್ನಾಟಕದಲ್ಲಿ ಜೋರಾಗಿದೆ.

ಕರ್ನಾಟಕದಲ್ಲಿ ಅಲ್ಲು ಅರ್ಜುನ್‌ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ. ಹಾಗಾಗಿ ಈ ಚಿತ್ರ ಕರ್ನಾಟಕದಲ್ಲಿ ರಿಲೀಸ್‌ ಹೆಚ್ಚಿನ ಚಿತ್ರ ಮಂದಿರಗಳಲ್ಲಿ ರಿಲೀಸ್‌ ಆಗುವುದು ಅತಿ ಮುಖ್ಯ ಆಗಿತ್ತು. ಅದರಂತೆಯೇ ಚಿತ್ರ ತಂಡ ಬಹುತೇಕ ಚಿತ್ರ ಮಂದಿರಗಳಲ್ಲಿ ಪುಷ್ಪ ರಿಲೀಸ್‌ ಮಾಡುತ್ತಿದೆ.

ಆದರೆ ಪುಷ್ಪ ಚಿತ್ರದ ಕನ್ನಡ ಡಬ್‌ ವರ್ಷನ್‌ಗೆ ಕರ್ನಾಟಕದಲ್ಲಿ ಹೆಚ್ಚಿನ ಥಿಯೇಟರ್‌ಗಳು ಸಿಕ್ಕಿಲ್ಲ. ಹಾಗಾಗಿ ಬಾಯ್‌ಕಾಟ್‌ ಪುಷ್ಪ ಎನ್ನುವ ಅಭಿಯಾನ ಕೂಡ ಆರಂಭ ಆಗಿತ್ತು. ಈಗ ಟಿಕೆಟ್‌ ದರದ ಬಗ್ಗೆ ಹೆಚ್ಚಿನ ಚರ್ಚೆ ಆಗುತ್ತಿದೆ.

ಸಾವಿರ ರೂಪಾಯಿ ತಲುಪಿದ ಪುಷ್ಪ ಟಿಕೆಟ್ ದರ!

ಸಾವಿರ ರೂಪಾಯಿ ತಲುಪಿದ ಪುಷ್ಪ ಟಿಕೆಟ್ ದರ!

ಹೀಗೆ ಯಾವುದಾದರು ಒಬ್ಬ ಸ್ಟಾರ್‌ ನಟನ ಸಿನಿಮಾ ರಿಲೀಸ್‌ ಆಗುತ್ತೆ ಅಂದರೆ ಅದಕ್ಕೆ ಹೆಚ್ಚಿನ ಕ್ರೇಜ್ ಇದ್ದೇ ಇರುತ್ತೆ. ಸಾಕಷ್ಟು ಮಂದಿ ಮೊದಲ ದಿನವೇ ಸಿನಿಮಾ ನೋಡಬೇಕು ಎನ್ನುವ ಕಾತರತೆ ಹೊಂದಿರುತ್ತಾರೆ. ಹಾಗಾಗಿ ಮೊದಲ ದಿನ ಚಿತ್ರಮಂದಿರಗಳು ಹೌಸ್‌ ಫುಲ್‌ ಬೋರ್ಡ್‌ಗಳನ್ನ ಹಾಕುತ್ತವೆ. ಆದರೆ ಪರ ಭಾಷಾ ಚಿತ್ರಗಳಿಗೆ ಇದು ಕೊಂಚ ಭಿನ್ನ.

