ಕೈಯಲ್ಲಿ ಆ ಪುಸ್ತಕ.. ಜ್ಯೂ. ಎನ್‌ಟಿಆರ್ ತೆರೆಮೇಲೆ ಕುಮಾರಸ್ವಾಮಿ ಆಗುವುದು ಖಚಿತ

ತೆಲುಗು ನಟ ಜ್ಯೂ. ಎನ್‌ಟಿಆರ್‌ ಬ್ಲಾಕ್‌ಬಸ್ಟರ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಮುಂದೆ ಮತ್ತಷ್ಟು ಇಂಟ್ರೆಸ್ಟಿಂಗ್ ಪಾತ್ರಗಳಲ್ಲಿ ಪ್ರೇಕ್ಷಕರ ಮುಂದೆ ಬರ್ತಿದ್ದಾರೆ. ಇದೀಗ ಬಾಲಿವುಡ್ ಅಂಗಳಕ್ಕೂ ತಾರಕ್ ಜಿಗಿದಿದ್ದು 'ವಾರ್-2' ಚಿತ್ರಕ್ಕೆ ಕೌಂಟ್‌ಡೌನ್ ಶುರುವಾಗಿದೆ.

ಪ್ರಶಾಂತ್ ನೀಲ್ ನಿರ್ದೇಶನದಲ್ಲಿ 'ಡ್ರ್ಯಾಗನ್' ಎಂಬ ಮತ್ತೊಂದು ಚಿತ್ರದಲ್ಲಿ ತಾರಕ್ ನಟಿಸುತ್ತಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಈ ಸಿನಿಮಾ ತೆರೆಗೆ ಬರ್ತಿದೆ. ಈಗಾಗಲೇ ಸಿನಿಮಾ ಚಿತ್ರೀಕರಣ ಸಹ ಶುರುವಾಗಿದೆ. 'ವಾರ್‌-2' ಆಗಸ್ಟ್ 14ಕ್ಕೆ ತೆರೆಗೆ ಬರಲಿದೆ. ಹೃತಿಕ್ ರೋಷನ್ ಎದುರು ಯಂಗ್ ಟೈಗರ್ ಆರ್ಭಟ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಅದೇ ದಿನ ರಜನಿಕಾಂತ್ ನಟನೆಯ 'ಕೂಲಿ' ಸಿನಿಮಾ ಕೂಡ ಬರ್ತಿದ್ದು ಬಾಕ್ಸಾಫೀಸ್ ಕ್ಲ್ಯಾಶ್ ಎದುರಾಗಲಿದೆ.

r NTR Sparks Buzz with Muruga Book in Hand Mythological Film with Trivikram in the Works

ಈ ಎರಡೂ ಸಿನಿಮಾಗಳ ಬಳಿಕ ಜ್ಯೂ. ಎನ್‌ಟಿಆರ್ ಮುಂದಿನ ಸಿನಿಮಾ ಯಾವುದು ಎನ್ನುವ ಪ್ರಶ್ನೆ ಅಭಿಮಾನಿಗಳನ್ನು ಕಾಡುತ್ತಿದೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದಲ್ಲಿ ಒಂದು ಪೌರಾಣಿಕ ಚಿತ್ರದಲ್ಲಿ ತಾರಕ್ ನಟಿಸುತ್ತಾರೆ ಎನ್ನಲಾಗ್ತಿದೆ. ಆದರೆ ಈ ಬಗ್ಗೆ ಅಧಿಕೃತ ಮಾಹಿತಿ ಸಿಕ್ಕಿಲ್ಲ. ಕುಮಾರಸ್ವಾಮಿ(ಸುಬ್ರಮಣ್ಯಸ್ವಾಮಿ) ಕಥೆಯನ್ನು ಆಧರಿಸಿ ತ್ರಿವಿಕ್ರಮ್ ಸಿನಿಮಾ ಮಾಡುತ್ತಾರೆ ಎನ್ನಲಾಗ್ತಿದೆ. ಸದ್ಯ ಜ್ಯೂ. ಎನ್‌ಟಿಆರ್ ಕೈಯಲ್ಲಿ 'ಮುರುಗ: ದಿ ಗಾಡ್ ಆಫ್ ವಾರ್, ದಿ ಗಾಡ್ ಆಫ್ ವಿಸ್ಡಮ್' ಪುಸ್ತಕ ನೋಡಿ ಅಭಿಮಾನಿಗಳು ಖುಷಿಯಾಗಿದ್ದಾರೆ. ತ್ರಿವಿಕ್ರಮ್ ಶ್ರೀನಿವಾಸ್ ನಿರ್ದೇಶನದ 'ಕುಮಾರಸ್ವಾಮಿ' ಚಿತ್ರದಲ್ಲಿ ತಾರಕ್ ನಟಿಸುವುದು ಖಚಿತ ಎಂದು ಊಹಾಪೋಹ ಶುರುವಾಗಿದೆ.

ಇದೇ ಪುಸ್ತಕ ಆಧರಿಸಿ ತ್ರಿವಿಕ್ರಮ್ ಶ್ರೀನಿವಾಸ್ ಸಿನಿಮಾ ಮಾಡಲು ಮುಂದಾಗಿದ್ದಾರೆ. ಹಾಗಾಗಿ ತಾರಕ್ ಈ ಚಿತ್ರದಲ್ಲಿ ನಟಿಸುವುದು ಗ್ಯಾರಂಟಿ ಎಂದು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ. ಇತ್ತೀಚೆಗೆ ಮುಂಬೈ ವಿಮಾನ ನಿಲ್ದಾಣದಲ್ಲಿ ತಾರಕ್ 'ಮುರುಗ: ದಿ ಗಾಡ್ ಆಫ್ ವಾರ್, ದಿ ಗಾಡ್ ಆಫ್ ವಿಸ್ಡಮ್' ಪುಸ್ತಕ ಕೈಯಲ್ಲಿ ಹಿಡಿದು ಕಾಣಿಸಿಕೊಂಡಿದ್ದಾರೆ. ಪುಸ್ತಕ ಓದುತ್ತಿದ್ದಾರೆ, ಪಾತ್ರಕ್ಕಾಗಿ ತಯಾರಿ ನಡೆಸುತ್ತಿದ್ದಾರೆ ಎಂದೇ ಅಭಿಮಾನಿಗಳು ಭಾವಿಸಿದ್ದಾರೆ.

