ಪ್ರಭಾಸ್ ನ ಹೃದಯ ನೋಡುವ ಸಮಯ: ರಾಧೆ-ಶ್ಯಾಮ್ 'ಪ್ರೀ-ಟೀಸರ್' ಬಿಡುಗಡೆ

ಪ್ರಭಾಸ್ ನಟನೆಯ 'ರಾಧೆ-ಶ್ಯಾಂ' ಸಿನಿಮಾದ ಟೀಸರ್ ಪ್ರೇಮಿಗಳ ದಿನಾಚರಣೆಯಂದು ಬಿಡುಗಡೆ ಆಗಲಿದೆ. ಆದರೆ ಅದಕ್ಕೆ ಮುನ್ನಾ 'ಪ್ರೀ ಟೀಸರ್' ಒಂದು ಬಿಡುಗಡೆ ಆಗಿದೆ.

ಹೌದು, ಟೀಸರ್ ಗೆ ಮುನ್ನಾ 'ಪ್ರೀ ಟೀಸರ್' ಬಿಡುಗಡೆ ಆಗಿದ್ದು, 'ರಾಧೆ-ಶ್ಯಾಂ' ಸಿನಿಮಾದ ಪ್ರಭಾಸ್ ಪಾತ್ರದ ಕೆಲವೇ ಸೆಕೆಂಡುಗಳ ಸಣ್ಣ ತುಣುಕನ್ನು ಈ ಪ್ರೀ ಟೀಸರ್ ಒಳಗೊಂಡಿದೆ.

ಬಾಹುಬಲಿ, ಸಾಹೊ ಸಿನಿಮಾಗಳಲ್ಲಿ ಪ್ರಭಾಸ್ ನ ಮೈಕಟ್ಟು, ಧೈರ್ಯ, ಶೌರ್ಯ, ಆಕ್ಷನ್ ನೋಡಿದ್ದೀರಿ. 'ರಾಧೆ-ಶ್ಯಾಂ' ಸಿನಿಮಾದಲ್ಲಿ ಪ್ರಭಾಸ್ ನ ಹೃದಯ ನೋಡುತ್ತೀರಿ ಎಂದು ಪ್ರೀ ಟೀಸರ್‌ನಲ್ಲಿ ಹೇಳಲಾಗಿದೆ.

Radhe-Shyam Movie Pre Teaser Released

ಜಿನುಗುವ ಮಂಜ ಹನಿಗಳ ನಡುವೆ ನಟ ಪ್ರಭಾಸ್ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸುಂದರವಾಗಿದೆ. 'ರಾಧೆ-ಶ್ಯಾಂ' ಅಪ್ಪಟ ಪ್ರೇಮ ಕತೆಯಾಗಿದ್ದು, ಸಿನಿಮಾದಲ್ಲಿ ಆಕ್ಷನ್ ದೃಶ್ಯಗಳೇ ಇಲ್ಲ ಎಂದು ಹೇಳಲಾಗುತ್ತಿದೆ.

'ರಾಧೆ-ಶ್ಯಾಂ' ಸಿನಿಮಾವು 'ಪಿರಿಯಾಡಿಕ್ ಲವ್ ಸ್ಟೋರಿ' ಆಗಿದ್ದು ಹಲವು ದಶಕಗಳ ಹಿಂದೆ ಪ್ಯಾರಿಸ್‌ನಲ್ಲಿ ನಡೆಯುವ ಕತೆಯಾಗಿದೆ. ಸಿನಿಮಾದಲ್ಲಿ ನಟಿ ಪೂಜಾ ಹೆಗ್ಡೆ ನಾಯಕಿಯಾಗಿ ನಟಿಸಿದ್ದಾರೆ. ಸಿನಿಮಾವನ್ನು ರಾಧಾ ಕೃಷ್ಣ ಕುಮಾರ್ ನಿರ್ದೇಶಿಸಿದ್ದಾರೆ.

Recommended Video

ನನ್ನ ಸಿನಿಮಾ ಉಳಿಸಿಕೊಡಿ ಎಂದು ಬೇಡಿಕೊಂಡ ಅನಿಶ್ | Anish Tejeshwar | Ramarjuna | Filmibeat Kannada

ರಾಧೆ-ಶ್ಯಾಂ ಸಿನಿಮಾದ ಬಳಿಕ ಪ್ರಭಾಸ್ ಎರಡು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸುತ್ತಿದ್ದಾರೆ. ಪ್ರಶಾಂತ್ ನೀಲ್ ನಿರ್ದೇಶನದ 'ಸಲಾರ್' ಹಾಗೂ ಬಾಲಿವುಡ್ ನಿರ್ದೇಶಕ ಓಂ ರಾವತ್ ನಿರ್ದೇಶನದ 'ಆದಿಪುರುಷ್'. ಇದರಲ್ಲಿ ಆದಿಪುರುಷ್ ಸಿನಿಮಾ ರಾಮಾಯಣದ ಕತೆಯನ್ನು ಸಿನಿಮಾ ಮಾಡಲಾಗಿದೆ.

English summary
Prabhas-Pooja Hegde starer 'Radhe-Shyam' movie's pre teaser released. Teaser will release on February 14.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X