ತೆಲುಗು ನಟ ಕಲ್ಯಾಣ್ ದೇವ್ ಜೊತೆ 'ಸೂಪರ್ ಮಚ್ಚಿ' ರಚಿತಾ ರಾಮ್ ಹೋಳಿ

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್, ರಚಿತಾ ರಾಮ್ ಕಾಂಬಿನೇಶನ್ ನಲ್ಲಿ ಮೂಡಿ ಬಂದ 'ಆಯುಷ್ಮಾನ್ ಭವ' ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ಲಭಿಸಿದ ಮೇಲೆ ಡಿಂಪಲ್ ಕ್ವೀನ್ ಟಾಲಿವುಡ್ ಗೆ ಹಾರಿದ್ದಾರೆ.

ಮೆಗಾ ಸ್ಟಾರ್ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಜೊತೆಗೆ ನಟಿ ರಚಿತಾ ರಾಮ್ ತೆರೆ ಹಂಚಿಕೊಳ್ಳುತ್ತಿದ್ದಾರೆ. 'ಸೂಪರ್ ಮಚ್ಚಿ' ಚಿತ್ರದ ಚಿತ್ರೀಕರಣ ಈಗಾಗಲೇ ಶುರುವಾಗಿದೆ. ಇಷ್ಟು ದಿನ ಸಹೋದರಿ ನಿತ್ಯ ರಾಮ್ ಮದುವೆ ಸಂಭ್ರಮದಲ್ಲಿ ಬಿಜಿಯಿದ್ದ ರಚಿತಾ ರಾಮ್ ಇದೀಗ ಕೆಲಸಕ್ಕೆ ಮರಳಿದ್ದಾರೆ.

ಅಕ್ಕನ ಮದುವೆ ಮುಗಿಯುತ್ತಿದ್ದ ಹಾಗೆ, ನೇರವಾಗಿ ಹೈದರಾಬಾದ್ ನಲ್ಲಿ ಲ್ಯಾಂಡ್ ಆಗಿರುವ ರಚಿತಾ ರಾಮ್, ಕಲ್ಯಾಣ್ ದೇವ್ ಜೊತೆಗೆ 'ಸೂಪರ್ ಮಚ್ಚಿ' ಶೂಟಿಂಗ್ ನಲ್ಲಿ ಪಾಲ್ಗೊಂಡಿದ್ದಾರೆ.

'ಸೂಪರ್ ಮಚ್ಚಿ' ಶೂಟಿಂಗ್ ಸೆಟ್ ನಲ್ಲಿ ಹೋಳಿ ಆಚರಿಸಿದ್ದಾರೆ ರಚಿತಾ ರಾಮ್ ಮತ್ತು ಕಲ್ಯಾಣ್ ದೇವ್. ಬಣ್ಣದ ಓಕುಳಿಯಾಟದಲ್ಲಿ ಮಿಂದು ರಚಿತಾ ರಾಮ್ ಮತ್ತು ಕಲ್ಯಾಣ್ ದೇವ್ ಕ್ಲಿಕ್ ಮಾಡಿಕೊಂಡಿರುವ ಸೆಲ್ಫಿಗಳನ್ನ ಇನ್ಸ್ಟಾಗ್ರಾಮ್ ನಲ್ಲಿ ಗುಳಿ ಕೆನ್ನೆಯ ಚೆಲುವೆ ಹಂಚಿಕೊಂಡಿದ್ದಾರೆ.

rachita-ram-shoots-for-telugu-movie-super-machi

ಅಂದ್ಗಾಗೆ, ನಟಿ ರಚಿತಾ ರಾಮ್ ಗೆ 'ಸೂಪರ್ ಮಚ್ಚಿ' ಚೊಚ್ಚಲ ತೆಲುಗು ಚಿತ್ರ. ಇದೇ ಮೊದಲ ಬಾರಿಗೆ ಪರಭಾಷೆ ಚಿತ್ರದಲ್ಲಿ ಮಿನುಗಲು ರಚಿತಾ ರಾಮ್ ಸಜ್ಜಾಗಿದ್ದಾರೆ.

ಇನ್ನೂ ಚಿರಂಜೀವಿ ಅಳಿಯ ಕಲ್ಯಾಣ್ ದೇವ್ ಗೆ 'ಸೂಪರ್ ಮಚ್ಚಿ' ಎರಡನೇ ಚಿತ್ರ. 'ಸೂಪರ್ ಮಚ್ಚಿ'ಗಾಗಿ ಕಂಪ್ಲೀಟ್ ಮೇಕ್ ಓವರ್ ಮಾಡಿಕೊಂಡಿದ್ದಾರೆ ಕಲ್ಯಾಣ್ ದೇವ್. ಚಿತ್ರಕ್ಕೆ ಪುಲಿ ವಾಸು ಆಕ್ಷನ್ ಕಟ್ ಹೇಳುತ್ತಿದ್ದರೆ, ತಮನ್ ಸಂಗೀತ ಸಂಯೋಜಿಸಲಿದ್ದಾರೆ.

ಸದ್ಯ ಚಿತ್ರೀಕರಣ ಹಂತದಲ್ಲಿ ಇರುವ 'ಸೂಪರ್ ಮಚ್ಚಿ' ಸಿನಿಮಾ ಮುಂದಿನ ವರ್ಷದ ಬೇಸಿಗೆ ಹೊತ್ತಿಗೆ ತೆರೆಗೆ ಬರಲಿದೆ.

More from Filmibeat

English summary
Kannada Actress Rachita Ram shoots for Telugu Movie Super Machi with Telugu Actor Kalyan Dev.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X