ಶ್ರೀವಲ್ಲಿ ಹಾಡಲ್ಲಿ ಅಲ್ಲು ಅರ್ಜುನ್ ಚಪ್ಪಲಿ ಜಾರಿದ ರಹಸ್ಯ ಹೇಳಿದ ಬಿಗ್ ಬಿ!

ಅಲ್ಲು ಅರ್ಜುನ್ ರಶ್ಮಿಕಾ ಮಂದಣ್ಣ ಅಭಿನಯದ 'ಪುಷ್ಪ' ಸಿನಿಮಾ ಸೂಪರ್ ಹಿಟ್ ಎನಿಸಿಕೊಂಡಿದೆ. ಬಾಕ್ಸಾಫಿಸ್‌ನಲ್ಲಿ ಕೋಟಿ, ಕೋಟಿ ಲೂಟಿ ಮಾಡಿದ ಈ ಚಿತ್ರ ತೆಲುಗು ಸಿನಿಮಾರಂಗದಲ್ಲಿ ಹೊಸ ಇತಿಹಾಸವನ್ನು ಬರೆದಿದೆ.

ಪುಷ್ಪ ಸಿನಿಮಾದ ಹವಾ 'ಪುಷ್ಪ 2' ಚಿತ್ರಕ್ಕೂ ಮುಂದುವರೆದಿದೆ. 'ಪುಷ್ಪ' ನೋಡಿದ ಪ್ರೇಕ್ಷಕರು ಈಗ ಪುಷ್ಪ 2 ಸಿನಿಮಾವನ್ನು ಕಣ್ತುಂಬಿಕೊಳ್ಳಲು ಕಾಯುತ್ತಿದ್ದಾರೆ. ಪುಷ್ಪ 2 ಸಿನಿಮಾಗಾಗಿ ಚಿತ್ರತಂಡದಿಂದ ಭರದ ಸಿದ್ಧತೆ ನಡೆಯುತ್ತಿದ್ದರೂ ಕೂಡ ಪುಷ್ಪ ಭಾಗ ಒಂದು ಮತ್ತೇ ಸದ್ದು ಮಾಡುತ್ತಿದೆ.

ಹೌದು ಪುಷ್ಪ ಮೊದಲ ಭಾಗದಲ್ಲಿ ಹತ್ತಾರು ವಿಶೇಷತೆಗಳಿವೆ. ಅದರಲ್ಲಿ ಸಿನಿಮಾದ ಹಾಡುಗಳು ಕೂಡ ಸೂಪರ್ ಹಿಟ್ ಆಗಿದ್ದು, ಈಗ ಶ್ರೀವಲ್ಲಿ ಹಾಡಿನ ಬಗ್ಗೆ ಸೀಕ್ರೇಟ್ ಒಂದು ರಿವೀಲ್ ಆಗಿದೆ. ಏನು ಆ ಸೀಕ್ರೇಟ್ ಎನ್ನುವುದನ್ನು ಮುಂದೆ ಓದಿ...

ಶ್ರೀವಲ್ಲಿಯನ್ನು ಇಷ್ಟ ಪಟ್ಟ ಮಂದಿ!

ಶ್ರೀವಲ್ಲಿಯನ್ನು ಇಷ್ಟ ಪಟ್ಟ ಮಂದಿ!

'ಪುಷ್ಪ' ಸಿನಿಮಾದ ಹಾಡುಗಳು ಅದ್ಭುತ ಎನಿಸಿಕೊಂಡಿವೆ. ಸಿನಿಮಾವನ್ನು ಇಷ್ಟಪಟ್ಟ ಮಂದಿ ಪುಷ್ಪಾ ಸಿನಿಮಾದ ಹಾಡುಗಳನ್ನು ಕೂಡ ಇಷ್ಟಪಟ್ಟಿದ್ದಾರೆ. ಊ ಅಂಟಾವಾ ಮಾವ, ಏ ಬಿಡ್ಡ, ಶ್ರೀವಲ್ಲಿ ಹಾಡುಗಳು ಚಿತ್ರದ ಚಿತ್ರದಲ್ಲಿ ಪ್ರಮುಖವಾಗಿ ಗಮನಸೆಳೆದ ಹಾಡುಗಳಾಗಿವೆ. ಇನ್ನು ಈ ಹಾಡುಗಳಲ್ಲಿ ಶ್ರೀವಲ್ಲಿ ಹಾಡು ತನ್ನದೇ ಆದ ಹಲವು ವಿಶೇಷತೆಗಳನ್ನು ಒಳಗೊಂಡಿತ್ತು. ಈ ಹಾಡು ಚಿತ್ರದ ನಾಯಕಿ ರಶ್ಮಿಕಾ ಮಂದಣ್ಣ ಅವರನ್ನು ಕುರಿತಾದ ಹಾಡು ಆಗಿದ್ದರೂ ಕೂಡ, ಇಲ್ಲಿ ಹೆಚ್ಚಾಗಿ ಗಮನ ಸೆಳೆದಿದ್ದು ಮಾತ್ರ ನಟ ಅಲ್ಲು ಅರ್ಜುನ್ ಡ್ಯಾನ್ಸಿಂಗ್ ಸ್ಟೈಲ್.

