ಇಲ್ಲಿದೆ ನೋಡಿ 'ಪುಷ್ಪ' ಸೀರೆ: ರಶ್ಮಿಕಾ, ಅಲ್ಲು ಅರ್ಜುನ್ ಸೀರೆಯಲ್ಲಿ ಮಿಂಚಿಂಗ್
ರಶ್ಮಿಕಾ ಮಂದಣ್ಣ, ಅಲ್ಲು ಅರ್ಜುನ್ ಅಭಿನಯದ 'ಪುಷ್ಪ: ದಿ ರೈಸ್' ಸಿನಿಮಾ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ದೇಶದ ಗಡಿ ದಾಟಿ ಪುಷ್ಪ ಸದ್ದು ಮಾಡಿದೆ. ವಿಶ್ವದಾದ್ಯಾಂತ ಪುಷ್ಪ ಸಿನಿಮಾದ ನಾದ ಮೊಳಗಿಸಿದೆ. ಸಿನಿಮಾ ನಿರೀಕ್ಷೆಗೂ ಮೀರಿ ದೊಡ್ಡ ಯಶಸ್ಸು ಕಂಡಿದೆ. ಜೊತೆಗೆ ಬಾಕ್ಸಾಫೀಸ್ ಗಳಿಕೆಯಲ್ಲೂ ಕೂಡ ಮಹತ್ತರ ದಾಖಲೆ ಮಾಡಿದೆ.
ಈ ಚಿತ್ರದಲ್ಲಿದ ಮೇಕಿಂಗ್, ಪಾತ್ರಧಾರಿಗಳ ಲುಕ್, ಡೈಲಾಗ್ಸ್ ಪರಿ ಕೂಡ ವಿಭಿನ್ನ ಮತ್ತು ಹೊಸತು ಎನಿಸಿತು. ಹಾಗಾಗಿ ಈ ಹೊಸತನವನ್ನು ಜನ ಮೆಚ್ಚಿಕೊಂಡಾಡಿದ್ದಾರೆ. ನಟಿ ರಶ್ಮಿಕಾ ಮಂದಣ್ಣ ಮತ್ತು ಅಲ್ಲು ಅರ್ಜುನ್ ಇಬ್ಬರೂ ಕೂಡ ಪುಷ್ಪ ಚಿತ್ರದಲ್ಲಿ ಡಿಗ್ಲ್ಯಾಮ್ ಲುಕ್‌ನಲ್ಲಿ ಕಾಣಿಸಿಕೊಂಡಿದ್ದಾರೆ. ಸದಾ ಗ್ಲ್ಯಾಮರಸ್ ಲುಕ್‌ನಲ್ಲಿ ಕಾಣಿಸಿಕೊಳ್ಳುವ ಈ ತಾರೆಯರ ಲುಕ್‌ಗೆ ಪ್ರೇಕ್ಷಕರು ಬೋಲ್ಡ್ ಆಗಿದ್ದಾರೆ. ಇವರ ಲುಕ್ ಯಾವ ಮಟ್ಟಿಗೆ ಹೆಸರುವಾಸಿ ಆಗಿದೆ ಅಂದರೆ ಅದರಿಂದ ಹೊಸ ವ್ಯಾಪಾರವೇ ಆರಂಭ ಆಗಿದೆ.
ಪುಷ್ಪ ಸಿನಿಮಾದ ಫೋಸ್ಟರ್, ಹಾಡುಗಳು, ಡೈಲಾಗ್‌ಗಳು ಎಲ್ಲವೂ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ. ಆದರೆ ಈಗ ಈ ಚಿತ್ರದ ವಿಚಾರದಲ್ಲಿ ಮತ್ತೊಂದು ವಿಚಾರ ವೈರಲ್ ಆಗುತ್ತಿದೆ. ಅದುವೇ ಪುಷ್ಪ ಸೀರೆ. ಹೌದು ಪುಷ್ಪ ಸಿನಿಮಾ ಎಷ್ಟರ ಮಟ್ಟಿಗೆ ಖ್ಯಾತಿ ಗಳಿಸಿದೆ ಎಂದರೆ, ಪುಷ್ಪ ಚಿತ್ರದ ಭಾವ ಚಿತ್ರಗಳು ಇರುವ ಸೀರೆ ಮಾರುಕಟ್ಟೆಗೆ ಬಂದಿದೆ. ಸೂರತ್‌ನಲ್ಲಿ ಈ ತರಹದ ಸೀರೆ ತಯಾರಿಸಲಾಗಿದ್ದು, ಬೇಡಿಕೆ ಕೂಡ ಹೆಚ್ಚುತ್ತಿದೆಯಂತೆ.