ತೆಲುಗು, ತಮಿಳು ಸಿನಿಮಾ ನಟರು ಸಿನಿಮಾಗಳು ಕರ್ನಾಟಕದಲ್ಲಿ ರಿಲೀಸ್‌ ಆಗುತ್ತವೆ ಎಂದರೆ ಸಾಕು ಏಕಾ ಏಕಿ ಟಿಕೆಟ್‌ ದರ ಏರಿಕೆ ಆಗಿ ಬಿಡುತ್ತದೆ. ಸದ್ಯ ಬೆಂಗಳೂರಿನಲ್ಲಿ ಪುಷ್ಪ ಸಿನಿಮಾದ ಟಿಕೆಟ್‌ ದರ 1000 ರೂ ತನಕ ಏರಿದೆ. ಮಲ್ಟಿ ಪ್ಲೆಕ್ಸ್‌ಗಳಲ್ಲಿ ಸಾಮಾನ್ಯವಾಗಿ 150, 200, 350 ಇರುತ್ತಿದ್ದ ಟಿಕೆಟ್‌ ದರ ಈಗ 700, 800, 900ರೂ ಆಗಿದೆ. ಆದರೆ ಇಷ್ಟು ಕಿಟೆಕ್‌ ದರ್‌ ಏರಿದ್ದರು ಕೂಡ ಎಲ್ಲಾ ಬಹುತೇಕ ಸೋಲ್ಡ್‌ ಔಟ್‌ ಆಗಿದೆ.

ಹೈದ್ರಾಬಾದ್‌ಗಿಂತಲೂ ಬೆಂಗಳೂರಿನಲ್ಲಿ ದುಪ್ಪಟ್ಟು ದುಬಾರಿ ಟಿಕೆಟ್!

ಹೈದ್ರಾಬಾದ್‌ಗಿಂತಲೂ ಬೆಂಗಳೂರಿನಲ್ಲಿ ದುಪ್ಪಟ್ಟು ದುಬಾರಿ ಟಿಕೆಟ್!

ಹಾಗಂತ ಬೆಂಗಳೂರಿನಲ್ಲಿ ಇರುವ ಟಿಕೆಟ್‌ ದರವೇ ಎಲ್ಲಾ ಕಡೆಗಳಲ್ಲಿ ಇಲ್ಲ. ವಿಶೇಷವಾಗಿ ಬೆಂಗಳೂರಲ್ಲಿ ಮಾತ್ರವೇ ಹೆಚ್ಚಿನ ಟಿಕೆಟ್‌ ದರ ಇದೆ. ಹೈದ್ರಾಬಾದ್‌ನಲ್ಲಿ ಮಲ್ಟಿಫ್ಲೆಕ್ಸ್‌ಗಳಲ್ಲೇ ಏನಿಲ್ಲಾ ಅಂದರೂ 300 ರಿಂದ 350ರೂ ಮಾತ್ರ ನಿಗದಿ ಮಾಡಲಾಗಿದೆ. ಆನ್‌ಲೈನ್‌ನಲ್ಲಿ ಪುಷ್ಪ ಟಿಕೆಟ್‌ ದರವನ್ನು ಚೆಕ್‌ ಮಾಡಿದರೆ ಬೆಂಗಳೂರಿನಲ್ಲೇ ಅತಿ ಹೆಚ್ಚು ಇರುವುದು ಕಂಡು ಬಂದಿದೆ. ತೆಲುಗು ಸಿನಿಮಾದ ಟಿಕೆಟ್‌ ಬೆಲೆ ಕನ್ನಡ ನಾಡಿನಲ್ಲಿ ಕನ್ನಡಿಗರು ದುಪ್ಪಟ್ಟು ಬೆಲೆ ಕೊಟ್ಟು ನೋಡುತ್ತಾರೆ. ಆದರೆ ಆ ಅದೃಷ್ಟ ಕನ್ನಡ ಸಿನಿಮಾಗಳಿಗೆ ಇಲ್ಲವೇ ಇಲ್ಲ.

ಬಾಯ್‌ಕಾಟ್‌ ಪುಷ್ಪ ಅಭಿಯಾನ ಭರದಿಂದ ಸಾಗಿತ್ತು!

ಬಾಯ್‌ಕಾಟ್‌ ಪುಷ್ಪ ಅಭಿಯಾನ ಭರದಿಂದ ಸಾಗಿತ್ತು!

