twitter
    For Quick Alerts
    ALLOW NOTIFICATIONS  
    For Daily Alerts

    'ನನಗೆ ಬಾಲಿವುಡ್‌ನಲ್ಲಿ ಯಾರೂ ಒಳ್ಳೆ ಆಫರ್ ಕೊಟ್ಟಿಲ್ಲ': ಪೂಜಾ ಹೆಗ್ಡೆ ಬಹಿರಂಗ ಮಾತು

    |

    ಪೂಜಾ ಹೆಗ್ಡೆ 2014ರಲ್ಲಿ ಟಾಲಿವುಡ್‌ ಚಿತ್ರರಂಗಕ್ಕೆ ಎಂಟ್ರಿಕೊಟ್ಟಿದ್ದರು. 'ಒಕ ಲೈಲಾ ಕೋಸಂ' ಹಾಗೂ ಮುಕುಂದ ಸಿನಿಮಾ ಮೂಲಕ ತೆಲುಗು ಸಿನಿಮಾಗಳಲ್ಲಿ ಗುರುತಿಸಿಕೊಂಡಿದ್ದರು. ಇದೇ ವೇಳೆ ಪೂಜಾ ಹೆಗ್ಡೆ ಬಾಲಿವುಡ್‌ ಸಿನಿಮಾದಲ್ಲಿ ನಟಿಸಿದ್ದರು. ಅದುವೇ ಹೃತಿಕ್ ರೋಷನ್ ಅಭಿನಯದ 'ಮೊಹೆಂಜೊದಾರೋ'. 2016ರಲ್ಲಿ ತೆರೆಕಂಡಿದ್ದ ಈ ಸಿನಿಮಾ ಬಾಲಿವುಡ್ ಬಾಕ್ಸಾಫೀಸ್‌ನಲ್ಲಿ ಮಕಾಡೆ ಮಲಗಿತ್ತು. ಅಲ್ಲಿಗೆ ಪೂಜಾ ಹೆಗ್ಡೆ ಬಾಲಿವುಡ್ ಕನಸು ಬಹುತೇಕ ಕಮರಿ ಹೋದಂತಾಗಿತ್ತು.

    ಹೃತಿಕ್ ರೋಷನ್ 'ಮಹೇಂಜೊದಾರೋ' ಸಿನಿಮಾ ಆರಂಭ ಆಗಿ ಬಿಡುಗಡೆ ಆಗುವುದಕ್ಕೆ ಎರಡು ವರ್ಷ ಹಿಡಿದಿತ್ತು. ಈ ವೇಳೆ ಪೂಜಾ ಹೆಗ್ಡೆಯನ್ನು ಹಲವು ಸಿನಿಮಾಗಳು ಹುಡುಕಿಕೊಂಡು ಬಂದಿತ್ತು. ಆದರೆ, 'ಮಹೆಂಜೋದಾರೋ' ಬಾಕ್ಸಾಫೀಸ್‌ನಲ್ಲಿ ಗೆಲ್ಲಿಲ್ಲ. ಇಲ್ಲಿಂದ ಪೂಜಾ ಹೆಗ್ಡೆ ಬಾಲಿವುಡ್ ಕಡೆ ತಿರುಗಿ ನೋಡುವುದಕ್ಕೂ ಹೋಗಿಲ್ಲ. ಟಾಲಿವುಡ್‌ ಸಿನಿಮಾಗಳಲ್ಲೇ ಹೆಚ್ಚು ಒಪ್ಪಿಕೊಳ್ಳಲು ಶುರು ಮಾಡಿದ್ದರು. ಈ ವೇಳೆ ಮತ್ತೆ ಪೂಜಾ ಹೆಗ್ಡೆಯನ್ನು ಬಾಲಿವುಡ್‌ನ ಹಲವು ಸಿನಿಮಾಗಳು ಹುಡುಕಿಕೊಂಡು ಬಂದ್ವು. ಆದರೆ, ಒಳ್ಳೆ ಸಿನಿಮಾಗಳು ಬಂದಿರಲಿಲ್ಲವಂತೆ. ರಾಧೆಶ್ಯಾಮ ಬಿಡುಗಡೆ ವೇಳೆ ಪೂಜಾ ಹೆಗ್ಡೆ ನೀಡಿದ ಸಂದರ್ಶನದಲ್ಲಿ ಈ ಮಾತನ್ನು ಹೇಳಿದ್ದಾರೆ. ದಕ್ಷಿಣ ಭಾರತದ ಸಿನಿಮಾ ನನ್ನನ್ನು ಒಪ್ಪಿಕೊಂಡಿದೆ. ಪ್ರೀತಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೆ-ಮುಂದೆ ಯೋಚನೆ ಮಾಡದೆ ಹಿಂದಿ ಸಿನಿಮಾ ಪ್ರಾಜೆಕ್ಟ್‌ಗಳಿಗೆ 'ನೋ' ಎನ್ನುವಷ್ಟು ಶಕ್ತಿಕೊಟ್ಟಿದೆ. ಎರಡು ವರ್ಷ ನಾನು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ನನಗೆ ಓಕೆ ಅಂತ ಅನಿಸಿದೆ. ನನ್ನನ್ನು ಜನರು 'ಅಲಾ ವೈಕುಂಠಪುರಮುಲೊ' ಸಿನಿಮಾದಿಂದ ಗುರುತಿಸುತ್ತಾರೆ. ನಾನು ಎಲ್ಲೇ ಹೋದರೂ ಈ ಸಿನಿಮಾ ಬಗ್ಗೆನೇ ಮಾತಾಡುತ್ತಾರೆ.

