ತೆಲುಗಿನಲ್ಲಿ 'ಗಡಂಗ್ ರಕ್ಕಮ್ಮಾ' ಕಮಾಲ್!

ಕನ್ನಡದ ಬಹುನಿರೀಕ್ಷಿತ ಸಿನಿಮಾಗಳಲ್ಲಿ ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್​ ರೋಣ' ಚಿತ್ರವು ಒಂದು. 'ವಿಕ್ರಾಂತ್ ರೋಣ' ಸಿನಿಮಾಗಾಗಿ ಕಿಚ್ಚ ಅಭಿಮಾನಿಗಳು, ಸಿನಿಮಾ ಪ್ರಿಯರು ಮಾತ್ರವಲ್ಲ, ಸಿನಿಮಾರಂಗ ಕೂಡ ಕಾದು ಕುಳಿತಿದೆ.

'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಸಿನಿಮಾ, ಬಹು ಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಕನ್ನಡದ ಬಳಿಕ ಈಗ ಸಿನಿಮಾದ ತೆಲುಗು ಹಾಡು ರಿಲೀಸ್ ಆಗಿದೆ. ಸೆಟ್ಟೇರಿದಾಗಿನಿಂದ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. ಈಗ ಹಾಡಿನ ಮೂಲಕ ಮತ್ತಷ್ಟು ನಿರೀಕ್ಷೆ ಹೆಚ್ಚು ಮಾಡಿದೆ.

ಈಗ ಗಡಂಗ್ ರಕ್ಕಮ್ಮ ಹಾಡು ಕನ್ನಡದಲ್ಲಿ ಬಂದು ಹಿಟ್ ಲಿಸ್ಟ್ ಸೇರಿದ್ದಾಗಿದೆ. ಇದೇ ಹಾಡು ತೆಲುಗಿನಲ್ಲೂ ರಿಲೀಸ್ ಆಗಿದ್ದು, ಅಲ್ಲಿ ರಕ್ಕಮ್ಮನ ಹವಾ ಹೇಗಿದೆ ಅಂತ ನೋಡಿ.

ತೆಲುಗು ಮಂದಿ ಮೆಚ್ಚಿದ 'ವಿಕ್ರಾಂತ್ ರೋಣ'ನ ರಕ್ಕಮ್ಮ!

ಕನ್ನಡದಲ್ಲಿ ರಕ್ಕಮ್ಮ ಹಾಡು ರಿಲೀಸ್ ಆದ ಒಂದು ದಿನದ ಬಳಿಕ, ತೆಲುಗಿನಲ್ಲಿ ರಿಲೀಸ್ ಆಗಿದೆ. ಈಗ ಸಾಮಾಜಿಕ ಜಾಲತಾಣದಲ್ಲಿ ಈ ಹಾಡು ಸಿಕ್ಕಾಪಟ್ಟೆ ವೈರಲ್ ಆಗಿದ್ದು, ತೆಲುಗು ಪ್ರೇಕ್ಷಕರನ್ನು ಸೆಳೆದಿದೆ. ಈ ಎಲ್ಲಿ ನೋಡಿದರೂ ಹಾಡಿನಲ್ಲಿ ಕಿಚ್ಚ ಹಾಕಿದ ಸ್ಟೆಪ್ ಹಾಕುತ್ತಾ ಅಭಿಮಾನಿಗಳು ಎಂಜಾಯ್ ಮಾಡುತ್ತಾ ಇದ್ದಾರೆ.

ದಾಖಲೆ ಬರೆದ ಕನ್ನಡದ ರಕ್ಕಮ್ಮ ಹಾಡು!

