ತೆಲುಗು ಸಿನಿಮಾದಲ್ಲಿ ಮಾಧವನ್ ವಿಲನ್ ಪಾತ್ರ: ಟ್ವೀಟ್ ಮೂಲಕ ಸ್ಪಷ್ಟನೆ
'ವಿಕ್ರಂ ವೇದಾ' ತಮಿಳು ಸಿನಿಮಾ ಮೂಲಕ ಲವರ್ ಬಾಯ್ ಇಮೇಜನ್ನು ರಗಡ್ ಆಗಿ ಬದಲಾಯಿಸಿಕೊಂಡಿರುವ ಆರ್.ಮಾಧವನ್, ತೆಲುಗಿನ ಸಿನಿಮಾದಲ್ಲಿ ವಿಲನ್ ಆಗಿ ನಟಿಸುತ್ತಿದ್ದಾರೆ ಎನ್ನಲಾಗಿತ್ತು.
ಅಲ್ಲು ಅರ್ಜುನ್ ನಟನೆಯ 'ಪುಷ್ಪಾ' ಸಿನಿಮಾದಲ್ಲಿ ಮಾಧವನ್ ಅವರು ವಿಲನ್ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿ ತುಸು ಗಟ್ಟಿಯಾಗಿಯೇ ಹರಿದಾಡಿತ್ತು.
ಈ ಸುದ್ದಿ ಸ್ವತಃ ಅಲ್ಲು ಅರ್ಜುನ್ ಹಾಗೂ ಮಾಧವನ್ ಅಭಿಮಾನಿಗಳಿಗೆ ಖುಷಿ ನೀಡಿತ್ತು. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಮಾಧವನ್ 'ಇದು ಸತ್ಯ ಸುದ್ದಿಯಲ್ಲ' ಎಂದಿದ್ದಾರೆ.

ಪುಷ್ಪಾ ಸಿನಿಮಾದಲ್ಲಿ ನಟಿಸುತ್ತಿಲ್ಲ: ಮಾಧವನ್
ಮಾಧವನ್ ಪುಷ್ಪಾ ಸಿನಿಮಾದಲ್ಲಿ 'ನೆಗೆಟಿವ್' ಪಾತ್ರ ಮಾಡಲಿದ್ದಾರೆ ಎಂದು ಪ್ರಕಟವಾದ ಸುದ್ದಿಗೆ ಟ್ವೀಟ್ ಮೂಲಕ ಪ್ರತಿಕ್ರಿಯಿಸಿರುವ ಮಾಧವನ್, 'ಇದು ಸಂಪೂರ್ಣ ಸುಳ್ಳು ಸುದ್ದಿ' ಎಂದಿದ್ದಾರೆ.

ಮಾಧವನ್ ಅಭಿಮಾನಿಗಳಿಗೆ ನಿರಾಸೆ
ಮಾಧವನ್ ಟ್ವೀಟ್ ಹಲವರು ಪ್ರತಿಕ್ರಿಯೆ ನೀಡಿದ್ದು, ಪುಷ್ಪಾ ಸಿನಿಮಾದಲ್ಲಿ ನೀವು ನಟಿಸುತ್ತಿಲ್ಲ ಎಂಬ ಸುದ್ದಿ ಕೇಳಿ ನಮಗೆ ಬೇಸರವಾಗಿದೆ. ನೀವು ಪುಷ್ಪಾ ಸಿನಿಮಾದಲ್ಲಿ ನಟಿಸುತ್ತೀರೆಂಬ ನಿರೀಕ್ಷೆಯಲ್ಲಿ ಇದ್ದೆವು ಎಂದಿದ್ದಾರೆ.

ಮಾಧವನ್ ನಟನೆಯ ಸಿನಿಮಾ ಅಕ್ಟೋಬರ್ 2ಕ್ಕೆ ಬಿಡುಗಡೆ
ಆರ್.ಮಾಧವನ್ ನಟನೆಯ ನಿಶ್ಯಬ್ಧಂ ಸಿನಿಮಾ ಅಕ್ಟೋಬರ್ 2 ರಂದು ಅಮೆಜಾನ್ ಪ್ರೈಂ ನಲ್ಲಿ ಬಿಡುಗಡೆ ಆಗುತ್ತಿದೆ. ಸಿನಿಮಾದಲ್ಲಿ ಖ್ಯಾತ ನಟಿ ಅನುಷ್ಕಾ ಶೆಟ್ಟಿ ಸಹ ಇದ್ದಾರೆ. ಇದೊಂದು ಥ್ರಿಲ್ಲರ್ ಕತೆಯುಳ್ಳ ಸಿನಿಮಾ ಆಗಿದೆ.
Recommended Video

ಪುಷ್ಪಾ ಸಿನಿಮಾದ ವಿಲನ್ ಯಾರು?
ಇನ್ನು ಪುಷ್ಪಾ ಸಿನಿಮಾದ ವಿಲನ್ ಪಾತ್ರದ ಬಗ್ಗೆ ಭಾರಿ ಕುತೂಹಲ ಎದ್ದಿದೆ. ಮೊದಲಿಗೆ ವಿಜಯ್ ಸೇತುಪತಿ ವಿಲನ್ ಪಾತ್ರ ಮಾಡಲಿದ್ದಾರೆ ಎನ್ನಲಾಗಿತ್ತು. ಆದರೆ ಅದನ್ನು ಸೇತುಪತಿ ನಿರಾಕರಿಸಿದರು. ಉಪೇಂದ್ರ ನಟಿಸುತ್ತಾರೆ ಎನ್ನಲಾಯಿತು, ಅದೂ ಸಹ ಸುಳ್ಳಾಯಿತು. ಈಗ ಡಾಲಿ ಧನಂಜಯ್ ವಿಲನ್ ಪಾತ್ರದಲ್ಲಿ ನಟಿಸುತ್ತಾರೆ ಎನ್ನಲಾಗುತ್ತಿದೆ.


Click it and Unblock the Notifications