'ಗಾಡ್ ಆಫ್ ವಾರ್' ಹೆಸರಿನಲ್ಲಿ ತಾರಕ್ ಹಾಗೂ ತ್ರಿವಿಕ್ರಮ್ ಸಿನಿಮಾ ಬರುತ್ತದೆ ಎಂದು ಹೇಳಲಾಗಿತ್ತು. ಈ ಪುಸ್ತಕದ ಟ್ಯಾಗ್‌ಲೈನ್ ಕೂಡ ಅದೇ ಆಗಿದೆ. ಹಾಗಾಗಿ ಇದೇ ಕಥೆ ಆಧರಿಸಿ ಸಿನಿಮಾ ಬರುವುದರಲ್ಲಿ ಯಾವುದೇ ಅನುಮಾನ ಇಲ್ಲ ಎಂದು ಅಭಿಮಾನಿಗಳು ವಾದಿಸುತ್ತಿದ್ದಾರೆ. ವಿಭಿನ್ನ ಸಿನಿಮಾಗಳನ್ನು ಮಾಡುವುದರಲ್ಲಿ ತ್ರಿವಿಕ್ರಮ್ ನಿಸ್ಸೀಮರು. ತಮ್ಮ ಸಿನಿಮಾಗಳಲ್ಲಿ ಫಿಲಾಸಫಿಗಳನ್ನು ಹೇಳುತ್ತಿರುತ್ತಾರೆ. ಸುಬ್ರಮಣ್ಯಸ್ವಾಮಿ ಕಥೆಯನ್ನು ಬಹಳ ಚೆನ್ನಾಗಿ ತೆರೆಗೆ ತರುತ್ತಾರೆ ಎಂದು ಅಭಿಮಾನಿಗಳು ಕಾಯತ್ತಿದ್ದಾರೆ.

ಆನಂದ್ ಬಾಲಸುಬ್ರಮಣಿಯನ್ ಬರೆದಿರುವ 'ಮುರುಗ: ದಿ ಗಾಡ್ ಆಫ್ ವಾರ್, ದಿ ಗಾಡ್ ಆಫ್ ವಿಸ್ಡಮ್' ಪುಸ್ತಕದಲ್ಲಿ ಸುಬ್ರಮಣ್ಯಸ್ವಾಮಿಯ ಜನನ, ಆತನ ಶಕ್ತಿ ಸಾಮರ್ಥ್ಯದ ಕಥೆಯಿದೆ. ಈ ಪುಸ್ತಕ ಬಹಳ ಜನಪ್ರಿಯವಾಗಿದ್ದು ಇದೀಗ ಸಿನಿಮಾ ರೂಪದಲ್ಲಿ ಜನರ ಮುಂದೆ ಬರುತ್ತಾ ಕಾದು ನೋಡಬೇಕಿದೆ. ಈ ಹಿಂದೆ 'ಅರವಿಂದ ಸಮೇತ' ಚಿತ್ರದಲ್ಲಿ ತಾರಕ್ ಹಾಗೂ ತ್ರಿವಿಕ್ರಮ್ ಒಟ್ಟಿಗೆ ಕೆಲಸ ಮಾಡಿದ್ದರು.

ರಾಯಲಸೀಮ ಫ್ಯಾಕ್ಷನಿಸಂ ಹಿನ್ನೆಲೆಯಲ್ಲಿ ತಾರಕ್ ಕೆಲ ಸಿನಿಮಾಗಳಲ್ಲಿ ನಟಿಸಿದ್ದರು. ಹಿಂಸೆಯನ್ನು ಹಿಂಸೆಯಿಂದಲೇ ನಾಶ ಮಾಡಲು ಸಾಧ್ಯ ಎನ್ನುವಂತೆ ಆ ಸಿನಿಮಾಗಳಲ್ಲಿ ತೋರಿಸಲಾಗಿತ್ತು. 'ಅರವಿಂದ ಸಮೇತ' ಚಿತ್ರದಲ್ಲಿ ಅದನ್ನು ಬೇರೆ ರೀತಿ ಹೇಳುವ ಪ್ರಯತ್ನ ಮಾಡಲಾಗಿತ್ತು. ಶಾಂತಿಯಿಂದ ಹಿಂಸೆಯನ್ನು ತಡೆಯುವ ಮುಂದಾಗುವ ನಾಯಕನ ಕಥೆಯನ್ನು ಆ ಚಿತ್ರದಲ್ಲಿ ಹೇಳಿದ್ದರು. ಇವರಿಬ್ಬರು ಸೇರಿ ಮತ್ತೆ ಸಿನಿಮಾ ಮಾಡುವ ವಿಚಾರ ಅಭಿಮಾನಿಗಳ ಸಂತಸ ಹೆಚ್ಚಿಸಿದೆ.

More from Filmibeat

English summary
Jr. NTR was recently spotted holding the book Muruga: The God of War, The God of Wisdom
Read more about: ntr tollywood
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X