For Quick Alerts
  ALLOW NOTIFICATIONS  
  For Daily Alerts

  ಆರ್‌ಆರ್‌ಆರ್‌, ಅಣ್ಣಾತ್ತೆ ಬಳಿಕ ಪುಷ್ಪ ಚಿತ್ರದ ಬಿಡುಗಡೆ ದಿನಾಂಕವೂ ಘೋಷಣೆ

  |

  ದಕ್ಷಿಣ ಭಾರತದ ನಿರೀಕ್ಷಿತ ಚಿತ್ರಗಳು ಒಂದೊಂದೆ ಬಿಡುಗಡೆ ದಿನಾಂಕವನ್ನು ಘೋಷಿಸುತ್ತಿದೆ. ಬೇರೆ ಚಿತ್ರಗಳಿಗೆ ತೊಂದರೆಯಾಗಬಾರದು ಹಾಗೂ ತಮ್ಮ ಸಿನಿಮಾಗಳಿಗೆ ಕಾಂಪಿಟೇಶನ್ ಎದುರಾಗಬಾರದು ಎಂಬ ಮುಂಜಾಗ್ರತೆಯಿಂದ ಬೇಗ ಬೇಗ ರಿಲೀಸ್ ದಿನಾಂಕ ಲಾಕ್ ಮಾಡುತ್ತಿವೆ.

  ವಿದೇಶದಲ್ಲಿ ಹೆಚ್ಚಾಯ್ತು RRR ಸಿನಿಮಾಗೆ ಬೇಡಿಕೆ | Filmibeat Kannada

  ಎಸ್‌ಎಸ್‌ ರಾಜಮೌಳಿ ನಿರ್ದೇಶನದ ಆರ್ ಆರ್ ಆರ್ ಸಿನಿಮಾ, ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಚಿತ್ರಗಳು ರಿಲೀಸ್ ದಿನಾಂಕವನ್ನು ಪ್ರಕಟಿಸಿ ಕಾಯ್ದಿರಿಸಿದೆ. ಈಗ ಅಲ್ಲು ಅರ್ಜುನ್ ನಟನೆಯ ಪುಷ್ಪ ಸಿನಿಮಾ ಬಿಡುಗಡೆ ದಿನಾಂಕವನ್ನು ಬಹಿರಂಗಪಡಿಸಿದೆ. ಪ್ಯಾನ್ ಇಂಡಿಯಾ ರಿಲೀಸ್ ಆಗುತ್ತಿರುವ ಈ ಚಿತ್ರ ಯಾವಾಗ ತೆರೆಕಾಣುತ್ತಿದೆ? ಮುಂದೆ ಓದಿ....

  ಆಗಸ್ಟ್ 13ಕ್ಕೆ ಪುಷ್ಪ ಎಂಟ್ರಿ

  ಆಗಸ್ಟ್ 13ಕ್ಕೆ ಪುಷ್ಪ ಎಂಟ್ರಿ

  'ಅಲಾವೈಕುಂಠಪುರಂಲೋ' ಸಿನಿಮಾ ಬಳಿಕ ಅಲ್ಲು ಅರ್ಜುನ್ ನಟಿಸುತ್ತಿರುವ ಚಿತ್ರ 'ಪುಷ್ಪ'. ಸುಕುಮಾರ್ ಈ ಚಿತ್ರ ನಿರ್ದೇಶನ ಮಾಡ್ತಿದ್ದು, ಮೇಕಿಂಗ್ ಹಂತದಲ್ಲಿ ಭಾರಿ ಕುತೂಹಲ ಮೂಡಿಸಿದೆ. ಮೈತ್ರಿ ಮೂವಿ ಮೇಕರ್ಸ್ ಈ ಚಿತ್ರ ನಿರ್ಮಾಣ ಮಾಡುತ್ತಿದ್ದು, ಆಗಸ್ಟ್ 13ಕ್ಕೆ ಸಿನಿಮಾ ರಿಲೀಸ್ ಮಾಡುವುದಾಗಿ ಚಿತ್ರತಂಡ ಅಧಿಕೃತವಾಗಿ ಘೋಷಿಸಿದೆ.

  2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?2021ರಲ್ಲಿ ರಿಲೀಸ್ ದಿನಾಂಕ ಕಾಯ್ದಿರಿಸಿದ ಸೌತ್ ಸ್ಟಾರ್ಸ್: ಯಾರು ಯಾವಾಗ ಬರ್ತಾರೆ?

  ಆಗಸ್ಟ್‌ನಲ್ಲಿ ಅಜಿತ್ ಸಿನಿಮಾ ಬರಬಹುದು?

