ರಷ್ಯಾದಲ್ಲೂ 'ಪುಷ್ಪ' ಅಬ್ಬರ: ಅಲ್ಲು ಅರ್ಜುನ್ ಜೊತೆ 'ತಗ್ಗೋದೆ ಇಲ್ಲ' ಎಂದ ರಶ್ಮಿಕಾ

By ಫಿಲ್ಮಿಬೀಟ್ ಡೆಸ್ಕ್

ಭಾರತದಾದ್ಯಂತ ಹೊಸ ಅಲೆ ಎಬ್ಬಿಸಿರುವ ದಕ್ಷಿಣ ಭಾರತದ ಸಿನಿಮಾಗಳು, ಭಾರತದ ಗಡಿ ದಾಟಿ ವಿಶ್ವಮಟ್ಟದಲ್ಲಿಯೂ ಮೆರೆಯುತ್ತಿವೆ.

'ಕೆಜಿಎಫ್ 2', 'RRR' ಸಿನಿಮಾಗಳು ವಿಶ್ವಮಟ್ಟದಲ್ಲಿ ಈಗಾಗಲೇ ದಕ್ಷಿಣ ಭಾರತದ ಸಿನಿಮಾಗಳ ಖ್ಯಾತಿಯನ್ನು ಸಾರಿವೆ. ಹಿಂದೆಂದೂ ಭಾರತದ ಸಿನಿಮಾಗಳು ಬಿಡುಗಡೆ ಆಗದ ದೇಶಗಳಲ್ಲಿ ಸಹ 'ಕೆಜಿಎಫ್ 2', 'RRR' ಸಿನಿಮಾಗಳು ಬಿಡುಗಡೆ ಆಗಿ ಹಿಟ್ ಆಗಿವೆ. ಅದೇ ಹಾದಿಯನ್ನು ಈಗ 'ಪುಷ್ಪ' ಸಿನಿಮಾ ಹಿಡಿದಿದೆ.

ಪ್ಯಾನ್ ಇಂಡಿಯಾ ಸಿನಿಮಾ ಮೂಲಕ ಬಾಲಿವುಡ್ ಪ್ರದೇಶದಲ್ಲಿ ದೊಡ್ಡ ಮಟ್ಟದಲ್ಲಿ ಹಣ ಗಳಿಸಬಹುದು ಎಂದು ಇತ್ತೀಚಿನ ವರ್ಷ ತೋರಿಸಿಕೊಟ್ಟ ಸಿನಿಮಾ 'ಪುಷ್ಪ' ಬಿಡುಗಡೆ ಆಗಿ ಒಂದು ವರ್ಷದ ಬಳಿಕ ಈಗ ರಷ್ಯನ್ ಭಾಷೆಯಲ್ಲಿ ಬಿಡುಗಡೆ ಆಗುತ್ತಿದೆ.

'ಪುಷ್ಪ' ಸಿನಿಮಾ ರಷ್ಯನ್ ಭಾಷೆಗೆ ಡಬ್ ಆಗಿದ್ದು ಅಲ್ಲಿ ಕೆಲವೇ ದಿನಗಳಲ್ಲಿ ಬಿಡುಗಡೆ ಆಗಲಿದೆ. ಸಿನಿಮಾದ ಪ್ರಚಾರಕ್ಕಾಗಿ ಅಲ್ಲು ಅರ್ಜುನ್ ಹಾಗೂ ರಶ್ಮಿಕಾ ಮಂದಣ್ಣ, ನಿರ್ದೇಶಕ ಸುಕುಮಾರ್‌ ರಷ್ಯಾದಲ್ಲಿದ್ದು, ಅಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡುತ್ತಾ ಸಿನಿಮಾ ನೋಡುವಂತೆ ಮನವಿ ಮಾಡುತ್ತಿದ್ದಾರೆ.

Pushpa Movie Releasing In Russia, Allu Arjun, Rashmika Promoting Movie Their

ರಷ್ಯಾದಲ್ಲಿ ಸುದ್ದಿಗೋಷ್ಠಿ ನಡೆಸಿರುವ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್, ನಿರ್ದೇಶಕ ಸುಕುಮಾರ್, ಸಂಗೀತ ನಿರ್ದೇಶಕ ದೇವಿಶ್ರೀಪ್ರಸಾದ್ ಹಾಗೂ ಇತರರು ಅಲ್ಲಿಯೂ ಸಹ 'ತಗ್ಗೇದೆ ಲೇ' ಎನ್ನುತ್ತಾ ಮಾಧ್ಯಮಗಳ ಮುಂದೆ ಫೋಸು ನೀಡಿದ್ದಾರೆ. ಈಗಾಗಲೇ ರಷ್ಯನ್ ಭಾಷೆಯಲ್ಲಿ 'ಪುಷ್ಪ' ಸಿನಿಮಾದ ಟ್ರೈಲರ್ ಬಿಡುಗಡೆ ಆಗಿದ್ದು, ಸ್ಥಳೀಯವಾಗಿ ಟ್ರೈಲರ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಳೆದ ವರ್ಷ ಅಂದರೆ 2021 ಡಿಸೆಂಬರ್ 17 ರಂದು 'ಪುಷ್ಪ' ಸಿನಿಮಾ ಬಿಡುಗಡೆ ಆಗಿತ್ತು. ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಬಿಡುಗಡೆ ಆಗಿದ್ದ ಈ ಸಿನಿಮಾ ಹಿಂದಿ ಭಾಷಿಕ ಪ್ರದೇಶದಲ್ಲಿ ದೊಡ್ಡ ಹಿಟ್ ಆಗಿತ್ತು. ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್, ಡಾಲಿ ಧನಂಜಯ್, ಸುನಿಲ್ ಇನ್ನಿತರರು ನಟಿಸಿದ್ದ ಈ ಸಿನಿಮಾವನ್ನು ಸುಕುಮಾರ್ ನಿರ್ದೇಶನ ಮಾಡಿದ್ದಾರೆ.

ಇದೀಗ 'ಪುಷ್ಪ' 2 ಸಿನಿಮಾದ ಚಿತ್ರೀಕರಣ ಜಾರಿಯಲ್ಲಿದ್ದು, ಡಿಸೆಂಬರ್ 16 ರಂದು ಸಿನಿಮಾದ ಮೊದಲ ಟೀಸರ್ ಹೊರ ಬೀಳುವ ಸಾಧ್ಯತೆ ಇದೆ. ಮುಂದಿನ ವರ್ಷಾಂತ್ಯಕ್ಕೆ ಸಿನಿಮಾವು ಚಿತ್ರಮಂದಿರಗಳಲ್ಲಿ ಬಿಡುಗಡೆ ಕಾಣಲಿದೆ.

More from Filmibeat

English summary
Telugu movie Pushpa releasing in Russia in Russian language soon. Allu Arjun and Rashmika Mandanna proting their movie in Russia.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X