    'ರಾಧೆ ಶ್ಯಾಮ್' ರಿಲೀಸ್‌ ವೇಳೆ ಮುಖ ಕೆಡಿಸಿಕೊಂಡ ಪ್ರಭಾಸ್- ಪೂಜಾ ಹೆಗ್ಡೆ: ಯಾಕೀ ಅಂತರ? 'ರಾಧೆ ಶ್ಯಾಮ್' ರಿಲೀಸ್‌ ವೇಳೆ ಮುಖ ಕೆಡಿಸಿಕೊಂಡ ಪ್ರಭಾಸ್- ಪೂಜಾ ಹೆಗ್ಡೆ: ಯಾಕೀ ಅಂತರ?

     ಅದ್ಭುತ ಎನ್ನುವಂತಹ ಸಿನಿಮಾ ಸಿಕ್ಕಿಲ್ಲ

    ಅದ್ಭುತ ಎನ್ನುವಂತಹ ಸಿನಿಮಾ ಸಿಕ್ಕಿಲ್ಲ

    ಪೂಜಾ ಹೆಗ್ಡೆ ಸದ್ಯ ಹಿಂದಿ ಹಾಗೂ ತೆಲುಗು ಸಿನಿಮಾಗಳಲ್ಲಿ ನಟಿಸಿತ್ತಿದ್ದಾರೆ. ಜೊತೆಗೆ ಪ್ಯಾನ್ ಇಂಡಿಯಾ ಸಿನಿಮಾಗಳಲ್ಲೂ ಮಿಂಚುತ್ತಿದ್ದಾರೆ. ಆದರೆ, ಇಷ್ಟು ದಿನಗಳಲ್ಲಿ ಪೂಜಾ ಹೆಗ್ಡೆಗೆ ಬಾಲಿವುಡ್‌ನಿಂದ ಒಳ್ಳೆ ಆಫರ್ ಸಿಕ್ಕಿಲ್ಲವಂತೆ. ಅದಕ್ಕೆ ಬಾಲಿವುಡ್‌ ಸಿನಿಮಾಗಳಲ್ಲಿ ನಟಿಸಿರಲಿಲ್ಲ ಎಂದು ಪೂಜಾ ಹೆಗ್ಡೆ ಹೇಳಿದ್ದಾರೆ. " ನನಗೆ ಯಾರಾದರೂ ಆಲಿಯಾ ಭಟ್ ನಟಿಸಿದ 'ರಾಜಿ' ಸಿನಿಮಾಗೆ ಆಫರ್ ಕೊಟ್ಟಿದ್ದರೆ, ನಾನು ಹಿಂದೆ ಮುಂದೆ ನೋಡದೆ ಆ ಸಿನಿಮಾವನ್ನು ಒಪ್ಪಿಕೊಳ್ಳುತ್ತಿದ್ದೆ. ದಕ್ಷಿಣ ಭಾರತದಲ್ಲಿ ಒಳ್ಳೊಳ್ಳೆ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಇಲ್ಲಿನ ಸಿನಿಮಾ ಮಂದಿ ವಿಭಿನ್ನವಾಗಿ ಆಲೋಚನೆ ಮಾಡುತ್ತಿದ್ದಾರೆ. ಅವರ ಪ್ರೇಕ್ಷಕರಿಗೆ ಏನು ಬೇಕು ಅನ್ನುವುದು ಅವರಿಗೆ ಚೆನ್ನಾಗಿ ಗೊತ್ತಿದೆ. ನಟರಿಗೂ ಏನು ಕೊಡಬೇಕು ಎಂಬುದು ಗೊತ್ತಿದೆ." ಎಂದು ಪೂಜಾ ಹೆಗ್ಡೆ ಅಭಿಪ್ರಾಯಪಟ್ಟಿದ್ದಾರೆ.