  ಆಗಸ್ಟ್‌ನಲ್ಲಿ ಅಜಿತ್ ಸಿನಿಮಾ ಬರಬಹುದು?

  ಸದ್ಯಕ್ಕೆ ಆಗಸ್ಟ್ ತಿಂಗಳಲ್ಲಿ ಪುಷ್ಪ ಸಿನಿಮಾ ಬಿಟ್ಟರೆ ಬೇರೆ ಯಾವ ಚಿತ್ರವೂ ಬಿಡುಗಡೆಯಾಗುತ್ತಿಲ್ಲ. ಆದರೆ, ತಮಿಳು ನಟ ಅಜಿತ್ ನಟನೆಯ ವಾಲಿಮೈ ಸಿನಿಮಾ ಸ್ವಾತಂತ್ರ್ಯ ದಿನಾಚರಣೆಯ ಪ್ರಯುಕ್ತ ಚಿತ್ರಮಂದಿರಕ್ಕೆ ಬರುವ ಲೆಕ್ಕಾಚಾರದಲ್ಲಿದೆ ಎಂದು ಹೇಳಲಾಗಿದೆ. ಒಂದು ವೇಳೆ ವಾಲಿಮೈ ಸಿನಿಮಾನೂ ಇದೇ ದಿನಾಂಕ ಪಕ್ಕಾ ಮಾಡಿಕೊಂಡ್ರೆ ಬಾಕ್ಸ್ ಆಫೀಸ್‌ನಲ್ಲಿ ಫೈಟ್ ಎದುರಾಗುವುದು ಖಚಿತ.

  ಆರ್‌ಆರ್‌ಆರ್, ಅಣ್ಣಾತ್ತೆ ಯಾವಾಗ?

  ಆರ್‌ಆರ್‌ಆರ್, ಅಣ್ಣಾತ್ತೆ ಯಾವಾಗ?

  ರಾಮ್ ಚರಣ್ ತೇಜ ಮತ್ತು ಜೂನಿಯರ್ ಎನ್‌ಟಿಆರ್ ನಟನೆಯಲ್ಲಿ ತಯಾರಾಗುತ್ತಿರುವ ಆರ್ ಆರ್ ಆರ್ ಸಿನಿಮಾ ಅಕ್ಟೋಬರ್ 13ಕ್ಕೆ ತೆರೆಕಾಣಲಿದೆ. ಸೂಪರ್ ಸ್ಟಾರ್ ರಜನಿಕಾಂತ್ ನಟನೆಯ ಅಣ್ಣಾತ್ತೆ ಸಿನಿಮಾ ನವೆಂಬರ್ 4 ರಂದು ಬಿಡುಗಡೆಯಾಗಲಿದೆ.

  ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಪಕ್ಕಾ, ಇದೇನಾ ಅಧಿಕೃತ ಡೇಟ್?

  ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿದೆ?

  ಕೆಜಿಎಫ್ ಚಾಪ್ಟರ್ 2 ಮೇಲೆ ಕಣ್ಣಿದೆ?

  ಈ ವರ್ಷದ ನಿರೀಕ್ಷೆಯ ಚಿತ್ರಗಳ ಪೈಕಿ ಬಹುತೇಕ ಪ್ಯಾನ್ ಇಂಡಿಯಾ ಚಿತ್ರಗಳು ರಿಲೀಸ್ ದಿನಾಂಕ ಕಾಯ್ದಿರಿಸಿದೆ. ಹಾಗ್ನೋಡಿದ್ರೆ, ಕೆಜಿಎಫ್ ಚಾಪ್ಟರ್ 2 ಯಾವಾಗ ಬರಬಹುದು ಎಂಬ ಲೆಕ್ಕಾಚಾರ ಈಗ ಸಿನಿ ಇಂಡಸ್ಟ್ರಿಯಲ್ಲಿ ಚರ್ಚೆಯಲ್ಲಿದೆ. ಕೆಜಿಎಫ್ ಚಾಪ್ಟರ್ 2 ರಿಲೀಸ್ ದಿನಾಂಕ ಘೋಷಣೆ ಮಾಡಿದ್ಮೇಲೆ ಇನ್ನುಳಿದ ಕೆಲವು ಚಿತ್ರಗಳು ರಿಲೀಸ್‌ಗೆ ತಯಾರಿ ನಡೆಸಿವೆ.

  RRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿRRR ಸಿನಿಮಾ ಬಿಡುಗಡೆ ದಿನಾಂಕ ಘೋಷಿಸಿದ ರಾಜಮೌಳಿ

  English summary
  Telugu actor Allu Arjun Starrer Pushpa Movie will begin his hunt on August 13th 2021.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X