ಅಲ್ಲು ಅರ್ಜುನ್ ಚಪ್ಪಲಿ ಜಾರುವ ಸ್ಪೆಪ್ ಸೀಕ್ರೆಟ್!

ಅಲ್ಲು ಅರ್ಜುನ್ ಚಪ್ಪಲಿ ಜಾರುವ ಸ್ಪೆಪ್ ಸೀಕ್ರೆಟ್!

ಶ್ರೀವಲ್ಲಿ ಹಾಡು ಸಿಕ್ಕಾಪಟ್ಟೆ ಫೇಮಸ್ ಆಯ್ತು. ಹಾಡು ರಿಲೀಸ್ ಆಗುತ್ತಲೇ ಎಲ್ಲೆಲ್ಲೂ ಚಿತ್ರದ ಹಾಡಿನ ಹವಾ ಸೃಷ್ಟಿಯಾಗಿತ್ತು. ಈ ಹಾಡಿನಲ್ಲಿ ನಟ ಅಲ್ಲು ಅರ್ಜುನ್ ಡಾನ್ಸ್ ಮಾಡಬೇಕಾದರೆ ಎಡವಿ ಚಪ್ಪಲಿಯನ್ನು ಬಿಟ್ಟು ಮುಂದೆ ಹೋಗುತ್ತಾರೆ ಮತ್ತೆ ಹಿಂದೆ ಬಂದು ಚಪ್ಪಲಿಯನ್ನು ಆಧರಿಸಿ ಅದನ್ನು ಮುಂದುವರೆಸುತ್ತಾರೆ. ಇದು ಎಲ್ಲೆಲ್ಲೂ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಸಾಕಷ್ಟು ಸೆಲೆಬ್ರಿಟಿಗಳು, ಕ್ರಿಕೆಟಿಗರು ಸೇರಿದಂತೆ ಸಾಮಾನ್ಯ ಜನರು ಕೂಡ ಇದನ್ನು ಫಾಲೋ ಮಾಡಿದರು. ಆದರೆ ಈ ಸ್ಟೆಪ್ ಹೇಗೆ ಸೃಷ್ಟಿಸಲಾಯಿತು ಎನ್ನುವುದಕ್ಕೆ ಈಗ ಉತ್ತರ ಸಿಕ್ಕಿದೆ. ಇದು ಕೊರಿಯೋಗ್ರಾಫರ್ ಸೃಷ್ಟಿಸಿದ ಸ್ಟೆಪ್ ಅಲ್ಲ. ಬದಲಿಗೆ ಅಕಸ್ಮಾತಾಗಿ ನಡೆದಂತಹ ಘಟನೆಯಿದು.

ಅಲ್ಲು ಅರ್ಜುನ್ ಸ್ಟೆಪ್ ಬಗ್ಗೆ ಅಮಿತಾಬ್ ಬಚ್ಚನ್ ಮಾತು!

ಅಲ್ಲು ಅರ್ಜುನ್ ಸ್ಟೆಪ್ ಬಗ್ಗೆ ಅಮಿತಾಬ್ ಬಚ್ಚನ್ ಮಾತು!

