For Quick Alerts
  ALLOW NOTIFICATIONS  
  For Daily Alerts

  ಪ್ರಭಾಸ್ ಚಿತ್ರಕ್ಕೆ ಎಂಟ್ರಿಯಾದ 'ಶ್ವೇತಾ ಸುಂದರಿ' ರಾಶಿ ಖನ್ನಾ

  |

  ತೆಲುಗು ಮತ್ತು ತಮಿಳು ಇಂಡಸ್ಟ್ರಿಯಲ್ಲಿ ಬಹುಬೇಡಿಕೆಯ ನಟಿ ಎನಿಸಿಕೊಂಡಿರುವ ರಾಶಿ ಖನ್ನಾ ಈಗ ದೊಡ್ಡ ಪ್ರಾಜೆಕ್ಟ್‌ವೊಂದರಲ್ಲಿ ನಟಿಸುವ ಅವಕಾಶ ಪಡೆದುಕೊಂಡಿದ್ದಾರೆ ಎಂಬ ಸುದ್ದಿ ಹೊರಬಿದ್ದಿದೆ.

  ತೊಲಿಪ್ರೇಮ, ಅಯೋಗ್ಯ, ವೆಂಕಿಮಾಮ, ವರ್ಲ್ಡ್ ಫೇಮಸ್ ಲವರ್ ಅಂತಹ ಚಿತ್ರಗಳಲ್ಲಿ ಯಶಸ್ಸು ಕಂಡಿರುವ ರಾಶಿ ಖನ್ನಾ ಈಗ ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ಜೊತೆ ಅಭಿನಯಿಸುವ ಆಫರ್ ಪಡೆದಿದ್ದಾರೆ.

  500 ಕೋಟಿ ಬಜೆಟ್: ಅರ್ಧದಷ್ಟು ಹಣ ಕಲಾವಿದರ ಸಂಭಾವನೆಗೆ ಖರ್ಚು?500 ಕೋಟಿ ಬಜೆಟ್: ಅರ್ಧದಷ್ಟು ಹಣ ಕಲಾವಿದರ ಸಂಭಾವನೆಗೆ ಖರ್ಚು?

  ಪ್ರಭಾಸ್ ಮತ್ತು ನಾಗ್ ಅಶ್ವಿನ್ ಕಾಂಬಿನೇಷನ್‌ನಲ್ಲಿ ಬರಲಿರುವ 21ನೇ ಚಿತ್ರದಲ್ಲಿ ರಾಶಿ ಖನ್ನಾ ಪ್ರಮುಖ ಪಾತ್ರವೊಂದಕ್ಕೆ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡ್ತಿದೆ.

  ಆದರೆ ಪಾತ್ರ ಏನಿರಬಹುದು ಎಂಬುದು ಸದ್ಯಕ್ಕೆ ಗೊತ್ತಿಲ್ಲ. 'ಮಹಾನಟಿ' ಚಿತ್ರದ ಸಕ್ಸಸ್ ಬಳಿಕ ನಾಗ್ ಅಶ್ವಿನ್ ಪ್ಯಾನ್ ಇಂಡಿಯಾ ಚಿತ್ರಕ್ಕೆ ಕೈ ಹಾಕಿದ್ದು, ಪ್ರಭಾಸ್‌ರನ್ನು ನಾಯಕನಾಗಿ ಆಯ್ಕೆ ಮಾಡಿಕೊಂಡರು. ಪ್ರಭಾಸ್‌ಗೆ ಜೋಡಿಯಾಗಿ ದೀಪಿಕಾ ಪಡುಕೋಣೆಯನ್ನು ಕರೆತರುತ್ತಿದ್ದಾರೆ.

  ಪ್ರಭಾಸ್-ದೀಪಿಕಾ ಜೊತೆ ಬಿಗ್ ಬಿ ಅಮಿತಾಭ್ ಬಚ್ಚನ್ ಸಹ ಪ್ರಧಾನ ಪಾತ್ರ ನಿರ್ವಹಿಸಲಿದ್ದಾರೆ. ಸದ್ಯಕ್ಕೆ ಇದೊಂದು ಸೈನ್ಸ್ ಫಿಕ್ಷನ್ ಸಿನಿಮಾ ಎನ್ನಲಾಗಿದೆ.

  ಪ್ರಭಾಸ್ ಸಂಭಾವನೆ ಹಾಗೂ ಬಾಲಿವುಡ್ ಕಲಾವಿದರ ಸಂಭಾವನೆ ಸೇರಿ ಈ ಚಿತ್ರದ ಬಜೆಟ್ ಸುಮಾರು 500 ಕೋಟಿ ಆಗಲಿದೆ ಎಂದು ಬಿಂಬಿತವಾಗಿದೆ. ತೆಲುಗು, ತಮಿಳು, ಹಿಂದಿ, ಮಲಯಾಳಂ ಸೇರಿದಂತೆ 15ಕ್ಕೂ ಹೆಚ್ಚು ಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.

  Yash Radhikaರ ಮಗನ ಹೊಸ ವಿಡಿಯೋ ಫುಲ್ ವೈರಲ್ | Filmibeat Kannada

  ರಾಶಿ ಖನ್ನಾ ಸಿನಿಮಾಗಳು
  ಅರನ್‌ಮನೈ 3, ತುಘ್ಲಕ್ ದರ್ಬಾರ್, ಬ್ರಹ್ಮಂ ಸಿನಿಮಾಗಳ ಚಿತ್ರೀಕರಣ ಮುಗಿದಿದೆ. ಪಕ್ಕಾ ಕಮರ್ಷಿಯಲ್, ಥ್ಯಾಂಕ್ ಯೂ, ಸರ್ದಾರ್, ಸೈತಾನ್ ಕಿ ಬಚ್ಚಾ ಸೇರಿದಂತೆ ಇನ್ನೆರಡು ಹೊಸ ಪ್ರಾಜೆಕ್ಟ್‌ಗಳ ಶುರುವಾಗಿದೆ.

  English summary
  Telugu actress Raashi khanna playing key role in nag ashwin and prabhas new project.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X