     'ನೋ' ಎನ್ನಲು ಧೈರ್ಯ ಕೊಟ್ಟಿದೆ

    'ನೋ' ಎನ್ನಲು ಧೈರ್ಯ ಕೊಟ್ಟಿದೆ

    ದಕ್ಷಿಣ ಭಾರತದ ಸಿನಿಮಾ ನನ್ನನ್ನು ಒಪ್ಪಿಕೊಂಡಿದೆ. ಪ್ರೀತಿ ಕೊಟ್ಟಿದೆ. ಎಲ್ಲಕ್ಕಿಂತ ಹೆಚ್ಚಾಗಿ ಹಿಂದೆ-ಮುಂದೆ ಯೋಚನೆ ಮಾಡದೆ ಹಿಂದಿ ಸಿನಿಮಾ ಪ್ರಾಜೆಕ್ಟ್‌ಗಳಿಗೆ 'ನೋ' ಎನ್ನುವಷ್ಟು ಶಕ್ತಿಕೊಟ್ಟಿದೆ. ಎರಡು ವರ್ಷ ನಾನು ಹಿಂದಿ ಸಿನಿಮಾಗಳಲ್ಲಿ ಕಾಣಿಸಿಕೊಂಡಿಲ್ಲ. ಇದು ನನಗೆ ಓಕೆ ಅಂತ ಅನಿಸಿದೆ. ನನ್ನನ್ನು ಜನರು 'ಅಲಾ ವೈಕುಂಠಪುರಮುಲೊ' ಸಿನಿಮಾದಿಂದ ಗುರುತಿಸುತ್ತಾರೆ. ನಾನು ಎಲ್ಲೇ ಹೋದರೂ ಈ ಸಿನಿಮಾ ಬಗ್ಗೆನೇ ಮಾತಾಡುತ್ತಾರೆ.

     ನನ್ನ ಫ್ಯಾನ್ಸ್ ಪೊಸೆಸಿವ್

    ನನ್ನ ಫ್ಯಾನ್ಸ್ ಪೊಸೆಸಿವ್

    ಪೂಜಾ ಹೆಗ್ಡೆ ಅತೀ ಕಡಿಮೆ ಸಮಯದಲ್ಲಿ ಅಲ್ಲು ಅರ್ಜುನ್, ಮಹೇಶ್ ಬಾಬು, ಜೂ. ಎನ್‌ಟಿಆರ್ ಹಾಗೂ ಪ್ರಭಾಸ್ ಜೊತೆ ನಟಿಸಿದ್ದಾರೆ. ಈ ಬಗ್ಗೆ ಪೂಜಾ ಹೆಗ್ಡೆ ಹೆಮ್ಮೆ ವ್ಯಕ್ತಪಡಿಸಿದ್ದಾರೆ. " ನನಗೆ ದಕ್ಷಿಣ ಭಾರತದಲ್ಲಿ ಅದ್ಭುತ ಹಾಗೂ ಉತ್ತಮ ಸಿನಿಮಾಗಳು ಸಿಗುತ್ತಿವೆ. ಹೀಗಾಗಿ ನಾನು ಹಿಂದಿ ಸಿನಿಮಾಗಳಿಗೆ 'ನೋ' ಎನ್ನುತ್ತಿದ್ದೇನೆ. ತೆಲುಗು ಚಿತ್ರರಂಗ ನನ್ನನ್ನು ಒಪ್ಪಿಕೊಂಡಿದೆ. ನನ್ನ ಅಭಿಮಾನಿಗಳು ತುಂಬಾನೇ ಪೊಸೆಸಿವ್ ಆಗಿದ್ದಾರೆ." ಎಂದು ಪೂಜಾ ಗಾಂಧಿ ಸಂದರ್ಶನವೊಂದರಲ್ಲಿ ತಿಳಿಸಿದ್ದಾರೆ.

     ಹಿಂದಿ-ತೆಲುಗಿನಲ್ಲಿ ರಾಧೆ ಶ್ಯಾಮ್ ಶೂಟ್

    ಹಿಂದಿ-ತೆಲುಗಿನಲ್ಲಿ ರಾಧೆ ಶ್ಯಾಮ್ ಶೂಟ್

    'ರಾಧೆಶ್ಯಾಮ್' ಪ್ಯಾನ್ ಇಂಡಿಯಾ ಸಿನಿಮಾ. ಪ್ರಭಾಸ್ ಸಿನಿಮಾ ಆಗಿದ್ದರಿಂದ ಟಿ-ಸಿರೀಸ್ ಸಂಸ್ಥೆ ಈ ಸಿನಿಮಾಗೆ ಹಣ ಹೂಡಿದೆ. ಹೀಗಾಗಿ ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ಈ ಚಿತ್ರವನ್ನು ಶೂಟ್ ಮಾಡಲಾಗಿದೆ. ಎರಡು ಭಾಷೆಯಲ್ಲೂ ಪ್ರತ್ಯೇಕವಾಗಿ ಶೂಟ್ ಮಾಡಲಾಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಎರಡೂ ಭಾಷೆಗಳಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಒಂದೊಂದು ಸಿನಿಮಾಗೂ ಒಂದೊಂದು ರೀತಿ ಇರುತ್ತೆ ಎಂದು ಪೂಜಾ ಹೆಗ್ಡೆ ಅವರೇ ಹೇಳಿದ್ದಾರೆ.

    English summary
    Radhe Shyam actress Pooja Hegde I didn’t do Bollywood films because the non exciting offers. Pooja Hegde got good films in telugu film industry so, that she left lot of bollywood offers
    Monday, March 7, 2022, 18:03
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X