ಬಾಲಿವುಡ್ ನಟ ಅಮಿತಾಬ್ ಬಚ್ಚನ್ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಹಾಕಿದ ಸ್ಟೆಪ್ ಬಗ್ಗೆ ಮಾತನಾಡಿದ್ದಾರೆ. ಕೌನ್ ಬನೇಗಾ ಕರೋಡ್ ಪತಿ ಕಾರ್ಯಕ್ರಮದಲ್ಲಿ ಸಿನಿಮಾ ಬಗ್ಗೆ ಮಾತನಾಡುತ್ತಾ ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಅವರ ಸ್ಟೆಪ್ ಬಗ್ಗೆ ಮಾತನಾಡಿದ್ದಾರೆ. " ಹೈದರಾಬಾದ್ ನಲ್ಲಿ ಶೂಟಿಂಗ್‌ನಲ್ಲಿ ಇದ್ದಾಗ ನಾನು ಒಮ್ಮೆ ಪುಷ್ಪಾ ಚಿತ್ರದ ನಿರ್ದೇಶಕರ ಬಳಿ, ಶ್ರೀವಲ್ಲಿ ಹಾಡಿನಲ್ಲಿ ಅಲ್ಲು ಅರ್ಜುನ್ ಚಪ್ಪಲಿ ಬಿಟ್ಟು ಹೋಗುವ ಬಗ್ಗೆ ಕೇಳಿದ್ದೆ. ಅದು ಮಿಸ್ಟೇಕ್ ಆಗಿದ್ದ ಅಥವಾ ಕೊರಿಯೋಗ್ರಾಫ್ ಮಾಡಿದ್ದ ಎಂದು. ಆಗ ನಿರ್ದೇಶಕರು ನೀವು ಹೇಳಿದ್ದು ಸರಿ ಅದು ಅಕಸ್ಮಾತಾಗಿ ಅಲ್ಲು ಅರ್ಜುನ್ ಮಾಡಿರುವ ಮಿಸ್ಟೇಕ್ ಅದನ್ನ ಹಾಗೆ ಸಿನಿಮಾದಲ್ಲಿ ಬಳಸಿಕೊಂಡಿದ್ದೇವೆ ಎಂದರು ಎಂದಿದ್ದಾರೆ ನಟ ಅಮಿತಾಬ್ ಬಚ್ಚನ್

ಪುಷ್ಪ 2 ಚಿತ್ರಕ್ಕಾಗಿ ತಯಾರಿ!

ಪುಷ್ಪ 2 ಚಿತ್ರಕ್ಕಾಗಿ ತಯಾರಿ!

'ಪುಷ್ಪ' ಸಿನಿಮಾ ಹಲವು ದಾಖಲೆಗಳನ್ನು ಮಾಡಿ ಇದೀಗ ಮುಂದಿನ ಹೆಜ್ಜೆಯನ್ನು ಇಟ್ಟಿದೆ. ಪುಷ್ಪ 2 ಸಿನಿಮಾಗಾಗಿ ತೆರೆಮರೆಯಲ್ಲಿ ಸಾಕಷ್ಟು ತಯಾರಿ ನಡೆಯುತ್ತಿದೆ. ಈ ಚಿತ್ರದಲ್ಲಿ ಅಲ್ಲು ಅರ್ಜುನ್ ಮತ್ತು ರಶ್ಮಿಕಾ ಮಂದಣ್ಣ ಕಾಂಬಿನೇಷನ್ ಮುಂದುವರಿಯಲಿದ್ದು, ಮತ್ತಷ್ಟು ಹೆಸರಾಂತ ಕಲಾವಿದರು ಪುಷ್ಪ ಬಳಗವನ್ನು ಸೇರಿಕೊಂಡಿದ್ದಾರೆ. ಚಿತ್ರದ ಕಥೆಯಲ್ಲಿ ಬಹಳಷ್ಟು ಬದಲಾವಣೆಯನ್ನು ಮಾಡಿಕೊಂಡು ಸುಕುಮಾರ್ ಶೂಟಿಂಗ್ ಸ್ಟಾರ್ಟ್ ಮಾಡುವ ಯೋಚನೆಯಲ್ಲಿದ್ದಾರೆ. ಪುಷ್ಪ ಒಂದರ ಯಶಸ್ಸು ಪುಷ್ಪ ಟು ಮೇಲೆ ನಿರೀಕ್ಷೆ ಹುಟ್ಟುಹಾಕಿದೆ. ಪುಷ್ಪ 2 ಮುಂದಿನ ಅಪ್ಡೇಟ್ ಗಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ.

More from Filmibeat

English summary
Pushpa Movie Srivalli Song Allu Arjun Slipper Step Secret reveal, It Was A Mistake, Know More
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X