'ಪುಷ್ಪ' ಸಿನಿಮಾದ ಹಾಡಿನ ದೃಶ್ಯ ಲೀಕ್: ಬಹಳ ಕಷ್ಟಪಡುತ್ತಿದ್ದಾರೆ ಅಲ್ಲು ಅರ್ಜುನ್

ಅಲ್ಲು ಅರ್ಜುನ್ ನಟನೆಯ 'ಪುಷ್ಪ' ಸಿನಿಮಾದ ಚಿತ್ರೀಕರಣ ಬಲು ಜೋರಾಗಿ ನಡೆಯುತ್ತಿದೆ. ಸಿನಿಮಾದ ಮೊದಲ ಪೋಸ್ಟರ್ ಬಿಡುಗಡೆ ಆದಾಗಿನಿಂದಲೂ ಸಿನಿಮಾದ ಬಗ್ಗೆ ಭಾರಿ ಕುತೂಹಲ ಎದ್ದಿದೆ. ಅದಕ್ಕೆ ತಕ್ಕಂತೆ ಗುಟ್ಟಾಗಿ ಚಿತ್ರೀಕರಣ ಮಾಡುತ್ತಿದ್ದಾರೆ ನಿರ್ದೇಶಕ ಸುಕುಮಾರ್.

Recommended Video

ಮರ ಹತ್ತಿ ಯಡವಟ್ಟು ಮಾಡಿಕೊಂಡ ಅಲ್ಲು ಅರ್ಜುನ್ ಅಭಿಮಾನಿ | Allu Arjun | Pushpa | Rashmika mandanna

ಆದರೆ ಇದೀಗ 'ಪುಷ್ಪ' ಸಿನಿಮಾದ ಹಾಡಿನ ಚಿತ್ರೀಕರಣದ ವಿಡಿಯೋ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಈ ವಿಡಿಯೋವನ್ನು ಯಾರೊ ಪ್ರೇಕ್ಷಕರು ಹಂಚಿಕೊಂಡಿದ್ದಾರೆಯೇ ವಿನಃ, ಚಿತ್ರತಂಡದ ಸದಸ್ಯರಿಂದ ಆದ ಪ್ರಮಾದವಲ್ಲ.

'ಪುಷ್ಪ' ಸಿನಿಮಾದ ಹಾಡಿನ ಚಿತ್ರೀಕರಣ ಮಾಡುವ ವೇಳೆ ಚಿತ್ರೀಕರಣ ನೋಡಲೆಂದು ಮರ ಹತ್ತಿದ್ದ ಅಭಿಮಾನಿಯೊಬ್ಬ ಚಿತ್ರೀಕರಣದ ವಿಡಿಯೋ ಮಾಡಿ ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ವಿಡಿಯೋ ಅಸ್ಪಷ್ಟವಾಗಿದೆ

ವಿಡಿಯೋ ಅಸ್ಪಷ್ಟವಾಗಿದೆ

ವಿಡಿಯೋ ಬಹಳ ಅಸ್ಪಷ್ಟವಾಗಿದೆ, ಆದರೆ ಹಾಡಿನ ಸಂಗೀತ ಸ್ಪಷ್ಟವಾಗಿ ಕೇಳುತ್ತದೆ. ಹಾಡಿನ ಸಾಹಿತ್ಯ ಕೇಳುವುದಿಲ್ಲ. ಚಿತ್ರೀಕರಣದ ಕೆಲವು ಚಿತ್ರಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಅತ್ಯಂತ ಕೊಳಕಾದ ಉಡುಗೆ ತೊಟ್ಟು ಖರಾಬ್ ಆಗಿ ಕಾಣುತ್ತಿದ್ದಾರೆ ನಟ ಅಲ್ಲು ಅರ್ಜುನ್.

ಚಿತ್ರಗಳು ಕೆಲವು ಲೀಕ್ ಆಗಿವೆ

ಚಿತ್ರಗಳು ಕೆಲವು ಲೀಕ್ ಆಗಿವೆ

ಘನ ಅರಣ್ಯದಲ್ಲಿ, ಅತ್ಯಂತ 'ರಿಮೋಟ್' ಜಾಗಗಳಲ್ಲಿ ಪುಷ್ಪ ಸಿನಿಮಾದ ಚಿತ್ರೀಕರಣ ಮಾಡಲಾಗುತ್ತಿತ್ತು. ಪ್ರಸ್ತುತ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಚಿತ್ರಗಳನ್ನು ನೋಡಿದರೆ ಗೊತ್ತಾಗುತ್ತಿದೆ ಅಲ್ಲು ಅರ್ಜುನ್ ಪಡುತ್ತಿರುವ ಶ್ರಮ.

ಅಲ್ಲು ಅರ್ಜುನ್ ಜೊತೆಗೆ ಮೂರನೇ ಸಿನಿಮಾ

ಅಲ್ಲು ಅರ್ಜುನ್ ಜೊತೆಗೆ ಮೂರನೇ ಸಿನಿಮಾ

'ಪುಷ್ಪ' ಸಿನಿಮಾ ತೆಲುಗಿನ ಬಹುನಿರೀಕ್ಷಿತ ಸಿನಿಮಾ ಆಗಿದ್ದು, ಸಿನಿಮಾವನ್ನು ಖ್ಯಾತ ನಿರ್ದೇಶಕ ಸುಕುಮಾರ್ ನಿರ್ದೇಶಿಸುತ್ತಿದ್ದಾರೆ. ಅಲ್ಲು ಅರ್ಜುನ್ ಜೊತೆಗೆ 'ಆರ್ಯಾ', 'ಆರ್ಯಾ2' ಮಾಡಿರುವ ಸುಕುಮಾರ್ ಗೆ ಅಲ್ಲು ಅರ್ಜುನ್ ಜೊತೆಗಿನ ಮೂರನೇ ಸಿನಿಮಾ ಇದು.

ರಶ್ಮಿಕಾ ಮಂದಣ್ಣ ನಾಯಕಿ

ರಶ್ಮಿಕಾ ಮಂದಣ್ಣ ನಾಯಕಿ

'ಪುಷ್ಪ' ಸಿನಿಮಾವು ರಕ್ತ ಚಂದನ ಕಳ್ಳ ಸಾಗಣೆದಾರನ ಕತೆಯಾಗಿದ್ದು, ಸಿನಿಮಾದಲ್ಲಿ ಕನ್ನಡತಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ. ತಮಿಳಿನ ಖ್ಯಾತ ನಟ ಚಿಯಾನ್ ವಿಕ್ರಂ ಸಹ ಸಿನಿಮಾದಲ್ಲಿದ್ದು, ಅವರ ಪಾತ್ರದ ಬಗ್ಗೆ ಚಿತ್ರತಂಡ ಮಾಹಿತಿ ನೀಡಿಲ್ಲ. ವಿಕ್ರಂ ಅವರು ವಿಲನ್ ಪಾತ್ರದಲ್ಲಿ ನಟಿಸಲಿದ್ದಾರೆ ಎನ್ನಲಾಗುತ್ತಿದೆ.

More from Filmibeat

English summary
Allu Arjun's Pushpa movie song shooting video got viral on social media. Some fans took video of song shooting and posted on social media.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X