ಇನ್ನು ಪುಷ್ಪ ಸಿನಿಮಾ ಕನ್ನಡಕ್ಕೆ ಡಬ್‌ ಆಗಿ ರಿಲೀಸ್‌ ಆಗುತ್ತಿದೆ. ಆದರೆ ಕರ್ನಾಟಕದಲ್ಲಿ ಕನ್ನಡ ಡಬ್‌ ವರ್ಷನ್‌ಗೆ ಹೆಚ್ಚಿನ ಮಹತ್ವ ನೀಡಿಲ್ಲ. ಇಲ್ಲಿ ಕನ್ನಡ ಪುಷ್ಪಗೆ ಕೆಲವೇ ಕೆಲವು ಚಿತ್ರಮಂದಿರಗಳನ್ನ ಮೀಸಲಾಗಿರಿಸಲಾಗಿದೆ. ಮಿಕ್ಕಂತೆ ಬಹುತೇಕ ಕಡೆಗಳಲ್ಲಿ ತೆಲುಗಿನಲ್ಲಿಯೆ ಪುಷ್ಪ ತೆರೆ ಕಾಣುತ್ತಿದೆ. ಹಾಗಾಗಿ ಸಾಮಾಜಿಕ ಜಾಲತಾಣದಲ್ಲಿ ಪುಷ್ಪ ಸಿನಿಮಾದ ಬಗ್ಗೆ ಭಾರಿ ವಿರೋಧ ವ್ಯಕ್ತವಾಗಿತ್ತು. ಹಾಗಾಗಿ ಬಾಯ್‌ಕಾಟ್ ಪುಷ್ಪ ಎನ್ನುವ ಅಭಿಯಾನ ಶುರುವಾಗಿತ್ತು.

ಬಹುನಿರೀಕ್ಷೆಯೊಂದಿಗೆ ತೆರೆಗೆ ಬಂದಿರೋ ಪುಷ್ಪ!

ಬಹುನಿರೀಕ್ಷೆಯೊಂದಿಗೆ ತೆರೆಗೆ ಬಂದಿರೋ ಪುಷ್ಪ!

ಇನ್ನು ಪುಷ್ಪ ಸಿನಿಮಾ ಸಾಕಷ್ಟು ನಿರೀಕ್ಷೆಗಳನ್ನ ಹೊತ್ತು ತಂದಿದೆ. ಆ ಎಲ್ಲಾ ನಿರೀಕ್ಷೆಗಳಿಗೂ ಇಂದು ಉತ್ತರ ಸಿಗಲಿದೆ. ಸುಕುಮಾರ್‌ ಮತ್ತೊಮ್ಮೆ ಮೋಡಿ ಮಾಡುತ್ತಾರಾ?. ಈ ಚಿತ್ರದ ಮೂಲಕ ಅಲ್ಲು ಅರ್ಜುನ್‌ ಮತ್ತು ರಶ್ಮಿಕಾ ಮಂದಣ್ಣ ಅವರಿಗೆ ಅದೃಷ್ಟ ತಂದು ಕೊಡುತ್ತಾ ಎನ್ನುವುದನ್ನು ನೋಡಬೇಕಿದೆ. ಇನ್ನು ಪುಷ್ಪ ಸಿನಿಮಾ ರಿಲೀಸ್‌ಗೂ ಮೊದಲೇ ಕೋಟಿ ಕೋಟಿ ಆದಾಯ ಬೊಕ್ಕಸಕ್ಕೆ ತುಂಬಿಸಿಕೊಂಡಿದೆ. ಹಾಗಾಗಿ ಪುಷ್ಪ ಸಿನಿಮಾದ ಆದಾಯ ಎಷ್ಟಾಗಬಹುದು ಎನ್ನುವ ಕುತೂಹಲ ಕೂಡ ಇದೆ.

More from Filmibeat

English summary
Pushpa Ticket Price Hike More In Karnataka, It Cost 1000 Rupees,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X