For Quick Alerts
  ALLOW NOTIFICATIONS  
  For Daily Alerts

  ರಚಿತಾ ರಾಮ್ ಗೆ ಮೆಗಾಸ್ಟಾರ್ ಚಿರಂಜೀವಿ ಅಳಿಯ 'ಸೂಪರ್ ಮಚ್ಚಿ' ಎಂದಿದ್ದೇಕೆ?

  |

  ಸ್ಯಾಂಡಲ್ ವುಡ್ ಡಿಂಪಲ್ ಕ್ವೀನ್ ರಚಿತಾ ರಾಮ್ ಗೆ ಟಾಲಿವುಡ್ ಮೆಗಾಸ್ಟಾರ್ ಚಿರಂಜೀವಿ ಅಳಿಯ ಸೂಪರ್ ಮಚ್ಚಿ ಎನ್ನುತ್ತಿದ್ದಾರೆ. ಅಂದ್ಹಾಗೆ ಚಿರಂಜೀವಿ ಅಳಿಯಯಾಕೆ ರಚಿತಾಗೆ ಸೂಪರ್ ಮಚ್ಚಿ ಎನ್ನುತ್ತಿದ್ದಾರೆ ಅಂತ ಅಚ್ಚರಿಯಾಗುತ್ತಿದೆಯಾ? ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ನಾಯಕನಾಗಿ ಅಭಿನಯಿಸುತ್ತಿರುವ 'ಸೂಪರ್ ಮಚ್ಚಿ' ಚಿತ್ರಕ್ಕೆ ಡಿಂಪಲ್ ಕ್ವೀನ್ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ರಚಿತಾ ರಾಮ್ ಟಾಲಿವುಡ್ ಕಡೆ ಮುಖ ಮಾಡಿದ್ದಾರೆ ಎನ್ನುವ ಸುದ್ದಿ ಅನೇಕ ದಿನಗಳಿಂದ ಕೇಳಿ ಬರುತ್ತಿತ್ತು. ಆದರೆ ಈಗ ಅಧಿಕೃತವಾಗಿದ್ದು, ಆಗಲೆ ಚಿತ್ರೀಕರಣದಲ್ಲಿ ಭಾಗಿಯಾಗಿದ್ದಾರಂತೆ. ಹೈದರಾಬಾದ್ ನಲ್ಲಿ ಚಿತ್ರೀಕರಣ ನೆಡೆಯುತ್ತಿದ್ದು ರಚಿತಾ ಮುತ್ತಿನ ನಗರಿ ಫೈಟ್ ಹತ್ತಿದ್ದಾರೆ. ಸೂಪರ್ ಮಚ್ಚಿ ಚಿತ್ರದ ಮೂಲಕ ಮೊದಲ ಬಾರಿಗೆ ರಚಿತಾ ಪರಭಾಷೆ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

  ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್ನಟಿ ರಚಿತಾ ರಾಮ್ ಸಹೋದರಿ ಮದುವೆಯಲ್ಲಿ ನಿಖಿಲ್ ಕುಮಾರ್

  ಅನೇಕ ದಿನಗಳಿಂದ ಅಕ್ಕನ ಮದುವೆಯಲ್ಲಿ ಬ್ಯುಸಿಯಾಗಿದ್ದ ರಚಿತಾ, ಮದುವೆ ಸಂಭ್ರಮ ಮುಗಿಸಿ ಈಗ ತೆಲುಗು ಸಿನಿಮಾದ ಮೂಲಕ ಚಿತ್ರೀಕರಣಕ್ಕೆ ಮರಳಿದ್ದಾರೆ. ಚಿತ್ರಕ್ಕೆ ಪುಲಿ ವಾಸಿ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಎಸ್.ಎಸ್ ತಮನ್ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ನಟ ಕಲ್ಯಾಣ್ ದೇವ್ ಅಭಿನಯದ ಎರಡನೆ ಸಿನಿಮಾ ಇದಾಗಿದೆ.

  ರಚಿತಾ ಟಾಲಿವುಡ್ ನ ಖ್ಯಾತ ನಟ ಬಾಲಯ್ಯ ಸಿನಿಮಾಗೆ ನಾಯಕಿಯಾಗುತ್ತಿದ್ದಾರೆ ಎನ್ನುವ ಮಾತು ಕೇಳಿ ಬರುತ್ತಿತ್ತು. ಆ ಸಿನಿಮಾ ಸೆಟ್ಟೇರುವ ಮೊದಲೆ 'ಸೂಪರ್ ಮಚ್ಚಿ'ಯಾಗಿ ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ. 'ಸೂಪರ್ ಮಚ್ಚಿ' ರೋಮ್ಯಾಂಟಿಕ್ ಸಿನಿಮಾವಗಿದೆ. ರಚಿತಾ ರಾಮ್ ಸದ್ಯ ಕನ್ನಡದಲ್ಲಿ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.

  English summary
  Kannada actress Rachita Ram entry to Tollywood. Rachita Ram is playing lead heroine to actor Kalyan Dev.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X