ಈ ಸೀರೆಯಲ್ಲಿ ಕೇವಲ ಪುಷ್ಪ ಸಿನಿಮಾದ ಯಾವುದೋ ಒಂದು ಪೋಸ್ಟರ್ ಇಲ್ಲ. ಬದಲಿಗೆ ಶ್ರೀವಲ್ಲಿ ಅವತಾರದಲ್ಲಿರುವ ರಶ್ಮಿಕಾ ಮಂದಣ್ಣ ಮತ್ತು ಪುಷ್ಪ ಅವತಾರದಲ್ಲಿ ಇರುವ ಅಲ್ಲು ಅರ್ಜುನ್ ಫೋಟೊಗಳು ಇವೆ. ರಶ್ಮಿಕಾ, ಅಲ್ಲು ಅರ್ಜುನ್ ಪ್ರಿಂಟ್ ಇರುವ ಬಗೆ ಬಗೆ ಬಣ್ಣದ ಸೀರೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಸದ್ಯ ಈ ಸೀರೆಯ ಫೋಟೋ ಮತ್ತು ವಿಡಿಯೋಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ.
ಸೂರತ್‌ನ ಬಟ್ಟೆ ಮಾರುಕಟ್ಟೆಯು ವಿವಿಧ ಉಡುಪುಗಳ ಮಾರಾಟಕ್ಕೆ ಹೆಸರುವಾಸಿ. ಚರಂಜೀತ್ ಕ್ರಿಯೇಷನ್ ಎಂಬ ಅಂಗಡಿಯ ವತಿಯಿಂದ ಈ ಸೀರೆ ಸಿದ್ಧಗೊಂಡಿವೆ. ಮಾರುಕಟ್ಟೆಯಲ್ಲಿ ಈ ಪುಷ್ಪ ಸೀರೆಗಳು ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿವೆಯಂತೆ. ಪುಷ್ಪಾ ಅವರ ಪೋಸ್ಟರ್‌ಗಳನ್ನು ಬಳಸಿಕೊಂಡು ಸೀರೆಗಳನ್ನು ರಚಿಸುವ ಕಲ್ಪನೆಯನ್ನು ಮಾಲೀಕ ಚರಣಪಾಲ್ ಸಿಂಗ್ ಪರಿಚಯಿಸಿದ್ದಾರೆ.
ಮುದ್ರಿತ ಸೀರೆಗಳ ಕೆಲವು ಮಾದರಿಗಳನ್ನು ಮಾಡಿ ಪರಿಶೀಲೀಸಿದ ನಂತರ, ಮಾಲೀಕರು ಅನೇಕ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಜನರು ಈ ಉತ್ಪನ್ನವನ್ನು ತುಂಬಾ ಇಷ್ಟ ಪಟ್ಟಿದ್ದಾರಂತೆ, ಅಂಗಡಿ ಮಾಲೀಕರು ದೇಶಾದ್ಯಂತದ ಜವಳಿ ವ್ಯಾಪಾರಿಗಳಿಂದ ಭಾರಿ ಬೇಡಿಕೆ ಪಡೆಯುತ್ತಿದ್ದಾರಂತೆ.
ರಾಜಸ್ಥಾನ, ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಛತ್ತೀಸ್‌ಗಢ ಸೇರಿದಂತೆ ಪ್ರಮುಖ ರಾಜ್ಯಗಳಿಂದ 'ಪುಷ್ಪ' ಸೀರೆಗಳಿಗೆ ಹೆಚ್ಚಿನ ಬೇಡಿಕೆ ಬರುತ್ತಿದೆ ಎಂದು ಅಂಗಡಿ ಮಾಲಿಕರು ಮಾಹಿತಿ ಹಂಚಿಕೊಂಡಿದ್ದಾರೆ. ಈ ಹಿಂದೆ, ಸೂರತ್‌ನ ಅದೇ ಬಟ್ಟೆ ಮಾರುಕಟ್ಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಭಾವ ಚಿತ್ರದ 3-ಡಿ ಪ್ರಿಂಟ್‌ಗಳೊಂದಿಗೆ ಸೀರೆಗಳನ್ನು ಮಾರಾಟ ಮಾಡಲಾಗಿತ್ತು.


Click it and Unblock the Notifications











