Just In
Don't Miss!
- News
ಡ್ರಗ್ಸ್ ಪ್ರಕರಣ: ಜೈಲಿನಲ್ಲಿ ಜೀವಕ್ಕೆ ಬೆದರಿಕೆ ಇದೆ ಎಂದು ಬಿಜೆಪಿ ಯುವ ನಾಯಕಿ ಪಮೇಲಾ ಆರೋಪ
- Automobiles
ರ್ಯಾಪಿಡ್ ಬದಲಾಗಿ ಹೊಸ ಸಿ ಸೆಗ್ಮೆಂಟ್ ಸೆಡಾನ್ ಬಿಡುಗಡೆ ಮಾಡಲಿದೆ ಸ್ಕೋಡಾ
- Lifestyle
ಬೆಡ್ನಲ್ಲಿ ಪುರುಷರ ಸಾಮರ್ಥ್ಯ ಹೆಚ್ಚಿಸುತ್ತೆ ಈ ಕೆಗೆಲ್ ವ್ಯಾಯಾಮ
- Sports
ಭಾರತ vs ಇಂಗ್ಲೆಂಡ್: ಕೊಹ್ಲಿ ಜೊತೆಗಿನ ಮಾತಿನ ಚಕಮಕಿ ಬಗ್ಗೆ ಪ್ರತಿಕ್ರಿಯಿಸಿದ ಬೆನ್ ಸ್ಟೋಕ್ಸ್
- Finance
ಮತ್ತಷ್ಟು ಕಡಿಮೆಯಾಯ್ತು ಚಿನ್ನದ ಬೆಲೆ: ಮಾರ್ಚ್ 04ರ ಬೆಲೆ ಇಲ್ಲಿದೆ
- Education
UAS Dharwad Recruitment 2021: ಅರೆಕಾಲಿಕ ಉಪನ್ಯಾಸಕ ಹುದ್ದೆಗಳಿಗೆ ನೇರ ಸಂದರ್ಶನ
- Technology
ಒನ್ಪ್ಲಸ್ ನಾರ್ಡ್ ಜುಲೈ 15 ರಿಂದ ಅಮೆಜಾನ್ ತಾಣದಲ್ಲಿ ಪ್ರಿ-ಆರ್ಡರ್ಗೆ ಲಭ್ಯವಿದೆ; ಖರೀದಿಸುವಲ್ಲಿ ಮೊದಲಿಗರಾಗಿರಿ!
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆರ್‌ಆರ್‌ಆರ್, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ
ದಕ್ಷಿಣ ಭಾರತದ ನಿರೀಕ್ಷಿತ ಚಿತ್ರಗಳು ಒಂದೊಂದೆ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿದೆ. ಬೇರೆ ಚಿತ್ರಗಳಿಗೆ ತೊಂದರೆಯಾಗಬಾರದು ಹಾಗೂ ತಮ್ಮ ಸಿನಿಮಾಗಳಿಗೆ ಕಾಂಪಿಟೇಶನ್ ಎದುರಾಗಬಾರದು ಎಂಬ ಮುಂಜಾಗ್ರತೆಯಿಂದ ಬೇಗ ಬೇಗ ರಿಲೀಸ್ ದಿನಾಂಕ ಲಾಕ್ ಮಾಡುತ್ತಿವೆ.
ಎಸ್‌ಎಸ್ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಚಿತ್ರಗಳು ರಿಲೀಸ್ ದಿನಾಂಕವನ್ನು ಪ್ರಕಟಿಸಿ ಕಾಯ್ದಿರಿಸಿದೆ. ಈಗ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವ ಈ ಚಿತ್ರ ಯಾವಾಗ ತೆರೆಕಾಣುತ್ತಿದೆ? ಮುಂದೆ ಓದಿ....

ಆಗಸ್ಟ್ 13ಕ್ಕೆ ಪುಷ್ಪ ಎಂಟ್ರಿ
'ಅಲಾವೈಕುಂಠಪುರಂಲೋ' ಸಿನಿಮಾ ಬಳಿಕ ಅಲ್ಲು ಅರ್ಜುನ್ ನಟಿಸುತ್ತಿರುವ ಚಿತ್ರ 'ಪುಷ್ಪ'. ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಮೇಕಿಂಗ್ ಹಂತದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆಗಸ್ಟ್ 13ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.
2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?

ಆಗಸ್ಟ್‌ನಲ್ಲಿ ಅಜಿತ್ ಸಿನಿಮಾ ಬರಬಹುದು?
ಸದ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಪುಷ್ಪ ಸಿನಿಮಾ ಬಿಟ್ಟರೆ ಬೇರೆ ಯಾವ ಚಿತ್ರವೂ ಬಿಡುಗಡೆಯಾಗುತ್ತಿಲ್ಲ. ಆದರೆ, ತಮಿಳು ನಟ ಅಜಿತ್ ನಟನೆಯ ವಾಲಿಮೈ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ವಾಲಿಮೈ ಸಿನಿಮಾನೂ ಇದೇ ದಿನಾಂಕ ಪಕ್ಕಾ ಮಾಡಿಕೊಂಡ್ರೆ ಬಾಕ್ಸ್ ಆಫೀಸ್‌ನಲ್ಲಿ ಫೈಟ್ ಎದುರಾಗುವುದು ಖಚಿತ.

ಆರ್‌ಆರ್‌ಆರ್, ಅಣ್ಣಾತ್ತೆ ಯಾವಾಗ?
ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಕಾಣಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ನವೆಂಬರ್ 4 ರಂದು ಬಿಡುಗಡೆಯಾಗಲಿದೆ.
ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?

ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿದೆ?
ಈ ವರ್ಷದ ನಿರೀಕ್ಷೆಯ ಚಿತ್ರಗಳ ಪೈಕಿ ಬಹುತೇಕ ಪ್ಯಾನ್ ಇಂಡಿಯಾ ಚಿತ್ರಗಳು ರಿಲೀಸ್ ದಿನಾಂಕ ಕಾಯ್ದಿರಿಸಿದೆ. ಹಾಗ್ನೋಡಿದ್ರೆ, ಕೆಜಿಎಫ್ ಚಾಪ್ಟರ್ 2 ಯಾವಾಗ ಬರಬಹುದು ಎಂಬ ಲೆಕ್ಕಾಚಾರ ಈಗ ಸಿನಿ ಇಂಡಸ್ಟ್ರಿಯಲ್ಲಿ ಚರ್ಚೆಯಲ್ಲಿದೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಘೋಷಣೆ ಮಾಡಿದ್ಮೇಲೆ ಇನ್ನುಳಿದ ಕೆಲವು ಚಿತ್ರಗಳು ರಿಲೀಸ್‌ಗೆ ತಯಾರಿ ನಡೆಸಿವೆ.