ಇನ್ನು ಕನ್ನಡದಲ್ಲಿ ರಿಲೀಸ್ ಆದ 'ವಿಕ್ರಾಂತ್ ರೋಣ' ಸಿನಿಮಾ ಮೊದಲ ಹಾಡು ಗಡಂಗ್ ರಕ್ಕಮ್ಮ ಹಿಟ್ ಲಿಸ್ಟ್ ಸೇರಿದೆ. ಈ ಸಿನಿಮಾ ಹಿಟ್ ಲಿಸ್ಟ್ ಸೇರುವುದರ ಜೊತೆಗೆ ಲಿರಿಕಲ್ ಹಾಡು ರಿಲೀಸ್ ಆಗಿದೆ. ಈ ಲಿರಿಕಲ್ ಹಾಡಿನಲ್ಲಿ ಒಂದಷ್ಟು ಡ್ಯಾನ್ಸ್ ಮತ್ತು ಮೇಕಿಂಗ್ ತುಣುಕುಗಳನ್ನು ಅಳವಡಿಸಲಾಗಿದೆ. ಕಿಚ್ಚನ ಜೊತೆಗೆ, ಬಾಲಿವುಡ್‌ ನಟಿ ಜಾಕ್ವೆಲಿನ್ ಫರ್ನಾಂಡೀಸ್ ರಕ್ಕಮ್ಮನಾಗಿ ಹೆಜ್ಜೆ ಹಾಕಿದ್ದಾರೆ.

ರಕ್ಕಮ್ಮ ಕಿಚ್ಚನ ಕಾಂಬಿನೇಶನ್!

ರಕ್ಕಮ್ಮ ಕಿಚ್ಚನ ಕಾಂಬಿನೇಶನ್!

ಇದು 'ವಿಕ್ರಾಂತ್ ರೋಣ' ಸಿನಿಮಾದ ವಿಶೇಷ ಹಾಡು. ಹಾಗಂತ ಇದು ಐಟಂ ಹಾಡು ಅಲ್ಲ, ಹಾಡಿನ ಮೂಲಕ ಸಿನಿಮಾದಲ್ಲಿ ಒಂದು ಟ್ವಿಸ್ಟ್ ಕೂಡ ಇರಲಿದೆ. ನಟಿ ಜಾಕ್ವೆಲಿನ್ ಜೊತೆಗೆ ಕಿಚ್ಚ ಸುದೀಪ್ ಮಸ್ತ್ ಡಾನ್ಸ್ ಮಾಡಿದ್ದಾರೆ. ಜಾಕ್ವೆಲಿನ್ ಕೆಂಪು ಸ್ಕರ್ಟ್, ಹಸಿರು ರವಿಕೆ ತೊಟ್ಟು ದೇಶಿ ಹುಡುಗಿಯ ಲುಕ್‌ನಲ್ಲಿ ಮಿಂಚಿದ್ದು, ಸುದೀಪ್ ಸ್ಟೈಲಿಶ್ ಶರ್ಟ್, ಟೋಪಿ ತೊಟ್ಟು ಡಿಟೆಕ್ಟಿವ್ ರೀತಿಯನ್ನು ಹೆಜ್ಜೆ ಹಾಕಿದ್ದಾರೆ.

ಜುಲೈ 28ಕ್ಕೆ 'ವಿಕ್ರಾಂತ್ ರೋಣ' ರಿಲೀಸ್!

ಜುಲೈ 28ಕ್ಕೆ 'ವಿಕ್ರಾಂತ್ ರೋಣ' ರಿಲೀಸ್!

ಇನ್ನು 'ವಿಕ್ರಾಂತ್ ರೋಣ' ಸಿನಿಮಾ ಜುಲೈ 28ರಂದು ತೆರೆಗೆ ಬರಲಿದೆ. ಪಿವಿಆರ್ ಪಿಕ್ಚರ್ಸ್‌ ಸಿನಿಮಾವನ್ನು ಉತ್ತರ ಭಾರತದಲ್ಲಿ ಬಿಡುಗಡೆ ಮಾಡಲಿದೆ. 'ವಿಕ್ರಾಂತ್ ರೋಣ' ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ ಹಾಗೂ ಇಂಗ್ಲಿಷ್‌ ಭಾಷೆಯಲ್ಲಿ ಬಿಡುಗಡೆ ಆಗಲಿದೆ. ಜೊತೆಗೆ ಇದು 3D ತಂತ್ರಜ್ಞಾನದಲ್ಲಿ ತೆರೆಗೆ ಬರುತ್ತಿರೋದು ಕೂಡ ಮತ್ತೊಂದು ವಿಶೇಷ.

More from Filmibeat

English summary
Sudeep Starrer Vikranth Rona First Song Ra Ra Rukkamma Telugu Hit, Know More,
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X